ಅಲ್ಲು ಅರ್ಜುನ್
ಅಲ್ಲು ಅರ್ಜುನ್ (ತೆಲುಗು:అల్లు అర్జున్) (ಇದು ತೆಲುಗು ಹೆಸರಾಗಿದ್ದು ಇದರಲ್ಲಿ ಅಲ್ಲು ಎಂಬುದು ಕುಟುಂಬದ ಹೆಸರಾಗಿದೆ ), (1983 ರ ಏಪ್ರಿಲ್ 8 ರಂದು ಜನನ) ಅವರು ಭಾರತೀಯ ಚಿತ್ರ ನಟರಾಗಿದ್ದು ಇವರು ತೆಲುಗು ಸಿನೆಮಾಗಳಲ್ಲಿ ಅಭಿನಯಿಸಿದ್ದಾರೆ. ತೆಲುಗು ಚಿತ್ರಗಳೊಂದಿಗೆ ದೀರ್ಘಕಾಲದಿಂದ ಸಂಬಂಧವಿಟ್ಟುಕೊಂಡಿರುವ ಕುಟುಂಬದಿಂದ ಬಂದ ಅಲ್ಲು ಅರ್ಜುನ್ ಅವರು ನಿರ್ಮಾಪಕರಾದ ಅಲ್ಲು ಅರವಿಂದ್ ಅವರ ಪುತ್ರರಾಗಿದ್ದು, ಇವರ ಹೆಸರಾಂತ ಸಂಬಂಧಿಗಳಲ್ಲಿ ಇವರ ಚಿಕ್ಕಪ್ಪರಾದ ಚಿರಂಜೀವಿ ಮತ್ತು ಪವನ್ ಕಲ್ಯಾಣ್, ಮತ್ತು ಸೋದರ ಸಂಬಂಧಿಯಾದ ರಾಮ್ ಚರಣ್ ತೇಜಾ ಸೇರಿದ್ದಾರೆ. ಇವರು ಸಂತೋಷ್ ಆರ್ಯ ಅವರ ಕಟ್ಟಾ ಅಭಿಮಾನಿಯಾಗಿದ್ದಾರೆ ಕೌಟುಂಬಿಕ ವರ್ಗದ ಪ್ರೇಕ್ಷಕರನ್ನು ಗುರಿಯಾಗಿರಿಸಿದ ಚಿತ್ರಗಳನ್ನು ನೀಡುವಲ್ಲಿ ಹೆಸರಾದ ಅಲ್ಲು ಅರ್ಜುನ್ ಅವರು ತಮ್ಮ ಅಭಿನಯಕ್ಕಾಗಿ ಫಿಲ್ಮ್‌ಫೇರ್ ಮತ್ತು ನಂದಿ ಪ್ರಶಸ್ತಿಯನ್ನು ಒಳಗೊಂಡು ಪ್ರಮುಖ ಮನ್ನಣೆಗಳನ್ನು ಗಳಿಸಿದ್ದಾರೆ. ಅಲ್ಲು ಅರ್ಜುನ್ ಅವರು ಕೆ. ರಾಘವೇಂದ್ರ ರಾವ್ಅವರ ಗಂಗೋತ್ರಿ (2003) ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು ತದನಂತರ ಇವರು 2004 ರ ರೊಮಾನ್ಸ್ ಚಿತ್ರ ಆರ್ಯ ದ ಪ್ರಧಾನ ಪಾತ್ರದಲ್ಲಿ ನಟಿಸಿದರು, ಈ ಚಿತ್ರದಲ್ಲಿ ವಿದ್ಯಾರ್ಥಿಯೊಬ್ಬನು ನಾಯಕಿಯ ಮೇಲೆ "ಏಕಮುಖ ಪ್ರೀತಿಯನ್ನು" ಮಾಡುವುದು ಚಿತ್ರಿತವಾಗಿದೆ. ಈ ಪ್ರಾರಂಭದ ಚಲನಚಿತ್ರಗಳು ಅಲ್ಲು ಅರ್ಜುನ್ ಅವರ ಅಭಿಮಾನ ವೃಂದವನ್ನು ಸೃಷ್ಟಿಸಿದರೆ, ಇವರ 2004 ರ ಹಿಟ್ ಚಿತ್ರದ ಮುಂದಿನ ಭಾಗವಾದ ಆರ್ಯ 2 ಚಿತ್ರವನ್ನು ಒಳಗೊಂಡು ಇನ್ನಿತರ ಇತ್ತೀಚಿನ ಚಿತ್ರಗಳ ಪಾತ್ರಗಳು ಅಲ್ಲು ಅರ್ಜುನ್ ಅವರ ಸೊಗಸುಗಾರಿಕೆಯ ಪಾತ್ರಗಳನ್ನು ಕೇಂದ್ರೀಕರಿಸಿದರೆ, ಇತ್ತೀಚಿನ ಯಶಸ್ವಿ ' ವೇದಂ{/1 ಚಿತ್ರದಲ್ಲಿ ಅಲ್ಲು ಅರ್ಜುನ್ ಅವರು ಐದು ಪ್ರಮುಖ ಪಾತ್ರಗಳಲ್ಲೊಂದರಲ್ಲಿ ನಟಿಸಿದ್ದಾರೆ. ಇವರ ಎಲ್ಲಾ ಚಿತ್ರಗಳು ಮಲಯಾಳಂ ಭಾಷೆಯಲ್ಲಿ ಡಬ್ಬಿಂಗ್ ಆಗಿದ್ದು ಇವರನ್ನು ಕೇರಳದಲ್ಲೂ ಅತೀ ಜನಪ್ರಿಯವನ್ನಾಗಿಸಿದೆ ಮತ್ತು ಇವರ ಕೆಲವು ಚಿತ್ರಗಳನ್ನು ತಮಿಳಿನಲ್ಲೂ ಸಹ ಡಬ್ ಮಾಡಲಾಗಿದೆ.
ಅಲ್ಲು ಅರ್ಜುನ್ | |
---|---|
Born | Allu Arjun ೮ ಏಪ್ರಿಲ್ ೧೯೮೩ |
Other names | Bunny, Stylish Star Santosh |
Years active | 2002 - present |
ವೃತ್ತಿಜೀವನ
ಬದಲಾಯಿಸಿಆರಂಭಿಕ ವೃತ್ತಿಜೀವನ
ಬದಲಾಯಿಸಿಅಲ್ಲು ಅರ್ಜುನ್ ಅವರು ಭಾರತದ ಚೆನ್ನೈನಲ್ಲಿ ಜನಿಸಿದರು. ಇವರ ಪ್ರಥಮ ಪ್ರಮುಖ ಪಾತ್ರವು ಕೆ.ರಾಘವೇಂದ್ರ ರಾವ್ ನಿರ್ದೇಶಿಸಿದ ಗಂಗೋತ್ರಿ ಚಿತ್ರವಾಗಿತ್ತು.[೧] ಇವರು ನಟಿಸಿದ ದ್ವಿತೀಯ ಚಿತ್ರವು 2004 ರಲ್ಲಿ ಬಿಡುಗಡೆಯಾದ ಆರ್ಯ ಆಗಿದ್ದು, ಇದು ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸನ್ನು ಗಳಿಸಿತು.[೨] ಈ ಚಿತ್ರದಲ್ಲಿನ ಪಾತ್ರವು ಅಲ್ಲು ಅರ್ಜುನ್ ಅವರ ಹೆಸರನ್ನು ಯುವಜನರಲ್ಲಿ ಮನೆಮಾತಾಗಿಸಿತು. 2005 ರಲ್ಲಿ ಇವರ ತೃತೀಯ ಚಿತ್ರವಾದ ಬನ್ನಿ ಯು ಬಿಡುಗಡೆಯಾಯಿತು.ಇದು ತಕ್ಕ ಮಟ್ಟಿಗೆ ಹಿಟ್ ಆಯಿತು. ಇವರು ಹಿಟ್ ಚಿತ್ರಗಳ ಹ್ಯಾಟ್ರಿಕ್ ಅನ್ನು ನೀಡಿದರು. 2006 ರಲ್ಲಿ ಬಿಡುಗಡೆಯಾದ ಇವರ ನಾಲ್ಕನೆಯ ಚಿತ್ರವಾದ ಹ್ಯಾಪಿ ಬಾಕ್ಸ್ ಆಫೀಸ್‌ನಲ್ಲಿ ಸಾಧಾರಣ ಪ್ರದರ್ಶನ ಕಂಡಿತು.[೩] ಆದರೆ ಚಿತ್ರವು ಅಮೇರಿಕದ ಭಾರತೀಯ ಚಿತ್ರ ಪ್ರದರ್ಶನದ ಮಂದಿರಗಳಲ್ಲಿ ತಕ್ಕಮಟ್ಟಿನ ಲಾಭವನ್ನು ನೀಡುವಲ್ಲಿ ಯಶಸ್ವಿಯಾಯಿತು.[೪]
ಯಶಸ್ಸು, 2007–ಇಲ್ಲಿಯವರೆಗೆ
ಬದಲಾಯಿಸಿ2007 ರಲ್ಲಿ, ಪುರಿ ಜಗನ್ನಾಥ್ ನಿರ್ದೇಶಿಸಿದ ಇವರ ಐದನೇ ಚಲನಚಿತ್ರವಾದ ದೇಸಮುದುರು ಬಾಕ್ಸ್ ಆಫೀಸ್ ಹಿಟ್ ಆಗುವುದರ [೫] ಜೊತೆಗೆ ಟಾಲಿವುಡ್ನಲ್ಲಿ ವರ್ಷದ ಮೊಲದ[೬] ಹಿಟ್ ಚಲನಚಿತ್ರವಾಯಿತು. ಚಲನಚಿತ್ರವು ಬಿಡುಗಡೆಗೊಂಡ ಮೊದಲ ವಾರದೊಳಗೆ 12.58 ಕೋಟಿ ರೂಪಾಯಿಗಳ ಗಳಿಕೆಯನ್ನು ಕಂಡಿತು ಮತ್ತು ಅಲ್ಲು ಅರ್ಜುನ್ ಅವರು ಸಿಕ್ಸ್ ಪ್ಯಾಕ್ ಪ್ರದರ್ಶಿಸಿದ ಮೊದಲ ಟಾಲಿವುಡ್ ನಟರಾದರು. ಇದೇ ವರ್ಷದಲ್ಲಿ, ಅಲ್ಲು ಅರ್ಜುನ್ ಅವರು ತಮ್ಮ ಚಿಕ್ಕಪ್ಪ ಚಿರಂಜೀವಿಯವರ ಚಿತ್ರ ಶಂಕರ್ ದಾದಾ ಜಿಂದಾಬಾದ್ ನಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು. 2008 ರ ಮೇ ತಿಂಗಳಿನಲ್ಲಿ, ಭಾಸ್ಕರ್ ನಿರ್ದೇಶಿಸಿದ ಇವರ ಆರನೆಯ ಚಿತ್ರವಾದ ಪರುಗು ಬಿಡುಗಡೆಯಾಯಿತು ಅಲ್ಲು ಅರ್ಜುನ್ ಅವರ ಎಲ್ಲಾ ಚಿತ್ರಗಳು ಮಲಯಾಳಂ ಭಾಷೆಗೆ ಭಾಷಾಂತರಗೊಂಡಿವೆ ಮತ್ತು ಡಬ್ ಮಾಡಲ್ಪಟ್ಟಿವೆ. ದೇಸಮುದ್ರುಡು ಚಿತ್ರವು ಹೀರೋ ಎಂದು ಮತ್ತು ಪರುಗು ಚಿತ್ರವು ಕೃಷ್ಣ ಎಂದು ಮತ್ತು ಗಂಗೋತ್ರಿಯು ಸಿಂಹಕುಟ್ಟಿ ಎಂದು ಮರುಹೆಸರಿಸಲ್ಪಟ್ಟಿದೆ. ಇದು ಕೇರಳ ರಾಜ್ಯದಲ್ಲೂ ಅಲ್ಲು ಅರ್ಜುನ್ ಅವರು ಜನಪ್ರಿಯವಾಗುವಂತೆ ಮಾಡಿತು ಮತ್ತು ಅಲ್ಲಿನ ಪ್ರೇಕ್ಷಕರೂ ಅವರನ್ನು ಉತ್ತಮವಾಗಿಯೇ ಸ್ವೀಕರಿಸಿದರು. 2009 ರಲ್ಲಿ ಅರ್ಜುನ್ ಅವರ ಒಂದೇ ಚಿತ್ರವಾದ ಆರ್ಯ 2 ಬಿಡುಗಡೆಯಾಯಿತು ಮತ್ತು ಇದು 2004 ರ ಹಿಟ್ ಚಿತ್ರವಾದ ಅರ್ಜುನ್ ಅವರೇ ನಾಯಕರಾಗಿದ್ದ ಆರ್ಯ ಚಿತ್ರದ ಕಥಾ ಹಂದರವನ್ನೇ ಹೊಂದಿತ್ತು. ಪ್ರಥಮ ಚಿತ್ರವನ್ನು ನಿರ್ದೇಶಿಸಿದ್ದ ಸುಕುಮಾರ್ ಅವರೇ ಈ ಚಿತ್ರವನ್ನು ನಿರ್ದೇಶಿಸಿದ್ದರು. ಆರ್ಯ 2 ರಲ್ಲಿ ಅರ್ಜುನ್ ಅವರೊಂದಿಗೆ ಕಾಜಲ್ ಅಗರವಾಲ್, ನವದೀಪ್, ಮತ್ತು ಶ್ರದ್ಧಾ ದಾಸ್ ಅವರುಗಳು ಸಹ-ನಟಿಯರಾಗಿದ್ದರು.ರಾಜಕೀಯ ಸಮಸ್ಯೆಗಳ ನಡುವೆ ಚಿತ್ರವು ಬಿಡುಗಡೆಯಾದರೂ, ಇದು ಬಾಕ್ಸ್ ಆಫೀಸ್‌ನಲ್ಲಿ 33 ಕೋಟಿ ರೂಪಾಯಿಗಳನ್ನು ಬಾಚಿಕೊಳ್ಳುವಲ್ಲಿ ಯಶಸ್ವಿಯಾಯಿತು.ಪ್ರಾರಂಭದಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾದರೂ, ಆರ್ಯ 2 ನ್ನು ವಿಮರ್ಶಾತ್ಮಕವಾಗಿ ಯಶಸ್ವಿ ಚಿತ್ರವೆಂದು ಒಪ್ಪಿಕೊಳ್ಳಲಾಯಿತು ಮತ್ತು ಈ ಚಿತ್ರವು ತೆಲುಗು ಚಿತ್ರೋದ್ಯಮದ ಪ್ರತಿ ಪ್ರಮುಖ ಪ್ರಶಸ್ತಿ ಕಾರ್ಯಕ್ರಮಗಳಲ್ಲಿ ಅತ್ಯುತ್ತಮ ಚಿತ್ರ ವಿಭಾಗದಲ್ಲಿ ನಾಮಾಂಕಿತವಾಯಿತು.ಅಲ್ಲು ಅರ್ಜುನ್ ಅವರು ನಂತರ ಗುಣಶೇಖರ್ ನಿರ್ದೇಶನದ ದೊಡ್ಡ ಬಜೆಟ್ ಚಿತ್ರವಾದ ವರುದು ನಲ್ಲಿ ನಟಿಸಿದರು ಮತ್ತು ಈ ಚಿತ್ರವು 2010 ರಲ್ಲಿ ಬಿಡುಗಡೆಯಾಯಿತು ಹಾಗೂ ಇದು ವಿಮರ್ಶಾತ್ಮಕವಾಗಿ ಮತ್ತು ವಾಣಿಜ್ಯಿಕವಾಗಿ ಸಾಧಾರಣ ಚಿತ್ರವಾಗಿತ್ತು. ವರುದು ನಂತರ, ಅಲ್ಲು ಅರ್ಜುನ್ ಅವರು ನಾಯಕ ನಟರುಗಳ ಚಿತ್ರ ವೇದಂ ನಲ್ಲಿ ಮಂಚು ಮನೋಜ್ ಮತ್ತು ನಟಿ ಅನುಷ್ಕಾ ಶೆಟ್ಟಿಯವರೊಂದಿಗೆ ನಟಿಸಿದರು ಹಾಗೂ ಈ ಚಿತ್ರವನ್ನು ರಾಧಾ ಕೃಷ್ಣ ಜಾಗರ್ಲಮುಡು (ತಮ್ಮ ಹೆಸರಾಂತ ಚಿತ್ರ ಗಮ್ಯಂಗೆ ಹೆಸರುವಾಸಿಯಾದವರು) ನಿರ್ದೇಶಿಸಿದ್ದರು. ಅಲ್ಲು ಅವರು ವೇದಂ ಚಿತ್ರದಲ್ಲಿ ತಮ್ಮ ವೃತ್ತಿ ಜೀವನದ ಅತ್ಯುತ್ತಮ ಅಭಿನಯವನ್ನು ಪ್ರದರ್ಶಿಸಿದರು. ವೇದಂ ಚಿತ್ರವು ವಿಮರ್ಶಾತ್ಮಕವಾಗಿ ಉತ್ತಮ ಚಿತ್ರವೆಂದು ಪ್ರಶಂಶಿಸಲಾಯಿತಲ್ಲದೇ ಪ್ರೇಕ್ಷಕರೂ ಸಹ ಇದನ್ನು ಉತ್ತಮವಾಗಿ ಸ್ವೀಕರಿಸಿದರು. ಅಲ್ಲು ಅರ್ಜುನ್ ಅವರು ಫೆಬ್ರವರಿ 2011 ರಲ್ಲಿ ತಮ್ಮ ಪ್ರಿಯತಮೆಯೊಂದಿಗೆ ಮದುವೆಯಾಗುವುದಾಗಿಯೂ ಹೇಳಲಾಯಿತು. ಟಿವಿ9 ನೊಂದಿಗಿನ ಸಂದರ್ಶನದಲ್ಲಿ ಅಲ್ಲು ಅರ್ಜುನ್ ಅವರು ಇದನ್ನು ದೃಢಪಡಿಸಿದರು. ಅಲ್ಲು ಅರ್ಜುನ್ ಅವರು ತಮ್ಮ ಪ್ರಿಯತಮೆಯಾದ ಹೈದರಾಬಾದ್‌ನ ಸ್ನೇಹಾ ರೆಡ್ಡಿಯವರನ್ನು ವಿವಾಹವಾಗಲಿದ್ದಾರೆ. ಇವರುಗಳು ಡಿಸೆಂಬರ್‌ನಲ್ಲಿ ನಿಶ್ಚಿತಾರ್ಥವನ್ನು ಮಾಡಿಕೊಂಡರು ಮತ್ತು ಮದುವೆ ಸಮಾರಂಭವು 2011 ರ ಮಾರ್ಚ್ 26 ರಂದು ನಡೆಯಲಿದೆ ಎಂದು ಹೇಳಲಾಗಿದೆ. ಇವರ ಮುಂದಿನ ಚಿತ್ರವಾದ "ಬದ್ರಿನಾಧ್" ಸಹ ಇವರ ಮದುವೆಯ ಮಾರನೇ ದಿನವಾದ 2011 ರ ಮಾರ್ಚ್ 27 ರಂದು ಬಿಡುಗಡೆಯಾಗಲಿದೆ ಎಂದು ಕೇಳಿಬಂದಿದೆ. ಅರ್ಜುನ್ ಅವರ ತಂದೆಯವರಾದ ಅಲ್ಲು ಅರವಿಂದ್ ಅವರ ಮಾಲೀಕತ್ವದ ಗೀತಾ ಆರ್ಟ್ಸ್ ನಿರ್ಮಾಣ ಕಂಪನಿಯು ಭಾರಿ ಬಜೆಟ್ ಚಿತ್ರವಾದ ಬದ್ರಿನಾಧ್ ಅನ್ನು ನಿರ್ಮಾಣ ಮಾಡುತ್ತಿದೆ. ಇದನ್ನು ವಿ.ವಿ ವಿನಾಯಕ್ ಅವರು ನಿರ್ದೇಶನ ಮಾಡುತ್ತಿದ್ದು, ಅರ್ಜುನ್ ಅವರೊಂದಿಗೆ ತಮನ್ನಾ ಅವರು ನಾಯಕಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಲನಚಿತ್ರದ ನಿರ್ಮಾಣ ವೆಚ್ಚವು 35 ಕೋಟಿಯೆಂದು ಅಂದಾಜಿಸಲಾಗಿದೆ. ಈ ಚಿತ್ರದ ಚಿತ್ರೀಕರಣವು ಜುಲೈ 2010 ರಲ್ಲಿ ಪ್ರಾರಂಭವಾಗಿದೆ.[೭]
ಚಲನಚಿತ್ರಗಳ ಪಟ್ಟಿ
ಬದಲಾಯಿಸಿವರ್ಷಗಳು | ಚಿತ್ರ | ಪಾತ್ರ | ಟಿಪ್ಪಣಿಗಳು | ನಟಿ | |||
---|---|---|---|---|---|---|---|
2002 | ಡ್ಯಾಡಿ | ಗೋಪಿ | ವಿಶೇಷ ಪಾತ್ರ | ||||
2003 | ಗಂಗೋತ್ರಿ | ಸಿಂಹಾದ್ರಿ | "ಅಧಿತಿ ಅಗರವಾಲ್" | ||||
2004 | ಆರ್ಯ | ಆರ್ಯ | ವಿಜೇತ , ಸಂತೋಷಮ್ ಅತ್ಯುತ್ತಮ ಯುವ ನಟ ಪ್ರಶಸ್ತಿ ವಿಜೇತ , ನಂದಿ ತೀರ್ಪುಗಾರರ ವಿಶೇಷ ಪ್ರಶಸ್ತಿ |
"ಅನುರಾಧ ಮೆಹ್ತಾ" | |||
2005 | ಬನ್ನಿ | ಬನ್ನಿ | ವಿಜೇತ , ಸಂತೋಷಮ್ ಅತ್ಯುತ್ತಮ ಯುವ ನಟ ಪ್ರಶಸ್ತಿ | "ಗೌರಿ ಮುಂಜಾಲ್" | |||
2006 | ಹ್ಯಾಪಿ | ಬನ್ನಿ | |||||
"ಜೆನಿಲಿಯಾ" | 2007 | ದೇಸಮುದುರು | ಬಾಲ ಗೋವಿಂದ | ||||
"ಹಂಸಿಕಾ ಮೌತ್ವಾನಿ" | ಶಂಕರದಾದಾ ಜಿಂದಾಬಾದ್ | ವಿಶೇಷ ಪಾತ್ರ | |||||
2008 | ಪರುಗು | ಕೃಷ್ಣಾ | ವಿಜೇತ , ಫಿಲ್ಮ್‌ಫೇರ್ ಅತ್ಯುತ್ತಮ ತೆಲುಗು ನಟ ಪ್ರಶಸ್ತಿ ವಿಜೇತ , ನಂದಿ ತೀರ್ಪುಗಾರರ ವಿಶೇಷ ಪ್ರಶಸ್ತಿ | ||||
"ಶೀಲಾ" | 2009 | ಆರ್ಯ 2 | ಆರ್ಯ | ನಾಮಾಂಕಿತ, ಫಿಲ್ಮ್‌ಫೇರ್ ಅತ್ಯುತ್ತಮ ತೆಲುಗು ನಟ ಪ್ರಶಸ್ತಿ | |||
"ಕಾಜಲ್ ಅಗರವಾಲ್" | 2010 | ವರುಡು | ಸಂದೀಪ್ | ||||
"ಭಾನು ಮೆಹ್ರಾ" | ವೇದಂ | ಆನಂದ ("ಕೇಬಲ್") ರಾಜು | |||||
"ದೀಕ್ಷಾ ಸೇತ್" | 2011 | ಬದ್ರಿನಾಧ್ | ಬದ್ರಿನಾಧ್ | ಚಿತ್ರೀಕರಣ ಪೂರ್ಣಗೊಂಡಿದೆ | "ತಮನ್ನಾ" |
ಉಲ್ಲೇಖಗಳು
ಬದಲಾಯಿಸಿ- ↑ http://www.greatandhra.com/movies/analysis/tollywood_2003_analysis.html
- ↑ http://www.idlebrain.com/news/2000march20/2004retrospect-movielist.html
- ↑ http://www.nonstopcinema.com/nsc/boxoffice/display.php?id=223
- ↑ "ಆರ್ಕೈವ್ ನಕಲು". Archived from the original on 2018-12-24. Retrieved 2011-02-03.
- ↑ http://www.indiaglitz.com/channels/telugu/article/28450.html
- ↑ http://www.greatandhra.com/movies/news/feb2007/single_hit.php
- ↑ ಅಲ್ಲು ಅರ್ಜುನ್ ವಿವರಗಳು Archived 2010-06-21 ವೇಬ್ಯಾಕ್ ಮೆಷಿನ್ ನಲ್ಲಿ. (10 ಅಕ್ಟೋಬರ್ 2009). 16reels.com Archived 2010-12-25 ವೇಬ್ಯಾಕ್ ಮೆಷಿನ್ ನಲ್ಲಿ..