ಆಂದ್ರ ಪ್ರದೇಶ ರಾಜ್ಯ ಕೇಂದ್ರ ಗ್ರಂಥಾಲಯ, ಹೈದರಾಬಾದ್
ರಾಜ್ಯ ಕೇಂದ್ರ ಗ್ರಂಥಾಲಯ, ಹೈದರಾಬಾದ ಇದು ಸಾರ್ವಜನಿಕ ಗ್ರಂಥಾಲಯ. ಈ ಕಟ್ಟಡವನ್ನು ೧೮೯೧ರಲ್ಲಿ ನವಾಬ್ ಇಮಾದ್-ಉಲ್-ಮುಲ್ಕ ಎಂಬುವರು ಕಟ್ಟಿಸಿದರು. ಇದನ್ನು ಮೊದಲು ಅಸಾಫಿಯ ಗ್ರಂಥಾಲಯವೆಂದು ಕರೆಯುತ್ತಿದ್ದರು. ಈ ಗ್ರಂಥಾಲಯವು ಅಫ್ಜಲ್ ಗಂಜಿನಲ್ಲಿ ಮೂಸಿ ನದಿಯ ದಡದಲ್ಲಿದೆ. ಇದರಲ್ಲಿ ೫೦೦,೦೦೦ ಪುಸ್ತಕಗಳು, ವೃತ್ತ ಪತ್ರಿಕೆಗಳು ಹಾಗು ವಿಶಿಷ್ಟವಾದ ತಾಳೆಗರಿಯ ಸಂಗ್ರಹ ಇದೆ.
ಪುಸ್ತಕಗಳ ಸಂಖ್ಯೆ
ಬದಲಾಯಿಸಿ೧ನೇ ಏಪ್ರಿಲ್ ೨೦೦೪ ರ ವರೆಗೆ ಇದ್ದ ೪,೪೧,೫೭೩ ಪುಸ್ತಕಗಳ ವಿವರಗಳು ಕೆಳಗಿನಂತಿವೆ.
ಭಾಷೆ | ಸಂಖ್ಯೆ |
---|---|
ತೆಲುಗು | ೧೪೦೧೯೮ |
ಆಂಗ್ಲ | ೧೪೦೭೧೩ |
ಉರ್ದು | ೬೮೬೨೬ |
ಹಿಂದಿ | ೪೨೫೮೬ |
ಮರಾಠಿ | ೧೭೧೩೪ |
ಕನ್ನಡ | ೧೫೦೦೯ |
ಅರೆಬಿಕ್ | ೬೪೫೯ |
ಪರ್ಷಿಯನ್ | ೬೪೯೨ |
ಸಂಸ್ಕೃತ | ೩೨೯೬ |
ತಮಿಳು | ೧೦೬೦ |
೧೯೪೧ ರಲ್ಲಿ ಪ್ರಕಟವಾದ ಹೈದರಾಬಾದ ಸಮಾಚಾರ ಮಾಸ ಪತ್ರಿಕೆಯೂ ಇಲ್ಲಿ ಲಭ್ಯ.
Wikimedia Commons has media related to State Central Library, Hyderabad.