ಅವಂಧಾ ಕೋಟೆ ಅಥವಾ ಅವಂಧಾ ಕಿಲ್ಲಾ, ಇದು ಮಹಾರಾಷ್ಟ್ರದ ನಾಸಿಕ್ ಮತ್ತು ಅಹ್ಮದ್‌ನಗರದ ನಡುವಿನ ಔಂಧೆವಾಡಿ ಗ್ರಾಮದಲ್ಲಿ ನೆಲೆಗೊಂಡಿರುವ ಕೋಟೆಯಾಗಿದೆ. ಈ ಕೋಟೆಯು ಪಟ್ಟಾ ಕೋಟೆಯ ಸಮೀಪದಲ್ಲಿದೆ. ಪಟ್ಟಾ ಕಿಲ್ಲಾದ ನಿವಾಸಿಗಳನ್ನು ಪಟ್ಟೇಕರ್ ಎಂದು ಕರೆಯಲಾಗುತ್ತದೆ. ಅಂದರೆ "ಕೋಟೆ ಪಟ್ಟದ ನಿವಾಸಿಗಳು" ಎಂದರ್ಥ.

ಅವಂಧಾ ಕೋಟೆ
औंढ़ा/ अवंढा किल्ला
ಕಲ್ಸುಬಾಯಿ ಬೆಟ್ಟ ಶ್ರೇಣಿ ಇದರ ಭಾಗ
ನಾಸಿಕ್ ಜಿಲ್ಲೆ, ಮಹಾರಾಷ್ಟ್ರ
ಪಟ್ಟಾ ಕೋಟೆಯಿಂದ ಅವಂಧ ಕೋಟೆ
ನಿರ್ದೇಶಾಂಕಗಳು19°44′46.8″N 73°50′13.8″E / 19.746333°N 73.837167°E / 19.746333; 73.837167
ಶೈಲಿಬೆಟ್ಟದ ಮೇಲಿನ ಕೋಟೆ
ಎತ್ತರ೪೪೦೦ ಅಡಿ
ಸ್ಥಳದ ಮಾಹಿತಿ
ಒಡೆಯಮುಘಲ್ ಸಾಮ್ರಾಜ್ಯ (೧೬೮೮-೧೭೬೧)
ಮರಾಠ ಸಾಮ್ರಾಜ್ಯ (೧೭೬೧-೧೮೧೮)
ಬ್ರಿಟಿಷ್ ಸಾಮ್ರಾಜ್ಯ (೧೮೧೮-೧೯೪೭)
ಭಾರತ ಸರ್ಕಾರ(೧೯೪೭)
ಇವರಿಗೆ ಮುಕ್ತವಾಗಿದೆ
 ಸಾರ್ವಜನಿಕರಿಗೆ
ಹೌದು
ಪರಿಸ್ಥಿತಿಅವಶೇಷಗಳು
ಸ್ಥಳದ ಇತಿಹಾಸ
ಸಾಮಗ್ರಿಗಳುಕಲ್ಲು

ಇತಿಹಾಸ

ಬದಲಾಯಿಸಿ

ಈ ಕೋಟೆಯ ಇತಿಹಾಸವು ಪಕ್ಕದಲ್ಲಿನ ಪಟ್ಟದ ಕೋಟೆಯಂತೆಯೇ ಇದೆ. ಜನವರಿ ೧೬೮೮ ರಂದು, ಈ ಕೋಟೆಯನ್ನು ಮತಾಬರ್ಖಾನ್ ನೇತೃತ್ವದ ಮೊಘಲ್ ಸೈನ್ಯವು ವಶಪಡಿಸಿಕೊಂಡಿತು. ಅವನು ಶ್ಯಾಮಸಿಂಗ್‌ನನ್ನು ಕೋಟೆಯ ಮುಖ್ಯಸ್ಥನಾಗಿ ನೇಮಿಸಿದನು. ನಂತರ ಈ ಕೋಟೆಯನ್ನು ೧೭೬೧ ರಲ್ಲಿ ಪೇಶ್ವೆಗಳು ವಶಪಡಿಸಿಕೊಂಡರು. ಅಂತಿಮವಾಗಿ ೧೮೧೮ ರಲ್ಲಿ ಈ ಕೋಟೆಯನ್ನು ಬ್ರಿಟಿಷರು ಗೆದ್ದರು.

ಹಲವೆಡೆ ಮುರಿದ ಕಲ್ಲಿನ ಮೆಟ್ಟಿಲುಗಳಿಂದಾಗಿ ಈ ಕೋಟೆಯನ್ನು ಹತ್ತುವುದು ತುಂಬಾ ಕಷ್ಟಕರವಾಗಿದೆ. ಕಲ್ಲಿನ ತೊಟ್ಟಿಗಳು ಮತ್ತು ಎತ್ತರದ ಸ್ಥಳಕ್ಕೆ ಹೋಗುವ ಮೆಟ್ಟಿಲುಗಳನ್ನು ಹೊರತುಪಡಿಸಿ, ಕೋಟೆಯ ಮೇಲೆ ಕೆಲವೇ ಕೆಲವು ರಚನೆಗಳು ಉಳಿದಿವೆ. []

ಉಲ್ಲೇಖಗಳು

ಬದಲಾಯಿಸಿ
  1. "Aundha, Sahyadri,Shivaji,Trekking,Marathi,Maharastra". trekshitiz.com. Archived from the original on 2012-08-28.