1958-59ರಲ್ಲಿ ನಡೆಸಿದ ಉತ್ಖನನದಲ್ಲಿ ಹರಪ್ಪ ಸಂಸ್ಕೃತಿಯ ಅವಶೇಷಗಳು ಸಿಕ್ಕ ಗ್ರಾಮ. ದೆಹಲಿಯಿಂದ 45 ಕಿಮೀ ದೂರದಲ್ಲಿದೆ. ಇಲ್ಲಿ ಹರಪ್ಪ ಸಂಸ್ಕೃತಿಯ ಪದರಗಳ ಮೇಲೆ ಅನುಕ್ರಮವಾಗಿ ಚಿತ್ರಿತ ಬೂದು ಬಣ್ಣದ ಮಡಕೆಗಳ ಪದರಗಳೂ, ಉತ್ತರದ ಹೊಳಪು ಕಪ್ಪು ಬಣ್ಣದ ಮಡಕೆಗಳ ಪದರಗಳೂ ಶುಂಗರ ಕಾಲದ ಅವಶೇಷಗಳೂ ಕಂಡುಬಂದಿವೆ. ಇವು 4000 ವರ್ಷಗಳ ಹಿಂದಿನಿಂದ ಗಂಗಾ ಬಯಲಿನಲ್ಲಿ ಪಸರಿಸಿದ್ದ ವಿವಿಧ ಸಂಸ್ಕೃತಿಗಳ ಬಗ್ಗೆ ಮಾಹಿತಿ ದೊರಕಿಸಿಕೊಡುತ್ತವೆ.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: