ಅಲಿಪುರ ಸಂಕೇತ ಭಾಷೆ

ಅಲಿಪುರ ಸಂಕೇತ ಭಾಷೆಯು ಭಾರತದ ಒಂದು ಹಳ್ಳಿಯ ಸಂಕೇತ ಭಾಷೆಯಾಗಿದೆ . [೧] ಇದನ್ನು ಕರ್ನಾಟಕದ ಅಲಿಪುರ್ ಪಟ್ಟಣದಲ್ಲಿ ಮಾತನಾಡುತ್ತಾರೆ. ಹೆಚ್ಚಿನ ಮಟ್ಟದಲ್ಲಿ ಹುಟ್ಟು ಕಿವುಡರಾಗಿರುವ ಶಿಯಾ ಮುಸ್ಲಿಮರು ಈ ಭಾಷೆಯನ್ನು ಹೆಚ್ಛಾಗಿ ಬಳಸುತ್ತಾರೆ. ಅಲಿಪುರದಲ್ಲಿ ೧೫೦ ರಿಂದ ೨೫೦ ಕಿವುಡ ಜನರಿದ್ದಾರೆ, [೨]ಹಾಗೂ ೨೬೦೦೦ ಜನಸಂಖ್ಯೆಯಲ್ಲಿ (೨೦೧೫ ರಲ್ಲಿ) ಸುಮಾರು ೧೦೦೦೦ ಕಿವಿ ಸರಿಯಾಗಿ ಕೇಳುವ ಜನರು ಈ ಭಾಷೆಯನ್ನು ಮಾತನಾಡುತ್ತಾರೆ. [೧] ಭಾಷೆಗೆ ಅಧಿಕೃತ ಸ್ಥಾನಮಾನವಿಲ್ಲ ಅಲ್ಲದೇ ಕಿವುಡ ಮಕ್ಕಳು ಯಾವುದೇ ಔಪಚಾರಿಕ ಶಿಕ್ಷಣವನ್ನು ಪಡೆಯುವುದಿಲ್ಲ. ಈ ಅಂಶದ ಜೊತೆಗೆ ಭಾರತೀಯ ಸಂಕೇತ ಭಾಷೆಯು ಹೆಚ್ಚುತ್ತಿರುವ ಪ್ರಭಾವದ ಪರಿಣಾಮ ಅಲಿಪುರ್ ಸಂಕೇತ ಭಾಷೆಯ (ಅಥವಾ ಎಪಿಎಸ್ಎಲ್ [೩] ) ಉಳಿವಿಗೆ ಬೆದರಿಕೆ ಹಾಕುತ್ತದೆ. ೨೦೧೨ ರಲ್ಲಿ ಅಧಿಕೃತವಾಗಿ ಭಾಷೆಯನ್ನು ದಾಖಲಿಸಿದ ಮೊದಲ ವ್ಯಕ್ತಿ ಎಂದರೇ ಸಿಬಾಜಿ ಪಾಂಡಾ. [೪]

ಉಪಯೋಗಕ್ಕೆ ಚರ್ಚೆ ಪುಟ ನೋಡಿ
Signed 
ಪ್ರದೇಶಗಳು:
ಕರ್ನಾಟಕ
ಒಟ್ಟು signers:
ಭಾಷಾ ಕುಟುಂಬ: ಹಳ್ಳಿಯ ಸಂಕೇತ
ಭಾಷೆಯ ಸಂಕೇತಗಳು
ISO 639-1: ಯಾವುದೂ ಇಲ್ಲ
ISO 639-2: sgn
ISO/FDIS 639-3: ಯಾವುದೂ ಇಲ್ಲ

ಟೆಂಪ್ಲೇಟು:Infobox ಭಾಷೆ/signnotice

ತನ್ನ ಅಧ್ಯಯನದ ಸಮಯದಲ್ಲಿ, ಪಾಂಡಾ ಅವರು ಅಲಿಪುರದಲ್ಲಿ ಕಿವುಡ ಜನಸಂಖ್ಯೆಯ ಪ್ರಮಾಣವು ಸರಿಸುಮಾರು ೦.೭೫% ರಷ್ಟಿದೆ ಎಂದು ಕಂಡುಹಿಡಿದರು. ಇದು ರಾಷ್ಟ್ರೀಯ ಸರಾಸರಿಯಲ್ಲಿ ೦.೪೧%ರಷ್ಟೀದೆ. (೨೦೧೧ ರ ಜನಗಣತಿಯ ಡೇಟಾ).

ಅಲಿಪುರದಲ್ಲಿ ಕಿವುಡ ಸಮುದಾಯವು ಪಾಂಡಾ ಅವರ ಸಂಶೋಧನೆಗಳಲ್ಲಿ ಸಹಾಯ ಮಾಡಿತು, ವಿಶೇಷವಾಗಿ ೫೩ ವರ್ಷದ ಮಾಜಿ ಗ್ರಾಮ ಪಂಚಾಯತ್ ಮುಖ್ಯಸ್ಥರಾದ ಮೀರ್ ಫಾಜಿಲ್ ರಜಾ ಅವರು ಕಿವುಡರಿಗಾಗಿ ಅಲಿಪುರ ಯೂನಿಟಿ ಸೊಸೈಟಿಯನ್ನು ಸ್ಥಾಪಿಸಲು ಸಹಾಯ ಮಾಡಿದರು. ಶ್ರೀ ಫಾಜಿಲ್ ರಜಾ ಅವರು ಇಂಗ್ಲಿಷ್‌ನಿಂದ ಸಂಕೇತ ಭಾಷೆಗೆ ಭಾಷಾಂತರಿಸಲು ಸಹಾಯ ಮಾಡಿದರು, ಸಮುದಾಯದ ಇತರ ಸದಸ್ಯರ ಸಹಾಯದಿಂದ ಸಮೀಕ್ಷೆಯನ್ನು ನಡೆಸಿದರು ಹಾಗೂ ದಾಖಲಾತಿಗಾಗಿ ಮಾಹಿತಿದಾರರಾಗಿ ಸೇವೆ ಸಲ್ಲಿಸಿದರು.

ಪಟ್ಟಣದಲ್ಲಿ ಎಂಡೋಗಾಮಸ್ ವಿವಾಹಗಳು ಕಿವುಡರ ಅಧಿಕ ಜನಸಂಖ್ಯೆಗೆ ಕಾರಣವಾಗಿವೆ, ಆದರೆ ಕಿವುಡ ವ್ಯಕ್ತಿಯು ಕಿವುಡ ಮಹಿಳೆಯನ್ನು ಮದುವೆಯಾಗಲು ಸಾಧ್ಯವಿಲ್ಲ. ಪಟ್ಟಣದಲ್ಲಿ ಯಾವುದೇ ಸಾರ್ವಜನಿಕ ದಾಖಲೆಗಳಿಲ್ಲದ ಕಾರಣ, ಈ ಮಾಹಿತಿಯ ಸತ್ಯಾಸತ್ಯತೆಯನ್ನು ಸ್ಥಾಪಿಸುವುದು ಕಷ್ಟಕರವಾಗಿದೆ. [೫]

ಸಂಕೇತ ಭಾಷೆಯನ್ನು ಅನೇಕ ಕಿವಿ ಕೇಳುವ ಜನರು ಬಳಸುತ್ತಾರೆ, ಮತ್ತು ಅವರಲ್ಲಿ ನಿರರ್ಗಳತೆಯ ಮಟ್ಟವು ಬಹಳ ವ್ಯತ್ಯಾಸಗೊಳ್ಳುತ್ತದೆ. [೬]

ಭಾಷೆಯು ಸಂಖ್ಯೆಗಳನ್ನು ವ್ಯಕ್ತಪಡಿಸಲು ವಿವಿಧ ರಿತೀಯ ವಿಧಾನಗಳನ್ನು ಹೊಂದಿದೆ, [೭] ಹೆಚ್ಚಿನ ಸಂಕೀರ್ಣತೆಯೊಂದಿಗೆ ಸಂಖ್ಯೆಗಳನ್ನು ವ್ಯಕ್ತಪಡಿಸಲು ಸೇರ್ಪಡೆಗಳು ಮತ್ತು ವ್ಯವಕಲನಗಳನ್ನು ಬಳಸುತ್ತದೆ. ದೊಡ್ಡ ಸಂಖ್ಯೆಗಳನ್ನು ವ್ಯಕ್ತಪಡಿಸಲು ಬಾಯಿಯ ಚಲನೆಯನ್ನು ಸೇರಿಸಬಹುದು. [೮]

ಪಟ್ಟಣದ ಬಹುಪಾಲು ನಿವಾಸಿಗಳು ಶಿಯಾ ಮುಸ್ಲಿಮರು. ಆದಿಲ್ ಶಾಹಿ ರಾಜವಂಶದ ಪತನದ ನಂತರ ಶಿಯಾ ಮುಸ್ಲಿಂ ಜನಸಂಖ್ಯೆಯು ಬಿಜಾಪುರದಿಂದ ಅಲಿಪುರಕ್ಕೆ ಬಂದಿತು ಮತ್ತು ಅವರ ಸಂಸ್ಕೃತಿ ಮತ್ತು ಇತಿಹಾಸದ ಅವರು ಬಗ್ಗೆ ಹೆಮ್ಮೆಪಡುತ್ತಾರೆ.

ಯುವ ಪೀಳಿಗೆಯಲ್ಲಿ ಹಳ್ಳಿಯ ಸಂಕೇತ ಭಾಷೆಯನ್ನು ಬಳಸುವ ಆಸಕ್ತಿ ಕಡಿಮೆಯಾಗಿದೆ. ಚಲನಶೀಲತೆ ಮತ್ತು ತಂತ್ರಜ್ಞಾನವು ಅವರಿಗೆ ಇಂಟರ್ನೆಟ್‌ಗೆ ಪ್ರವೇಶವನ್ನು ನೀಡುತ್ತದೆ ಮತ್ತು ಯುವಕ/ಯುವತಿಯರು ಬೆಂಗಳೂರಿಗೆ ಪ್ರಯಾಣ ಬೆಳಸುತ್ತಾರೆ. ಅಲ್ಲಿ ಅವರು ಭಾರತೀಯ ಸಂಕೇತ ಭಾಷೆ ಮತ್ತು ಅಮೇರಿಕನ್ ಸಂಕೇತ ಭಾಷೆಯನ್ನು ಕಲಿಯುತ್ತಾರೆ. ಔಪಚಾರಿಕ ಶಿಕ್ಷಣದ ಕೊರತೆಯು ಸ್ಕ್ರಿಪ್ಟ್-ಆಧಾರಿತ ಅಪ್ಲಿಕೇಶನ್‌ಗಳನ್ನು (ಪಠ್ಯ ಸಂದೇಶ ಕಳುಹಿಸುವಿಕೆಯಂತಹ) ಬಳಸಲು ಸಾಧ್ಯವಾಗುವಂತೆ ತಡೆಗೋಡೆಯಾಗಿದೆ ಮತ್ತು ಹೆಚ್ಚಿನ ಉದ್ಯೋಗಕ್ಕೇ ಅವಕಾಶವಿಲ್ಲ. [೯]

ಭಾಷೆಯ ಪರಿಸ್ಥಿತಿ ಮತ್ತು ಉತ್ತಮ ತಿಳುವಳಿಕೆಯು ಜನಸಂಖ್ಯೆಗೆ ಪ್ರಯೋಜನಕಾರಿಯಾಗಿದೆ. ನೊಬೆಲ್ ಶಾಲೆ (ಗ್ರಾಮದಲ್ಲಿ ಖಾಸಗಿ ಶಾಲೆ) ಇತ್ತೀಚೆಗೆ ಕಿವುಡ ಮಕ್ಕಳಿಗಾಗಿ ತರಗತಿಗಳನ್ನು ಪ್ರಾರಂಭಿಸಿದೆ. ಆದರೆ, ವಿಶೇಷ ಮಕ್ಕಳಿಗಾಗಿ ಸರ್ಕಾರಿ ಶಾಲೆಯನ್ನು ಮತ್ತೆ ತೆರೆಯುವ ಭರವಸೆ ಇದೆ. [೧೦]

ಉಲ್ಲೇಖಗಳು ಬದಲಾಯಿಸಿ

  1. ೧.೦ ೧.೧ "Alipur Sign Language". The Endangered Languages Project. Retrieved 2017-07-24.
  2. Sobaji, Panda. "Investigation of an endangered village sign language in India". Endangered Languages Archive at SOAS University of London. Retrieved 2017-07-24.
  3. "Alipur Sign Language (APSL)". University of Central Lancashire. CATALOGUING ENDANGERED SIGN LANGUAGES. Archived from the original on 2017-09-10. Retrieved 2017-07-24.
  4. Panda, Sibaji (2012). "Alipur Sign Language: A sociolinguistic and cultural profile". Sign Languages in Village Communities. Sign Language Typology [SLT]. Basel: DE GRUYTER. pp. 253–260. doi:10.1515/9781614511496.353. ISBN 9781614511496.
  5. Zeshan, Ulrike; Escobedo Delgado, Cesar Ernesto; Dikyuva, Hasan; Panda, Sibaji; de Vos, Connie (2016). "Cardinal numerals in rural sign languages: Approaching cross-modal typology". Linguistic Typology. Vol. 17. Basel: DE GRUYTER. pp. 357–396. ISSN 1613-415X.
  6. Panda, Sibaji (2012). "Alipur Sign Language: A sociolinguistic and cultural profile". Sign Languages in Village Communities. Sign Language Typology [SLT]. Basel: DE GRUYTER. pp. 253–260. doi:10.1515/9781614511496.353. ISBN 9781614511496.Panda, Sibaji (2012). "Alipur Sign Language: A sociolinguistic and cultural profile". Sign Languages in Village Communities. Sign Language Typology [SLT]. Basel: DE GRUYTER. pp. 253–260. doi:10.1515/9781614511496.353. ISBN 9781614511496.
  7. Friedman, Joshua J. (July 28, 2013). "Village sign languages, vanishing fast". Boston Globe. Retrieved 2017-07-24.
  8. Zeshan, Ulrike; Escobedo Delgado, Cesar Ernesto; Dikyuva, Hasan; Panda, Sibaji; de Vos, Connie (2016). "Cardinal numerals in rural sign languages: Approaching cross-modal typology". Linguistic Typology. Vol. 17. Basel: DE GRUYTER. pp. 357–396. ISSN 1613-415X.Zeshan, Ulrike; Escobedo Delgado, Cesar Ernesto; Dikyuva, Hasan; Panda, Sibaji; de Vos, Connie (2016). "Cardinal numerals in rural sign languages: Approaching cross-modal typology". Linguistic Typology. Vol. 17. Basel: DE GRUYTER. pp. 357–396. ISSN 1613-415X.
  9. Panda, Sibaji (2012). "Alipur Sign Language: A sociolinguistic and cultural profile". Sign Languages in Village Communities. Sign Language Typology [SLT]. Basel: DE GRUYTER. pp. 253–260. doi:10.1515/9781614511496.353. ISBN 9781614511496.Panda, Sibaji (2012). "Alipur Sign Language: A sociolinguistic and cultural profile". Sign Languages in Village Communities. Sign Language Typology [SLT]. Basel: DE GRUYTER. pp. 253–260. doi:10.1515/9781614511496.353. ISBN 9781614511496.
  10. Dikyuva, Hasan; Delgado, Cesar Ernesto Escobedo; Panda, Sibaji; Zeshan, Ulrique (2012). "Working with village sign language communities". Sign Languages in Village Communities. Sign Language Typology [SLT]. Basel: DE GRUYTER. pp. 313–404. doi:10.1515/9781614511496.313. ISBN 9781614511496.