ಕೋಶ ವಿಭಜನೆ

ಬದಲಾಯಿಸಿ
 
ಕೋಶ ವಿಭಜನೆಯ ವೀಡಿಯೋ

ಪ್ರೌಢವಸ್ಥೆಗೆ ಬಂದ ಮೇಲೆ ಹೆಚ್ಚಿನ ಪ್ರಾಣಿಗಳಲ್ಲಿ ಸತತ ಕೋಶ ವಿಭಜನೆ ಹಾಗೂ ಊತಕಗಳ ಬೆಳವಣಿಗೆ ಹೆಚ್ಚು ಕಡಿಮೆ ನಿಂತುಹೊಗುತ್ತದೆ. ಮುಂದೆ ಸವೆದುಹೋದ ಹಾಗೂ ಸಾಯುತ್ತಿರುವ ಕೋಶಗಳ ಪುನಃ ಸ್ಥಾಪನೆ ಮಾತ್ರ ಆಗಿಂದಾಗ್ಗೆ ನಡೆಯುತ್ತಿರುತ್ತದೆ. ಇದಕ್ಕಾಗಿ ಅಲ್ಲಲ್ಲಿ ಕೋಶ ವಿಭಜನೆಯ ಶಕ್ತಿಯನ್ನು ಉಳಿಸಿಕೊಂಡ ಕೋಶಗಳಿಗೆ ಸ್ಟೆಮ್ ಕೋಶ (Stem cell) ಗಳೆಂದು ಹೆಸರು. ಚರ್ಮದಲ್ಲಿರುವ ವಿಶೇಷ ಸ್ಟೆಮ್ ಕೋಶಗಳು ಹೊಸ ಚರ್ಮಕೋಶಗಳನ್ನು ಉತ್ಪಾದಿಸುತ್ತವೆ. ಎಲುಬಿನ ಅಸ್ಥಿಮಜ್ಜೆಯಲ್ಲಿರುವ ಸ್ಟೆಮ್ ಕೋಶಗಳು ರಕ್ತದ ಹೊಸ ಕೋಶಗಳನ್ನುಂಟುಮಾಡುತ್ತವೆ. ಕರುಳು, ಜನನಗ್ರಂಥಿಗಳಲ್ಲಿರುವ ಸ್ಟೆಮ್ ಕೋಶಗಳು ಆಯಾಯ ಅಂಗಗಳ ಕೋಶಗಳ ಸೃಷ್ಟಿಗೆ ಕಾರಣವಾಗುತ್ತವೆ.

ಸ್ಟೆಮ್ ಕೋಶಗಳು ವಿಭಜನೆಗೊಂಡು ಈ ಭರ್ತಿಮಾಡುವ ಕ್ರಿಯೆ ನಡೆಯುವಾಗ, ಮರಿಕೋಶಗಳ ಪೈಕಿ ಒಂದು ಕೋಶ ಭರ್ತಿ ಮಾಡುವ ಕ್ರಿಯೆಗೆ ಸಹಕರಿಸುತ್ತದೆ. ಇನ್ನೊಂದು ಸ್ಟೆಮ್ ಕೋಶವಾಗಿಯೇ ಉಳಿದುಕೊಳ್ಳುತ್ತದೆ.

ಇಂತಹ ಸ್ಟೆಮ್ ಕೋಶಗಳ ಊತಕ ಕೃಷಿ ಮಾಡಿದಾಗ ಅವಿರತ ವಿಭಜನೆಗಳಿಂದ ಆಯಾಯ ಬೇರೆಬೇರೆ ಊತಕಗಳನ್ನು ಪಡೆಯಲು ಸಾಧ್ಯ. ಎಲ್ಲ ಜೀವಿಗಳೂ ತಮ್ಮ ಜೀವಿತದ ಮೊದಲಲ್ಲಿ ಒಂದು ಕೋಶದಿಂದಲೇ ಪ್ರಾರಂಭಗೊಳ್ಳುವವು. ಈ ಒಂದು ಕೋಶವೇ ನಿರಂತರ ವಿಭಜನೆ ಮತ್ತು ವಿಭೇದನೆಗಳಿಗೆ ಒಳಗಾಗುತ್ತದೆ. ಇವುಗಳಿಂದ ಜೀವಿಯ ಅನೇಕ ಊತಕಗಳು ಮತ್ತು ಅಂಗಗಳ ಅಸ್ತಿತ್ವ ನಿರ್ಧಾರವಾಗುವುದು. ಊತಕ ಕೃಷಿಯಿಂದ ಮಾನವ ದೇಹದ ಯಾವುದೇ ಸ್ಟೆಮ್ ಕೋಶಗಳಿಗೆ ದೇಹದ ೨೧೦ ವಿವಿಧ ರೀತಿಯ ಊತಕಗಳಾಗಿ ಬೆಳೆಯುವ ಸಾಮರ್ಥ್ಯವಿದೆ. ಹೀಗಿದ್ದರೂ ಏಕಾಕಿ ಸ್ಟೆಮ್ ಕೋಶವೊಂದು ಒಬ್ಬ ವ್ಯಕ್ತಿಯಾಗಿ ಬೆಳೆಯಲಾರದು.

 
ಪವಾಡ ರೀತಿಯಲ್ಲಿ ಕೋಶ ವಿಭಜನೆಯಿಂದ ಎಲೆಯಿಂದ ಮತ್ತೊಂದು ಪುಟ್ಟ ಗಿಡ ಹೊರಟಿದೆ.(ಪಟಪಟೆ ಗಿಡ ಎನ್ನುವರು)(ಇತರ ಹೆಸರು:miracle leaf plant (Kalanchoe pinnata). /Bryophyllum pinnatum

ವೈದ್ಯ ವಿಜ್ಞಾನ ಕ್ಷೇತ್ರದಲ್ಲಿ ಸ್ಟೆಮ್ ಕೋಶ ಕೃಷಿ ಮಹತ್ವದ್ದಾಗಿದೆ. ರೋಗಗಳಿಂದಾಗಲೀ, ಆಘಾತಗಳಿಂದಾಗಲೀ, ಹಾನಿಗೊಂಡ ಕೋಶಗಳನ್ನು ತುಂಬಲು ಇದನ್ನು ಬಳಸಬಹುದು. ಇದನ್ನು 'ಕೋಶ ಚಿಕಿತ್ಸೆ' ಎನ್ನಬಹುದು. ಈ ಚಿಕಿತ್ಸಾ ವಿಧಾನದಿಂದ ಪಾರ್ಕಿನ್ ಸನ್ ರೋಗ, ಹೃದಯಾಘಾತ, ಮಧುಮೇಹ, ಸಂಧಿವಾತ, ಸುಟ್ಟಗಾಯಗಳ ಶುಶ್ರೂಷೆ ಸಾಧ್ಯವಾಗುವುದು.[]

ಜೀವಕೋಶ

ಉಲ್ಲೇಖ

ಬದಲಾಯಿಸಿ


??

"https://kn.wikipedia.org/w/index.php?title=ಆಕರ_ಕೋಶ&oldid=1249348" ಇಂದ ಪಡೆಯಲ್ಪಟ್ಟಿದೆ