ಅಸ್ಸಾಂ ಚಹಾ
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. (January 2010) |
- REDIRECT Template:Infobox tea
ಅಸ್ಸಾಂ (Assamese: অসম, ಹಿಂದಿ:आसाम, ಹಾಗೂ ಹಿಂದಿ:असम ಕೂಡಾ) ಎನ್ನುವುದು ಒಂದು ಕಪ್ಪು ಚಹಾ, ಭಾರತದ ಅಸ್ಸಾಂ ಪ್ರದೇಶದಲ್ಲಿ ತಯಾರಿಸಿರುವುದರಿಂದ ಇದಕ್ಕೆ ಈ ಹೆಸರು ಬಂದಿದೆ. ಅಸ್ಸಾಂ ಚಹಾ (Assamese: অসমীয়া চাহ, ಹಿಂದಿ:असमिया चाय ಅಥವಾ ಹಿಂದಿ:आसामी चाय ಅಥವಾ ಹಿಂದಿ:असमी चाय)ವನ್ನು ವಿಶೇಷವಾಗಿ ಕ್ಯಮೆಲಿಯಾ ಸಿನೆನ್ಸಿಸ್ ವರ್. ಅಸ್ಸಾಮಿಕಾ (ಮಾಸ್ಟರ್ಸ್)ದಿಂದ ತಯಾರಿಸಲಾಗುತ್ತದೆ.[೧][೨] ಈ ಚಹಾವು ಸಮುದ್ರದ ಮಟ್ಟದಲ್ಲಿ ಅಥವಾ ತೀರದಲ್ಲಿ ಬೆಳೆಯುತ್ತದೆ, ಇದು ಸಸ್ಯದ ದೇಹ, ಚುರುಕುತನ, ಮಾಲ್ಟ್ ರೀತಿಯ ಪರಿಮಳ, ಮತ್ತು ಗಡುಸುತನ, ಹೊಳೆಯುವ ಬಣ್ಣಕ್ಕಾಗಿ ಪ್ರಸಿದ್ಧಿಯಾಗಿದೆ. ಅಸ್ಸಾಂ ಚಹಾಗಳು, ಅಥವಾ ಅಸ್ಸಾಂ ಅನ್ನು ಒಳಗೊಂಡ ಮಿಶ್ರಣಗಳು "ಬೆಳಗಿನ ಉಪಹಾರದ" ಚಹಾಗಳೆಂದು ಮಾರಲಾಗುತ್ತದೆ. ಇಂಗ್ಲಿಷ್ ಬ್ರೇಕ್‌ಫಾಸ್ಟ್ ಟೀ, ಐರಿಶ್ ಬ್ರೇಕ್‌ಫಾಸ್ಟ್ ಟೀ, ಮತ್ತು ಸ್ಕಾಟಿಶ್ ಬ್ರೇಕ್‌ಫಾಸ್ಟ್ ಟೀಗಳು ಸಾಮಾನ್ಯವಾದ ಜಾತಿವೈಶೇಷ್ಯದ ಹೆಸರುಗಳಾಗಿವೆ. ಅಸ್ಸಾಂ ರಾಜ್ಯವು ವಿಶ್ವದ ಅತಿ ದೊಡ್ಡ ಚಹಾ ಬೆಳೆಯುವ ಪ್ರದೇಶವಾಗಿದೆ, ಈ ಪ್ರದೇಶವು ಬ್ರಹ್ಮಪುತ್ರಾ ನದಿಯ ಎರಡೂ ಬದಿಗಳಲ್ಲಿದೆ, ಹಾಗೂ ಗಡಿಯಲ್ಲಿ ಬಾಂಗ್ಲಾದೇಶ ಮತ್ತು ಬರ್ಮಾ (ಮಯನ್ಮಾರ್) ದೇಶಗಳನ್ನು ಹೊಂದಿದೆ. ಭಾರತದ ಈ ಭಾಗವು ಹೆಚ್ಚಿನ ಮಳೆಯನ್ನು ಅನುಭವಿಸುತ್ತದೆ; ಮಾನ್ಸೂನ್ ಅವಧಿಯಲ್ಲಿ ಪ್ರತಿದಿನ 10 ರಿಂದ 12 ಇಂಚುಗಳಷ್ಟು (250-300 ಮಿಮೀ) ಮಳೆಯಾಗುತ್ತದೆ. ದಿನದ ಸಮಯದಲ್ಲಿ ಉಷ್ಣಾಂಶವು ಸುಮಾರು 103F (40 °C)ಗಳಷ್ಟು ಏರುತ್ತದೆ, ಇದು ಗ್ರೀನ್‌ಹೌಸ್‌ಗೆ ಬೇಕಾಗುವ ಅತೀವ ಆರ್ದತೆ ಹಾಗೂ ತಾಪವನ್ನು ಒದಗಿಸುತ್ತದೆ. ಈ ಉಷ್ಣದ ಹವಾಮಾನವು ಅಸ್ಸಾಂ ಚಹಾದ ಮಾಲ್ಟಿ ರುಚಿಯನ್ನು ನೀಡುತ್ತದೆ, ಈ ರುಚಿಯಿಂದಲೇ ಇದು ಚಿರಪರಿಚಿತವಾಗಿದೆ. "ಅಸ್ಸಾಂ" ಎನ್ನುವುದು ಅಸ್ಸಾಂನ ವಿಶೇಷವಾದ ಕಪ್ಪು ಚಹಾಗಳಿಂದ ಪರಿಚಿತವಾಗಿದೆ, ಈ ಪ್ರದೇಶವು ಸಣ್ಣ ಪ್ರಮಾಣದ ಹಸಿರು ಮತ್ತು ಬಿಳಿ ಚಹಾಗಳನ್ನು ತಯಾರಿಸುತ್ತದೆ, ಇವು ತನ್ನದೇ ಆದ ವಿಶೇಷ ಗುಣಲಕ್ಷಣಗಳನ್ನು ಹೊಂದಿದೆ. ಐತಿಹಾಸಿಕವಾಗಿ, ದಕ್ಷಿಣ ಚೈನಾವನ್ನು ಬಿಟ್ಟರೆ ಅಸ್ಸಾಂ ಚಹಾ ಉತ್ಪಾದಿಸುವ ಎರಡನೆಯ ಅತಿ ದೊಡ್ಡ ಪ್ರದೇಶವಾಗಿದೆ. ದಕ್ಷಿಣ ಚೈನಾ ಮತ್ತು ಅಸ್ಸಾಂಗಳು ಮಾತ್ರವೇ ವಿಶ್ವದಲ್ಲಿ ಚಹಾ ಸಸ್ಯಗಳನ್ನು ಬೆಳೆಯುವ ಪ್ರದೇಶಗಳಾಗಿವೆ. ವಿವಿಧ ಚಹಾ ಗಿಡಗಳಿಂದ ತಯಾರಿಸಿದ ವೈವಿದ್ಯಮಯ ಚಹಾ ರುಚಿಗಳನ್ನು ನೀಡುತ್ತದೆ, ಇದರಿಂದಾಗಿ 19ನೆಯ ಶತಮಾನದಲ್ಲಿ ಅಸ್ಸಾಂ ಚಹಾವು ಚಹಾ ಕುಡಿಯುವವರಲ್ಲಿ ಕ್ರಾಂತಿಯುಂಟು ಮಾಡಿತು.
ಸಂಶೋಧನೆಯ ಕಥೆಸಂಪಾದಿಸಿ
ಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ.(January 2010) |
ವಸಾಹತುಗಳಿಂದ "ಸಂಶೋಧನೆ"ಯ ಕಥೆಯು ಅಸ್ಸಾಂ ಚಹಾ ಪೊದೆ ಹಾಗೂ 1823ರಲ್ಲಿ ಅದರ ಬಗ್ಗೆ ಸ್ಪಷ್ಟಪಡಿಸಿದ ಸ್ಕಾಟಿಷ್ ಸಾಹಸಿಗ ರಾಬರ್ಟ್ ಬ್ರೂಸ್ ಇತಿಹಾಸದ ಬಗ್ಗೆ ಮಾಹಿತಿ ಒದಗಿಸುತ್ತದೆ. ಬ್ರೂಸ್ ಆ ಪ್ರದೇಶದಲ್ಲಿ ವ್ಯಾಪಾರ ಮಾಡುತ್ತಿರುವಾಗ ಈ ಗಿಡವು "ಕಾಡಿ"ನಲ್ಲಿ ಬೆಳೆಯುವುದನ್ನು ಕಂಡುಹಿಡಿದನು. ಸ್ಥಳೀಯ ಬುಡಕಟ್ಟು ಜನಾಂಗದವರು (ಸಿಂಗ್‍ಪೊಸ್) ಪೊದೆಗಳಿಂದ ಎಲೆಗಳನ್ನು ಕಿತ್ತು ಕುದಿಸುವುದನ್ನು ಆತನು ಗಮನಿಸಿದನು, ಬುಡಕಟ್ಟು ಮುಖ್ಯಸ್ಥರನ್ನು ಭೇಟಿ ಮಾಡಿ ಅದರ ಎಲೆಗಳನ್ನು ಮತ್ತು ಬೀಜಗಳನ್ನು ಕೊಡಲು ಕೇಳಿಕೊಂಡನು, ಅವನ್ನು ವೈಜ್ಞಾನಿಕವಾಗಿ ಪರೀಕ್ಷಿಸಬೇಕೆಂದುಕೊಂಡನು. ಸಸ್ಯಗಳ ಬಗ್ಗೆ ಸಂಪೂರ್ಣವಾಗಿ ಕಂಡುಹಿಡಿಯುವ ಮುನ್ನವೇ, ರಾಬರ್ಟ್ ಬ್ರೂಸ್ ನಿಧನಹೊಂದಿದನು. 1830ರ ಪ್ರಾರಂಭದಲ್ಲಿಯೇ ಇದಾದ ನಂತರ ರಾಬರ್ಟ್‌ನ ಸಹೋದರ ಚಾರ್ಲ್ಸ್, ಅಸ್ಸಾಂನ ಚಹಾ ಪೊದೆಗಳಿಂದ ಎಲೆಗಳನ್ನು ತರಿಸಿ ಕಲ್ಕಾತ್ತಾದ ಬೊಟಾನಿಕಲ್ ಗಾರ್ಡನ್ಸ್‌ಗೆ ಕ್ರಮವಾದ ಪರೀಕ್ಷೆಗೆ ಕಳುಹಿಸಿದನು. ಅಲ್ಲಿ, ಕೊನೆಗೆ ಈ ಚಹಾದ ವೈವಿಧ್ಯವನ್ನು ಅಥವಾ ಕ್ಯಮೆಲ್ಲಿಯಾ ಸಿನೆನ್ಸಿಸ್ ಎಂದು ಗುರುತಿಸಲಾಯಿತು, ಆದರೆ ಇದು ಚೈನಾದ ಚಹಾ ಸಸ್ಯಕ್ಕಿಂತ (ಕ್ಯಮೆಲ್ಲಿಯಾ ಸಿನೆನ್ಸಿಸ್ ವರ್. ಸಿನೆನ್ಸಿಸ್) ವಿಭಿನ್ನವಾಗಿತ್ತು.
ಯುನೈಟೆಡ್ ಕಿಂಗ್‌ಡಮ್‌ನಲ್ಲಿ ವ್ಯಾಪಾರಸಂಪಾದಿಸಿ
ಇಂಗ್ಲಿಷ್ ಈಸ್ಟ್ ಇಂಡಿಯಾ ಸಮಿತಿಯು ಮಧ್ಯೆ ಪ್ರವೇಶಿಸಿದಾಗ, ’ತಜ್ಞ’ರ ಮಂಡಳಿಯು ಒಂದು ಚಹಾ ಸಮಿತಿಯನ್ನು (1834) ರಚಿಸಿಕೊಂಡು ಅಸ್ಸಾಂ ಚಹಾದ ವೈಜ್ಞಾನಿಕ ಸ್ವಭಾವ ಮತ್ತು ವಾಣಿಜ್ಯ ಸಾಮರ್ಥ್ಯವನ್ನು ಅಧ್ಯಯನ ನಡೆಸುತ್ತಿರುವುದು ತಿಳಿದು ಬಂತು. ಚೈನಾದ ಚಹಾವನ್ನು ಆದರ್ಶವೆಂದು ಸಮಿತಿಯ ಸದಸ್ಯರು (ಸಸ್ಯ ಹಾಗೂ ತಯಾರಿಕೆಯ ವಿಧಾನ) ಭಾವಿಸಿದ್ದರಿಂದ ಚೈನಾದ ಚಹಾ ತಯಾರಿಕರನ್ನು ಕರೆಸಿಕೊಳ್ಳಲಾಯಿತು ಹಾಗೂ ಅಸ್ಸಾಂ ಚಹಾವನ್ನು ತಯಾರಿಸಲು ಈ "ಕಾಡು" ಗಿಡದ ಎಲೆಗಳನ್ನು ಹಾಗೂ ಬೀಜಗಳನ್ನು ಬಳಸಲಾಯಿತು. ಕೆಲ ಅವಧಿಯ ನಂತರ, ಚೀನಾ ಮತ್ತು ಅಸ್ಸಾಂನ ಮಿಶ್ರಜಾತಿಯ ಸಸ್ಯಗಳು ಅಸ್ಸಾಂನ ಹವಾಮಾನ ಹಾಗೂ ಭೂ ಪ್ರದೇಶದಲ್ಲಿ ಹೆಚ್ಚು ಯಶಸ್ವಿ ಎನಿಸಿದವು. 1830ರ ಕೊನೆಯಲ್ಲಿ, ಲಂಡನ್‌ನ ಮಾರುಕಟ್ಟೆಯಲ್ಲಿ ಅಸ್ಸಾಂ ಚಹಾಕ್ಕೆ ಒಳ್ಳೆಯ ಬೇಡಿಕೆ ಬಂತು; ಇದರ ಬಗೆಗಿನ ಉತ್ತಮ ಅಭಿಪ್ರಾಯದಿಂದ ಈಸ್ಟ್ ಇಂಡಿಯಾ ಕಂಪನಿಯು ವ್ಯವಸಾಯ ಭೂಮಿ ಹಾಗೂ ಕಾಡಿನ ಪ್ರದೇಶಗಳನ್ನು ಕುಖ್ಯಾತ 'ಬಂಜರು ಭೂಮಿ ಕಾಯಿದೆಗಳ' ಮೂಲಕ ಚಹಾ ತೋಟಗಳನ್ನಾಗಿ ಬದಲಾಯಿಸಿತು. ವಸಾಹತು ರಾಜ್ಯ ಹಾಗೂ ತೋಟಗಳ ಹೂಡಿಕೆಯ ಸಹಭಾಗಿತ್ವದಿಂದ ವಸಾಹತು ಅವಧಿಯಲ್ಲಿ ಪ್ಲಾಂಟರ್-ರಾಜ್ ಪದವನ್ನು ಸಂಕ್ಷೇಪವಾಗಿ ವಶಪಡಿಸಿಕೊಂಡಿತು.
ಉತ್ಪಾದನೆಸಂಪಾದಿಸಿ
ಅಸ್ಸಾಂ ಚಹಾದ ವ್ಯವಸಾಯ ಹಾಗೂ ಉತ್ಪಾದನೆ ಮೊದಲ ಎರಡು ದಶಕಗಳಲ್ಲಿ (1840-1860) ಮೇಲ್ಭಾಗದ ಅಸ್ಸಾಂನ ಜಿಲ್ಲೆಗಳ ಅಸ್ಸಾಂ ಕಂಪನಿ ಹಾಗೂ ಸ್ಥಳೀಯ ಕಚರಿ ಕಾರ್ಮಿಕರಿಂದ ನಡೆಸಲ್ಪಡುತ್ತಿತ್ತು. ಈ ಕಂಪನಿಯ ಯಶಸ್ಸು ವಸಾಹತುಗಳ ನಿಯಮವನ್ನು ಬದಲಾಯಿಸಿ ಅವರಿಗೆ ಚಹಾ ತೋಟಗಳನ್ನು ಆಹ್ವಾನವಿತ್ತಿತು (ಕೆಲ ಸರಳ ನಿಯಮಗಳ ಶರತ್ತಿನೊಂದಿಗೆ) ಇದರಿಂದಾಗಿ ಅಸ್ಸಾಂ ಚಹಾ ಉದ್ಯಮವು 1860ರ ಪ್ರಾರಂಭದಲ್ಲಿ ಅಭಿವೃದ್ಧಿ ಕಂಡಿತು, ಆದರೆ ತೋಟಗಳ "ತಾತ್ಕಾಲಿಕ"ವಾದ ಬದಲಾವಣೆ (ಚೈನಾದಿಂದ ಅಸ್ಸಾಂ) , ತೋಟಗಳ ಕಡಿಮೆ ಬಾಳಿಕೆಯಿಂದಾಗಿ ಉತ್ಪಾದನೆಯಲ್ಲಿ ಹೆಚ್ಚು ವ್ಯತಾಸವಾಗಲಿಲ್ಲ, (ಹೆಚ್ಚಿನ ಸಂಖ್ಯೆಯಲ್ಲಿ ಸಸ್ಯಗಳು ಹಾಳಾಗುವುದು) ಮತ್ತು ಬರೀ ಊಹಿತ ಹೂಡಿಕೆಯಿಂದಾಗಿ ಚಹಾ ಉತ್ಪಾದನೆಯಲ್ಲಿ ಆಸಕ್ತಿ ಇರಲಿಲ್ಲ.
ಭೌಗೋಳಿಕತೆಸಂಪಾದಿಸಿ
ಚಹಾ ಸಸ್ಯ (ಕ್ಯಮೆಲ್ಲಿಯಾ ಸಿನೆನ್ಸಿಸ್ ವರ್. ಅಸ್ಸಾಮಿಕಾ )ವನ್ನು ಅಸ್ಸಾಂನ ಕೆಳನಾಡಿನಲ್ಲಿ ಬೆಳೆಯಲಾಗುತ್ತದೆ, ಡಾರ್ಜೀಲಿಂಗ್‌ಗಳು ಮತ್ತು ನೀಲಗಿರಿಗಳನ್ನು ಎತ್ತರದ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ.ಅಸ್ಸಾಂ ಚಹಾ ಪೊದೆಗಳು ಬ್ರಹ್ಮಪುತ್ರಾ ನದಿಯ ಕಣಿವೆಯಲ್ಲಿ ಕೆಳಪ್ರದೇಶಗಳಲ್ಲಿ ಬೆಳೆಯುತ್ತವೆ, ಇಲ್ಲಿನ ಮಣ್ಣು ಬಹಳ ಫಲವತ್ತಾಗಿರುತ್ತದೆ. ಹವಾಗುಣವು ತಂಪು, ಒಣ ಚಳಿ ಹಾಗೂ ಉಷ್ಣ, ಆರ್ದತೆಯುಳ್ಳ ಮಳೆ ಕಾಲಗಳಿಂದ ಕೂಡಿರುತ್ತದೆ—ಇದು ಚಹಾ ಬೆಳೆಯಲ್ಲು ಉತ್ತಮವಾಗಿರುತ್ತದೆ. ಹೆಚ್ಚಾದ ಮಳೆ ಮತ್ತು ಉತ್ತಮವಾದ ಹವಾಮಾನ ಕಾಲಗಳನ್ನು ಹೊಂದಿದ ಅಸ್ಸಾಂ ಚಹಾ ಉತ್ಪಾದನೆಗೆ ವಿಶ್ವದಲ್ಲಿಯೇ ಅತ್ಯುತ್ತಮ ಪ್ರದೇಶವಾಗಿದೆ. ಪ್ರತಿ ವರ್ಷ, ಅಸ್ಸಾಂನ ಚಹಾ ತೋಟಗಳು 1.5 ಮಿಲಿಯನ್ ಪೌಂಡ್‌ಗಳಷ್ಟು (680,400 ಕೆಜಿ) ಫಸಲು ನೀಡುತ್ತವೆ. ಸಾಮಾನ್ಯವಾಗಿ ಅಸ್ಸಾಂ ಚಹಾವನ್ನು “ಮೊದಲ ಕೊಯ್ಲು” ಹಾಗೂ “ಎರಡನೆಯ ಕೊಯ್ಲು” ಎಂದು ವರ್ಷಕ್ಕೆ ಎರಡು ಬಾರಿ ಕಟಾವು ಮಾಡಲಾಗುತ್ತದೆ. ಮೊದಲ ಕೊಯ್ಲನ್ನು ಮಾರ್ಚ್ ಕೊನೆಯಲ್ಲಿ ಮಾಡಲಾಗುತ್ತದೆ. ಎರಡನೆಯ ಫಸಲನ್ನು ಕೊನೆಯಲ್ಲಿ ಕಟಾವು ಮಾಡಲಾಗುತ್ತದೆ, ಎಲೆಗಳ ತುದಿಯು ಬಂಗಾರದ ಬಣ್ಣವಾಗುವುದರಿಂದ ಇದನ್ನು “ಟಿಪ್ಪಿ ಟೀ” ಎಂದು ಕರೆಯಲಾಗುವುದು ಈ ಎರಡನೆಯ ಫಸಲು, ಟಿಪ್ಪಿ ಟೀಯು ಹೆಚ್ಚು ಸಿಹಿಯಾಗಿದ್ದು, ಉತ್ತಮವಾಗಿರುವುದರಿಂದ ಮೊದಲ ಫಸಲಿಗಿಂತ ಇದನ್ನು ಮೇಲ್ದರ್ಜೆಯದೆನ್ನಲಾಗುತ್ತದೆ. ಚೈನಾದ ಚಹಾ ಎಲೆಗಳಿಗೆ ಹೋಲಿಸಿದರೆ ಅಸ್ಸಾಂ ಚಹಾ ಪೊದೆಯ ಎಲೆಗಳು ಕಡು ಹಸಿರು ಬಣ್ಣವನ್ನು ಹೊಂದಿರುತ್ತವೆ ಮತ್ತು ನಯವಾಗಿ ಹೆಚ್ಚು ಆಕರ್ಷಕವಾಗಿರುತ್ತವೆ. ಈ ಪೊದೆಗಳಲ್ಲಿ ನಯವಾದ ಬಿಳಿ ಬಣ್ಣದ ಹೂವುಗಳು ಅರಳಿರುತ್ತವೆ.
ಇವನ್ನೂ ನೋಡಿಸಂಪಾದಿಸಿ
- ನೀಲಗಿರಿ ಚಹಾ
- ಡಾರ್ಜಿಲಿಂಗ್ ಚಹಾ
- ಅರ್ಲ್ ಗ್ರೇ ಚಹಾ
- ಕೂಲೀ
- ಅಸ್ಸಾಂ
ಟಿಪ್ಪಣಿಗಳುಸಂಪಾದಿಸಿ
- ↑ ಟೀ ರೀಸರ್ಚ್ ಅಸೋಸಿಯೇಶನ್ ಅವರಿಂದ ಚಹಾ ವರ್ಗೀಕರಣ Archived 2012-04-21 ವೇಬ್ಯಾಕ್ ಮೆಷಿನ್ ನಲ್ಲಿ., ಟೊಕ್ಲಾಯ್(2009/03/25ರಂದು ಪುನಃ ಪಡೆದುಕೊಳ್ಳಲಾಗಿದೆ)
- ↑ ಕ್ಯಮಿಲ್ಲಿಯಾ ಸಿನೆನ್ಸಿಸ್ ವರ್. ಅಸ್ಸಾಮಿಕಾದ ಐಟಿಐಎಸ್ ಸ್ಟ್ಯಾಂಡರ್ಡ್ ರಿಪೋರ್ಟ್ ಪುಟ 2009-03-28ರಂದು ಪುನಃ ಪಡೆದುಕೊಳ್ಳಲಾಗಿದೆ.
ಉಲ್ಲೇಖಗಳುಸಂಪಾದಿಸಿ
- ಕಿಪಲ್, ಕೆನ್ನೆತ್ ಎಫ್.; ಆರ್ನೆಲಸ್, ಕ್ರೀಮ್ಹಿಲ್ಡ್ ಸಿ. (ಅಕ್ಟೋಬರ್ 2000. ದಿ ಕೇಂಬ್ರಿಡ್ಜ್ ವರ್ಲ್ಡ್ ಹಿಸ್ಟರಿ ಆಫ್ ಫುಡ್ (ಸಂಪುಟ 1) . ಕೇಂಬ್ರಿಡ್ಜ್ ಯುನಿವರ್ಸಿಟಿ ಪ್ರೆಸ್ ಐಎಸ್‌ಬಿಎನ್ 0688168949
- ಚಹಾ ಇತಿಹಾಸ Archived 2009-01-06 ವೇಬ್ಯಾಕ್ ಮೆಷಿನ್ ನಲ್ಲಿ. ಪ್ಲ್ಯಾಂಟ್ ಕಲ್ಚರ್ಸ್
ಬಾಹ್ಯ ಕೊಂಡಿಗಳುಸಂಪಾದಿಸಿ
- ರಾಮಕೃಷ್ಣ ಚಟ್ಟೋಪಾದ್ಯಾಯ ಅವರ: ಸೋಷಿಯಲ್ ಪರ್ಸ್ಪೆಕ್ಟಿವ್ ಆಫ್ ಲೇಬರ್ ಲೆಜಿಸ್ಲೇಷನ್ ಇನ್ ಇಂಡಿಯಾ 1859-1932 Archived 2012-03-08 ವೇಬ್ಯಾಕ್ ಮೆಷಿನ್ ನಲ್ಲಿ. (1987)
- ರಾಮೇಂದ್ರ ಕುಮಾರ್ ಕರ್ ಅವರ ದಿ ಸಾವರಸ್ ಆಫ್ ಮನ್ಕೊಟ್ಟಾ: ಚಹಾ ಉದ್ಯಮದಿಂದ ಬುಡಕಟ್ಟು ಜನಾಂಗದ ಮೇಲೆ ಆಗುವ ಪರಿಣಾಮಗಳ ಬಗ್ಗೆ ಅಧ್ಯಯನ Archived 2011-07-21 ವೇಬ್ಯಾಕ್ ಮೆಷಿನ್ ನಲ್ಲಿ. (1975)
- ಹರಾಲ್ಡ್ ಮನ್ ಅವರ ದಿ ಅರ್ಲಿ ಹಿಸ್ಟರಿ ಆಫ್ ದಿ ಟೀ ಇಂಡಸ್ಟ್ರಿ ಇನ್ ನಾರ್ತ್-ಈಸ್ಟ್ ಇಂಡಿಯಾ (1918)
- ಸ್ಯಾಮುಯಲ್ ಬೇಲ್ಡನ್ ಅವರ ದಿ ಟೀ ಇಂಡಸ್ಟ್ರಿ ಇನ್ ಇಂಡಿಯಾ:ಹಣಕಾಸು ಮತ್ತು ಕೂಲಿಕಾರರ ಬಗ್ಗೆ ಪುನರವಲೋಕನ, ಹಾಗೂ ಹೂಡಿಕೆದಾರರು ಮತ್ತು ಕೆಲಸಗಾರರಿಗೆ ಒಂದು ಮಾರ್ಗದರ್ಶಿ (1882)
- ಜೆಎಫ್ ಗ್ರುನಿಂಗ್ ಅವರ ರಿಕ್ರೂಟ್ಮೆಂಟ್ ಆಫ್ ಲೇಬರ್ ಫಾರ್ ಟೀ ಗಾರ್ಡನ್ಸ್ ಇನ್ ಅಸಾಂ (1909)
- ಟೀ ಗ್ಯಾಜೆಟ್ನಿಂದ ದಿ ಟೀ ಪ್ಲಾಂಟರ್ಸ್ ವೇಡ್ ಮೆಕಮ್(1885)
- ಜಾರ್ಜ್ ಬಾರ್ಕರ್ ಅವರ ಟೀ ಪ್ಲಾಂಟರ್ಸ್ ಲೈಫ್ ಇನ್ ಅಸ್ಸಾಂ (1884)
- ಎಡ್ವರ್ಡ್ ಮನಿ ಅವರ ದಿ ಕಲ್ಟಿವೇಶನ್ & ಮ್ಯಾನುಫ್ಯಾಕ್ಚರ್ ಆಫ್ ಟೀ (1883)
- ಹರಾಲ್ಡ್ ಮನ್ ಅವರ ದಿ ಟೀ ಸಾಯಿಲ್ದ್ ಆಫ್ ಅಸ್ಸಾಂ ಅಂಡ್ ಟೀ ಮ್ಯಾನ್ಯೂರಿಂಗ್ (1901)
- ಭಾರತ ಹಾಗೂ ಸಿಲೋನ್ನ ಚಹಾ ಉತ್ಪಾದನಾ ಕಂಪನಿಗಳು (1897)
- ಜೆ ಸಿ ಕಿಡ್ಡ್ ಅವರ ದಿ ಟೀ ಇಂಡಸ್ಟ್ರಿ (1921)
- ಡಬ್ಲು ಎಮ್ ಫ್ರೇಸರ್ ಅವರ ದಿ ರಿಕಲೆಕ್ಷನ್ಸ್ ಅಫ್ ಎ ಟೀ ಪ್ಲಾಂಟರ್ Archived 2006-11-07 ವೇಬ್ಯಾಕ್ ಮೆಷಿನ್ ನಲ್ಲಿ. (1937)
- ಎ ಆರ್ ರಾಮ್ಸ್ದೆನ್ ಅಸ್ಸಾಂ ಪ್ಲಾಂಟರ್ Archived 2007-10-09 ವೇಬ್ಯಾಕ್ ಮೆಷಿನ್ ನಲ್ಲಿ. (1945)
- [೧] Archived 2011-07-16 ವೇಬ್ಯಾಕ್ ಮೆಷಿನ್ ನಲ್ಲಿ. ಸ್ಮಿತ್ಸೋನಿಯನ್ ಇನ್ಸ್ಟಿಟ್ಯೂಶನ್ನಿಂದ 19ನೆಯ ಶತಮಾನದ ಅಸ್ಸಾಂ ಪ್ಲಾಂಟೇಶನ್ಗಳ ಚಿತ್ರಗಳು