ಅಸಮೀಕರಣ
ತಾಳೆಮಾಡುವಂಥ ಸಮೀಕರಣದಿಂದ ಗಣಿತ ಸಂಕೇತಗಳನ್ನು ಸಂಬಂಧಿಸಲು ಸಾಧ್ಯವಾಗದಾಗ ಅದನ್ನು ಸಾಂಕೇತಿಕವಾಗಿ ತಿಳಿಸುವ ವಿಧಾನ (ಇನ್ಈಕ್ವಾಲಿಟಿ). ಎರಡು ಪ್ರಮಾಣಗಳಲ್ಲಿ ಯಾವುದು ದೊಡ್ಡದು, ಯಾವುದು ಚಿಕ್ಕದು ಎಂದು ಖಚಿತವಾಗಿ ಹೇಳಲು ಅಸಮತ್ ಚಿಹ್ನೆಗಳನ್ನು ಬಳಸಲಾಗುವುದು. ಉದಾಹರಣೆಗೆ : a ಯು b ಗಿಂತ ದೊಡ್ಡದು ಎನ್ನುವುದು a>b, ಹಾಗೆಯೇ b ಯು a ಗಿಂತ ಚಿಕ್ಕದು ಎಂದು ಸೂಚಿಸಲು b<a ಎಂದು ಬರೆಯಲಾಗುತ್ತದೆ. ಅಸಮೀಕರಣ ಅಥವಾ ಅಸಮತಾ ಚಿಹ್ನೆಗಳನ್ನು ಸಮತಾ ಚಿಹ್ನೆ (=) ಯೊಂದಿಗೆ ಅಥವಾ ಎಂದು ಜೊತೆಗೂಡಿಸುವುದೂ ಉಂಟು.