ಅಲಿ ಲಾರಿಜಾನಿ ಪ್ರಸಕ್ತ ಇರಾನ್ ಸಂಸತ್ತಾದ ಮಜ್ಲಿಸ್ ನ ಸಭಾಪತಿ ಆಗಿ ಕಾರ್ಯ ನಿರ್ವಹಣೆ ಗೈಯ್ಯುತ್ತಿರುವ ರಾಜಕಾರಣಿ.[೧]ಇರಾನ್ ಸೈನ್ಯದ ಭದ್ರತಾ ಮಂಡಳಿಯ ಕಾರ್ಯದರ್ಶಿ ಆಗಿ ಪ್ರಸಿದ್ಧರಾದ ಅಲಿ, ಇರಾನ್ ಅಣ್ವಸ್ತ್ರ ಕಾರ್ಯಕ್ರಮದ ಕಾರ್ಯದರ್ಶಿಯೂ ಹೌದು.[೨]

Ali Larijani in meeting with Malian Par. Chairman Issaka Sidibé 02.jpg

ಜನನಸಂಪಾದಿಸಿ

ಅಲಿ ಲಾರಿಜಾನಿ ೨೩ ಜೂನ್ ೧೯೫೭ರಲ್ಲಿ ಇರಾಕ್ ದೇಶದ ನಜಾಫ್ ಪ್ರಾಂತ್ಯದಲ್ಲಿ ಜನಿಸಿದರು. [೩]ಅಲಿರ ತಂದೆ ಮಲುವಿಯಾಗಿದ್ದ ಅಯಾತುಲ್ಲಾ ಮಿರ್ಜ಼ಾ ಹಷೀಂ ಅಮೋಲಿ.ಮೂಲತಃ ಇರಾನ್ ನವರಾದರೂ, ಅಂದಿನ ಇರಾನ್ ರಾಜ ರೇಜ಼ಾ ಷಾರ ಒತ್ತಡ ತಾಲಲಾರದೆಯೇ ಇರಾಕಿನ ನಜ಼ಾಫ಼್ ಪ್ರಾಂತ್ಯಕ್ಕೆ ಪಲಾಯನ ಮಾಡಿದ ಅಯಾತುಲ್ಲ, ಬಾಲಕ ಅಲಿಗೆ ೪ ವರ್ಷ ವಯಸ್ಸು ಆದಗ, ೧೯೬೧ರಲ್ಲಿ ಇರಾನಿಗೆ ಮರಳಿದರು.[೪]

ಓದುಸಂಪಾದಿಸಿ

ಕಂಪ್ಯೂಟರ್ ಶಾಸ್ತ್ರ ಮತ್ತು ಗಣಿತದಲ್ಲಿ ಪದವಿ ಪಡೆದ ಅಲಿ, ಆರ್ಯಮೆಹರ್ ವಿಶ್ವೈದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪಾಶ್ಚಿಮಾತ್ಯ ತತ್ವಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದರು. ಇಮ್ಮಾನುವೆಲ್ ಕ್ಯಾಂತ್, ಕ್ರಿಪ್ಕೆ ಮತ್ತು ಡೇವಿಡ್ ಲೂಯೀಸ್ ರ ಮೇಲೆ ಪುಸ್ತಕಗಲನ್ನು ಪ್ರಕಟಣೆ ಮಾಡಿದ ಅಲಿ, ಮುತಾಜ಼ಾ ಮೋತಹ್ಹಾರಿ ಸಲಹೆ ಮೇರೆಗೆ ಕಂಪ್ಯೂಟರ್ ಶಾಸ್ತ್ರದಿಂದ ತತ್ವಶಾಸ್ತ್ರಕ್ಕೆ ತಮ್ಮ ಅಧ್ಯಯನವನ್ನು ಬದಲಿ ಮಾಡಿಕೊಂಡರು.

ವೃತ್ತಿಸಂಪಾದಿಸಿ

ಇರಾನಿನ ಸೇನೆ ಆದ ರೆವಲ್ಯೂಷನರಿ ಗಾರ್ಡ್ಸ್ ನಲ್ಲಿ ದಳಪತಿ ಆಗಿ ಕೆಲಸ ಮಾಡಿದ ಅಲಿ ಲಾರಿಜಾನಿ, ೧೯೮೧ರಿಂದ ೧೯೮೯ರವ ಅವಧಿಗೆ ಕಾರ್ಮಿಕ ಮತ್ತು ಸಮಾಜ ಕಲ್ಯಾಣ ಇಲಾಖೆಯ ಉಪ ಮಂತ್ರಿ ಆಗಿ ಕೆಲಸ ಮಾಡಿದರು. ಮೀರ್ ಹುಸೇನ್ ಮೌಸವಿ ಈ ನೇಮಕಾತಿ ಮಾಡಿದ್ದರು. ಅಕ್ಬರ್ ಹಷೇಮಿ ರಫ್ಸಂಜಾನಿ ಇರಾನ್ ದೇಶದ ಅಧ್ಯಕ್ಷರಾಗಿ ನೇಮಕ ಆದಾಗ, ಅವರ ಸಂಪುಟದಲ್ಲಿ ಹೊಸತಾಗಿ ಶುರು ಮಾಡಿದ ಮಾಹಿತಿ ಮತ್ತು ಸಂಪರ್ಕ ಖಾತೆಗೆ ಅಲಿ ಲಾರಿಜಾನಿ ರನ್ನು ನಿಯುಕ್ತಿ ಮಾಡಲಾಯಿತು. ೧೯೯೨ರಲ್ಲಿ ಮೊಹಮದ್ ಖಟಾಮಿ ರಾಜೀನಾಮೆ ಇತ್ತಾಗ ಅಲಿ ಲಾರಿಜಾನಿರನ್ನು ಸಂಸ್ಕೃತಿ ಮತ್ತು ಇಸ್ಲಾಮೀ ಪೋಷಣೆ ಖಾತೆಗೆ ಮಂತ್ರಿ ಆಗಿ ನೇಮಕ ಮಾಡಲಾಯಿತು. ಒಳ್ಳೆ ಕೆಲಸಗಾರರಾದ ಅಲಿ ಲಾರ್ಜಿಆನಿ, ಆ ಹುದ್ದೆಯಿಂದ ಇರಾನ್ ದೇಶದ ವಾರ್ತಾ ಖಾತೆಗೆ ಮಂತ್ರಿ ಆಗಿ ನಿಯುಕ್ತಿಗೊಂಡರು. ಆ ಹುದ್ದೆಯಲ್ಲಿ ಮೊದಲು ಇದ್ದ ಮೊಹಮದ್ ಹಷೇಮಿ ರಫ್ಸಂಜಾನಿ ರನ್ನು ವಜಾ ಮಾಡಿ ಅಲಿ ಲಾರಿಜಾನಿರನ್ನು ನೇಮಕ ಮಾಡಲಾಯಿತು.[೫] ೨೦೦೪ರವರೆಗೆ ಆ ಹುದ್ದೆಯನ್ನು ಅಲಿ ನಿಭಾಯಿಸಿದರು. ೨೦೦೪ರಲ್ಲಿ ಅಯಾತುಲ್ಲಾಅಲಿ ಖೊಮೇನಿರಿಗೆ ಭದ್ರತಾ ಸಲಹೆಗಾರರಾಗಿ ಅಲಿ ರನ್ನ ನೇಮಿಸಲಾಯಿತು.

ರಕ್ಷಣೆ ಇಲಾಖೆಸಂಪಾದಿಸಿ

೨೦೦೫ರ ಚುನಾವಣೆಯಲ್ಲಿ ಅಧ್ಯಕ್ಷ ಪದವಿಗೆ ಸೆಣಸಿದ ಅಲಿ ,೬% ಮತ ಪಡೆದರು.೨೦೦೫ರಲ್ಲಿ ಅಲಿ ಲಾರಿಜಾನಿ ರಾಷ್ಟ್ರೀಯ ರಕ್ಷಣ ಸಮಿತಿಯ ಕಾರ್ಯದರ್ಶಿ ಆಗಿ ನೇಮಕಗೊಡರು. ಹಸನ್ ರೌಹಾನಿ ರಿಂದ ಈ ಹುದ್ದೆ ಪಡೆದ ಅಲಿ ಲಾರಿಜಾನಿ, ವಿಶ್ವಸಂಸ್ಥೆ ಮತ್ತು ಇತರ ದೇಶಗಳ ಒತ್ತಡದ ಹೊರತಾಗಿಯೂ. ಇರಾನ್ ತನ್ನ ಅಣ್ವಸ್ತ್ರ ಕಾರ್ಯಕ್ರಮವನ್ನು ನಿಲ್ಲಿಸದು ಎಂಬ ಕಟು ನಿರ್ಧಾರ ತಳೆದರು. ವಿಶ್ವದ ಎಲ್ಲೆಡೆ, ಅಲಿ ಲಾರಿಜಾನಿ ಸಂಧಾನಕಾರರಾಗಿ ಕಾಣಿಸಿಕೊಂಡರು. ೨೦೦೭ರಲ್ಲಿ ಈ ಕಟು ನಿರ್ಧಾರದ ಕಾರಣ, ಅಲಿ ಲಾರಿಜಾನಿ ಎಲ್ಲೆಡೆ ಖಳನಾಯಕರಾಗಿ ಹೊರಹೊಮ್ಮಿದರು. ೨೦೦೮ರ ಚುನಾವಣೆಯಲ್ಲಿ ಅಹ್ಮದಿನೆಜಾದ್ ರೊಂದಿಗಿನ ಭಿನ್ನ ಅಭಿಪ್ರಾಯಗಳ ಕಾರಣ, ಅಲಿ ಸರ್ಕಾರ ವನ್ನು ಸೇರದೆಯೇ, ಮಜ್ಲಿಸ್ ಸಂಸತ್ತಿನ ಸಭಾಪತಿ ಆಗಿ ಆಯ್ಕೆ ಆದರು. ಸಯೀದ್ ಜಲೀಲಿ ಅಲಿ ಲಾರಿಜಾನಿರ್ ಸ್ಥಾನಕ್ಕೆ ಬಂದರು.[೬]೨೦೧೨ರಲ್ಲಿ ಸಭಾಪತಿ ಹುದ್ದೆಗೆ ಮರು ನೇಮಕ ಆದರು.[೭]

ಮೊಹಮದ್ ಎಲ್ ಬರ್ದಾಯ್ ಜೊತೆಗಿನ ಘರ್ಷಣೆಯ ಕಾರಣ, ಅಲಿ ಲಾರಿಜಾನಿ ವಿಶ್ದ ಎಲ್ಲೆಡೆ ಹೆಸರುವಾಸಿ ಆಗಿದ್ದರು.[೮]

ಕುಟುಂಬಸಂಪಾದಿಸಿ

ಅಲಿ ಲಾರಿಜಾನಿ ರ ಪತ್ನಿ ಪರೀದೆ. ಇವರಿಗೆ ಇಬ್ಬರು ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳು.

ಉಲ್ಲೇಖಗಳುಸಂಪಾದಿಸಿ

  1. http://www.tabnak.ir/fa/news/215166/%D8%AA%D8%B5%D9%88%DB%8C%D8%B1-%D8%AC%D8%A7%D9%84%D8%A8-%D8%B4%D9%86%D8%A7%D8%B3%D9%86%D8%A7%D9%85%D9%87-%D8%B9%D9%84%DB%8C-%D9%84%D8%A7%D8%B1%DB%8C%D8%AC%D8%A7%D9%86%DB%8C
  2. http://www.bbc.com/persian/iran/2012/06/120605_l03_iran_majlis_speaker.shtml
  3. http://www.tandfonline.com/doi/abs/10.1080/09700161.2012.689528
  4. http://www.khabaronline.ir/detail/14665/Politics/government
  5. https://www.pbs.org/wgbh/pages/frontline/tehranbureau/2011/03/rafsanjanis-exit-from-power-what-next.html
  6. https://www.theguardian.com/world/2008/may/28/iran.middleeast
  7. https://www.stratfor.com/analysis/iran-implications-ahmadinejads-parliamentary-defeat
  8. http://www.foxnews.com/story/0,2933,303739,00.html