ಅವಧಿ ಎಂಬುದು ಹಿಂದಿಯ ಉಪಭಾಷೆ ಉತ್ತರ ಪ್ರದೇಶದ ಮಧ್ಯಭಾಗದ ಜನರ ಮಾತೃಭಾಷೆ, ಅಲಹಾಬಾದ್ ಮತ್ತು ಲಖನೌ ಪಶ್ಚಿಮ ಹಿಂದಿಯ ಬ್ರಿಜ್ ಮತ್ತು ಬಿಹಾರಿಯ ಬೋಜ್ಪುರಿ ಭಾಷೆಗಳ ಮಧ್ಯಸ್ಥ ಭಾಷೆ.ಇದಕ್ಕೆ ಸ್ಪಲ್ಪ ಭಿನ್ನವಾಗಿರುವುದೇ ಮಧ್ಯಪ್ರದೇಶದ ದಕ್ಷಿಣದಲ್ಲಿ ಆಡುವ ಬಾಚೇಲಿ ಭಾಷೆ. ಬಪೇಲಿಯ ದಕ್ಷಿಣ ಮತ್ತು ಪೂರ್ವಕ್ಕಿರುವ ಛತ್ತೀಸ್ಗಡೀ ಭಾಷೆಯೊಡನೆ ಅವಧೀ ಪೂರ್ವ ಹಿಂದಿಯ ಇಡೀ ವರ್ಗವನ್ನು ರೂಪಿಸುತ್ತದೆ. ಇಂದಿನ ಉತ್ತರ ಪ್ರದೇಶದ ಅವಾದ್ ಪ್ರದೇಶದಲ್ಲಿ ಈ ಭಾಷೆಯನ್ನು ಮಾತನಾಡುತ್ತಾರೆ. ಅವಾದ್ ಎಂಬ ಹೆಸರನ್ನು ಪ್ರಾಚೀನ ಪಟ್ಟಣವಾದ ಅಯೋಧ್ಯೆಗೆ ಸಂಬಂಧಿಸಿದ್ದಾಗಿದ್ದು, ಇದನ್ನು ಶ್ರೀ ರಾಮನ ತವರೂರು ಎಂದು ಪರಿಗಣಿಸಲಾಗಿದೆ. ಭಾಷಾ ದೃಷ್ಟಿಕೋನದಿಂದ, ಅವಧಿ ತನ್ನದೇ ಆದ ವ್ಯಾಕರಣವನ್ನು ಹೊಂದಿರುವ ಒಂದು ವಿಶಿಷ್ಟ ಭಾಷೆಯಾಗಿದೆ. ಸಾಮಾಜಿಕ, ರಾಜಕೀಯ ಸನ್ನಿವೇಶಗಳಲ್ಲಿ ಅವಾಧಿಯನ್ನು ಸರಳವಾದ ಹಿಂದಿಯ ಒಂದು ಶೈಲಿ ಎಂದು ನೋಡಲಾಗುತ್ತಿದೆ. ಇದನ್ನು ಯಾವುದೇ ಸಂಸ್ಥೆಯಲ್ಲಿ ಭೋದನಾ ಮಾಧ್ಯಮವಾಗಿ ಬಳಸಲಾಗುವುದಿಲ್ಲ. ಆದರೂ ಅದರ ಸಾಹಿತ್ಯಿಕ ಪರಂಪರೆಯನ್ನು ಹಿಂದಿ ಸಾಹಿತ್ಯದ ಒಂದು ಭಾಗವಾಗಿ ಸೇರಿಸಲಾಗಿದೆ. ಅವಧಿಯನ್ನು ಸಾಮಾನ್ಯವಾಗಿ 'ಗ್ರಾಮೀಣ ಭಾಷೆಯಾಗಿ' ನೋಡಲಾಗುತ್ತದೆ. ಆದರೆ ನಗರ ಪ್ರದೇಶದ ಜನರು ಸ್ಟಾಂಡರ್ಡ್ ಹಿಂದಿಯೊಂದಿಗೆ ಅವಧಿಯ ಮಿಶ್ರರೂಪವನ್ನು‌ ಬಳಸಿ ಮಾತನಾಡುತ್ತಾರೆ. ಅವಧಿಯನ್ನು ಬೈಸ್ವಾರಿ (ಬೈಸ್ವರ ಉಪಪ್ರದೇಶ) ಹಾಗೆಯೇ ಕೆಲವೊಮ್ಮೆ ಪರ್ಬೆ(ಪೂರ್ವ) ಕೊಸಲಿ(ಕೊಸಲ) ಎಂಬ ಪರ್ಯಾಯ ಹೆಸರುಗಳಲ್ಲಿ ಕರೆಯುತ್ತಾರೆ.

ಬಳಕೆಯಲ್ಲಿರುವ ಪ್ರದೇಶಸಂಪಾದಿಸಿ

 • ಭಾರತ
 • ನೇಪಾಳ
 • ಫಿಜಿ,
 • ಮಾರಿಷನ್
 • ಭೂತಾನ್

ಒಟ್ಟು ಮಾತನಾಡುವವರು - ಭಾರತದಲ್ಲಿ 45 ಮಿಲಿಯನ್(೨೦೧೧ ಸೆನ್ಸಸ್)

ಭಾಷಾ ಕುಟುಂಬಸಂಪಾದಿಸಿ

ಇಂಡೋ ಯುರೋಪಿಯನ್

 • ಇಂಡೋ ಇರಾನಿಯನ್
 • ಇಂಡೋ ಆರ್ಯನ್
 • ಪೂರ್ವ ಹಿಂದಿ
 • ಅವಧೀ

ಬರವಣಿಗೆ- ದೇವನಾಗರಿ, ಕೈತಿ, ಪರ್ಷೀಯನ್ ಭಾಷೆ

ಭೌಗೋಳಿಕ ಹಂಚಿಕೆಗಳುಸಂಪಾದಿಸಿ

ಭಾರತಸಂಪಾದಿಸಿ

ಗಂಗಾ, ಯಮುನಾ ಕೆಳಭಾಗವನ್ನು ಒಳಗೊಂಡಂತೆ ಮಧ್ಯ ಉತ್ತರ ಪ್ರದೇಶದ ಅವಾದಾ ಭಾಗದಲ್ಲಿ 'ಅವಧೀ'ಯನ್ನು ಪ್ರಧಾನ ಭಾಷೆಯಾಗಿ ಬಳಸುತ್ತಾರೆ. ಪಶ್ಚಿಮ ಭಾಗದಲ್ಲಿ ಇದು ಪಶ್ಚಿಮ ಹಿಂದಿ, ಅಂದರೆ ಕನೌಜಿ ಮತ್ತು ಬುಂಡೇಲಿಯಿಂದ ಸುತ್ತುವರೆದಿದೆ. ಅದರ ಪೂರ್ವದಲ್ಲಿ ಬಿಹಾರಿ ಉಪಭಾಷೆ ಭೋಜ್‌ಪುರಿ ಇದೆ. ಉತ್ತರದಲ್ಲಿ ಇದು ನೇಪಾಳದಿಂದ ಸುತ್ತುವರೆದಿದೆ, ಇದು ಅವಧಿಯೊಂದಿಗೆ ಹೆಚ್ಚಿನ ಹೋಲಿಕೆಯನ್ನು ಹೊಂದಿದೆ. ಲಿಂಖಿಪುರ್ ಖೇರಿ, ಸೀತಾಪುರ,ಲಕ್ನೋ, ಉನ್ನಾವೊ ಮತ್ತು ಫತೇಪುರ್ ಜೆಲ್ಲೆಗಳು ಅವಧಿ ಮಾತನಾಡುವ ಪ್ರದೇಶದ ಪಶ್ಚಿಮ ಭಾಗಗಳಾಗಿವೆ.ಕೇಂದ್ರ ಜಿಲ್ಲೆಗಳಲ್ಲಿ ಬರಾಂಬಂಕ್, ಬರೇಲಿ, ಅಮೆಧಿ ಮತ್ತು ಬಹರಿಚ್ ಸೇರಿವೆ. ಪೂರ್ವ ಭಾಗಗಳಲ್ಲಿ ಫೈಜಾಬಾದ್, ಅಲಹಾಬಾದ್, ಕೌಶಂಬಿ, ಗೊಂಡಾ, ಬಸ್ತಿ, ಸುಲ್ತಾನ್ ಪುರ್,ಅಂಬೇಡ್ಕರ್ ನಗರ ಮತ್ತು ಪ್ರತಾಪ್ ಗರ್ ಜಿಲ್ಲೆಗಳು ಸೇರಿವೆ. ಇದನ್ನು ಮಿರ್ಜಾಪುರ ಮತ್ತು ಜಾನ್ ಪುರ ಜಿಲ್ಲೆಗಳ ಕೆಲವು ಭಾಗಗಳಲ್ಲಿಯೂ ಮಾತನಾಡಲಾಗುತ್ತದೆ.

ನೇಪಾಳಸಂಪಾದಿಸಿ

ಭೇರಿ ವಲಯ- ಬಾಂಕೆ ಮತ್ತು ಬಾದೇಯಾ ಜಿಲ್ಲೆಗಳು

 • ಲುಂಬಿನಿ ವಲಯ- ಕಪಿಲ್ಪಸ್ತು , ನವಲ್ಪರಸಿ ಮತ್ತು ರೂಪಂಡೇಹಿ ಜಿಲ್ಲೆಗಳು
 • ಮಹಾಕಾಳಿ ವಲಯ- ಕಾಂಚನಪುರ ಜಿಲ್ಲೆ
 • ರಾಫ್ತಿ ವಲಯ- ಡ್ಯಾಂಗ್ ಜಿಲ್ಲೆ
 • ಸೆಟಿ ವಲಯ- ಕೈಲಾರಿ ಜಿಲ್ಲೆ

ದಕ್ಷಿಣಾ ಏಷ್ಯಾ ಹೊರಗಡೆಸಂಪಾದಿಸಿ

ಅವಧಿ ಹಾಗೆಯೇ ಇತರ ಭಾಷೆಗಳಿಂದ ಪ್ರಭಾವಿತವಾದ ಭಾಷೆಯನ್ನು ಫಿಜಿಯಲ್ಲಿ ಭಾರತೀಯ ಭಾಷೆಯಾಗಿ ಬಳಸುತ್ತಾರೆ. ಇದನ್ನು ಫಿಜಿ ಹಿಂದಿ ಎಂದು ಕರೆಯಲಾಗುತ್ತದೆ. ಎಥ್ನೋಲೋಗ ಪ್ರಕಾರ, ಇದು ಭೋಜ್‌ಪುರಿಯಿಂದ ಅವಾಧಿ ಮತ್ತು ಪೂರ್ವ ಹಿಂದಿ‌ ಎಂದು ವರ್ಗೀಕರಿಸಲಾಗಿದೆ.

ಚಾರಿತ್ರಿಕ ಹಿನ್ನೆಲೆಸಂಪಾದಿಸಿ

ಚಾರಿತ್ರಿಕವಾಗಿ ಅರ್ಧಮಾಗಧೀ ಪ್ರಾಕೃತ ಭಾಷೆ ಅವಧೀ ಭಾಷೆಯ ಮೂಲವೆನ್ನಬಹುದು. ಏಕೆಂದರೆ ಇದು ಕ್ರಮವಾಗಿ ಸೌರಸೇನಿ ಮತ್ತು ಮಾಗಧೀ ಪ್ರಾಕೃತ ಭಾಷೆಗಳ ಮೂಲವನ್ನುಳ್ಳ ಬ್ರಿಜ್ ಮತ್ತು ಬಿಹಾರೀ ಭಾಷೆಗಳ ನಡುವೆ ಇದೆ.ರಚನಾ ದೃಷ್ಟಿಯಿಂದ ಇದು ಹಿಂದೂಸ್ತಾನಿ ಭಾಷೆಗಿಂತ ಭಿನ್ನವಾಗಿ, ಇದರಲ್ಲಿ ಭವಿಷ್ಯತ್ಕಾಲಗಳು ಪೂರ್ಣವಾಗಿ ಭಿನ್ನವಾಗಿದ್ದು, ಸಹಾಯಕ ಕ್ರಿಯಾಪದವೂ ಬಹುಮಟ್ಟಿಗೆ ಭಿನ್ನವಾಗಿದೆ. ಅವಧೀ ಭಾಷೆಯ ಅತ್ಯಂತ ಪ್ರಸಿದ್ಧ ಕೃತಿಯೆಂದರೆ ತುಲಸೀದಾಸರ ರಾಮಚರಿತಮಾನಸ. ಇದನ್ನು ವಿಶ್ವ ಸಾಹಿತ್ಯದ ಶ್ರೇಷ್ಠ ಕೃತಿ ಗಳಲ್ಲೊಂದು ಎಂದು ಪರಿಗಣಿಸಲಾಗಿದೆ.

ಜನಪ್ರಿಯ ಸಂಸ್ಕೃತಿಸಂಪಾದಿಸಿ

 • 1961 ರ ಚಲನಚಿತ್ರ, ಗುಂಗಾ ಜುಮ್ನಾದಲ್ಲಿ ಅವಾಧಿಯನ್ನು ಬಳಸಿದ್ದರು.
 • 2001ರ ಬಾಲಿವುಡ್ ಚಲನಚಿತ್ರ ಲಗಾನ್ ನಲ್ಲಿ ಅವಾಧಿಯನ್ನು ಬಳಸಿದ್ದಾರೆ.
 • 2009 ರ‌ ಬಾಲಿವುಡ್ ಚಲನಚಿತ್ರ- ದೇವ್ ಡಿ.ಅಮಿತ್ ತ್ರೀವೆದಿ ಸಂಯೋಜಿಸಿದ 'ಪಯಾರಿಯಾ' ಎಂಬ ಅವಧಿ ಹಾಡನ್ನು ಒಳಗೊಂಡಿತ್ತು.[೧]
 • ಟೆಲಿವಿಷನ್ ಸರಣಿ ಯುಧ್, ಅಮಿತಾಬ್ ಬಚ್ಚನ್ ಅವರ ಅವಾಧಿಯ ಸಂಭಾಷಣೆಯ ಭಾಗಗಳು ಹಿಂದೂಸ್ತಾನ್ ಟೈಮ್ಸ್ ನಲ್ಲಿ ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆದಿವೆ.

ಸಾಹಿತ್ಯಸಂಪಾದಿಸಿ

ಅವಧಿಯಲ್ಲಿ ಹಲವಾರು ಪ್ರಮುಖ ಸಾಹಿತ್ಯ ಕೃತಿಗಳು ಬಂದಿವೆ.[೨]

 • ಮುಲ್ಲಾಡ್ ದ್ ಅವರ ಚಂದಾಯನ(ಕ್ರಿ. ಶ 1373-1375)
 • ಮಲಿಕ್ ಮಹಮ್ಮದ್ ಜಯಸಿ ಅವರ ಪದ್ಮಾವತ್(ಕ್ರಿ. ಶ.1613)
 • ಉಸ್ಮಾನ್ ಅವರ ಚಿತ್ರಮಾಲಿ(ಕ್ರಿ.ಶ.1613)
 • ತುಲಸೀದಾಸರ ರಾಮಚರಿತಮಾನಸ ಮತ್ತು ಹನುಮಾನ್ ಚಾಲೀಸಾ (ಕ್ರಿ. ಶ.1575)
 • ಮಹಮ್ಮದ್ ರ ಇಂದ್ರಾವತಿ ಮತ್ತು ಅನುರಾಗ್ ಬನ್ಸೂರಿ (ಕ್ರಿ.ಶ.1757)

ಗ್ರಂಥ ಸೂಚಿಸಂಪಾದಿಸಿ

ಸಕ್ಸೇನಾ, ಬಾಬುರಾಮ್(1973) ಅವಧಿಯ ವಿಕಸನ(ಹಿಂದಿಯ ಒಂದು ಶಾಖೆ) ದಿ ಇಂಡಿಯನ್ ಪ್ರೆಸ್, ಅಲಹಬಾದ್

ಉಲ್ಲೇಖಗಳುಸಂಪಾದಿಸಿ

 1. https://www.hindustantimes.com/entertainment/television/yudh-review-amitabh-bachchan-s-show-limps-back-to-sluggish-pace/article1-1241418.aspx
 2. https://www.ethnologue.com/language/awa Ethnologue. Retrieved 7 February 2019.