ಅಲೋಷಿಯಸ್ ಪೌಲ್ ಡಿ'ಸೋಜಾ

ಟೆಂಪ್ಲೇಟು:Infobox Christian leader

ಅಲೋಷಿಯಸ್ ಪೌಲ್ ಡಿ'ಸೋಜಾ (ಟೆಂಪ್ಲೇಟು:Lang-knn; ಹುಟ್ಟು ೨೧ ಜೂನ್ ೧೯೪೧) ರೋಮನ್ ಕಥೋಲಿಕ ಧರ್ಮಪ್ರಾಂತ್ಯ, ಮಂಗಳೂರುಇಲ್ಲಿನ ಬಿಷಪರಾಗಿದ್ದಾರೆ. ಅವರು ಬಾಸಿಲ್ ಸಾಲ್ವೊದೊರೆ ಡಿ'ಸೋಜಾ ಅವರ ಉತ್ತರಾಧಿಕಾರಿಯಾಗಿ ೮ ನವೆಂಬರ್ ೧೯೯೬ರಲ್ಲಿ ನೇಮಕಗೊಂಡಿದ್ದಾರೆ.

ಆರಂಭೀಕ ವರ್ಷಗಳು

ಬದಲಾಯಿಸಿ

ಅಲೋಷಿಯಸ್ ಪೌಲ್ ಡಿ'ಸೋಜಾ ಅವರು ೨೧ ಜೂನ್ ೧೯೪೧ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಹಳ್ಳಿಯಾದ ಅಗ್ರಾರ್ನಲ್ಲಿನ ಹೆಕ್ಕೊಟ್ಟು ಗ್ರಾಮದಲ್ಲಿ ಜನಿಸಿದರು.[] ಮಥಾಯಸ್ ಹಾಗೂ ಇಸಾಬೆಲ್ ಡಿ'ಸೋಜಾ ದಂಪತಿಯ ಏಳು ಮಂದಿ ಮಕ್ಕಳಲ್ಲಿ ಆರನೆಯವರಾಗಿ ಹುಟ್ಟಿದರು.[] ಕುಟುಂಬವು ಡಿ'ಸೋಜಾ-ಕಾಮತ್ ಕುಲದ ಮಂಗಳೂರು ಕಥೋಲಿಕ ಪ್ರದೇಶಕ್ಕೆ ಸೇರಿದವರಾಗಿದ್ದಾರೆ.[] ಸಹೋದರ ವಂ.ಚಾರ್ಲ್ಸ್ ಡಿ'ಸೋಜಾ ಅವರು ರೋಮನ್ ಕಥೋಲಿಕ ಮಹಾಧರ್ಮಪ್ರಾಂತ್ಯ ದೆಹಲಿಯ ಧರ್ಮಗುರು, ಮತ್ತು ಸಹೋದರಿ ಧರ್ಮಭಗಿನಿ ಜಾನಿಸ್ ಎ.ಸಿ. ಅವರು ಚಂಡೀಘಡದಲ್ಲಿದ್ದಾರೆ.[] ಅವರು ಪ್ರಾಥಮಿಕ ಶೀಕ್ಷಣವನ್ನು ಅಗ್ರಾರಿನಲ್ಲಿ ಪಡೆದು ಪದವಿಪೂರ್ವ ಶೀಕ್ಷಣವನ್ನು ಬಂಟ್ವಾಳದ ಎಸ್.ವಿಎಸ್. ಸಂಸ್ಥೆಯಲ್ಲಿ ೧೯೫೮ರಲ್ಲಿ ಮುಗಿಸಿದ್ದು,[] ಪ್ರೌಢ ಶಿಕ್ಷಣದ ವೇಳೆಯಲ್ಲಿಯೇ ಅವರು ಸಂ. ಜೊಸೇಫರ ಸೆಮಿನರಿಗೆ ಪೌರೋಹಿತ್ಯ ಪಡೆಯಲು ಭರ್ತಿಗೊಂಡರು.[]

ಧರ್ಮಪ್ರಾಂತ್ಯದ ಕಾರ್ಯಗಳು

ಬದಲಾಯಿಸಿ

ಡಿ'ಸೋಜಾ ಅವರು ೩ ಡಿಸೆಂಬರ್ ೧೯೬೬ರಲ್ಲಿ ಗುರುದೀಕ್ಷೆಯನ್ನು ಪಡೆದು,[] ಪವಿತ್ರ ಶಿಲುಬೆ ಚರ್ಚ್, ಕೊರ್ಡೆಲ್-ನಲ್ಲಿ ಸಹಾಯಕ ಗುರುಗಳಾಗಿ೧೯೭೦ರವರೆಗೆ ಸೇವೆ ಸಲ್ಲಿಸಿದರು.[] ಈ ವೇಳೆಯಲ್ಲಿ, ಅವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಪದವಿಯನನ್ಉ ಪಡೆದರು.[] ಇದರಿಂದಾಗಿ ಮೆಚ್ಚುಗೆ ಪಡೆದುಕೊಂಡ ಇವರ ರೋಮನ್ ಕಥೋಲಿಕ ದೈವಶಾಸ್ತ್ರದ ಮೇಲಿನ ಜ್ಞಾನ ಹಾಗೂ ಸಾಮರ್ಥ್ಯವನ್ನು ಕಂಡ ಅಂದಿನ ಮಂಗಳೂರು ಬಿಷಪ್ ಇವರನ್ನುಧರ್ಮಪ್ರಾಂತ್ಯದ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿದರು.[] ಕ್ಯಾನನ್ ಕಾನೂನುನಲ್ಲಿ ಡಾಕ್ಟರೇಟ್ ಪದವಿ ಪಡೆಯಲು ೧೯೭೧ರಲ್ಲಿ, ಧರ್ಮಪ್ರಾಂತ್ಯದ ಅಧಿಕಾರಿಗಳು ಇವರನ್ನು ರೋಮ್-ಗೆ ಕಳುಹಿಸಿದರು canonical law, ಅಲ್ಲಿ ಅವರು ಕ್ರೈಸ್ತ ವಿವಾಹ ಕಾನೂನಿನಲ್ಲಿ ವಿಶೇಷ ಪರಿಣತಿಯನ್ನು ಪಡೆದರು.[] ಇದನ್ನು ಪೂರ್ಣಗೊಳಿಸಿದ ನಂತರ ಅವರನ್ನು "ರೋಮನ್ ರೋಟ" ದ ವಕೀಲರನ್ನಾಗಿ ನೀಮಕ ಮಾಡಲಾಯಿತು—ಇದು ಕ್ರೈಸ್ತ ಧರ್ಮದ ಸರ್ವೋಚ್ಚ್ ಟ್ರಿಬ್ಯೂನಲ್ ಆಗಿರುತ್ತದೆ, ಹಾಗಾಗಿ ಈ ಪದವಿಗೇರಿದ ಮೊದಲ ಭಾರತೀಯ ಗುರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.[] ಡಿ'ಸೋಜಾ ಅವರು "ರೋಮನ್ ರೋಟ" ದ ವಕೀಲರ ಆಯ್ಕೆಯಲಲ್ಇ ಅರ್ಹತೆ ಪಡೆದಿರುವ ಇಬ್ಬರು ಭಾರತೀಯ ಗುರುಗಳಲ್ಲಿ ಒಬ್ಬರಾಗಿದ್ದು, ೧೯೮೪ರಿಂದ ಮಂಗಳೂರು ಪ್ರಾಂತ್ಯದ ನ್ಯಾಯಾಂಗ ಮಂಡಳಿಯ ಗುರುಗಳಾಗಿ ಸೇವೆ ಸಲ್ಲಿಸಿದರು.[]

ಡಿ'ಸೋಜಾ ವರು ಮಂಗಳೂರಿಗೆ ೧೯೭೬ರಲ್ಲಿ ಹಿಂತಿರುಗಿದರು, ಮತ್ತು ಮಂಗಳೂರು ಧರ್ಮಪ್ರಾಂತ್ಯದ ಕುಲಪತಿಯಾಗಿ ೧೯೭೭ರಲ್ಲಿ ನೇಮಕಗೊಂಡರು.[] ಈ ಸಮಯದಲ್ಲಿ, ಗ್ಲಾಡ್ಸನ್ ಮನೆ ಹಾಗೂ ವೃತ್ತಿಪರತೆಯ ಉಸ್ತುವಾರಿಯನ್ನು ಹೊಂದಿದ್ದರು, ಇದು ಬೋಳಾರ ಇಲಲ್ರುವ ಸಣ್ಣ ಸೆಮಿನರಿ.[] ಅವರು ಏಕಕಾಲದಲ್ಲಿ ಕಾಸ್ಸಿಯ ಚರ್ಚಿನ ಧರ್ಮಗುರುಗಳಾಗಿ ೧೯೮೮ರಿಂದ ಮತ್ತು ಧರ್ಮಪ್ರಾಂತ್ಯದ ಮಹಿಳಾ ಸಮಿತಿಯ ಅಧ್ಯಕ್ಷ್ಯರಾಗಿ ೧೯೮೫ರಿಂದ ಸೇವೆ ಸಲ್ಲಿಸದರು.[] ಜೆಪ್ಪುವಿನಲ್ಲಿರುವ ಸಂ.ಜೋಸೆಫ್ ಸೆಮಿನರಿಗೆ ಮೊತ್ತ ಮೊದಲ ಫ್ರಾಂತೀಯ ಗುರು ಮುಖ್ಯಾಧ್ಯಕ್ಷರಾಗಿ ೧೯೯೫ರಲ್ಲಿ ನೇಮಕಗೊಂಡರು.[]

ಮಂಗಳೂರು ಧರ್ಮಪ್ರಾಂತ್ಯದ ಬಿಷಪ್

ಬದಲಾಯಿಸಿ

೧೧ಜನವರಿ ೧೯೯೬ರಲ್ಲಿ ಪರಮ ಪೂಜ್ಯ ದ್ವಿತೀಯ ಪೋಪ್ ಜಾನ್ ಪೌಲ್ ಅವರು ಮಂಗಳುರು ಧರ್ಮಪ್ರಾಂತ್ಯಕ್ಕೆ ಡಿ'ಸೋಜಾ ಅವರನ್ನು ಸಹಾಯಕ ಬಿಷಪರನ್ನಾಗಿ ನೇಮಿಸಿದರು.[] ೧೯೯೬ರಲ್ಲಿ ಬಿಷಪ್ ಬಾಸಿಲ್ ಸಾಲ್ವೊದೊರೆ ಡಿ'ಸೋಜಾ ಅವರ ಆಕಸ್ಮಿಕ ಮರಣದ ನಂತರ, ಇವರು ನಾಮಮಾತ್ರ ಬಿಷಪ್ ಆಗಿ ಅದೇ ವರ್ಷದ ೧೫ ಮೇ ತಿಂಗಳಿನಲ್ಲಿ ನಿಯುಕ್ತಿಗೊಂಡರು.[] ೨೭ ಡಿಸೆಂಬರ್-ನಲ್ಲಿ ಅವರನ್ನು ಅಧಿಕೃತವಾಗಿ ಮಂಗಳೂರಿನ ಬಿಷಪ್ ಎಂದು ನಾಮಕರಣ ಮಾಡಲಾಯಿತು.[]

ಒಂಭತ್ತು ಮಂದಿ ಗುರುಗಳನ್ನೊಳಗೊಂಡ ಪಾಸ್ಟೊರಲ್ ಕೇಂದ್ರವನ್ನು ಡಿ'ಸೋಜಾ ಅವರು ಬಿಷಪರಾದ ಬಳಿಕ ಸಂಪೂರ್ಣಗೊಳಿಸಿದರು .[] ಕರಾವಳಿ ಅಭಿವೃದ್ಧಿ ಮತ್ತು ಶಾಂತಿ ಸಂಸ್ಥೆ (ಸಿಒಡಿಪಿ)ಯನ್ನು ಬಲಪಡಿಸಿದರು, ಮತ್ತು was instrumental in the establishment of ಫಾದರ್ ಮುಲ್ಲರ್ ವೈದ್ಉಕೀಯ ಕಾಲೇಜುಇದರ ಸಂಸ್ಥಾಪಣೆಯಲ್ಲಿ ೧೯೯೯ರಲ್ಲಿ ಉದ್ಘಾಟಿಸುವ ಮುಖಾಂತರ ಕಾರಣೀಕರ್ತರಾಗಿದ್ದಾರೆ.[] ಪ್ರಸ್ತುತ ಇವರು ಭಾರತದ ದೇಶೀಯ ಬಿಷಪರ ಕೌಟುಂಬಿಕ ಕೇದ್ರ ಸಮಿತಿ ಅಧ್ಯಕ್ಷ್ಯರಾಗಿದ್ದಾರೆ.[] ಡಿ'ಸೋಜಾ ಅವರು ಹಲವಾರು ಪದವಿ, ಪ್ರೌಢ ಶಿಕ್ಷಣ, ಪ್ರಾಥಮಿಕ ಶಿಕ್ಷಣ ಸಂಸ್ಥೆಗಳ ಪೋಷಕ ಹಾಗೂ ಆಡಳಿತಾಧಿಕಾರಿಯಾಗಿದ್ದಾರೆ.[] ಜಾತಿ, ವರ್ಗ, ಮತೀಯ ಭಾವನೆಗಳನ್ನು ಲೆಕ್ಕಿಸದೇ 'ಹತ್ತು ಅಂಶ'ಗಳ ಕಾರ್ಯಕ್ರಮವನ್ನು ಧರ್ಮಪ್ರಾಂತ್ಯದ ಚರ್ಚ್-ಗಳಲ್ಲಿ ಅನುಸರಿಸುವಂತೆ ಪ್ರೇರೇಪಿಸಿದರು.[]

  • ಸೂಕ್ತ ವ್ಯಕ್ತಿಗಳನ್ನು ಆರಿಸಿ ಅವರಿಂದ ಧರ್ಮನಿಷ್ಠೆ ಹಾಗೂ ರೋಮನ್ ಕಥೋಲಿಕತೆಯನ್ನು ಹರಡುವಲ್ಲಿ ಸಹಕಾರ.
  • ವಾರ್ಡ್ ಮುಖಾಂತರ ಚರ್ಚ್ ವಿಧಿ-ವಿಧಾನಗಳಲ್ಲಿ ಪಾತ್ರ ವಹಿಸುವಂತೆ ತಯಾರಿಸುವಲ್ಲಿ ಕ್ರಿಶ್ಚಿಯನ್ನರಿಗೆ ಪ್ರೇರಪಣೆ.
  • ಕ್ರೈಸ್ತ ಮೌಲ್ಯಗಳನ್ನು ಬೋಧನೆ ಹಾಗೂ ಅವುಗಳನನ್ಉ ಅಭ್ಯಸಿಸುವಲ್ಲಿ ಸಹಾಯ ಮಾಡುವಂತೆ ಸ್ವಯಂಪ್ರೇರಿತ ಗುಂಪುಗಳ ರಚನೆ.
  • ಕ್ರೈಸ್ತರಲ್ಲಿ ಏಕತೆ ಹಾಗೂ ಅಂತರ್-ಧರ್ಮೀಯರೊಂದಿಗೆ ಸಹಬಾಳ್ವೆಗೆ ನಾಂದಿ.
  • ಅಲ್ಪಸಂಖ್ಯಾತ ಕ್ರೈಸ್ತ ಚಳವಳಿ.
  • ಮಹಿಳಾ ಸಂಘಗಳನ್ನು ಬಲಿಷ್ಠಗೊಳಿಸುವಿಕೆ.
  • ಅನಾಥರಿಗೆ ಮೂಲ ಸಂಪನ್ಮೂಲಗಳನ್ನು ಒದಗಿಸುವಿಕೆ.
  • ಚರ್ಚ್ ಹಾಗೂ ವಾರ್ಡ್ ಸ್ತರಗಳಲ್ಲಿ ಸಂಪನ್ಮೂಲ ಗುಂಪುಗಳ ರಚನೆ.
  • ಕ್ರಿಸ್ತ ಕೇಂದ್ರಿತ ಕುಟುಂಬಗಳ ರಚನೆ.
  • ಕ್ರಿಸ್ತನ ಮಾರ್ಗದಲ್ಲಿ ನಡೆಯುವಂತೆ ಯುವಜನತೆಗೆ ಪ್ರೇರಣೆ.

ಡಿ'ಸೋಜಾ ಅವರು ಅಂತರಾಷ್ಟ್ರೀಯ ಕೊಂಕಣಿ ಸಮಾವೇಶ ಮತ್ತು ಅಖಿಲ ಭಾರತೀಯ ಬಿಷಪ್ ಸಮಾವೇಶಗಳನ್ನು ಸಂಘಟಿಸಿದ್ದಾರೆ.[] He translated the Bible into Konkani in a mini-pocket form.[] ಮಂಗಳೂರಿನಲ್ಲಿ ಕ್ರೈಸ್ತ ಧರ್ಮದ ರೋಮನ್ ಕಥೋಲಿಕತೆಯನ್ನು ಪ್ರಚುರಪಡಿಸಿದುದಲ್ಲದೇ, ಸ್ಥಳೀಯ ಜನರೊಂದಿಗೆ ಕೋಮು ಸೌಹಾರ್ದವನ್ನು ಬೆಳೆಸುವಲ್ಲಿ ಶ್ರಮವಹಿಸಿದ್ದಾರೆ.[]

ಮುಂದೆ ನೋಡಿ

ಬದಲಾಯಿಸಿ

ಸೈಟೇಶನ್ಸ್

ಬದಲಾಯಿಸಿ
  1. ೧.೦೦ ೧.೦೧ ೧.೦೨ ೧.೦೩ ೧.೦೪ ೧.೦೫ ೧.೦೬ ೧.೦೭ ೧.೦೮ ೧.೦೯ ೧.೧೦ ೧.೧೧ ೧.೧೨ ೧.೧೩ ೧.೧೪ ೧.೧೫ ೧.೧೬ ೧.೧೭ ೧.೧೮ ೧.೧೯ "Rev. Dr. Aloysius P. D'Souza (Mangalorean Star: May, 2006)". Mangalorean.com. ಮೇ 2006. Archived from the original on 14 ಮಾರ್ಚ್ 2014. Retrieved 15 ಜನವರಿ 2012.
  2. ೨.೦ ೨.೧ ೨.೨ ೨.೩ ೨.೪ ೨.೫ ೨.೬ ೨.೭ Lobo 2000, p. 225

ಉಲ್ಲೇಖಗಳು

ಬದಲಾಯಿಸಿ

ಬಾಹ್ಯ ಆಧಾರಗಳು

ಬದಲಾಯಿಸಿ

ಟೆಂಪ್ಲೇಟು:BishopsofMangalore