ಅಪಮಾನ
This article needs more links to other articles to help integrate it into the encyclopedia. (ಜುಲೈ ೨೦೧೭) |
ಅಪಮಾನ ಅಗೌರವದ ಅಥವಾ ತಿರಸ್ಕಾರದಿಂದ ಕೂಡಿದ ಒಂದು ಮುಖಭಾವ, ಹೇಳಿಕೆ (ಅಥವಾ ಕೆಲವೊಮ್ಮೆ ವರ್ತನೆ). ಅಪಮಾನಗಳು[೧] ಉದ್ದೇಶಪೂರ್ವಕ ಅಥವಾ ಆಕಸ್ಮಿಕವಿರಬಹುದು. ಅಪಮಾನವು ವಾಸ್ತವಿಕವಾಗಿರಬಹುದು, ಆದರೆ ಅದೇ ವೇಳೆಗೆ ತುಚ್ಛಾರ್ಥಕವಾಗಿರಬಹುದು.[೨]
ಲಕಾನ್ ಅಪಮಾನಗಳನ್ನು ಸಾಮಾಜಿಕ ಸಂವಹನದ ಪ್ರಧಾನ ರೂಪವೆಂದು ಪರಿಗಣಿಸಿದನು, ಮತ್ತು ಇವು ಕಾಲ್ಪನಿಕ ವ್ಯವಸ್ಥೆಗೆ ಕೇಂದ್ರೀಯವಾಗಿವೆ, ಆಕ್ರಮಣಶೀಲ ಸಂವಹನದ ಮೂಲ ರೂಪವಾಗಿವೆ.
ಹಿಂಗೈಹೊಡೆತವು ಯಾರನ್ನಾದರೂ ಹಸ್ತದ ಬದಲು ಕೈಯ ಹಿಂಭಾಗವನ್ನು ಬಳಸಿ ಹೊಡೆಯುವುದನ್ನು ಸೂಚಿಸುತ್ತದೆ—ಇದು ಸಾಮಾನ್ಯವಾಗಿ ಸಾಂಕೇತಿಕ, ಕಡಿಮೆ ಬಲಯುತ ಹೊಡೆತ. ಅನುಗುಣವಾಗಿ, ಹಿಂಗೈ (ಅಥವಾ ಎಡಗೈ) ಅಭಿನಂದನೆ, ಅಥವಾ ಶಿಷ್ಟ ವ್ಯಂಗ್ಯವು ಅಭಿನಂದನೆ ರೂಪದಲ್ಲಿರುವ, ಅಥವಾ ಅಭಿನಂದನೆ ಜೊತೆಗೂಡಿದ ಒಂದು ಅಪಮಾನ, ವಿಶೇಷವಾಗಿ ತೃಣೀಕರಣ ಅಥವಾ ಅಸಡ್ಡೆ ಉದ್ದೇಶಪೂರ್ವಕವಾಗಿರುವ ಸನ್ನಿವೇಶಗಳಲ್ಲಿ.
ಹಿಂಗೈ ಅಭಿನಂದನೆಗಳ ಕೆಲವು ಉದಾಹರಣೆಗಳು:
- "ನೀನು ಆ ಪರೀಕ್ಷೆಯಲ್ಲಿ ಉತ್ತೀರ್ಣನಾಗುತ್ತೀ ಎಂದು ನಿರೀಕ್ಷಿಸಿರಲಿಲ್ಲ. ನಿನಗೆ ಒಳ್ಳೆಯದು.", ಇದು ಗುರಿಯಲ್ಲಿ ಯಶಸ್ಸು ಆಕಸ್ಮಿಕ ಎಂದು ಮಾತಿನ ಮೂಲಕ ದೋಷಾರೋಪಣೆ ಮಾಡುವುದು.
- "ಆ ಲಂಗ ನಿನ್ನನ್ನು ಬಹಳ ತೆಳ್ಳಗೆ ಕಾಣುವಂತೆ ಮಾಡುತ್ತದೆ.", ವ್ಯಂಗ್ಯವಾಗಿ ಕಾಣದ ಕೊಬ್ಬನ್ನು ಸೂಚಿಸುವುದು.
ಮಾತಿನ ಅಪಮಾನಗಳು ಹಲವುವೇಳೆ ಶಿಶ್ನದ ರೂಪವನ್ನು ತೆಗೆದುಕೊಳ್ಳುತ್ತವೆ; ಇದರಲ್ಲಿ ಮನ ನೋಯಿಸುವ ಅಶ್ಲೀಲತೆ ಸೇರಿರುತ್ತದೆ.
ಫ್ಲೈಟಿಂಗ್ ಎಂಬ ಕವನ ಸ್ಪರ್ಧೆಯು ಸಾಹಿತ್ಯಿಕ ಅಪಮಾನಗಳ ವಿಧ್ಯುಕ್ತ ಸರಣಿಯಾಗಿತ್ತು.
ಉಲ್ಲೇಖಗಳು
ಬದಲಾಯಿಸಿ