ಅವ್ಯಕ್ತ
ಸಾಂಖ್ಯದರ್ಶನದಲ್ಲಿ ಮೂಲ ಪ್ರಕೃತಿಯ ನಾಮಾಂತರ. ಅದೇ ದರ್ಶನದ ಮುಖ್ಯ ತತ್ತ್ವಗಳಲ್ಲಿ ಒಂದಾದ ಪುರುಷನನ್ನೂ ಚರಕಸಂಹಿತೆ ಅವ್ಯಕ್ತವೆಂದು ಕರೆದಿದೆ. ಸಾಂಖ್ಯಕಾರಿಕದಲ್ಲಿ ಮೂಲಪ್ರಕೃತಿಗೇ ಈ ಹೆಸರು ಕೊಟ್ಟಿದೆಯಲ್ಲದೆ ಪುರುಷನಿಗಲ್ಲ. ಪ್ರಕೃತಿಯ ವ್ಯಕ್ತರೂಪಗಳು 23 : ಮಹತ್ ಇದರ ಮೊದಲನೆಯ ವ್ಯಕ್ತರೂಪ; ಎರಡನೆಯದು ಅಹಂಕಾರ. ಅಹಂಕಾರದಿಂದ ಹುಟ್ಟಿದ ಒಂದು ಶಾಖೆಯ ವ್ಯಕ್ತರೂಪಗಳು ಮನಸ್, ಪಂಚ ಜ್ಞಾನೇಂದ್ರಿಯಗಳು, ಪಂಚಕರ್ಮೇಂದ್ರಿಯಗಳು, ಇನ್ನೊಂದು ಶಾಖೆಯಿಂದ ಹುಟ್ಟಿದವು ಐದು, ತನ್ಮಾತ್ರಗಳು ಪಂಚ ಭೂತಗಳು
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: