ಅವಚ್ಛೇದಕಾಂಶಗಳು(ಡಿಸ್ಟಿಂಕ್ಟಿವ್ ಫೀಚರ್ಸ್)
ಉಕ್ತಿಗಳ ವಿಶ್ಲೇಷಣೆಯಲ್ಲಿ ಬಳಸುವ ಮೂಲ ಘಟಕಾಂಶಗಳು (ಡಿಸ್ಟಿಂಕ್ಟಿವ್ ಫೀಚರ್ಸ್). ಯಾವ ಉಕ್ತಿಯನ್ನು ವಿಶ್ಲೇಷಿಸಬೇಕಾದರೂ ಧ್ವನಿಗಳ ಹಾಗೂ ವ್ಯಾಕರಣ ರೂಪಗಳ ಮಟ್ಟಗಳೆರಡರ ಮೇಲೂ ಭಾಷಾವಿಜ್ಞಾನಿಯ ದೃಷ್ಟಿಯಿರಬೇಕು. ಸ್ವರ ವ್ಯಂಜನ ಸಂಕೇತ ಗಳನ್ನೊಳಗೊಂಡ ವರ್ಣಮಾಲೆಯ ನೆರವಿನಿಂದ ಆ ಉಕ್ತಿಯನ್ನು ಬರೆದರೆ, ಅದು ಮೂಲ ಧ್ವನಿಘಟಕಗಳ ಸರಣಿ ಎಂದು ಪರಿಗಣಿತವಾದಂತಾಗುತ್ತದೆ. ಧ್ವನಿಮಾಶಾಸ್ತ್ರ ಬಳಸುವ ವಿಶ್ಲೇಷಣೆ ಸೂಕ್ಷ್ಮತರವಾದಂತೆಲ್ಲ ಧ್ವನಿಮಾಗಳನ್ನೂ ಮತ್ತಷ್ಟು ಸಣ್ಣ ಘಟಕಗಳನ್ನಾಗಿ ಒಡೆಯಲು ಸಾಧ್ಯವಿದೆ ಎಂಬುದನ್ನು ಭಾಷಾವಿಜ್ಞಾನಿಗಳು ಕಂಡುಕೊಂಡರು. ಉದಾ: ಕನ್ನಡದ ಮ್ ಎಂಬ ಧ್ವನಿಮಾ ಓಷ್ಠ್ಯ, ನಾಸಿಕ್ಯ ಇತ್ಯಾದಿಯಾಗಿ ವರ್ಗೀಕರಣಗೊಳ್ಳದೆ ಓಷ್ಠ್ಯತ್ವ, ನಾಸಿಕ್ಯತ್ವ ಮುಂತಾದ ಧ್ವನ್ಯಂಶಗಳ ಒಂದು ಗ್ರಂಥಿಯೆಂದೂ ಕನ್ನಡದ ಪ್, ಬ್ ಮುಂತಾದ ಧ್ವನಿಮಾಗಳು ಇದೇ ರೀತಿಯ, ಆದರೆ ಬೇರೆ ಬೇರೆ ರೀತಿಯಲ್ಲಿ ಜೋಡಣೆಗೊಂಡ ಧ್ವನ್ಯಂಶಗಳ ಗ್ರಂಥಿಗಳೆಂದೂ ಪರಿಗಣಿತವಾಗುವುದರಲ್ಲೂ ಔಚಿತ್ಯವುಂಟು. ಆದುದರಿಂದ, ಉಕ್ತಿಗಳನ್ನು ಧ್ವನಿಗಳ ಹಾಗೂ ಧ್ವನಿಮಾಗಳ ದೃಷ್ಟಿಯಿಂದ ವಿಶ್ಲೇಷಿಸುವಾಗ, ಧ್ವನಿಮಾಗಳಿಗಿಂತಲೂ ಹೆಚ್ಚಾಗಿ ಅವಚ್ಛೇದಕಾಂಶಗಳನ್ನೇ ಮೂಲ ಘಟಕಗಳನ್ನಾಗಿ ಪರಿಗಣಿಸುವುದು ಈಚೀಚೆಗೆ ರೂಢಿಗೆ ಬರುತ್ತಿದೆ.
ವಾದ ವಿವಾದಗಳು
ಬದಲಾಯಿಸಿಅವಚ್ಛೇದಕಾಂಶಗಳ ಬಗ್ಗೆ ಈಗ ವಾದವಿವಾದಗಳು ನಡೆಯುತ್ತಿವೆ. ವಾದಗ್ರಸ್ತವಾಗಿರುವ ವಿಷಯಗಳಲ್ಲಿ ಮುಖ್ಯವಾದುದು ಇದು: ಅವಚ್ಛೇದಕಾಂಶಗಳನ್ನು ಯಾವ ಆಧಾರದ ಮೇಲೆ ನಿರ್ಧರಿಸಬೇಕು? ಭಾಷಾ ಧ್ವನಿಗಳನ್ನು ಉತ್ಪತ್ತಿ ಮಾಡುವ ಉಚ್ಚಾರಣಾ ಯಂತ್ರದ ಆಧಾರದ ಮೇಲೊ? ಓಷ್ಠ್ಯ, ನಾಸಿಕ್ಯ ಮುಂತಾಗಿ ಧ್ವನಿಗಳನ್ನು ವರ್ಗೀಕರಿಸುವ ಮೊದಲ ವಿಧಾನದ ಪರವಾಗಿ ಹೀಗೆ ವಾದಿಸಬಹುದು: ಈ ರೀತಿಯ ವರ್ಗೀಕರಣ ಬಹಳ ದಿನಗಳಿಂದಲೂ ಸುಪರಿಚಿತವಾಗಿದ್ದು, ಬಳಸುವುದಕ್ಕೂ ಭಾಷೆಗಳನ್ನು ಕಲಿಸುವುದಕ್ಕೂ ವ್ಯವಹಾರಕ್ಕೂ ಸುಲಭ. ಎರಡನೆಯ ವಿಧಾನದ ಪರವಾದ ವಾದ ಹೀಗೆ: ಇತರರು ಕೇಳಲೆಂದೇ ನಾವು ಮಾತಾಉಕ್ತಿಗಳ ವಿಶ್ಲೇಷಣೆಯಲ್ಲಿ ಬಳಸುವ ಮೂಲ ಘಟಕಾಂಶಗಳು (ಡಿಸ್ಟಿಂಕ್ಟಿವ್ ಫೀಚರ್ಸ್). ಎರಡನೆಯ ವಿಧಾನದ ಪರವಾದ ವಾದ ಹೀಗೆ: ಇತರರು ಕೇಳಲೆಂದೇ ನಾವು ಮಾತಾಡುವುದರಿಂದ, ಕೇಳುಗನ ದೃಷ್ಟಿಯಿಂದ ಈ ವಿಧಾನ ಹೆಚ್ಚು ಸೂಕ್ತ. ಈ ರೀತಿಯ ವರ್ಗೀಕರಣ ಹೆಚ್ಚು ವೈಜ್ಞಾನಿಕವಾದುದು ಎಂದು ತೋರುತ್ತದೆ. ಈ ಸಂಬಂಧವಾದ ಭೌತವಿಜ್ಞಾನದ ವಿಶ್ಲೇಷಣೆಗೆ ಬೆಲೆ ಬರುವುದು ಶಬ್ದಗ್ರಹಣಕ್ಕೆ ಸಂಬಂಧಿಸಿದ ಮನೋವಿಜ್ಞಾನದ ಸಂಪರ್ಕ ಒದಗಿದಾಗ ಮತ್ತು ಶಬ್ದಗ್ರಹಣವೂ ಶಬ್ದೋತ್ಪತ್ತಿಯೂ ನಿಕಟಸಂಬಂಧವುಳ್ಳವುಗಳು ಎಂಬುದನ್ನು ಗಮನಿಸಿದಾಗ. ಆದ್ದರಿಂದ ಇವೆರಡು ವಿಧಾನಗಳಿಂದಲೂ ಭಾಷಾವಿಜ್ಞಾನಿಗಳಿಗೆ ಪ್ರಯೋಜನವುಂಟೆಂದು ಹೇಳಬಹುದು. ಶಬ್ದಶಕ್ತಿ ಭಿನ್ನಭಿನ್ನ ಕಂಪನ ವೇಗಗಳಲ್ಲಿ ಹೇಗೆ ವಿತರಣೆಯಾಗುತ್ತದೆ ಎಂಬುದರ ಆಧಾರದ ಮೇಲೆ ಅವಚ್ಛೇದಕಾಂಶಗಳನ್ನು ಇಂಥಿಂಥ ಉಚ್ಚಾರಣಾತ್ಮಕ ಅಂಶಗಳಿಗೆ ಇಂಥಿಂಥ ಶಾಬ್ದಿಕ (ಅಕೌಸ್ಟಿಕ್) ಅಂಶಗಳ ತಾಳೆಯಾಗುತ್ತದೆ ಎಂದು ಸಾಕಷ್ಟು ಸುಲಭವಾಗಿ ಹೇಳಬಹುದು.