ಅಸೆಂಚರ್ ಪಿ.ಎಲ್.ಸಿ ಬಹುರಾಷ್ಟ್ರೀಯ ನಿರ್ವಹಣೆ ಸೇವಾ ಕಂಪನಿಯಾಗಿದೆ.[] ಇದರ ಕಾರ್ಯಾನಿಲಯವು ಐರ್ಲೆಂಡಿನ, ಡುಬ್ಲಿನ್ನಲ್ಲಿ ೧ ಸೆಪ್ಟೆಂಬರ್ ೨೦೦೯ರಿಂದ ಸಂಘಟಿತವಾಗಿದೆ. ಇದು ವಿಶ್ವದ ಅತಿ ದೊಡ್ದ ಸಲಹಾ ಸಂಸ್ಧೆಯಾಗಿದೆ. ಅಸೆಂಚರ್ ಕಂಪನಿಯು ೧೨೦ ದೇಶಗಳ ೨೦೦ ಗ್ರಾಮಗಳಲ್ಲಿ ೩೭೩೦೦೦ಕ್ಕೂ ಹೆಚ್ಚು ಉದ್ಯೋಗಿಗಳು ತಮ್ಮ ಗ್ರಾಹಕರಿಗೆ ಸೇವೆಯನ್ನು ಸಲ್ಲಿಸಿ ೨೦೧೫ರಲ್ಲಿ, ಶೇಕಡ $೩೧.೦ ಶತಕೋಟಿ ನಿವ್ವಳ ಆದಾಯ ವರದಿ ಮಾಡಲಾಗಿದೆ. ಬೇರೆ ಯಾವುದೆ ದೇಶಕ್ಕೆ ಹೋಲಿಸಿಕೊಂಡರೆ ೨೦೧೫ರಲ್ಲಿ, ಅಸೆಂಚರ್ ಕಂಪನಿಯು ಭಾರತದಲ್ಲಿ ೧,೩೦,೦೦೦ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ, US ನಲ್ಲಿ ೬೦,೦೦೦ ಹಾಗೂ ಫಿಲಿಫೈನ್ಸ್ ನಲ್ಲಿ ಸುಮಾರು ೫೦,೦೦೦ ಉಧ್ಯಮಿಗಳನ್ನು ಹೊಂದಿದೆ. ಪ್ರಸ್ತುತವಾಗಿ ಅಸೆಂಚರಿನಲ್ಲಿ ಫಾರ್ಚೂನ್ ಗ್ಲೋಬಲ್ ೧೦೦ರಲ್ಲಿ ೯೪ ಹಾಗೂ ಫಾರ್ಚೂನ್ ಗ್ಲೋಬಲ್ ೫೦೦ರಲ್ಲಿ ೮೦% ಗ್ರಾಹಕರನ್ನು ಹೊಂದಿದೆ. ಅಸೆಂಚರಿನ ಸಾಮಾನ್ಯ ಈಕ್ವಿಟಿತಯು ನ್ಯೂಯಾರ್ಕ್ ಷೇರು ವಿನಿಮಯ ಕೇಂದ್ರದಲ್ಲಿ ಎ.ಪಿ.ನ್ ಚಿಹ್ನೆಯಡಿ ಪಟ್ಟಿ ಮಾಡಲಾಗಿದೆ ಹಾಗೂ ೫ ಜುಲೈ ೨೦೧೧ರಂದು ಎಸ್&ಪಿ ಯಲ್ಲಿ ಸೇರಿಸಲಾಯಿತು. ೨೦೧೫ರಲ್ಲಿ ಫಾರ್ಚ್ಯೂನ್ ಪತ್ರಿಕೆಯು ಅಸೆಂಚರ್ ಕಂಪನಿಯನ್ನು ಜಗತ್ತಿನ ಅತ್ಯಂತ ಮೆಚ್ಚುಗೆಯ ಮಾಹಿತಿ ತಂತ್ರಜ್ಞಾನ ಸೇವೆಗಳು ಕಂಪನಿ ಎಂದು ಹೆಸರಿಸಲಾಗಿತ್ತು.

ಇತಿಹಾಸ

ಬದಲಾಯಿಸಿ

ಅಸೆಂಚರ್ ಹಣಕಾಸು ಸಂಸ್ಥೆ ಆರ್ಥರ್ ಆಂಡರ್ಸನ್ ವ್ಯಾಪಾರ ಮತ್ತು ತಂತ್ರಜ್ಞಾನ ಸಲಹಾ ವಿಭಾಗವನ್ನಾಗಿ ಆರಂಭಿಸಲಾಯಿತು. ೧೯೫೦ರಲ್ಲಿ ಕೆಂಟುಕಿ ರಾಜ್ಯದ, ಲೂಯಿಸ್ವಿಲ್ಲೆಯ ಅಪ್ಲಿಯನ್ಸ್ ಪಾರ್ಕಿನಲ್ಲಿ ಜನರಲ್ ಎಲೆಕ್ಟ್ರಿಕಲ್ಲಿನ ಅಧ್ಯಯನವನ್ನು ನಡೆಸಿ, ಕಂಪ್ಯುಟರನ್ನು ಅಳವಡಿಸಬೇಕಾಗಿತ್ತು, ಇದು ಆರ್ಥರ್ ಆಂಡರ್ಸನ್ ಅವರ ಮೊದಲ ಕೆಲಸವಾಗಿತ್ತು. ೧೯೫೩ರಲ್ಲಿ ಸಂಸ್ಧೆಯು ಯು.ಯಎನ್.ಐ.ವಿ.ಎ.ಸಿ. ಐ ಕಂಪ್ಯೂಟರ್ ಮತ್ತು ಪ್ರಿಂಟರ್ ಅನುಸ್ಥಾಪಿಸಲು ಜಿ.ಇ ಗೆ ಒತ್ತಾಯಿಸಿದರು. U.S ನಲ್ಲಿ ಈ ವ್ಯವಸ್ಧೆಯು ಕಂಪ್ಯೂಟರಿನ ಮೊದಲನೆಯಾ ವ್ಯಾಪಾರೀ ಬಳಕೆ ಎಂದು ನಂಬಲಾಗಿತು. ಕಂಪ್ಯೂಟರ್ ಸಲಹಾ ಆರಂಭಿಕ ಪ್ರವರ್ತಕರಾದ, ಜೋಸೆಫ್ ಗಿಲ್ಕ್ಖಾಫ್ ರವರು ಆರ್ಥರ್ ಆಂಡರ್ಸನ್ ಅವರ ಆಡಳಿತ ಸೇವಾ ವಿಭಾಗದಲ್ಲಿ ಮುಖ್ಯಸ್ಥರಾಗಿ ಒಂದು ಸ್ಥಾನವನ್ನು ಪಡೆದುಕೊಂಡರು. ೧೯೮೯ರಲ್ಲಿ ಆರ್ಥರ್ ಆಂಡರ್ಸನ್ ಮತ್ತು ಆಂಡರ್ಸನ್ ಕನ್ಸಲ್ಟಿಂಗ್ ಘಟಕಗಳು ಆಂಡರ್ಸನ್ ವಲ್ಡ್ ವೈಡ್ ಸೊಸೈಟೆ ಕೋಆಪರೆಟಿವ್(ಎ.ಡ್ಬ್ಯು.ಎಸ್.ಸಿ)ಯ ಪ್ರತ್ಯೇಕ ಘಟಕಗಳಾದವು. ೧೯೯೦ರ ದಶಕದಾದ್ಯಂತ ಆಂಡರ್ಸನ್ ಕನ್ಸಲ್ಟಿಂಗ್ ಮತ್ತು ಆರ್ಥರ್ ಆಂಡರ್ಸನ್ ನಡುವೆ ಉದ್ವೇಗಗಳು ಹೆಚ್ಚುತ್ತಿದ್ದವು. ಆಂಡರ್ಸನ್ ಕನ್ಸಲ್ಟಿಂಗ್ ತನ್ನ ಲಾಭದ ೧೫% ಆರ್ಥರ್ ಆಂಡರ್ಸನ್ ನವರಿಗೆ ಕೊಡುತಿದ್ದ ಕಾರಣ, ಆಂಡರ್ಸನ್ ಕನ್ಸಲ್ಟಿಂಗ್ ಅಸಮಧಾನಗೊಂಡಿತು. ಅದೇ ಸಮಯದಲ್ಲಿ ಆರ್ಥರ್ ಆಂಡರ್ಸನ್, ಆರ್ಥರ್ ಆಂಡರ್ಸನ್ ಉದ್ಯಮ ಕನ್ಸಲ್ಟಿಂಗ್(ಎ.ಎ.ಬಿ.ಸಿ) ಎಂಬ ಹೆಸರಿನ ತನ್ನದೇ ಸ್ವಂತ ಹೊಸದಾಗಿ ಸ್ಥಾಪಿತ ವ್ಯಾಪಾರ ಸಲಹಾ ಸೇವಾ ಲೈನ್ ಮೂಲಕ ಆಂಡರ್ಸನ್ ಕನ್ಸಲ್ಟಿಂಗ್ ಪೈಪೋಟಿ ಆರಂಭಿಸಿತು. ೧೯೯೮ರಲ್ಲಿ, ಆಂಡರ್ಸನ್ ಕನ್ಸಲ್ಟಿಂಗ್ ಎ.ಡ್ಬ್ಲು.ಸ್.ಸಿ. ಮತ್ತು ಆರ್ಥರ್ ಆಂಡರ್ಸನ್ ವಿರುದ್ಧ ಒಪ್ಪಂದದ ಉಲ್ಲಂಘನೆ ಹಕ್ಕು ಈ ವಿವಾದ ಬಂದಿತು. ಆಂಡರ್ಸನ್ ಕನ್ಸಲ್ಟಿಂಗ್ ರವರು ವರ್ಷಕ್ಕೆ ೧೫% ವರ್ಗಾವಣೆ ಪಾವತಿ ಕೊಟ್ಟು ಹಾಗೂ ಮುಂದಿನ ವರ್ಷಗಳಿಗೂ ಅದೇ ರೀತಿಯ ಭರವಸೆಯನ್ನು ಕೊಟ್ಟು ಒಪ್ಪಂದದ ಉಲ್ಲಂಘನೆಯ ಹಕ್ಕನ್ನು ಕೊಡಲಾಯಿತು. ಆಗಸ್ಟ ೨೦೦೦ರಲ್ಲಿ, ವಾಣಿಜ್ಯ ಇಂಟರ್ ನ್ಯಾಶನಲ್ ಚೇಂಬರ್ ಜೊತೆ ವಾದ ತೀರ್ಮಾನಕ್ಕೆ ಪರಿಣಾಮವಾಗಿ ಆಂಡರ್ಸನ್ ಕನ್ಸಲ್ಟಿಂಗ್ ಎ.ಡ್ಬ್ಯು.ಎಸ್.ಸಿ ಮತ್ತು ಆರ್ಥರ್ ಆಂಡರ್ಸನ್ ಅವರ ಎಲ್ಲಾ ಕರಾರಿನ ಸಂಬಂಧವನ್ನು ಮುರಿದರು. ಪಂಚಾಯ್ತಿ ಒಪ್ಪಂದದ ಘಟಕದ ಪರಿಣಾಮವಾಗಿ, ಆಂಡರ್ಸನ್ ಕನ್ಸಲ್ಟಿಂಗ್ ನವರು ಬರವಸೆ ನೀಡಿದ ಮೊತ್ತದ ಹಣವನ್ನು (ನಂತರ $೧.೨ ಬಿಲಿಯನ್) ಆರ್ಥರ್ ಆಂಡರ್ಸನ್ ಗೆ ನೀಡಿದರು ಆನಂತರ ಅದರ ಹೆಸರನ್ನು ಬದಲಾಯಿಸಬೇಕಿದ್ದ ಕಾರಣದಿಂದ, ಘಟಕದ ಪರಿಣಮವಾಗಿ ಅಸೆಂಚರ್ ಎಂದು ಮರುನಾಮಕರಣ ಮಾಡಲಾಯಿತು.[]

ಅಸೆಂಚರಿನ ಹುಟ್ಟು

ಬದಲಾಯಿಸಿ

೧ ಜನವರಿ ೨೦೦೧ ರಂದು ಆಂಡರ್ಸನ್ ಕನ್ಸಲ್ಟಿಂಗ್ ನವರು "ಅಸೆಂಚರ್" ಎಂದು ಮರುನಾಮಕರಣ ಮಾಡಿದರು. ಅಸೆಂಚರ್ ಎಂಬ ಪದವು "ಅಸೆಂತ್ ಆನ್ ದಿ ಫ಼ೂಚರ್" ("ಭವಿಷ್ಯದ ಬಳಕೆ") ಎಂದು ಉಚ್ಚಾರಣೆ ಪಡೆಯಲಾಗಿದೆ. ನಾರ್ವೆ ಕಛೇರಿಯ, ಓಸ್ಲೋ ಕಂಪನಿಯ, ಡ್ಯಾನಿಶ್ ಉದ್ಯೋಗಿ ಯಾದ ಕಿಮ್ ಪೀಟರ್ಸನ್ ರವರು ಆಂತರಿಕ ಸ್ಪರ್ಧೆಯ ಪರಿಣಾಮವಾಗಿ "ಅಸೆಂಚರ್" ಎಂದು ಮಂಡಿಸಿದರು. ಅಸೆಂಚರ್ ಹೆಸರು ಜಾಗತಿಕ ಸಲಹಾ ನಾಯಕ ಮತ್ತು ಹೆಚ್ಚಿನ ಪ್ರದರ್ಶಕ ಎಂದು ತನ್ನ ಇಚ್ಛೆಯನ್ನು ಪ್ರತಿನಿಧಿಸಬೇಕು ಎಂದು ಭಾವಿಸಿದರು, ಹಾಗೂ ಅಸೆಂಚರ್ ಎಂಬ ಹೆಸರು ಕಾರ್ಯ ನಿರ್ವಹಿಸುವ ಯಾವುದೇ ದೇಶದಲ್ಲಿ ಆಕ್ರಮಣಕಾರಿ ಮಾಡಬಾರದು ಎಂದು ಅವರ ಉದ್ದೇಶವಾಗಿತ್ತು. ೧೯ ಜುಲೈ ೨೦೦೧ ರಂದು, ಅಸೆಂಚರ್ ಆರಂಭಿಕ ಸಾರ್ವಜನಿಕ ಕೊಡುಗೆ ಯನ್ನು (ಐ.ಪಿ.ಓ) ಪ್ರತಿ ಷೇರಿಗ $೧೪.೫೦ ಬೆಲೆಯನ್ನಾಗಿಸಿ, []ನ್ಯೂಯಾರ್ಕ್ ಸ್ಟಾಕ್ ಎಕ್ಸ್ಚೇಂಜ್ ನಲ್ಲಿ (ಎನ್ವೈಎಸ್ಇ) ನೀಡಿತು. ಗೋಲ್ಡ್ಮನ್ ಸ್ಯಾಚ್ಸ್ ಮತ್ತು ಮೋರ್ಗಾನ್ ಸ್ಟಾನ್ಲಿ ತನ್ನ ಪ್ರಮುಖ ಷೇರು ಮಾರಾಟ ಒಪ್ಪಂದರಾಗಿ ಕಾರ್ಯನಿರ್ವಹಿಸಿದರು. ಅಸೆಂಚರ್ ಸ್ಟಾಕ್ ದಿನವನ್ನು $೧೫.೧೭ ನಲ್ಲಿ, ಅತ್ಯಧಿಕವಾಗಿ $೧೫.೧೫ನಲ್ಲಿ ಮುಚ್ಚಲಾಯಿತು. ಐ.ಪಿ.ಒ ಮೊದಲ ದಿನ, ಅಸೆಂಚರ್ ಸುಮಾರು $೧.೭ ಬಿಲಿಯನ್ ನಷ್ಟು ಬೆಳೆಸಿತು. ಅಕ್ಟೋಬರ್ ೨೦೦೨ ರಲ್ಲಿ, ಕಾಂಗ್ರೆಸ್ ಜನರಲ್ ಅಕೌಂಟಿಂಗ್ ಆಫೀಸ್ (ಜಿ.ಎ.ಒ), ಅಸೆಂಚರ್ ನನ್ನು ತೆರಿಗೆ ಧಾಮವನ್ನು ದೇಶದಲ್ಲಿ ಅಳವಡಿಸಿದ ನಾಲ್ಕು ಸಾರ್ವಜನಿಕವಾಗಿ ವ್ಯಾಪಾರ ಫೆಡರಲ್ ಗುತ್ತಿಗೆದಾರರು ಎಂದು ಗುರುತಿಸಲಾಯಿತು. ಅಸೆಂಚರ್ ಭಿನ್ನವಾಗಿ, ತೆರಿಗೆ ಧಾಮ ದೇಶದಲ್ಲಿ ಮರು ಸಂಘಟಿತದ ಮೊದಲು, ಯುನೈಟೆಡ್ ಸ್ಟೇಟ್ಸ್ ವುಳಿದ ಮೂರು ದೇಶಗಳನ್ನು ಸಂಘಟಿಸಿತು, ಹಾಗೂ ಯುನೈಟೆಡ್ ಸ್ಟೇಟ್ಸ್ ದೇಶದ ತೆರಿಗೆಯನ್ನು ಕಡಿಮೆಗೊಳಿಸಿತು. ವಿಮರ್ಶಕರು, ಮುಖ್ಯವಾಗಿ ಮಾಜಿ ಸಿ.ಎನ್.ಎನ್ ಪತ್ರಕರ್ತ ಲೌ ಡಾಬ್ಸ್ ರವರು, ಅಸೆಂಚರ್ ರನ್ನು ಒಂದು ಯು.ಎಸ್- ಮೂಲದ ಕಂಪೆನಿ ವೀಕ್ಷಿಸಿದ ಕಾರಣ ಯು.ಎಸ್ ಈನ ತೆರಿಗೆ ತಪ್ಪಿಸುವ ಕೆಲಸದಿಂದ, ಅಸೆಂಚರನ್ನು ಬರ್ಮುಡಾದಲ್ಲಿ ಸಂಘಟಿಸುವ ನಿರ್ದಾರ ತೆಗೆದುಕೊಂಡಿದೆ ಎಂದು ವರದಿ ಮಾಡಿದರು. ಸ್ವತಃ ಜಿ.ಎ.ಒ. ಅಸೆಂಚರನ್ನು ಯು.ಎಸ್. ಮೂಲದ ಕಂಪೆನಿ ಎಂದು ನಿರೂಪಿಸಲಿಲ್ಲ ಹಾಗೂ ಅಸೆಂಚರ್ ಸ್ವಿಸ್ ಕೋಆರ್ಡಿನೇಟಿಂಗ್ ಘಟಕದ ಸಂಬಂಧಿತ ಪಾಲುದಾರಿಕೆಗಳು ಮತ್ತು ನಿಗಮಗಳ ಸರಣಿ ಒಪ್ಪಂದಗಳನ್ನು ವಿಧಾನದ ಮೂಲಕ ಅದರ ಪಾಲುದಾರರ ನಿಯಂತ್ರಣದ ಕೆಳಗೆ ತನ್ನ ಕೆಲಸ ನಿರ್ವಹಿಸುತ್ತಿದ್ದರು ಎಂದು ಹೇಳಿದರು.

ಸೇವೆಗಳು ಹಾಗೂ ಕಾರ್ಯಚರಣೆಗಳು

ಬದಲಾಯಿಸಿ

ಅಸೆಂಚರ್ ಸ್ಟ್ರಾಟಜಿಯು ವ್ಯಾಪಾರದ ತಂತ್ರ ಗಳ, ತಂತ್ರಜ್ಞಾನದ ತಂತ್ರ ಗಳ ಮತ್ತು ಕಾರ್ಯಾಚರಣೆಯ ತಂತ್ರ ಗಳ ಸೇವೆಗಳನ್ನು ಒದಗಿಸುತ್ತದೆ. ಅಸೆಂಚರ್ ಕನ್ಸಲ್ಟಿಂಗ್ ತಂತ್ರಜ್ಞಾನವು, ವ್ಯಾಪಾರ ಮತ್ತು ನಿರ್ವಹಣೆ ಸಲಹಾ ಒದಗಿಸುತ್ತದೆ. ಅಸೆಂಚರ್ ಡಿಜಿಟಲ್ ಸೇವೆಯು ಡಿಜಿಟಲ್ ಮಾರ್ಕೆಟಿಂಗ್, ವಿಶ್ಲೇಷಣೆ ಮತ್ತು ಚಲನಶೀಲತೆ ಸೇವೆಗಳನ್ನು ಒದಗಿಸುತ್ತದೆ. ಅಸೆಂಚರ್ ತಂತ್ರಜ್ಞಾನವು ಉದಯೋನ್ಮುಖ ತಂತ್ರಜ್ಞಾನ, ತನ್ನ ತಂತ್ರಜ್ಞಾನ ಲ್ಯಾಬ್ಸ್ ಸೇರಿದಂತೆ ತಂತ್ರಜ್ಞಾನ ಪರಿಹಾರಗಳನ್ನು ಅನುಷ್ಠಾನಕ್ಕೆ, ವಿತರಣೆ, ಸಂಶೋಧನೆ ಮತ್ತು ಅಭಿವೃದ್ಧಿಗೆ ಕೇಂದ್ರೀಕರಿಸುತ್ತದೆ. ಅಸೆಂಚರ್ ಕಾರ್ಯಾಚರಣೆ ಸೇವೆಯು ಒಂದು "ಒಂದು ಸೇವೆ ಹಾಗೆ" ಮಾದರಿ ಕೇಂದ್ರೀಕರಿಸುತ್ತದೆ. ಈ ವ್ಯಾಪಾರ ಪ್ರಕ್ರಿಯೆಯ ಹೊರಗುತ್ತಿಗೆ, ಐಟಿ ಸೇವೆಗಳು, ಮೇಘ ಸೇವೆಗಳು, ನಿರ್ವಹಿಸುತ್ತಿದ್ದ ಕಾರ್ಯಾಚರಣೆಗಳು, ಭದ್ರತೆ ಮತ್ತು ಮೂಲಸೌಕರ್ಯ ಸರ್ವಿಸ್ಗಳನ್ನು ಒಳಗೊಂಡಿದೆ. ಕಂಪನಿಯು ಒಂದು "ರಾಷ್ಟ್ರೀಯ ಭದ್ರತಾ ಸೇವೆಗಳು" ಎಂಬಂತೆ ವ್ಯಾಪಾರ ಕಾರ್ಯವಹಿಸುತ್ತದೆ. ೨೦೧೩ ರಲ್ಲಿ, ಡೈವರ್ಸಿಟಿ ಐ.ಎನ್.ಸಿ ಸಂಸ್ಥೆಯ,ಟಾಪ್ ೫೦ ಕಂಪನಿಯಲ್ಲಿ ಅಸೆಂಚರ್ ತನ್ನು ವೈವಿಧ್ಯತೆಗೆ ಟಾಪ್ ೯ ನೇ ಸ್ಧಾನವನ್ನು ಪಡೆದಿದೆ.

ಇತ್ತೀಚಿನ ಪ್ರಶಸ್ತಿಗಳು ಮತ್ತು ಗೌರವಗಳು

ಬದಲಾಯಿಸಿ

೨೦೧೩ರಲ್ಲಿ, ಟಾಪ್ ೫೦ ಕಂಪನಿಗಳಲ್ಲಿ ಅಸೆಂಚರ್ ನನ್ನು ಅದರ ವೈವಿದ್ಯತೆಗೆ ಟಾಪ್ ೯ನೇ ಕಂಪನಿ ಎಂದು ಡೈವರ್ಸಿತಿ ಐ.ಎನ್.ಸಿ ಇಂದ ಹೆಸರಿಸಲಾಯಿತು.೨೦೧೪ರಲ್ಲಿ, ಟಾಪ್ ೫೦ ಕಂಪನಿಗಳಲ್ಲಿ ಅಸೆಂಚರ್ ನನ್ನು ಅದರ ವೈವಿದ್ಯತೆಗೆ ಟಾಪ್ ೧೨ನೇ ಕಂಪನಿ ಎಂದು ಡೈವರ್ಸಿತಿ ಐ.ಎನ್.ಸಿ ಇಂದ ಹೆಸರಿಸಲಾಯಿತು.[]. ೨೦೧೪ರಲ್ಲಿ, ಅಸೆಂಚರ್ ಫೋರ್ಬ್ಸ್ ಗ್ಲೋಬಲ್ ೨೦೦೦ರ ಪಟ್ಟಿಯಲ್ಲಿ ೩೩೯ ನೇ ಸ್ಥಾನವನ್ನು ಪಡೆಯಿತು.೨೦೧೫ರಲ್ಲಿ, ಟಾಪ್ ೫೦ ಕಂಪನಿಗಳಲ್ಲಿ ಅಸೆಂಚರ್ ನನ್ನು ಅದರ ವೈವಿದ್ಯತೆಗೆ ಟಾಪ್ ೧೫ನೇ ಕಂಪನಿ ಎಂದು ಡೈವರ್ಸಿತಿ ಐ.ಎನ್.ಸಿ ಇಂದ ಹೆಸರಿಸಲಾಯಿತು.೨೦೧೫ ಬ್ರಲ್ಲಿ, ಅಸೆಂಚರ್ ಫೋರ್ಬ್ಸ್ ಗ್ಲೋಬಲ್ ೨೦೦೦ ಪಟ್ಟಿಯಲ್ಲಿ ೩೨೨ ನೇ ಸ್ಥಾನವನ್ನು ಪಡೆಯಿತು.೨೦೧೫ ರಲ್ಲಿ, ಅಸೆಂಚರ್ ಫಾರ್ಚೂನ್ ಗ್ಲೋಬಲ್ ೫೦೦ ಪಟ್ಟಿಯಲ್ಲಿ ನಂ. ೩೭೪ ಸ್ಥಾನವನ್ನು ಪಡೆಯಿತು.[].೨೦೧೬ರಲ್ಲಿ, ಟಾಪ್ ೫೦ ಕಂಪನಿಗಳಲ್ಲಿ ಅಸೆಂಚರ್ ನನ್ನು ಅದರ ವೈವಿದ್ಯತೆಗೆ ಟಾಪ್ ೧೫ನೇ ಕಂಪನಿ ಎಂದು ಡೈವರ್ಸಿತಿ ಐ.ಎನ್.ಸಿ ಇಂದ ಹೆಸರಿಸಲಾಯಿತು.೨೦೧೬ ರಲ್ಲಿ, ಅಸೆಂಚರ್ ಫೋರ್ಬ್ಸ್ ಗ್ಲೋಬಲ್ ೨೦೦೦ ಪಟ್ಟಿಯಲ್ಲಿ ನಂ ೨೮೯ ಸ್ಥಾನವನ್ನು ಪಡೆಯಿತು.

ಉಲ್ಲೇಖ

ಬದಲಾಯಿಸಿ
  1. https://www.accenture.com/us-en/company
  2. http://www.informationweek.com/andersen-consulting-changing-name-to-accenture-/d/d-id/1009400 Archived 2016-09-19 ವೇಬ್ಯಾಕ್ ಮೆಷಿನ್ ನಲ್ಲಿ.?
  3. http://money.cnn.com/2001/07/19/deals/accenture/index.htm
  4. "ಆರ್ಕೈವ್ ನಕಲು". Archived from the original on 2016-09-26. Retrieved 2016-09-15.
  5. "ಆರ್ಕೈವ್ ನಕಲು". Archived from the original on 2016-09-10. Retrieved 2016-09-15.
"https://kn.wikipedia.org/w/index.php?title=ಅಸೆಂಚರ್&oldid=1144298" ಇಂದ ಪಡೆಯಲ್ಪಟ್ಟಿದೆ