ಅರೋರಾ ಬೆಳಕು
ಅರೋರಾ ಬೆಳಕು : ಅರೋರಾ ಒಂದು ವರ್ಣಮಯ ಪ್ರಭೆ ಸೂರ್ಯನಿಂದ
ಪ್ರವಹಿಸಿ ಬರುವ ವಿದ್ಯುದಾವಿಷ್ಟ ಕಣಗಳ ಧಾರೆಗೆ ಸೌರಮಾರುತವೆಂದು ಹೆಸರು.
ಭೂಮೇಲ್ಮೈಯಿಂದ ಭೂತ್ರಿಜ್ಯದ ಎಷ್ಟೋಪಟ್ಟು ದೂರದಲ್ಲಿರುವ ಕೆಲಬಿಂದುಗಳಲ್ಲಿ ಭೂಕಾಂತ
ಕ್ಷೇತ್ರವನ್ನು ಸೌರಮಾರುತದಲ್ಲಿನ ಪ್ರೋಟಾನ್ ಮತ್ತು ಎಲೆಕ್ಟ್ರಾನುಗಳ ಧಾರೆಗಳು
ವಿಕೃತಗೊಳಿಸುತ್ತವೆ. ಇದರಿಂದ ವಾಯುಮಂಡಲದಲಿರುವ ಪರಮಾಣುಗಳು ಉದ್ರೇಕಗೊಳ್ಳು
ತ್ತವೆ. ವಿವಿಧ ಅನಿಲಗಳ ಉದ್ರೇಕಿತ ಪರಮಾಣುಗಳು ವಿವಿಧ ಬಣ್ಣದ ಬೆಳಕನ್ನು
ಉತ್ಸರ್ಜಿಸುತ್ತವೆ. ಅರೋರಾ ಪ್ರಭೆಯಲ್ಲಿರುವ ಹಸುರು ಬಣ್ಣಕ್ಕೆ ಕಾರಣ ಆಕ್ಸಿಜನ್
ಪರಮಾಣುಗಳು. ನೈಟೋಜನ್ ಮತ್ತು ಆಕ್ಸಿಜನ್‍ಗಳೆರಡೂ ಕೆಂಪು ಬೆಳಕನ್ನು ಉತ್ಸರ್ಜಿಸುತ್ತವೆ.
ಭೂಮಿಯ ಉತ್ತರ ಧ್ರುವದ ಸಮೀಪದ ಅಕ್ಷಾಂಶಗಳಲ್ಲಿನ ಧ್ರುವ ಪ್ರಭೆಗೆ ಅರೋರಾ
ಬೋರಿಯಾಲಿಸ್ ಎಂದು ಹೆಸರು. ದಕ್ಷಿಣ ಧ್ರುವದ ಸಮೀಪದಲ್ಲಿಯೂ ಇಂತಹದೇ
ಪ್ರಭೆ ಗೋಚರಿಸುತ್ತದೆ. ಇದಕ್ಕೆ ಅರೋರಾ ಆಸ್ಟ್ರೇಲಿಯಾಸ್ ಎಂದು ಹೆಸರು.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: