ಅರ್ತುರ್ ರಸಿಜ಼ಾದೆ
ಅರ್ತುರ್ ರಸಿಜ಼ಾದೆ ಅಜರ್ ಬೈಜಾನ್ ದೇಶದ ಪ್ರಧಾನಿ ಆಗಿ ೨೨ ವರ್ಷ ಕಾಲ ಸೇವೆ ಸಲ್ಲಿಸಿದ ರಾಜಕಾರಣಿ. [೧]
ಜನನ
ಬದಲಾಯಿಸಿಅರ್ತುರ್ ರಸಿಜ಼ಾದೆ ಇಂದಿನ ಗಂಜಾ ದಲ್ಲಿ ೨೬ ಫೆಬ್ರವರಿ ೧೯೩೫ರಂದು ಜನಿಸಿದರು. ಅರ್ತುರ್ ರ ತಂದೆ ತೈರ್ ಆಮೆದ್ ಒಗುಲು ರಸಿಜ಼ಾದೆ ದ್ವಿತೀಯ ವಿಶ್ವಯುದ್ಧದಲ್ಲಿ ಹೋರಾಡಿ ವೀರ ಮರಣ ಪಡೆದ ಸೈನಿಕ. [೨]
ವಿದ್ಯೆ
ಬದಲಾಯಿಸಿ೧೯೫೨ರಲ್ಲಿ ಅರ್ತುರ್ ಶಾಲಾ ವಿದ್ಯಾಭ್ಯಾಸ ಮುಗಿಸಿದರು. ೧೯೫೭ರಲ್ಲಿ ಔದ್ಯೋಗಿಕ ತರಬೇತಿ ಪಡೆದು ತೈಲ ಮೆಕ್ಯಾನಿಕಲ್ ಇಂಜಿನಿಯರಿಂಗ್ ಅಲ್ಲಿ ಪದವಿ ಪಡೆದರು. [೩]೧೯೭೩ರಲ್ಲಿ ತಾವು ಓದಿದ ಇಂಜಿನಿಯರಿಂಗ್ ಕಾಲೇಜಿಗೆ ಉಪ ಪ್ರಾಂಶುಪಾಲರಾದರು.
ವೃತ್ತಿ
ಬದಲಾಯಿಸಿತೈಲ ಮೆಕ್ಯಾನಿಕಲ್ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಪರಿಣತಿ ಪಡೆದ ಕಾರಣ, ಅಜರ್ ಬೈಜಾನ್ ದೇಶದ ವಿಫುಲ ತೈಲ ಸಂಪತ್ತಿನ ಹೊರತೆಗೆಯುವಿಕೆಯಲ್ಲಿ ಅರ್ತುರ್ ರ ಸೇವೆಯನ್ನು ಸರ್ಕಾರ ಪಡೆಯಲು ನಿರ್ಧರಿಸಿತು. ೧೯೭೮-೮೧ರಲ್ಲಿ ಯೋಜನಾ ಆಯೋಗದ ಉಪ ಅಧ್ಯಕ್ಷ ಹುದ್ದೆ, ೧೯೮೧-೮೬ರಲ್ಲಿ ಪರಿಣತ ಹುದ್ದೆ, ೧೯೮೬-೯೨ರ ಅವಧಿಗೆ ಮಂತ್ರಿ ಮಂಡಲದ ಯೋಜನಾ ಸಲಹೆಗಾರ, ೧೯೯೨-೯೬ರಲ್ಲಿ ಆರ್ಥಿಕ ಅಭಿವೃದ್ಧಿ ಮಂಡಳಿ ಸದಸ್ಯತ್ವ, ೧೯೯೬ರಲ್ಲಿ ಅಧ್ಯಕ್ಷರ ಸಲಹೆಗಾರ ಹೀಗೆ ಹಂತ ಹಂತವಾಗಿ ಅರ್ತುರ್ ಉನ್ನತಿ ಸಾಧಿಸಿದರು.[೪]
ರಾಜಕೀಯ
ಬದಲಾಯಿಸಿಸೋವಿಯತ್ ರಷ್ಯಾದ ಆಡಳಿತದಲ್ಲಿ ಕಮ್ಯೂನಿಸ್ಟ್ ಪಕ್ಷದ ಸದಸ್ಯರಾಗಿದ್ದ ಅಲಿಯೇವ್, ಸಕ್ರಿಯ ರಾಜಕೀಯದಲ್ಲಿ ತೊಡಗಿದ್ದರು.
೧೯೯೬ರಲ್ಲಿ ಅಜರ್ ಬೈಜಾನ್ ದೇಶದ ಉಪ ಪ್ರಧಾನಿಯಾಗಿ ಅರ್ತುರ್ ರನ್ನು ನೇಮಕ ಮಾಡಲಾಯಿತು.೭ ವರ್ಷ ಕಾಲ ಈ ಹುದ್ದೆಯಲ್ಲಿ ಕೆಲಸ ಮಾಡಿದ ಅರ್ತುರ್, ಹಲವು ಸಂದಿಗ್ಧ ಪರಿಸ್ಥಿತಿಗಲ ನಡುವೆ ಅಜರ್ ಬೈಜಾನ್ ಅನ್ನು ಮುನ್ನಡೆಸಿದರು.[೫] ತೈಲ ಬೆಲೆ ಇಳಿಕೆ, ಏಷ್ಯನ್ ಕರೆನ್ಸಿ ಸಂಕಟ, ೨೦೦೧ರ ಆರ್ಥಿಕ ಹಿಂಜರಿತ, ೨೦೦೩ರ ಇರಾಕ್ ನಲ್ಲಿನ ಯುದ್ಧ ಹೀಗೆ ಹಲವು ಸವಾಲುಗಳನ್ನು ಎದುರಿಸಿದರು.
೨೦೦೩ರ ಸವಾಲು
ಬದಲಾಯಿಸಿ೨೦೦೩ರಲ್ಲಿ ಅಂದಿನ ಅಧ್ಯಕ್ಷ ಹೈದರ್ ಅಲಿಯೇವ್ ತಮ್ಮ ಪದವಿಗೆ ರಾಜೀನಾಮೆ ಇತ್ತಾಗ, ಆಗಸ್ಟ್ ೨೦೦೩ರಲ್ಲಿ ಅರ್ತುರ್ ಪ್ರಧಾನಿ ಪದವಿಗೆ ರಾಜೀನಾಮೆ ಇತ್ತರು ಅರ್ತುರ್ ರನ್ನು ಉಪ ಪ್ರಧಾನಿಯಾಗಿಸಿ ಹೈದರ್, ತಮ್ಮ ಮಗ ಇಲ್ಹಾಂರನ್ನು ಪ್ರಧಾನಿಯಾಗಿಸಿದರು. ನವೆಂಬರ್ ಹೊತ್ತಿಗೆ, ಇಲ್ಹಾಂರನ್ನು ರಾಷ್ಟ್ರದ ಅಧ್ಯಕ್ಷರನ್ನಾಗಿ ಮಾಡಿ, ಮತ್ತೆ ಅರ್ತುರ್ ರನ್ನೇ ಪ್ರಧಾನಿ ಹುದ್ದೆಗೆ ನೇಮಕ ಮಾಡಿದರು. ೨೦೦೩ರಿಂದ ೧೫ ವರ್ಷ ಕಾಲ, ಅರ್ತುರ್ ಅಜರ್ ಬೈಜಾನಿನ ಪ್ರಧಾನಿ ಹುದ್ದೆಯಲ್ಲಿ ಸೇವೆ ಸಲ್ಲಿಸಿದರು. ೮೩ ವರ್ಷ ವಯಸ್ಸಿನಲ್ಲಿ ಆರೋಗ್ಯದ ಕಾರಣ ನೀಡಿ, ೨೦೧೮ರಲ್ಲಿ ವಿದೇಶಾಂಗ ನೀತಿ ನಿರ್ವಹಣೆಯಲ್ಲಿ ರಾಷ್ಟ್ರದ ಅಧ್ಯಕ್ಷ ಇಲ್ಹಾಂ ಅಲಿಯೇವ್ ರ ಸಹಾಯಕರಾಗಿದ್ದ ನವ್ರೋಜ್ ಮಮ್ಮಡೋವ್ ಅಜರ್ ಬೈಜಾನಿನ ಹೊಸ ಪ್ರಧಾನ ಮಂತ್ರಿಯಾಗಿ ನೇಮಕ ಮಾಡಲಾಯಿತು. ಅಲಿಯೇವ ಕುಟುಂಬದ ಅಣತಿಯಂತೆ ಕಾರ್ಯ ನಿರ್ವಹಿಸುವಲ್ಲಿ ನವ್ರೋಜ಼್ ಕೂಡಾ ಒಬ್ಬರು ಎಂಬುದು ವಿರೊಧ ಪಕ್ಷಗಳ ಅಳಲು.[೬]
ಕುಟುಂಬ
ಬದಲಾಯಿಸಿಅರ್ತುರ್ ರಿಗೆ ಮದುವೆಯಾಗಿ, ಒಬ್ಬ ಮಗಳು ಇದ್ದಾಳೆ. ಸೈನಿಕ ಕುಟುಂಬದಿಂದ ಬಂದ ಅರ್ತುರ್, ಸೇನೆಯಲ್ಲಿ ಸೇವೆ ಸಲ್ಲಿಸಲು ಆಗಲಿಲ್ಲ ಎಂದು ವಿಷಾದ ವ್ಯಕ್ತ ಪಡಿಸಿದ್ದರು.
ಪ್ರಶಸ್ತಿ
ಬದಲಾಯಿಸಿ೨೦೦೬ರಲ್ಲಿ ಅಜರ್ ಬೈಜಾನ್ ದೇಶದ ಆರ್ಥಿಕ ಅಭಿವೃದ್ದಿಗೆ ನೀಡಿದ ಕೊಡುಗೆಗಾಗಿ ಅರ್ತುರ್ ರಿಗೆ ಇಸ್ತಿಗ್ ಲಾಲ್ ಆರ್ಡರ್ ಪ್ರಶಸ್ತಿಯನ್ನು ನೀಡಿ, ರಾಷ್ಟ್ರದ ಅಧ್ಯಕ್ಷಇಲ್ಹಾಂ ಅಲಿಯೇವ್ ಪುರಸ್ಕರಿಸಿದರು. ೨೦೧೫ರಲ್ಲಿ ಶೊಹ್ರತ್ ಆರ್ಡರ್ ಪ್ರಶಸ್ತಿಯನ್ನು ನೀಡಿ ಸನ್ಮಾನ ಮಾಡಲಾಯಿತು. ಶರಾಫ್ ಆರ್ಡರ್, ಪ್ರಾನ್ಸ್ ದೇಶದ ನ್ಯಾಷನಲ್ ಆರ್ಡರ್ ಆಫ್ ಲೆಜಿಯನ್ ಆಫ್ ಆನರ್ ಪ್ರಶಸ್ತಿಗಳು ಕೂಡಾ ಅರ್ತುರ್ ರಿಗೆ ಲಭಿಸಿವೆ. ೧೯೭೧ರಲ್ಲಿ ಅಂದಿನ ಸೋವಿಯತ್ ರಷ್ಯಾ ನೀಡುತ್ತಿದ್ದ ಯು ಎಸ್ ಎಸ್ ಆರ್ ಸ್ಟೇಟ್ ಪ್ರಶಸ್ತಿಯನ್ನು ಅರ್ತುರ್ ಪಡೆದಿದ್ದರು.
ಉಲ್ಲೇಖಗಳು
ಬದಲಾಯಿಸಿ- ↑ "ಆರ್ಕೈವ್ ನಕಲು". Archived from the original on 2020-10-01. Retrieved 2018-11-29.
- ↑ https://world.einnews.com/news/artur-rasizade
- ↑ http://connection.ebscohost.com/c/biographies/35868329/artur-rasizade
- ↑ "ಆರ್ಕೈವ್ ನಕಲು". Archived from the original on 2016-04-22. Retrieved 2018-11-29.
- ↑ https://azenglishnews.com/president-aliyev-grateful-artur-rasizade-activity-pm/
- ↑ https://eurasianet.org/azerbaijan-appoints-new-prime-minister-from-old-elite