ಅವಧೀ
ಸೂಚನೆ: ಲೇಖನವನ್ನು ಅವಧಿ ಭಾಷೆ ಲೇಖನದೊಂದಿಗೆ ವಿಲೀನ ಮಾಡಲು ಸೂಚಿಸಲಾಗಿದೆ. (ಚರ್ಚೆ) ಪ್ರಸ್ತಾಪಿಸಿದ ದಿನಾಂಕ: April 2020 |
ಅವಧೀ ಹಿಂದಿಯ ಒಂದು ಉಪಭಾಷೆ, ಉತ್ತರಪ್ರದೇಶದ ಮಧ್ಯಭಾಗದ ಜನರ ಮಾತೃಭಾಷೆ. ಅಲಹಾಬಾದ್ ಮತ್ತು ಲಖನೌ ಪಟ್ಟಣಗಳಲ್ಲಿ ಈ ಭಾಷೆಯನ್ನು ಆಡುವವರು ಇದ್ದಾರೆ. ಇದು ಪಶ್ಚಿಮ ಹಿಂದಿಯ ಬ್ರಜ್ ಮತ್ತು ಬಿಹಾರೀಯ ಭೋಜ್ಪುರಿ ಭಾಷೆಗಳ ಮಧ್ಯಸ್ಥ ಭಾಷೆ. ಇದಕ್ಕೆ ಸ್ವಲ್ಪ ಭಿನ್ನವಾಗಿರುವುದೇ ಮಧ್ಯಪ್ರದೇಶದ ದಕ್ಷಿಣದಲ್ಲಿ ಆಡುವ ಬಾಚೇಲೀ ಭಾಷೆ. ಬಫೇಲಿಯ ದಕ್ಷಿಣ ಮತ್ತು ಪೂರ್ವಕ್ಕಿರುವ ಛತ್ತೀಸ್ಗಡೀ ಭಾಷೆಯೊಡನೆ ಅವಧೀ ಪೂರ್ವ ಹಿಂದಿಯ ಇಡೀ ವರ್ಗವನ್ನು ರೂಪಿಸುತ್ತದೆ.
ಅವಧೀ अवधी • اودهي ಟೆಂಪ್ಲೇಟು:IAST2 | ||||
---|---|---|---|---|
ಬಳಕೆಯಲ್ಲಿರುವ ಪ್ರದೇಶಗಳು: |
ಭಾರತ, ನೇಪಾಳ, ಫಿಜಿ (as Fiji Hindi), ಮಾರಿಷಸ್, ಭೂತಾನ್ | |||
ಪ್ರದೇಶ: | India: Awadh and Lower Doab regions of ಉತ್ತರ ಪ್ರದೇಶ, as well as in the parts of Madhya Pradesh, Bihar and Delhi Nepal: Lumbini Zone, Kapilbastu District; Bheri Zone, Banke District, Bardiya District | |||
ಒಟ್ಟು ಮಾತನಾಡುವವರು: |
45 million | |||
ಭಾಷಾ ಕುಟುಂಬ: | Indo-European Indo-Iranian Indo-Aryan Central Zone (Hindi) Eastern Hindi ಅವಧೀ | |||
ಬರವಣಿಗೆ: | Devanagari, Kaithi, Persian | |||
ಅಧಿಕೃತ ಸ್ಥಾನಮಾನ | ||||
ಅಧಿಕೃತ ಭಾಷೆ: | No official status | |||
ನಿಯಂತ್ರಿಸುವ ಪ್ರಾಧಿಕಾರ: |
no official regulation | |||
ಭಾಷೆಯ ಸಂಕೇತಗಳು | ||||
ISO 639-1: | ಯಾವುದೂ ಇಲ್ಲ | |||
ISO 639-2: | awa
| |||
ISO/FDIS 639-3: | awa
|
ಚಾರಿತ್ರಿಕ ಹಿನ್ನಲೆ
ಬದಲಾಯಿಸಿಚಾರಿತ್ರಿಕವಾಗಿ ಅರ್ಧಮಾಗಧೀ ಪ್ರಾಕೃತಭಾಷೆ ಅವಧೀ ಭಾಷೆಯ ಮೂಲವೆನ್ನಬಹುದು. ಏಕೆಂದರೆ ಇದು ಕ್ರಮವಾಗಿ ಸೌರಸೇನಿ ಮತ್ತು ಮಾಗಧೀ ಪ್ರಾಕೃತ ಭಾಷೆಗಳ ಮೂಲವನ್ನುಳ್ಳ ಬ್ರಜ್ ಮತ್ತು ಬಿಹಾರೀ ಭಾಷೆಗಳ ನಡುವೆ ಇದೆ. ರಚನಾದೃಷ್ಟಿಯಿಂದ ಇದು ಹಿಂದೂಸ್ತಾನಿ ಭಾಷೆಗಿಂತ ಭಿನ್ನವಾಗಿದೆ. ಇದರಲ್ಲಿ ಭವಿಷ್ಯತ್ಕಾಲಗಳು ಪುರ್ಣವಾಗಿ ಭಿನ್ನವಾಗಿದ್ದು, ಸಹಾಯಕ ಕ್ರಿಯಾಪದವೂ ಬಹುಮಟ್ಟಿಗೆ ಭಿನ್ನವಾಗಿದೆ. ಅವಧೀ ಭಾಷೆಯ ಅತ್ಯಂತ ಪ್ರಸಿದ್ಧ ಕೃತಿಯೆಂದರೆ ತುಲಸೀದಾಸರ ರಾಮಚರಿತಮಾನಸ. ಇದನ್ನು ವಿಶ್ವಸಾಹಿತ್ಯದ ಶ್ರೇಷ್ಠ ಕೃತಿಗಳಲ್ಲೊಂದೆಂದು ಪರಿಗಣಿಸಲಾಗಿದೆ.
ಬಾಹ್ಯ ಸಂಪರ್ಕಗಳು
ಬದಲಾಯಿಸಿReligious
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ