ಅಸಾಹಿ ಶಿಂಭೂನ್ ಜಪಾನ್ ದೇಶದ ಅತ್ಯಂತ ಜನಪ್ರಿಯ ಪತ್ರಿಕೆಗಳಲ್ಲೊಂದು. ಅಸಾಹಿ ಶಿಂಭೂನ್ ಎಂದರೆ ಉದಯ ಭಾಸ್ಕರ ಪತ್ರಿಕೆ ಎಂದು ಅರ್ಥ. ವಿಶೇಷ ಲೇಖನ ಪ್ರಕಟಣೆಗಳಲ್ಲಿ, ತಾಂತ್ರಿಕ ಬೆಳೆವಣಿಗೆಯಲ್ಲಿ ಇದು ಅತ್ಯಂತ ಮಹತ್ತ್ವದ್ದಾಗಿದೆ. ಪಾಶ್ಚಾತ್ಯ ದೇಶಗಳಿಂದ ತರಿಸಿಕೊಳ್ಳುವ ವಸ್ತುಗಳ ಬಗ್ಗೆ ಮಾಹಿತಿನೀಡಲು ಕೆಲವು ವ್ಯಾಪಾರಿಗಳು ಒಸಾಕ ನಗರದಲ್ಲಿ ಈ ಪತ್ರಿಕೆಯನ್ನು ಸ್ಥಾಪಿಸಿದರು (1879). ಕೆಲವು ಕಾಲದ ಮೇಲೆ ರಾಜಕಾರಣವನ್ನು ಮುಖ್ಯ ಗುರಿಯನ್ನಾಗಿಟ್ಟುಕೊಂಡು ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಪಣತೊಟ್ಟು ಈ ಪತ್ರಿಕೆಯನ್ನು ಟೋಕಿಯೊ ನಗರಕ್ಕೆ ವರ್ಗಾಯಿಸಲಾಯಿತು.

ಅಸಾಹಿ ಶಿಂಭೂನ್
ಪತ್ರಿಕೆಯ ಪ್ರಥಮ ಸಂಚಿಕೆ 25 ಜನವರಿ 1879
ವರ್ಗದಿನ ಪತ್ರಿಕೆ
ವಿನ್ಯಾಸBroadsheet (40.6 × 54.6 cm)[]
ಮಾಲೀಕಮಿಚಿಕೊ ಮುರಯಾಮ, ಶೊಯ್ಚಿ ಯುನೊ
ಪ್ರಕಾಶಕತಡಕಝು ಕಿಮುರ
ಮುಖ್ಯ ಸಂಪಾದಕಯೊಶಿಬುಮಿ ವಕಮಿಯ
ಸ್ಥಾಪನೆ25 ಜನವರಿ 1879 (1879-01-25)
ಭಾಷೆಜಪಾನಿ ಭಾಷೆ
ಕೇಂದ್ರ ಕಾರ್ಯಾಲಯಒಸಾಕ
ಚಲಾವಣೆ೭೯.೬ ಲಕ್ಷ (ಬೆಳಗಿನ ಆವೃತಿ, 2010)[]
ಅಧಿಕೃತ ತಾಣwww.asahi.com

ಛಾಯಾಂಕಣ

ಬದಲಾಯಿಸಿ

ಬಾಹ್ಯ ಸಂಪರ್ಕಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. "数字で見る朝日新聞". Asahi. Retrieved 31 March 2011.
  2. "全国紙の朝・夕刊別販売部数(単位:部)". Yomiuri. Archived from the original on 31 ಅಕ್ಟೋಬರ್ 2014. Retrieved 31 March 2011.