ಸಯೀದ್ ಜಲೀಲಿ ಇರಾನಿನ ರಾಜಕಾರಣಿ. ೨೦೦೭-೨೦೧೩ರ ಅವಧಿಗೆ ಇರಾನಿನ ರಕ್ಷಣ ಸಮಿತಿಯ ಕಾರ್ಯದರ್ಶಿ ಆಗಿದ್ದರು.[೧]

ಜನನ ಬದಲಾಯಿಸಿ

ಸೆಪ್ಟೆಂಬರ್ ೧೯೬೫ರಲ್ಲಿ ಮಶ್ಶದ್ ಎಂಬಲ್ಲಿ ಜನಿಸಿದ ಸಯೀದ್ ಜಲೀಲಿ, ಇಮಾಂ ಸಾದಿಕ್ ವಿಶ್ವವಿದ್ಯಾಲಯದಲ್ಲಿ ರಾಜಕೀಯ ಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದರು. ಮೊಹಮದ್ ಪೈಗಂಬರರ ವಿದೇಶಾಂಗ ನೀತೀವರ ಡಾಕ್ಟರೇಟ್ ವಿಷಯ ಆಗಿತ್ತು. ೧೯೮೦-೮೮ರ ಇರಾನ್ - ಇರಾಕ್ ಯುದ್ಧದಲ್ಲಿ ಸೇನೆಗೆ ಸೇರಿ ಹೋರಾಡಿದ ಸಯೀದ್ ಜಲೀಲಿ, ೧೯೮೬ರಲ್ಲಿ ತಮ್ಮ ಬಲಗಾಲಿನ ಪಾದದ ಭಾಗವನ್ನು ಕಳೆದುಕೊಂಡರು. ಈ ಕಾರಣಕ್ಕೆ ಸಯೀದ್ ಜಲೀಲಿರನ್ನು ಜೀವಂತ ಹುತಾತ್ಮ ಎಂದು ಬಣ್ಣಿಸಲು ಮೊದಲು ಮಾಡಿದರು.

ವೃತ್ತಿ ಬದಲಾಯಿಸಿ

ತಾವು ಓದಿದ ಇಮಾಂ ಸಾದಿಕ್ ವಿಶ್ವವಿದ್ಯಾಲಯದಲ್ಲಿಯೇ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಸಯೀದ್ ಜಲೀಲಿ, ೧೯೮೯ರಲ್ಲಿ ವಿದೇಶಾಂಗ ಖಾತೆಗೆ ಸಹಾಯಕ ಆಗಿ ಹೆಚುವರಿಯಾಗಿ ನಿಯುಕ್ತಿಗೊಂಡರು. ೧೯೯೫-೯೬ರಲ್ಲಿ ವಿದೇಶಾಂಗ ಖಾತೆ ಅಡಿಯಲ್ಲಿ ಬರುವ ತಪಾಸಣೆ ಕಛೇರಿಗೆ ಸಯೀದ್ ಜಲೀಲಿ ನಿರ್ದೇಶಕರಾಗಿ ನೇಮಕಗೊಂಡರು. ಇವರ ಕಾರ್ಯವನ್ನು ಮೆಚ್ಚಿ, ಅಯಾತುಲ್ಲ ಖೊಮೇನಿ, ಸಯೀದ್ ಜಲೀಲಿರನ್ನು ೨೦೦೨ರಲ್ಲಿ ಇರಾನಿನ ರಕ್ಷಣ ಸಮಿತಿಯ ಸದಸ್ಯರನ್ನಾಗಿಸಿ ನೇಮಕ ಮಾಡಿದರು. ೩ ವರ್ಷ ಆ ಹುದ್ದೆಯಲ್ಲಿದ್ದ ಸಯೀದ್, ೨೦೦೫ರಲ್ಲಿ ಮೊಹಮದ್ ಅಹ್ಮೆದಿನಿಜಾದ್ ರಾಷ್ಟ್ರದ ಅಧ್ಯಕ್ಷರಾಗಿ ಆಯ್ಕೆ ಆದಾಗ್, ವಿದೇಶಾಂಗ ಖಾತೆಯ ಪ್ರಮುಖ ಹುದ್ದೆ ಆದ ಯೂರೋಪ್ ಮತ್ತು ಅಮೇರಿಕಾ ವಿಭಾಗದ ಹೊಣೆ ಹೊತ್ತರು. ೨೦೦೭ರವರೆಗೆ ಈ ಹುದ್ದೆಯನ್ನು ಮತ್ತು ಮೊಹಮದ್ ಅಹ್ಮೆದಿನಿಜಾದ್ ರಿಗೆ ಸಲಹೆಗಾರನಾಗಿ ಕಾರ್ಯ ನಿರ್ವಹಿಸಿದರು. ಮೊಹಮದ್ ಅಹ್ಮೆದಿನಿಜಾದ್ ಇವರ ಕಾರ್ಯದಕ್ಷತೆಯನ್ನು ಮೆಚ್ಚಿ ಇರಾನಿನ ರಕ್ಷಣ ಸಮಿತಿಯ ಕಾರ್ಯದರ್ಶಿ ಹುದ್ದೆಗೆ ನೇಮಕ ಮಾಡಿದರು. ಇರಾನಿನ ಸಂಪೂರ್ಣ ಅಣ್ವಸ್ತ್ರ ಕಾರ್ಯಕ್ರಮ, ಕಾರ್ಯದರ್ಶಿಯ ಹೊಣೆ ಆಗಿರುತ್ತದೆ. ೬ ವರ್ಷ ಈ ಗುರುತರ ಹೊಣೆಯನ್ನು ಯಶಸ್ವಿ ಆಗಿ ಸಯೀದ್ ಜಲೀಲಿ ನಿರ್ವಹಣೆ ಮಾಡಿದರು.೨೦೧೩ರಲ್ಲಿ ಇವರನ್ನು ಖೊಮೇನಿ ನಾಯಕತ್ವದ ವೇಗವರ್ಧಕ ಆಡಳಿತ ಸಮಿತಿಯ ಸದಸ್ಯ ಆಗಿ ಬಡ್ತಿ ನೀಡಲಾಯಿತು.[೨][೩]

೨೦೧೩ ಅಧ್ಯಕ್ಷೀಯ ಚುನಾವಣೆ ಬದಲಾಯಿಸಿ

೨೦೧೩ರ ಅಧ್ಯಕ್ಷೀಯ ಚುನಾವಣೆಗೆ ನಿಂತ ಸಯೀದ್, ೩ನೆಯ ಸ್ಥಾನ ಪಡೆದರು.[೪]ಹಸನ್ ರೌಹಾನಿ ರಾಷ್ಟ್ರದ ಅಧ್ಯಕ್ಷ ಆಗಿ ಆಯ್ಕೆ ಆದರು. ಮೊಹಮದ್ ಬಘೇರ್ ಘಲಿಬಾಫ್ ಎರಡನೆಯ ಸ್ಥಾನ ಪಡೆದರು.[೫]

ಕುಟುಂಬ ಬದಲಾಯಿಸಿ

ಸಯೀದ್ ಜಲೀಲಿ ಇಂಗ್ಲೀಷ್ ಮತ್ತು ಅರೇಬಿಕ್ ಭಾಷೆಯನ್ನು ಸುಲಲಿತವಾಗಿ ಮಾತನಾಡಬಲ್ಲರು. ಇವರ ಪತ್ನಿ ಫ಼ಾತಿಮಾ ಸಜಾದಿ ವೈದ್ಯರು. ೧೯೯೨ರಲ್ಲಿ ವಿವಾಹವಾದ ಇವರಿಗೆ ಹಮೀದ್ ಎಂಬ ಪುತ್ರ ಇದ್ದಾನೆ. ಸರಳ ಜೀವನವನ್ನು ಬಯಸುವ ಸಯೀದ್, ಸ್ವ್ತತಃ ಕಾರು ಚಲಾಯಿಸಿ ಕಛೇರಿಗೆ ತೆರಳುತ್ತಾರೆ.[೬]

ಅಣ್ವಸ್ತ್ರ ನಿಲುವು ಬದಲಾಯಿಸಿ

ಇರಾನಿನ ರಕ್ಷಣ ಸಮಿತಿಯ ಸದಸ್ಯರಾಗಿ ಮತ್ತು ದೀರ್ಘ ಕಾಲ ಕೆಲಸ ಮಾಡೀದ ಸಯೀದ್, ಇರಾನಿನ ಅಣ್ವಸ್ತ್ರ ಕಾರ್ಯಕ್ರಾದ ಪ್ರಬಲ ಪ್ರತಿಪಾದಕರು. ೧೯೮೦ರ ಮುನ್ನ ಅಮೇರಿಕಾದ ಕಂಪನಿಗಳು ಇರಾನಿನಲ್ಲಿ ಪರಮಾಣು ಘಟಕದ ಸ್ಥಾಪನೆಗೆ ಇಂಬಾಗಿ ನಿಂತು ಕೆಲಸ ಮಾಡಿದ್ದನ್ನು ಎತ್ತಿ ತೋರಿಸುವ ಸಯೀದ್, ಇರಾನಿನ ಕ್ರಾಂತಿ ಆದ ಕೂಡಲೇ, ಅಮೇರಿಕೆ ಮತ್ತು ಯೂರೋಪ್ ಖಂಡದ ನಿಲುವ ಬದಲಾವನೆ ಅದ್ದದ್ದು ಘಾತಕ ಎಂದು ಬಣ್ಣಿಸುತ್ತಾರೆ. [೭]ವೈಕಿ ಲೀಕ್ಸ್ ಕಾಂಡದಲ್ಲಿ ಸಯೀದ್ ಬಗ್ಗೆ ಒಂದು ಈಮೇಲ್, ಇರಾನ್ ಕ್ರಾಂತಿಯ ಶಿಶು ಈ ಸಯೀದ್ ಎಂದು ವರ್ಣನೆ ಮಾಡುತ್ತದೆ. ಇಸ್ಲಾಂ ಅಪಾಯದಲ್ಲಿದೆ ಎಂದೂ, ಇರಾನಿನ ದೊರೆ ಷಾ ಪೆಹ್ಲವಿಯ ಸುಧಾರಣೆಗಳನ್ನು ಹಿಮ್ಮೆಟ್ಟಿಸಿ, ಇಸ್ಲಾಂ ಮೂಲಭೂತವಾದವನ್ನು ಸ್ಥಾಯಿ ಆಗಿಸಿದ ಕ್ರಾಂತಿಯ ಉತ್ಪನ್ನ ಸಯೀದ್ ರಂತಹ ನೇತಾರರು ಎಂಬುದು ಹಲವು ವಿದ್ವಾಂಸರ ವಾದ.

ಉಲ್ಲೇಖಗಳು ಬದಲಾಯಿಸಿ

  1. http://isna.ir/fa/news/92032011547/%D8%AA%D9%85%D8%A7%D9%85-%D8%A7%D8%B7%D9%84%D8%A7%D8%B9%D8%A7%D8%AA-%D8%AE%D8%A7%D9%86%D9%88%D8%A7%D8%AF%DA%AF%DB%8C-%DA%A9%D8%A7%D9%86%D8%AF%DB%8C%D8%AF%D8%A7%D9%87%D8%A7%DB%8C-%D8%B1%DB%8C%D8%A7%D8%B3%D8%AA-%D8%AC%D9%85%D9%87%D9%88%D8%B1%DB%8C
  2. "ಆರ್ಕೈವ್ ನಕಲು". Archived from the original on 2020-10-25. Retrieved 2018-11-30.
  3. http://www.foxnews.com/story/0,2933,303739,00.html
  4. https://www.nytimes.com/2013/05/29/world/middleeast/saeed-jalili-emerges-as-establishment-favorite-in-irans-presidential-race.html?pagewanted=all&_r=0
  5. http://www.mei.edu/content/khamenei-and-irans-2013-elections
  6. "ಆರ್ಕೈವ್ ನಕಲು". Archived from the original on 2020-02-17. Retrieved 2018-11-30.
  7. "ಆರ್ಕೈವ್ ನಕಲು". Archived from the original on 2015-10-05. Retrieved 2018-11-30.