ಅಷ್ಟವಸುಗಳು
ದಕ್ಷಪ್ರಜಾಪತಿಯ ಮಗಳು ವಸು ಎಂಬಾಕೆಯ ಮಕ್ಕಳು. ಈ ಎಂಟು ವಸುಗಳಿಗೆ ಧರ, ಧ್ರುವ, ಸೋಮ, ಅಹ, ಅನಿಲ, ಅನಲ, ಪ್ರತ್ಯೂಷ, ಪ್ರಭಾಸ ಎಂಬ ಹೆಸರುಗಳುಂಟು. ಇವರ ವಿಚಾರ ಮಹಾಭಾರತದ ಆದಿಪರ್ವದಲ್ಲಿ ಬರುತ್ತದೆ. ಇವರು ಒಮ್ಮೆ ವಸಿಷ್ಠ ಮಹರ್ಷಿಯ ಆಶ್ರಮದಲ್ಲಿ ಸಂಚರಿಸುತ್ತ, ನಂದಿನೀ ಧೇನುವನ್ನು ಕದ್ದೊಯ್ಯಲು ಹವಣಿಸಿ, ಋಷಿಯಿಂದ ಶಾಪವನ್ನು ಪಡೆದು ಭೂಲೋಕದಲ್ಲಿ ಶಂತನುವಿನ ಹೆಂಡತಿ ಗಂಗೆಯ ಮಕ್ಕಳಾಗಿ ಹುಟ್ಟಿದರು. ಹಿರಿಯವನಾದ ಧರನೇಭೀಷ್ಮನಾಗಿ ಜನ್ಮವೆತ್ತಿದ.