ಅರುವತ್ತನಾಲ್ಕು ಉಪಚಾರಗಳು

ಅರುವತ್ತನಾಲ್ಕು ಉಪಚಾರಗಳು : ಅರುವತ್ತನಾಲ್ಕು ವಿದ್ಯೆ, ಅರುವತ್ತನಾಲ್ಕು ಕಲೆಗಳಿದ್ದಂತೆ ಈ ಉಪಚಾರಗಳೂ ಕೂಡ. ಜ್ಞಾನಿಯಾದವನು ಇವುಗಳನ್ನು ತಿಳಿದು ಚಾಚೂತಪ್ಪದಂತೆ ಆಚರಿಸಬೇಕೆಂಬ ನಿಯಮ ಭಾರತೀಯರಲ್ಲಿದೆ. ಇವು ನಮ್ಮೆ ಜೀವನದ ನಿತ್ಯಕರ್ಮಗಳಲ್ಲಿ ಹಾಸುಹೊಕ್ಕಾಗಿ ಬಳಕೆಯಲ್ಲಿವೆ. ಇವುಗಳನ್ನು ವಿಧ್ಯುಕ್ತರೀತಿಯಲ್ಲಿ ನಡೆಸಬೇಕಾದರೆ ಆಯಾ ವಿದ್ಯೆ, ಶಾಸ್ತ್ರ, ಕಲೆಗಳ ಅಧ್ಯಯನ, ಅನುಭವ ಅಗತ್ಯ. ಈ ಉಪಚಾರಗಳನ್ನು ಭಾರತೀಯರ ಕಾವ್ಯ, ಪುರಾಣಗಳಲ್ಲಿ ಕಾಣಬಹುದು. ಸಾಮಾನ್ಯವಾಗಿ ಇವನ್ನು ಪೂಜಾ ಸಮಯದಲ್ಲಿ ಇಷ್ಟದೇವತೆ ಪ್ರಸನ್ನವಾಗಲು ಆಚರಿಸತಕ್ಕವಾಗಿವೆ. ಧ್ಯಾನ, ಆವಾಹನ, ಆಸನ, ಪದ್ಯ , ಅಘ್ರ್ಯ, ಆಚಮನ, ಮಧುಪರ್ಕ, ಪಂಚಾಮೃತಸ್ನಾನ, ಫಲೋದಕಸ್ನಾನ, ಶುದ್ಧೋದಕಸ್ನಾನ, ವಸ್ತ್ರ , ಯಜ್ಞೋಪವೀತ, ಗಂಧ, ಅಕ್ಷತೆ, ಪುಷ್ಪ, ಅವಯವೋಪಚಾರ, ಆಭರಣ, ಕಿರೀಟ, ತಿಲಕರತ್ನ ಧಾರಣ, ಅಸ್ತ್ಧಾದಾರಣ, ಪುಷ್ಪಬಾಣಧಾರಣ, ಪಾನಪಾತ್ರಧಾರಣ, ಪಾದುಕೆ, ಧೂಪ, ದೀಪ, ನೈವೇದ್ಯ., ತಾಂಬೂಲ, ನೀರಾನ, ಛತ್ರ, ಚಾಮರ, ದರ್ಪಣ, ವ್ಯಜನ, ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವವೇದ, ಉಪನಿಷತ್ತು, ಪುರಾಣ, ಇತಿಹಾಸ, ಪಂಚಾಂಗಶ್ರವಣ, ಚೂರ್ಣಿಕೆ, ಅಷ್ಟಪದಿ, ಸಂಗೀತ, ಶೋಭನ, ಮಂಗಳ, ಲಾಲಿ, ಜೋಜೋ, ಮಂತ್ರಪುಷ್ಪ, ಉದ್ವಾಸನ, ಆಂದೋಳನ, ಅಶ್ವಾರೋಹಣ, ಗಜಾರೋಹಣ, ಶಂಖನಾದ, ತುತ್ತುರಿ, ನೃತ್ಯ, ಗೀತ, ವಾದ್ಯ., ವೀಣಾನಾದ, ಭಕ್ತ್ಯೋಪಚಾರ, ಶಕ್ತ್ಯೋಪಚಾರ, ಪ್ರದಕ್ಷಿಣ, ನಮಸ್ಕಾರ, ಪವಳಿಂಚು, ಉತ್ತರನೀರಾಜನ ಈ ಉಪಚಾರಗಳಲ್ಲಿ ಹಲವು ರಾಜಮಹಾರಾಜರಿಗೂ ಮಠಾಧಿಪತಿಗಳಿಗೂ ಗುರಿಹಿರಿಯ ರಿಗೂ ಅನ್ವಯವಾಗುತ್ತವೆ. ಸುಸಂಸ್ಕೃತವೂ ಕಲಾಪೂರ್ಣವೂ ಆದ ಮಾನವಜೀವನದ ತಿರುಳಿನಂತಿರುವ ಸಂಗೀತ, ನೃತ್ಯ, ವಾದ್ಯ, ಅಲಂಕರಣ ಮೊದಲಾದವುದೇವಲ ದೇವರ ಪ್ರೀತ್ಯರ್ಥವಾಗಿ, ಗುರುಹಿರಿಯರ ಸಂತುಷ್ಟಿಗಾಗಿ ಇವೆ ಎಂಬ ಕಲ್ಪನೆ ನಿಜಕ್ಕೂ ಅಮೋಘ ವಾದುದು. ಸ್ವಸಂತೋಷವನ್ನು ಕೊಟ್ಟರೂ ಅವು ಯೋಗ್ಯರೀತಿಯಲ್ಲಿ ಅರ್ಪಣೆಯಾದಾಗಲೇ

ಪೂರ್ಣ ತುಷ್ಟಿ ಕಂಡೀತು.