ಅಳೆಯುವ ಸಾಧನವು (ಮಾಪಕ) ಒಂದು ಭೌತಿಕ ಪರಿಮಾಣವನ್ನು ಅಳೆಯುವ ಉಪಕರಣ.[೧] ಭೌತಿಕ ವಿಜ್ಞಾನಗಳು, ಗುಣಮಟ್ಟದ ಆಶ್ವಾಸನೆ ಮತ್ತು ಎಂಜಿನಿಯರಿಂಗ್‌‌ನಲ್ಲಿ, ಮಾಪನವೆಂದರೆ ನೈಜ ಪ್ರಪಂಚದ ವಸ್ತುಗಳು ಮತ್ತು ಘಟನೆಗಳ ಭೌತಿಕ ಪರಿಮಾಣಗಳನ್ನು ಪಡೆದು ಹೋಲಿಸುವ ಚಟುವಟಿಕೆಯಾಗಿದೆ. ಸ್ಥಾಪಿತ ಪ್ರಮಾಣೀಕೃತ ವಸ್ತುಗಳು ಮತ್ತು ಘಟನೆಗಳನ್ನು ಏಕಮಾನಗಳಾಗಿ ಬಳಸಲಾಗುತ್ತದೆ, ಮತ್ತು ಮಾಪನದ ಪ್ರಕ್ರಿಯೆಯು ಅಧ್ಯಯನದಲ್ಲಿರುವ ವಸ್ತು ಮತ್ತು ಉಲ್ಲೇಖಿತ ಮಾಪನ ಏಕಮಾನವನ್ನು ಸಂಬಂಧಿಸುವ ಒಂದು ಸಂಖ್ಯೆಯನ್ನು ನೀಡುತ್ತದೆ. ಅಳೆಯುವ ಸಾಧನಗಳು, ಮತ್ತು ಉಪಕರಣದ ಬಳಕೆಯನ್ನು ವ್ಯಾಖ್ಯಾನಿಸುವ ವಿಧ್ಯುಕ್ತ ಪರೀಕ್ಷಾ ವಿಧಾನಗಳು ಈ ಸಂಖ್ಯೆಗಳ ಸಂಬಂಧಗಳನ್ನು ಪಡೆಯುವ ಸಾಧನಗಳಾಗಿವೆ. ಎಲ್ಲ ಅಳೆಯುವ ಸಾಧನಗಳು ಬದಲಾಗುವ ಪ್ರಮಾಣದ ಉಪಕರಣ ದೋಷ ಮತ್ತು ಮಾಪನ ಅನಿಶ್ಚಿತತೆಗೆ ಒಳಪಟ್ಟಿರುತ್ತವೆ. ಕೆಲವು ಉದಾಹರಣೆಗಳೆಂದರೆ ವಿದ್ಯುಚ್ಛಕ್ತಿ ಮಾಪಕ, ಅನಿಲಮಾಪಕ, ಜಲಮಾಪಕ, ವೇಗೋತ್ಕರ್ಷಕ ಮಾಪಕ ಇತ್ಯಾದಿ.

ಉಲ್ಲೇಖಗಳು ಬದಲಾಯಿಸಿ