ಅಶೋಕ್‍ಧಾಮ್ ಮಂದಿರ
ಅಶೋಕ್‍ಧಾಮ್ ಮಂದಿರವು (ಇಂದ್ರದಮನೇಶ್ವರ ಮಹಾದೇವ್ ಮಂದಿರ್ ಎಂದು ಕೂಡ ಪರಿಚಿತವಾಗಿದೆ) ಭಾರತದ ಬಿಹಾರ ರಾಜ್ಯದ ಲಖೀಸರಾಯ ಜಿಲ್ಲೆಯಲ್ಲಿ ಸ್ಥಿತವಾಗಿದೆ. ಇದು ಒಂದು ದೇವಾಲಯದ ಸಂಕೀರ್ಣವಾಗಿದೆ. ಮಧ್ಯದಲ್ಲಿ ಮುಖ್ಯ ದೇವರಾದ ಶಿವನಿಗೆ ಸಮರ್ಪಿತವಾದ ಇಂದ್ರದಮನೇಶ್ವರ ಮಹಾದೇವ್ ಮಂದಿರವಿದೆ. ಇದರ ಸುತ್ತ ದೇವಿ ಪಾರ್ವತಿ, ಶಿವನ ಸವಾರಿ ನಂದಿ ಮತ್ತು ದೇವಿ ದುರ್ಗೆಗೆ ಸಮರ್ಪಿತವಾದ ಮೂರು ದೇವಾಲಯಗಳಿವೆ.
೭ ಎಪ್ರಿಲ್ ೧೯೭೭ರಂದು, ಅಶೋಕ್ ಮತ್ತು ಗಜಾನಂದ್ ಹೆಸರಿನ ಇಬ್ಬರು ಹುಡುಗರು ಸಾಂಪ್ರದಾಯಿಕ ಚಿನ್ನಿ ದಾಂಡು ಆಟವಾಡುವಾಗ ಭೂಮಿಯ ಕೆಳಗೆ ಬೃಹತ್ ಶಿವಲಿಂಗವನ್ನು ಪತ್ತೆಹಚ್ಚಿದರು. ೧೧ ಫ಼ೆಬ್ರುವರಿ ೧೯೯೩ರಂದು, ಜಗನ್ನಾಥ್‍ಪುರಿಯ ಶಂಕರಾಚಾರ್ಯರು ದೇವಾಲಯ ಸಂಕೀರ್ಣದ ಪುನಾರಚನೆಯನ್ನು ಉದ್ಘಾಟಿಸಿದರು. ಪ್ರಸಕ್ತ ದೇವಾಲಯ ಸಂಕೀರ್ಣವನ್ನು ಶ್ರೀ ಇಂದ್ರದಮನೇಶ್ವರ್ ಮಹಾದೇವ್ ಮಂದಿರ್ ಟ್ರಸ್ಟ್ ಅಡಿಯಲ್ಲಿ ೧೫ ನವೆಂಬರ್ ೨೦೦೨ರಂದು ಆರಂಭಿಸಲಾಯಿತು.[೧][೨]
ಛಾಯಾಂಕಣ
ಬದಲಾಯಿಸಿ-
ವಿಷ್ಣು ದೇವತೆ, ಅಶೋಕ್‍ಧಾಮ್ (ಸಣ್ಣ ಅಗೆತದ ಕೆಲಸದ ವೇಳೆ ಜೂನ್ ೨೦೧೮ರಲ್ಲಿ ಒಂದು ಕೊಳದಲ್ಲಿ ಕಂಡುಬಂದಿತು)
-
ಮಹಾಶಿವರಾತ್ರಿ ಆಚರಣೆ, ಅಶೋಕ್‍ಧಾಮ್
-
ಶಿವ, ಅಶೋಕ್‍ಧಾಮ್
ಉಲ್ಲೇಖಗಳು
ಬದಲಾಯಿಸಿ