ಅಸ್ಟ್ರಲೋಪಿತಕಸ್

ಇತಿಹಾಸ ಬದಲಾಯಿಸಿ

4-20 ಲಕ್ಷ ವರ್ಷಗಳ ಹಿಂದೆ ಪ್ಲಿಯಿಸ್ಟೊಸೀನ್ ಮೊದಲ ಭಾಗದಲ್ಲಿ ದಕ್ಷಿಣ ಮತ್ತು ಪೂರ್ವ ಆಫ್ರಿಕದ ಬಯಲುಗಳಲ್ಲಿ ಹರಡಿದ್ದ ಒಂದು ವಾನರ ಜಾತಿ. ಈ ಪ್ರದೇಶದ ಹಲವಾರು ಸುಣ್ಣಕಲ್ಲು ಗುಹೆಗಳಲ್ಲಿ ಇದರ ಪಳೆಯುಳಿಕೆಗಳು ದೊರೆತಿವೆ. ಇತರ ಕಪಿಗಳಂತಲ್ಲದೆ, ಇದು ಮನುಷ್ಯನ ರೀತಿಯ ದ್ವಿಪಾದಚಾರಿ. ತಲೆಬುರುಡೆಯ ಮಾಟ, ಹಲ್ಲಿನ ಜೋಡಣೆ ಮುಂತಾದ ಇತರ ವಿಷಯಗಳಲ್ಲೂ ಇದು ನರಜಾತಿಗೆ ಸಮೀಪದಲ್ಲಿರುವುದರಿಂದ ಇದನ್ನು ಸಮೀಪನರನೆಂದೂ ಪ್ರಾಕ್ತನ ಶಾಸ್ತ್ರಜ್ಞರು ಕರೆಯುತ್ತಾರೆ. ಈ ಸಂತತಿಯ ಕಪಿಗಳು ಬಹುಸಾಮಾನ್ಯತರದ ಒರಟು ಶಿಲಾಯುಧಗಳನ್ನು ಉಪಯೋಗಿಸುತ್ತಿದ್ದಿರಬಹುದೆಂದು ಡಾ|| ಲೀಕಿಯವರ ಸಂಶೋಧನೆಗಳಿಂದ ಗೊತ್ತಾಗಿದೆ. ನಿಜಮಾನವನ ವಿಕಾಸದಲ್ಲಿ ಈ ಜಾತಿ ಒಂದು ಮಧ್ಯಘಟ್ಟವೋ ಅಥವಾ ವಿಕಾಸ ಕಾಂಡದಿಂದ ಒಡೆದು ಮಧ್ಯದಲ್ಲೇ ಅಳಿದುಹೋದ ಒಂದು ಕವಲೋ ಎಂಬುದು ಇನ್ನೂ ಅನಿರ್ದಿಷ್ಟ.

ಬೆಳವಣಿಗೆ ಬದಲಾಯಿಸಿ

ಮೊಟ್ಟಮೊದಲು ಡಾ|| ಡಾರ್ಟ್ 1924ರಲ್ಲಿ ಬೆಕುವಾನ ಲ್ಯಾಂಡ್‍ನಲ್ಲಿನ (ಆಫ್ರಿಕ) ಟಾಂನ್ಸ್ ಸುಣ್ಣಕಲ್ಲಿನಲ್ಲಿ ಈ ಗುಂಪಿಗೆ ಸೇರಿದ ತಲೆ ಬುರುಡೆಯ ಪಳೆಯುಳಿಕೆಯನ್ನು ಕಂಡು ಹಿಡಿದರು. ಅದಕ್ಕೆ ಅವರು ಅಸ್ಟ್ರಲೋಪಿತಕಸ್ ಎಂದು ನಾಮಕರಣ ಮಾಡಿದರು. 1936-51ರಲ್ಲಿ ಡಾ|| ರಾಬರ್ಟ್ ಬ್ರೂಂ ಟ್ರಾನ್ ವಾಲ್‍ನಲ್ಲಿ ಕೆಲವು ತಲೆಬುರುಡೆಗಳನ್ನು ಕಂಡುಹಿಡಿದರು. ಡಾಕ್ಟರ್ ಮತ್ತು ಶ್ರೀಮತಿ ಲೀಕಿಯವರು ಟಾಂಗನೀಕದ ಬಲ್ಡುವೆ ಕಣಿವೆಯಲ್ಲಿ 1956ರಲ್ಲಿ ಕಂಡುಹಿಡಿದ ಜಿóಂಜಾóತ್ರಪಸ್ ತಲೆಬುರುಡೆಯೂ ಇದೇ ಗುಂಪಿಗೆ ಸೇರಿದುದೆಂದು ಅನೇಕ ವಿಜ್ಞಾನಿಗಳ ಅಭಿಪ್ರಾಯ. ಮಿದುಳು 600-700 ಕ್ಯೊಬಿಕ್ ಸೆಂ. ಮೀ. ಇದ್ದಾಗ್ಯೂ (ಬಾಲವಿಲ್ಲದ ಮಂಗಗಳಿಗೆ ಇಷ್ಟೇ ಇದೆ) ಜಿóಂeóÁತ್ರೂಪಸ್ ಕಲ್ಲಿನ ಆಯುಧಗಳನ್ನು ಮಾಡುವ ಶಕ್ತಿಯನ್ನು ಹೊಂದಿತ್ತು. ಡಾ|| ಲೀಕಿಯವರು ಇದರ ತಲೆಬುರುಡೆಯ ಪಳೆಯುಳಿಕೆಯ ಜೊತೆಯಲ್ಲಿ ಸಿಕ್ಕಿದ ಕಲ್ಲಿನ ಆಯುಧಗಳನ್ನು ಶೇಖರಿಸಿದರು. ಅಸ್ಟ್ರಲೋಪಿತಕಸ್ ಗುಂಪು ಮೈದಾನದಲ್ಲಿ ಮರವನ್ನು ತ್ಯಜಿಸಿ ಮಾನವನಂತೆ ಎರಡು ಕಾಲುಗಳ ಮೇಲೆ ನೆಟ್ಟಗೆ ನಡೆಯುತ್ತಿದ್ದುರಿಂದ ಅವು ತಮ್ಮ ಆಹಾರಕ್ಕಾಗಿ ಬ್ಯಾಬೊನ್ ಮೊಲ ಮೊದಲಾದ ಪ್ರಾಣಿಗಳನ್ನು ಬೇಟೆಯಾಡುತ್ತಿದ್ದುವು.

ನೋಡಿ ಬದಲಾಯಿಸಿ

ಉಲ್ಲೇಖಗಳು ಬದಲಾಯಿಸಿ

[೧][೨]|

  1. study.com/academy/lesson/australophithecus-definition-characteristics-evolution.html
  2. http://www.encyclopedia.com/social-sciences-and-law/anthropology-and-archaeology/human-evolution/australopithecus