ಇಲ್ಹಾಂ ಅಲಿಯೇವ್ ರವರು ಅಜರ್ ಬೈಜಾನ್ ದೇಶದ ಪ್ರಮುಖ ರಾಜಕಾರಣಿ. ಪ್ರಸಕ್ತ ೨೦೦೩ರಿಂದ , ಶ್ರೀಯುತರು ಅಜರ್ ಬೈಜಾನ್ ದೇಶದ ರಾಷ್ಟ್ರಪತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.[೧]

ಜನನಸಂಪಾದಿಸಿ

೨೪ ಡಿಸೆಂಬರ್ ೧೯೬೧ರಂದು ಬಾಕು ನಲ್ಲಿ ಜನಿಸಿದ ಶ್ರೀಯುತರು, ರಾಜಕಾರಣಿಗಳ ಕುಟುಂಬದಲ್ಲಿ ಜನಿಸಿದರು. ತಾತ ಅಜೀಜ್ ಅಲಿಯೇವ್, ತಂದೆ ಹೈದರ್ ಅಲಿಯೇವ್ ರಿಂದ ರಾಜಕಾರಣದ ನಂಟು ಇಲ್ಹಾಂರಿಗೆ ಒದಗಿತು. ಇಲ್ಹಾಂರ ತಾಯಿ ಕಣ್ಣಿನ ವೈದ್ಯರಾಗಿದ್ದ ಜರೀಫಾ ಅಲಿಯೇವಾ.[೨]

ವಿದ್ಯಾಭ್ಯಾಸಸಂಪಾದಿಸಿ

ಬಾಕುವಿನಲ್ಲಿ ೧೯೭೭ರವರೆಗೆ ಶಾಲೆ ಕಲಿತ ಇಲ್ಹಾಂ, ಮಾಸ್ಕೋವಿನಲ್ಲಿ ೧೯೮೨ರಲ್ಲಿ ಸ್ನಾತಕೋತ್ತರ ಪದವಿ ಪಡೆದರು.೧೯೮೫ರಲ್ಲಿ ಇತಿಹಾಸದಲ್ಲಿ ಡಾಕ್ಟರೇಟ್ ಪಡೆದು, ೧೯೯೦ರವರೆಗೆ ಮಾಸ್ಕೋನಲ್ಲಿ ಪ್ರಾಧ್ಯಾಪಕರಾಗಿದ್ದರು. ೧೯೯೧-೯೪ರ ಅವಧಿಯಲ್ಲಿ ಖಾಸಗಿ ಸಂಸ್ಥೆಯಲ್ಲಿ ದುಡಿದರು.

ವೃತ್ತಿಸಂಪಾದಿಸಿ

೧೯೯೪-೨೦೦೩ರಲ್ಲಿ ಅಜರ್ ಬೈಜಾನ್ ದೇಶದ ತೈಲ ಮತ್ತು ನೈಸರ್ಗಿಕ ಅನಿಲ ಸಂಸ್ಥೆಯ ಉಪಾಧಕ್ಷರಾಗಿ ದುಡಿದರು. ತೈಲ ಸಂಪತ್ತನ್ನು ವಿಫುಲವಾಗಿ ಶೋಧಿಸಿ, ಹೊರತೆಗೆವ ಪಾಶ್ಚಿಮಾತ್ಯ ದೇಶದ ಸಂಸ್ಥೆಗಳೊಡನೆ ಮೈತ್ರಿ ನಿರ್ವಹಣೆ ಮತ್ತು ಒಡಂಬಡಿಕೆ ಏರ್ಪಡಿಸುವಲ್ಲಿ ತಮ್ಮ ತಂದೆ ಮತ್ತು ಅಜರ್ ಬೈಜಾನಿನ ಅಂದಿನ ರಾಷ್ಟ್ರಪತಿ ಹೈದರ್ ಅಲಿಯೇವ್ ರ ಹೆಗ್ಗುರಿಯನ್ನು ಇಲ್ಹಾಂ ಈಡೇರಿಸಿದರು. ಇಲ್ಹಾಂ ಇದೇ ಅವಧಿಯಲ್ಲಿ ರಾಜ್ಯಶಾಸ್ತ್ರದಲ್ಲಿಯೂ ಡಾಕ್ಟರೇಟ್ ಪಡೆದರು.[೩]

ರಾಜಕೀಯ ಬದುಕುಸಂಪಾದಿಸಿ

೧೯೯೯ರಲ್ಲಿ ನವ ಅಜರ್ ಬೈಜಾನ್ ಪಕ್ಷದ ಐದು ಮಂದಿ ಉಪ ಅಧ್ಯಕ್ಷರಲ್ಲಿ ಒಬ್ಬರಾಗಿ ಆಯ್ಕೆಯಾದ ಇಲ್ಹಾಂ, ೨೦೦೧ರಲ್ಲಿ ಹಿರಿಯ ಉಪಾಧ್ಯಕ್ಷರಾದರು.[೪] ೨೦೦೫ರಲ್ಲಿ ಅಧ್ಯಕ್ಷರಾದರು. ಇವರ ಅವಧಿಯಲ್ಲಿ ಪಕ್ಷದ ಸದಸ್ಯತ್ವ ೭ ಲಕ್ಷಕ್ಕೆ ಏರಿತು.

ಆಡಳಿತಸಂಪಾದಿಸಿ

ಅಕ್ಟೋಬರ್ ೨೦೦೩ರಲ್ಲಿ ಇಲ್ಹಾಂ, ಅಜರ್ ಬೈಜಾನ್ ದೇಶದ ರಾಷ್ಟ್ರಪತಿ ಹುದ್ದೆಗೆ ಸ್ಪರ್ಧಿಸಿ ಶೇಕಡ ೭೬.೪೮% ಮತ ಗಳಿಸಿ ರಾಷ್ಟ್ರಪತಿಯಾದರು. ಅಲ್ಹಾಂರ ತಂದೆ ಹೈದರ್ ಅಲಿಯೇವ್ ತಮ್ಮ ಮಗನಿಗಾಗಿ ಪದತ್ಯಾಗ ಮಾಡಿದರು. ಅಂತರ್ರಾಷ್ಟ್ರೀಯ ನೇತಾರರ ಕಟುಟೀಕೆಗಳ ಹೊರತಾಗಿಯೂ, ತಮ್ಮ ಚುನಾವಣೆಯನ್ನು ಸಮರ್ಥಿಸಿಕೊಂಡ ಇಲ್ಹಾಂ, ಈಸಾ ಗುಂಬರ್ ರನ್ನು ಸೋಲಿಸಿದರು. ೨೦೦೮ ಮತ್ತು ೨೦೧೩ರ ಚುನಾವಣೆಗಳನ್ನೂ ಸಹ ಇಲ್ಹಾಂ ಗೆದ್ದರು. ಈ ಯಾವ ಚುನಾವಣೆಗಳೂ ಕೂಡ, ಅಜರ್ ಬೈಜಾನ್ ದೇಶದ ನಾಗರೀಕರ ಮುಕ್ತ ಆಯ್ಕೆಯಲ್ಲ ಎಂಬುದು ವಿಶ್ವಸಂಸ್ಥೆಯೇ ಸೇರಿದಂತೆ ಎಲ್ಲಾ ದೇಶಗಳ ವಾದ.[೫]

ಸರ್ವಾಧಿಕಾರದ ಆರೋಪಸಂಪಾದಿಸಿ

೨೦೦೯ರಲ್ಲಿ ರಾಷ್ಟ್ರಪತಿ ಹುದ್ದೆಗೆ ಇದ್ದ ಅವಧಿಯ ಮಿತಿಯನ್ನು ಸಂವಿಧಾನಕ್ಕೆ ತಿದ್ದುಪಡಿ ತಂದು ತೆಗೆದು ಹಾಕಲಾಯಿತು. [೬] ೨೦೧೩ರ ಚುನಾವನೆಯಲ್ಲಿ ಅಜರ್ ಬೈಜಾನ್ ಚುನಾವಣಾ ಆಯೋಗವು ಮೊದಲ ಬಾರಿಗೆ ಸ್ಮಾರ್ಟ್ ಫೋನ್ ಆಪ್ ಅನ್ನು ಹೊರತಂದಿತು. ಇದರ ಉದ್ದೇಶ ಮತದಾನದ ಎಣಿಕೆ ಕಾರ್ಯವನ್ನು ನೈಜವಾಗಿ ಜನ ಕಾಣಲಿ ಎಂಬುದಾಗಿತ್ತು. ಆದರೆ, ಚುನಾವಣಾ ಎಣಿಕೆಯ ಮುನ್ನವೇ ಈ ಆಪ್, ಫಲಿತಾಂಶವನ್ನು ತೋರಿಸಿತು.[೭] ಇದು ಇಲ್ಹಾಂರ ತಂತ್ರ ಎಂದು ಯೂರೋಪ್ ಮತ್ತು ವಿಶ್ವಸಂಸ್ಥೆ ಟೀಕೆ ಮಾಡಿತು. ಇದಾವುದನ್ನೂ ಲೆಕ್ಕಿಸದ ಇಲ್ಹಾಂ, ೨೦೧೩ರಲ್ಲಿ ಮತ್ತೆ ರಾಷ್ಟ್ರಪತಿಯಾದರು.

ರಾಷ್ಟ್ರಗಳ ಜೊತೆ ಮೈತ್ರಿಸಂಪಾದಿಸಿ

ಇಲ್ಹಾಂ ಯುರೋಪಿಯನ್ ರಾಷ್ಟ್ರಗಳ ಜೊತೆ ಮತ್ತು ಅಮೇರಿಕಾ ಸಂಯುಕ್ತ ಸಂಸ್ಥಾನ್ದ ಜೊತೆ ಮೈತ್ರಿ ಏರ್ಪಡಿಸಿಕೊಂಡಿದ್ದಾರೆ.[೮] ಅಜರ್ ಬೈಜಾನಿನ ವಿಫುಲ ತೈಲ ಸಂಪತ್ತು, ಈ ಮೈತ್ರಿಗೆ ಮೂಲ ಕಾರಣವೆಂದೂ, ಇದರ ಬಲದಿಂದಲೇ ಇಲ್ಹಾಂರ ಕೃತ್ಯಗಳಿಗೆ ಮೌನವಾಗಿ ಪಾಶ್ಚಿಮಾತ್ಯ ರಾಷ್ಟ್ರಗಳು ಇವೆ ಎಂಬುದು ಮಾನವ ಹಕ್ಕುಗಳ ಸಂಘಟನೆಗಳ ವಾದ.

ಕುಟುಂಬಸಂಪಾದಿಸಿ

ಇಲ್ಹಾಂ ಅಲಿಯೇವ್ ರ ಪತ್ನಿ ಶ್ರೀಮತಿ ಮೆಹ್ರಿಬಾನ್ ಪಶಯೇವಾ. ೧೯೮೩ರಲ್ಲಿ ಮದುವೆಯಾದ ಶ್ರೀಯುತರಿಗೆ ೩ ಮಂದಿ ಮಕ್ಕಳು. ಮೆಹ್ರಿಬಾನ್ ಪಶಯೇವಾ ಅಜರ್ ಬೈಜಾನ್ ದೇಶದ ಮೊದಲ ಉಪರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.


ಉಲ್ಲೇಖಗಳುಸಂಪಾದಿಸಿ

  1. http://en.president.az/president/biography
  2. http://en.president.az/president/biography
  3. http://www.yap.org.az/en/view/pages/1
  4. http://www.yap.org.az/en
  5. https://www.reuters.com/article/us-azerbaijan-election-idUSBRE99812Z20131009
  6. http://old.crisisgroup.org/_/media/Files/europe/caucasus/azerbaijan/207%20Azerbaijan%20-%20Vulnerable%20Stability.pdf
  7. https://www.washingtonpost.com/blogs/worldviews/wp/2013/10/09/oops-azerbaijan-released-election-results-before-voting-had-even-started
  8. https://obamawhitehouse.archives.gov/the-press-office/2016/03/31/readout-vice-president-bidens-meeting-president-ilham-aliyev-azerbaijan