ಆಂಡ್ರಿ ಗಿಮ್, ಮತ್ತು ಕಾನ್ ಸ್ ಟಾಂಟಿನ್ ನೊವೊಸೆಲವ್
Andre Konstantinovich Geim, FRS (Russian: Андрей Константинович Гейм) ಮತ್ತು, Konstantin Sergeevich Novoselov (Russian: Константи́н Серге́евич Новосёлов; ಬ್ರಿಟನ್‌ನ, 'ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ', ರಾದ 'ಡಾ. ಆಂಡ್ರಿ ಗಿಮ್' (೫೧) ಹಾಗೂ 'ಕಾನ್ ಸ್ ಟಾಂಟಿನ್ ನೊವೊಸೆಲವ್' (೩೫) ನೋಬೆಲ್ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ. ಅವರು ತಮ್ಮ ಸಂಶೋಧನೆಯಿಂದ ಕಂಡುಕೊಂಡ, ‘ಗ್ರಾಫೆನೆ’ಎಂಬ ಹೆಸರಿನಲ್ಲಿ ಕರೆಯಬಹುದಾದ ಹೊಸ ಲೋಹದ ಶೋಧಕ್ಕಾಗಿ ಈ ಇಬ್ಬರು ವಿಜ್ಞಾನಿಗಳು ಪ್ರಶಸ್ತಿಗೆ ಭಾಜನರಾಗಿದ್ದಾರೆ. 'ಡಾ. ಗಿಮ್'. "ಈ ವರ್ಷ ನಾನು ಪ್ರಶಸ್ತಿಯನ್ನು ನಿರೀಕ್ಷಿಸಿರಲಿಲ್ಲ " ಎಂದಷ್ಟೇ ಪತ್ರಿಕಾಕರ್ತರಿಗೆ ಹೇಳಿ ತಮ್ಮ ಅಚ್ಚರಿಯನ್ನು ವ್ಯಕ್ತಪಡಿಸಿದರು. ಹೀಗೆ ಆರಂಭವಾದ ಸಂಶೋಧನೆ, ಸನ್. ೨೦೧೦ ರ ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿಯು, 'ರಷ್ಯಾ ಮೂಲದ ಇಬ್ಬರು ಬ್ರಿಟನ್ ವಿಜ್ಞಾನಿಗಳ' ಮಹತ್ವದ ಶೋಧನಾ-ಕಾರ್ಯಕ್ಕೆ ದೊರೆತಿದ್ದು ಪ್ರಶಸ್ತಿಯ ಹಣವನ್ನು ಇಬ್ಬರೂ ಹಂಚಿಕೊಂಡಿದ್ದಾರೆ.
‘ಗ್ರಾಫೆನೆ’ಪಾರದರ್ಶಕವಾಗಿದೆ, ತೆಳುವಾದ, ಅತಿ-ಬಲಯುತ ಕಾರ್ಬನ್ ಲೋಹ
ಬದಲಾಯಿಸಿ‘ತೆಳು ಪದರದ ರೀತಿಯ ಕಾರ್ಬನ್ ಲೋಹ,' ಇರುವುದನ್ನು ತೋರಿಸಿಕೊಟ್ಟ ಕೀರ್ತಿ ಈ ಇಬ್ಬರಿಗೂ ಸಲ್ಲುತ್ತದೆ. ಇದು 'ಪರಮಾಣು ಭೌತ ವಿಜ್ಞಾನ'ದ ಅಸಾಧಾರಣ ಸಂಶೋಧನೆಯಾಗಿದೆ’ ಎಂದು 'ನೊಬೆಲ್ ಪಾರಿತೋಷಕ ಸಮಿತಿ'ಯ ಪ್ರಕಟಣೆಯಲ್ಲಿ ಬಣ್ಣಿಸಲಾಗಿದೆ. ‘ಗ್ರಾಫೆನೆ’ ಲೋಹವು ಕಾರ್ಬನ್‌ನ ಒಂದು ರೂಪವಾಗಿದೆ. ಲೋಹವಾಗಿ ಇದು ಸಂಪೂರ್ಣವಾಗಿ ಹೊಸ ಸಂಶೋಧನೆಯಾಗಿದ್ದು, ಅತ್ಯಂತ ತೆಳುವಾದ ಹಾಗೂ ಅತ್ಯಂತ ಶಕ್ತಿಶಾಲಿಯಾದುದ್ದಾಗಿದೆ. ಇದು ಪಾರದರ್ಶಕವಾಗಿದ್ದು, ಇದರ ಮೂಲಕ ಅನಿಲದ ಅತಿ-ಸೂಕ್ಷ್ಮ ಅಣುಗಳು ಹಾದುಹೋಗಬಹುದಾಗಿದೆ. ಅಚ್ಚರಿಯೆಂದರೆ ಇದನ್ನು ಈ ವಿಜ್ಞಾನಿಗಳು ಸಾಮಾನ್ಯವಾಗಿ ನಾವೆಲ್ಲ ಬಳಸುವ ಪೆನ್ಸಿಲ್‌ನಲ್ಲಿರುವ 'ಗ್ರಾಫೈಟ್,' ಎಂಬುದರಿಂದ ಶೋಧಿಸಿ ಹೊರತೆಗೆದಿದ್ದಾರೆ.
ಪೆನ್ಸಿಲ್ ನಲ್ಲಿರುವ ಕಪ್ಪು ಸೀಸದ ಕಡ್ಡಿ ಉಕ್ಕಿಗಿಂತ ಬಲಿಷ್ಟ!
ಪೆನ್ಸಿಲ್ ನಲ್ಲಿ ನಮಗೆ ಬರೆಯಲು ಸಾಧ್ಯವಾಗುವುದು ಅದರಲ್ಲಿರುವ ಗ್ರಾಫೈಟ್ ಎಂದು ಕರೆಯಲಾಗುವ ಕಪ್ಪು ಸೀಸದ ಕಡ್ಡಿಯಿಂದ. ಗ್ರಾಫೈಟ್ ನ್ನು ಅತಿ ಸಣ್ಣದಾಗಿ ಎಳೆ ಎಳೆಯಂತೆ ಕತ್ತರಿಸುತ್ತಾ ಹೋದಂತೆ, ಅದನ್ನು ಪರಮಾಣುವಿಗಿಂತ ಅತಿ ಸಣ್ಣ ಎಳೆಯಂತೆ ಬೇರ್ಪಡಿಸಿದಾಗ ಈ ಸಣ್ಣ ಹಾಳೆಗೆ ವಿಚಿತ್ರ ಗುಣಲಕ್ಷಣಗಳು ಮೂಡಿಬರುತ್ತವೆ. ಈ ಹಾಳೆಯನ್ನು ಗ್ರಾಫೀನ್ ಎಂದು ಕರೆಯುತ್ತಾರೆ. ಇದು ವಿಶ್ವದ ಮೊದಲ 2 ಆಯಾಮದ ವಸ್ತುವೂ ಆಗಿದೆ. ಈ ಗ್ರಾಫೈಟ್ ಹಾಳೆಯಲ್ಲಿ ಕೇವಲ ಇಂಗಾಲದ ಪರಮಾಣುಗಳು ಮಾತ್ರವಿರುತ್ತವೆ.
ಈ ರೀತಿ ಹಾಳೆಗಳಂತೆ ಗ್ರಾಫೈಟ್ ನ್ನು ಬೇರ್ಪಡಿಸುವ ವಿಧಾನವನ್ನು ಕಂಡುಹಿಡಿದ ಆಂಡ್ರೆ ಗ್ರೀಮ್ ಮತ್ತು ನೊವಸೆಲೆವ್ ಎಂಬ ವಿಜ್ಞಾನಿಗಳಿಗೆ ಈ ವರ್ಷದ ನೊಬೆಲ್ ಪಾರಿತೋಷಕವು ಭೌತಶಾಸ್ತ್ರ ಸಂಶೋಧನೆ ವಿಭಾಗದಲ್ಲಿ ಲಭಿಸಿದೆ. ಗ್ರಾಫೈಟ್ ಮತ್ತು ಇತರೆ ವಸ್ತುಗಳನ್ನು ಅವುಗಳ ಮೂಲವಸ್ತುಗಳ ರೂಪದಲ್ಲಿ, ಬೇರೆ ಬೇರೆ ವಿಧಾನಗಳಿಂದ ತೆಳುವಾಗಿ ಬೇರ್ಪಡಿಸಿ ಅವುಗಳ ಗುಣಲಕ್ಷಣಗಳನ್ನು ನಮ್ಮ ದೇಶದ ಪ್ರೊ. ಸಿ.ಎನ್.ಆರ್ ರಾವ್ ಒಳಗೊಂಡಂತೆ ಇತರೆ ವಿಜ್ಞಾನಿಗಳು ಅಧ್ಯಯನ ಮಾಡುತ್ತಿದ್ದಾರೆ.
ಪೆನ್ಸಿಲ್ ನಿಂದ ನಾವು ಬರೆಯಲಾರಂಭಿಸಿದರೆ ಸಾಕು ನೋಡನೋಡುತ್ತಿದ್ದಂತೆ ನಮಗೆ ಗ್ರಾಫೈಟ್ ಕಪ್ಪು ಪುಡಿ ಉದುರಲಾರಂಭಿಸುತ್ತದೆ. ಇಂಥಹ ಅತಿ ಸಣ್ಣ ಕಣಗಳನ್ನು ಮತ್ತಷ್ಟು ಸಣ್ಣ ಹಾಳೆಗಳಂತೆ ಬೇರ್ಪಡಿಸಿ ಅಂತಿಮವಾಗಿ ಪಡೆಯುವುದೇ ಗ್ರಾಫೀನ್. ಗ್ರಾಫೈಟ್ ನಿಂದ ಸಣ್ಣಾತಿಸಣ್ಣ ತೆಳು ಹಾಳೆಗಳಂತೆ ಬೇರ್ಪಡೆಯಾದ ಗ್ರಾಫೀನ್, ಪಾರದರ್ಶಕವಾಗಿ ಬೆಳಕನ್ನು ತನ್ಮೂಲಕ ಹಾದುಹೋಗಲು ಬಿಡುತ್ತದೆ, ಆದರೆ ನೀರು ಮತ್ತು ಗಾಳಿಗೆ ತಡೆಯೊಡ್ಡುತ್ತದೆ. ಹೀಲಿಯಂನಷ್ಟು ಅತಿ ಸಣ್ಣ ಅಣುವೂ ಕೂಡ ಇದನ್ನು ತೂರಿ ಹೋಗಲಾರದು. ರಬ್ಬರ್ ಹಿಗ್ಗಿ ಕುಗ್ಗುವಂತೆ ಇದನ್ನೂ ಸಹ ಜಗ್ಗಾಡಬಹುದು. ಅಲ್ಲದೆ ನೂರಾರು ವಿಶಿಷ್ಟ ಉಪಯುಕ್ತ ಗುಣಲಕ್ಷಣಗಳ ವೈವಿಧ್ಯತೆಯನ್ನೇ ಹೊಂದಿರುವ ಈ ಗ್ರಾಫೀನ್, ತಾಮ್ರದಂತೆ ತನ್ಮೂಲಕ ವಿದ್ಯುತ್ ನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸಬಲ್ಲುದು. ಇದು ಈವರೆಗೆ ಬಳಕೆಯಲ್ಲಿರುವ ವಾಹಕಗಳೆಲ್ಲೆಲ್ಲ ಅತ್ಯುತ್ತಮ ವಿದ್ಯುತ್ ವಾಹಕವೂ ಹೌದು. ಮತ್ತೂ ವಿಚಿತ್ರವೆಂದರೆ ಇದು ವಜ್ರದಂತೆ ಕಠಿಣವೂ ಹೌದು. ಉಕ್ಕಿಗಿಂತ ನೂರು ಪಟ್ಟು ಬಲಿಷ್ಟ.
ಗ್ರಾಫೀನ್ ನ್ನು ಕಂಪ್ಯೂಟರ್ ಚಿಪ್ ಗಳಲ್ಲಿ , ಸೋಲಾರ್ ಕೋಶಗಳಲ್ಲಿ, ಟ್ರಾನ್ಸಿಸ್ಟರ್ ಗಳು, ಹಗುರ ವಿಮಾನ, ವಾಹನಗಳ ಇಂಜಿನ್, ಬುಲೆಟ್ ಗಳು, ಇತ್ಯಾದಿಗಳಲ್ಲಿ ಬಳಸಬಹುದು. ಮುಂದಿನ ವರ್ಷಗಳಲ್ಲಿ ಈ ಅದ್ಭುತ ವಸ್ತು ಹತ್ತಲವು ಉಪಯುಕ್ತತೆಗಳಿಗೆ ಕಾರಣವಾಗಲಿದೆ ಎನ್ನಲಾಗುತ್ತಿದೆ.
ಮುಂದಿನದಿನಗಳಲ್ಲಿ ಪುಟ್ಟ-ಕಾರು, ವಿಮಾನಗಳನ್ನು ನಿರ್ಮಿಸುವಲ್ಲಿ ಸಹಾಯ
ಬದಲಾಯಿಸಿಈ ಲೋಹದ ಸಮ್ಮಿಳತದೊಂದಿಗೆ ಭವಿಷ್ಯದಲ್ಲಿ ಸಣ್ಣ ವಿಮಾನ, ಸಣ್ಣ ಕಾರುಗಳ ತಯಾರಿಸಲು ಅನುಕೂಲವಾಗಲಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಇದರ ಇನ್ನಿತರ ಉಪಯೋಗಗಳು, ಸೋಲಾರ್ ಸೆಲ್ಸ್ ತಯಾರಿಕೆಯಲ್ಲಿ, ಕಂಪ್ಯೂಟರ್ ಚಿಪ್ಸ್ ತಯಾರಿಕೆಯಲ್ಲಿ, ಹಾಗೂ ಟಚ್ ಸ್ಕ್ರೀನ್ ತಯಾರಿಕೆಯಲ್ಲಿ ಎಂದೆನ್ನಲಾಗಿದೆ.
'ರಷ್ಯಾ ಸಂಜಾತರು ಬ್ರಿಟನ್ ನಲ್ಲಿ ಮಾಡಿದ ಸಾಧನೆ'
ಬದಲಾಯಿಸಿ'ರಷ್ಯಾ ಸಂಜಾತರಾದ ಈರ್ವರೂ, ಪ್ರಾಥಮಿಕ ಹಂತದಲ್ಲಿ ರಷ್ಯಾದಲ್ಲಿ 'ಭೌತಶಾಸ್ತ್ರದ ಪ್ರಾಧ್ಯಾಪಕ'ರಾಗಿ ವೃತ್ತಿಯನ್ನು ಆರಂಭಿಸಿದ್ದರು. ಮುಂದೆ, ಕಾಲಾಂತರದಲ್ಲಿ, ಬ್ರಿಟನ್ 'ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯ'ಕ್ಕೆ ಹೋಗಿ ಸೇರಿ, ಆ ದಿಶೆಯಲ್ಲಿ ಇನ್ನೂ ಹೆಚ್ಚು ಮಾಹಿತಿ ಗಳಿಸಲು ಶ್ರಮವಹಿಸಿ ದುಡಿದರು. ಇದರ ಫಲಸ್ವರೂಪವಾಗಿ ಅತ್ಯಂತ ಮತ್ವದ ಸಾಧನೆಯನ್ನು ಮಾಡಿ ಮನುಕುಲದ ಏಳಿಗೆಗೆ ಉಪಯೋಗವಾಗುವ 'ಮೂಲವಸ್ತು' ವನ್ನು ಕಂಡುಹಿಡಿದಿದ್ದಾರೆ.
ಗುರು-ಶಿಷ್ಯರ ಅಪೂರ್ವ ಸಾಧನೆ
ಬದಲಾಯಿಸಿ'ಡಾ. ಆಂಡ್ರಿ ಗಿಮ್,' ಅವರ ಸಂಶೋಧನಾ ಕಾರ್ಯದಲ್ಲಿ ಅವರ ವಿದ್ಯಾರ್ಥಿ 'ಡಾ. ಕಾನ್ ಸ್ ಟಾಂಟಿನ್', ಭುಜಕ್ಕೆ ಭುಜಕೊಟ್ಟು ಶ್ರಮಿಸಿದರು. ಕೊನೆಗೆ ಇಂತಹ ಮಹತ್ವದ ಸಂಶೋಧನೆಗೆ ಕಾರಣರಾದರು. ಈ ಈರ್ವರೂ, ಪ್ರಶಸ್ತಿಯ ೧.೫ ಮಿಲಿಯನ್ ಡಾಲರ್ ಹಣವನ್ನು ಹಂಚಿಕೊಂಡಿದ್ದಾರೆ