ಅಲ್ಮೋರ ಉತ್ತರಾಖಂಡ ರಾಜ್ಯದ ಅಲ್ಮೋರ ಜಿಲ್ಲೆ ಯ ಮುಖ್ಯ ಪಟ್ಟಣ ಮತ್ತು ಪ್ರಸಿದ್ಧ ಗಿರಿಧಾಮ.ಈ ಪಟ್ಟಣವನ್ನು ೧೫೬೮ರಲ್ಲಿ ಸ್ಥಾಪಿಸಲಾಯಿತು.ಇದು ಒಂದು ಪ್ರಮುಖ ಸಾಂಸ್ಕೃತಿಕ ಕೇಂದ್ರವಾಗಿಯೂ ಪ್ರಸಿದ್ಧವಾಗಿದೆ.ಇದು ಹಿಮಾಲಯ ಶಿಖರ ಶ್ರೇಣಿಯ ಕುಮಾವ್ ಬೆಟ್ಟಗಳ ಮಧ್ಯೆ ಇರುವ ಒಂದು ಸುಂದರ ಪಟ್ಟಣ.ಇಲ್ಲಿಂದ ಹಿಮಚ್ಛಾದಿತ ಹಿಮಾಲಯವನ್ನು ನೋಡಬಹುದು.ಸುತ್ತ ಮುತ್ತ ಕೋಶಿ ನದಿ ಮತ್ತು ಶಾಲ್ಮಲೆ ನದಿ ಹರಿಯುತ್ತಿದೆ.

ದುನಾಗಿರಿ, ಅಲ್ಮೋರಾ
ಅಲ್ಮೋರ
अल्मोड़ा
ಗಿರಿಧಾಮ
ದೇಶ ಭಾರತ
ರಾಜ್ಯಉತ್ತರಾಖಂಡ
ಜಿಲ್ಲೆಅಲ್ಮೋರ ಜಿಲ್ಲೆ
Elevation
೧,೮೦೦ m (೫,೯೦೦ ft)
Population
 (೨೦೧೧)
 • Total೬೨೧೯೨
 • Density೧೯೮/km (೫೧೦/sq mi)
Languages
 • Officialಹಿಂದಿ
Time zoneUTC+5:30 (IST)
ಪಿನ್
263601
Telephone code91-5962
Vehicle registrationUA-01
Sex ratio1142 /
ClimateAlpine (BSh) and Humid subtropical(Bsh) (Köppen)
Avg. annual temperature−3 to 28 °C (27 to 82 °F)
Avg. summer temperature12 to 28 °C (54 to 82 °F)
Avg. winter temperature−3 to 15 °C (27 to 59 °F)
Websitealmora.nic.in
ಅಲ್ಮೋರದಿಂದ ಕಾಣುವ ಹಿಮಾಲಯದ ದೃಶ್ಯ

ಇತಿಹಾಸ

ಬದಲಾಯಿಸಿ

೧೬ನೆಯ ಶತಮಾನದಲ್ಲಿ ಇದು ಚಾಂದ್ ರಾಜರ ರಾಜಧಾನಿಯಾಗಿ ಸ್ಥಾಪಿತವಾಯಿತು. ೧೭೪೪ರಲ್ಲಿ ಮುಸಲ್ಮಾನರು ಇದನ್ನು ಸ್ವಲ್ಪಕಾಲ ತಮ್ಮ ವಶದಲ್ಲಿಟ್ಟುಕೊಂಡರು.ನಂತರದ ವರ್ಷಗಳಲ್ಲಿ ಗೂರ್ಖಾ ಜನರ ವಶದಲ್ಲಿದ್ದ ಇದು ೧೮೧೫ರಲ್ಲಿ ಬ್ರಿಟಿಷರ ವಶವಾಯಿತು.

ಜನಜೀವನ

ಬದಲಾಯಿಸಿ

೨೦೧೧ರ ಜನಗಣತಿಯಂತೆ ಇಲ್ಲಿಯ ಜನಸಂಖ್ಯೆ ೬೨,೧೬೨.ಸಾಂದ್ರತೆ ಪ್ರತಿ ಕಿ.ಮೀ.ಗೆ ೧೯೮.ಮತ್ತು ಲಿಂಗಾನುಪಾತ ೧೧೪೨. ಇದು ದೇಶದಲ್ಲೇ ಎರಡನೆಯ ಉತ್ತಮ ಲಿಂಗಾನುಪಾತವಾಗಿದೆ.

ಬಾಹ್ಯ ಸಂಪರ್ಕಗಳು

ಬದಲಾಯಿಸಿ
"https://kn.wikipedia.org/w/index.php?title=ಅಲ್ಮೋರ&oldid=1082479" ಇಂದ ಪಡೆಯಲ್ಪಟ್ಟಿದೆ