ಅರುಣಾ ರಾಮಚಂದ್ರ ಶಾನಭಾಗ
ಅರುಣಾ ರಾಮಚಂದ್ರ ಶಾನಭಾಗ , ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಹಳದೀಪುರದವರು. ೧ನೇ, ಜೂನ್, ೧೯೪೮ ರಲ್ಲಿ ಜನಿಸಿದರು. ಬಳಲುವ ರೋಗಿಗಳಿಗೆ ಶುಶ್ರೂಷೆ ಮಾಡುವ ಉದ್ದಿಶ್ಯದಿಂದ ಬೊಂಬಾಯಿಗೆ ಬಂದು 'ಕೆ.ಇ.ಎಮ್ ಆಸ್ಪತ್ರೆ'ಯಲ್ಲಿ ಪರಿಚಾರಿಕೆಯಾಗಿ ಸೇರಿ,ತನಗೆ ವಿಧಿಸಿದ್ದ ಕಾರ್ಯಗಳನ್ನು ಅತ್ಯಂತ ಶಿಸ್ತಿನಿಂದಲೂ ಮತ್ತು ಕ್ರಮವಾಗಿಯೂ ನಿಭಾಯಿಸುತ್ತಿದ್ದರು. ವೈವಾಹಿಕ ಜೀವನಕ್ಕೆ ಪಾದಾರ್ಪಣೆ ಮಾಡುವ ಸಿದ್ಧತೆಯಲ್ಲಿದ್ದರು. ೨೫ ರ ಹರೆಯದ ಯುವತಿಯಾಗಿದ್ದ 'ಅರುಣಾ,' ೧೯೭೩ ರ ನವೆಂಬರ್, ತಿಂಗಳ ೨೭ ರಂದು ಅದೇ ಆಸ್ಪತ್ರೆಯಲ್ಲಿ ಕೆಲಸಮಾಡುತ್ತಿದ್ದ ಸೋಹನ್ ಲಾಲ್ ವಾಲ್ಮೀಕಿಯೆಂಬ ಎಂಬ ವ್ಯಕ್ತಿಯಿಂದ, ಅತ್ಯಾಚಾರಕ್ಕೆ ಬಲಿಯಾದಳು. ನಾಯಿಗಳನ್ನು ಕಟ್ಟಿಹಾಕುವಂತಹ ಸರಪಳಿಯಿಂದ ಆಕೆಯಕುತ್ತಿಗೆ ಕಟ್ಟಿ ಅತ್ಯಾಚಾರವೆಸಗಿದ್ದ. ಅತ್ಯಾಚಾರದಿಂದ ಘಾಸಿಗೊಂಡ ಅರುಣಾ ಅವರ ಮಿದುಳಿನಲ್ಲಿ ರಕ್ತಸ್ರಾವವಾಗಿ ದೃಷ್ಟಿ ಕುಂಠಿತವಾಗಿದ್ದಲ್ಲದೆ, ಮಾತನಾಡುವ ಶಕ್ತಿ ಹಾಗೂ ಪರಿಸರದ ಬಗ್ಗೆ ಸಂವೇದನೆಯನ್ನೂ ಘಾಸಿಗೊಳಿಸಿತು. ಆಸ್ಪತ್ರೆಯಲ್ಲಿ ವೈದ್ಯರು ಮತ್ತು ದಾದಿಯರ ಸಹಾಯ, ಸಹಕಾರದಿಂದ ೪೨ ವರ್ಷಗಳ ಕಾಲ ಜೀವಂತಶವವಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿ ನಾಲ್ಕನೆಯ ನಂಬರಿನ ವಾರ್ಡಿನಲ್ಲಿದ್ದು ಮರಣಿಸಿದರು. ಅತ್ಯಾಚಾರಿಗೆ ೭ ವರ್ಷ ಶಿಕ್ಷೆಯಾಯಿತು. ಕೊನೆಗೆ 'ಏಡ್ಸ್ ಕಾಯಿಲೆ'ಯಿಂದ ಆತ ಮರಣಿಸಿದ ಎಂಬ ಸುದ್ದಿಯಿದ್ದರೂ ಹಲವು ವರ್ಷಗಳ ನಂತರ ಆತ ಉತ್ತರ ಪ್ರದೇಶದ ತನ್ನ ಪೂರ್ವಿಕರ ಊರಿನಲ್ಲಿ ವಾಸಿಸುತ್ತಿರುವುದು ಸುದ್ದಿಯಾಯಿತು.
ಕೆ.ಇ.ಎಂ.ಆಸ್ಪತ್ರೆಯ ದಾದಿಯರ ನಿರಂತರ ಸೇವೆ
ಬದಲಾಯಿಸಿಮುಂಬಯಿನ,ಕೆ.ಇ.ಎಂ. ಆಸ್ಪತ್ರೆಯ ದಾದಿಯರು ಅತ್ಯಂತ ಕಾಳಜಿವಹಿಸಿ 'ಅರುಣಾ ಶಾನ್ ಭಾಗಳನ್ನು ಯನ್ನು ನೋಡಿಕೊಳ್ಳುತ್ತಿದ್ದಾರೆ. ಅರುಣಾ ಶಾನ್ ಭಾಗ್ ಳ ಅತ್ಯಂತ ಕರುಣಾಜನಕ ಸತ್ಯಕಥೆಯನ್ನು ಬೆಳಕಿಗೆ ತರಲು ಸತತವಾಗಿ ಪ್ರಯತ್ನಿಸುತ್ತಿರುವ ಗೆಳತಿ, 'ಪಿಂಕಿ ವಿರಾಣಿ'. ಆಕೆಯ 'ಇನ್ವೆಸ್ಟಿಗೇಟೀವ್ ಜರ್ನಲಿಸಮ್' ನ ಪದ್ಧತಿಯನ್ನು ಅಳವಡಿಸಿ ಹೆಚ್ಚಿನ ಸಂಶೋಧನೆಯ ಮೂಲಕ ಪುಸ್ತಕರೂಪದಲ್ಲಿ ದಾಖಲಿಸಿ ಪ್ರಕಟಿಸಿದ್ದಾಳೆ. ಮರಾಠಿ ಅನುವಾದ ಪುಸ್ತಕ 'ಅರುಣಾಚಿ ಗೋಸ್ಟ್' ಬಿಡುಗಡೆಯಾಗಿದೆ. ಡಿಸೆಂಬರ್, ೯, ೧೯೯೮ ರಲ್ಲಿ ಅರುಣಾಳ ನಿಮಿತ್ತವೆಂಬ ವಿಶಯದ ಬಗ್ಗೆ ಚರ್ಚೆಯ ಕಾರ್ಯಕ್ರಮವನ್ನೂ ಆಯೋಜಿಸಿದ್ದರು. ಸುಮಾರು ೨೦೦ ಜನರು ಉಪಸ್ತಿತರಿದ್ದ ಸಮಾರಂಭದಲ್ಲಿ ವೇದಿಕೆಯ ಮೇಲೆ, ಲೇಖಕಿ ಪಿಂಕಿ ವಿರಾಣಿ, ಮತ್ತು ಮರಾಠಿ ಅನುವಾದಕಿ, ಮೀನಾ ಕರ್ಣಿಕ್, ಸಮಾಜ ಸೇವಕಿ ಡಾ. ವಿದ್ಯಾ ಬಾಳ್, 'ಕೆ.ಇ.ಎಂ ಶಸ್ತ್ರಚಿಕಿತ್ಸಾ ವಿಭಾಗ'ದ ಡಾ.ರವಿಬಾಪಟ್, ಮತ್ತು ಆಗಿನ ಮುಂಬಯಿ ಪೋಲೀಸ್ ಸಹ-ಆಯುಕ್ತ, ಟಿ.ಕೆ.ಚೌಧರಿ,ಹಾಜರಿದ್ದರು.
ಚರ್ಚೆಯಲ್ಲಿ ಸ್ಪಂದಿಸಿದ ವಿಷಯಗಳು
ಬದಲಾಯಿಸಿಸ್ತ್ರೀಯರ ಮೇಲಿನ ಅತ್ಯಾಚಾರ, ಅವರ ಸುರಕ್ಷಿತತೆ, ಇಚ್ಛಾಮರಣ, ದಯಾಮರಣ, ಕಾನೂನು ಹಾಗೂ ಅಪರಾಧ, ಮಾನವೀಯತೆ, ಮುಂತಾದ ವಿಶಯಗಳ ಮೇಲೆ ಬೆಳಕು ಚೆಲ್ಲುವ ಬಗ್ಗೆ ಚರ್ಚೆಗಳು ನಡೆದವು. ಆಸ್ಪತ್ರೆಯಿಂದ 'ಅರುಣಾ ಶಾನ್ ಭಾಗ್' ರವರನ್ನು ಮನೆಗೆ ಕರೆದುಕೊಂಡು ಹೋಗುವ ಪ್ರಸ್ತಾಪ ಬಂದಾಗ, ಅರುಣಾಳ ಕುಟುಂಬದ ಸದಸ್ಯರ ಆರ್ಥಿಕ ಸ್ಥಿತಿ ಚೆನ್ನಾಗಿಲ್ಲದಿರುವುದು ಒಂದಾದರೆ, ವಯಸ್ಸಾದ ಸೋದರಿ, ನೋಡಿಕೊಳ್ಳುವ ಸ್ಥಿತಿಯಲ್ಲಿಲ್ಲ.
'ಕನ್ನಡದಲ್ಲಿ ಅರುಣಾಳ ಕಥೆ'
ಬದಲಾಯಿಸಿ'ಪಿಂಕಿ ಇರಾಣಿ'ಯವರ ಅನುಮತಿಪಡೆದು ಕನ್ನಡದಲ್ಲಿ ’ಅರುಣಾಳ ಕಥೆ’ಎಂಬ ಪುಸ್ತಕ ಸಿದ್ಧವಾಗಿದೆ. ಅದರಲ್ಲಿ 'ಪ್ರಿಯತಮ'ರು, ಹೆಣ್ಣಿನ ಅಸಹಾಯಕತೆ, ದೌರ್ಬಲ್ಯ, ಗಂಡನ ದುರಾಚಾರ, ಸಮಾಜದ ಪಾತ್ರ, ದೇಶದ ಕಾನೂನು ವ್ಯವಸ್ಥೆ, ಮುಂತಾದವುಗಳ ಬಗ್ಗೆ ಸಾರ್ವಜನಿಕರ ಗಮನ ಸೆಳೆದಿದ್ದಾರೆ.[೧] [೨]
ಉಲ್ಲೇಖಗಳು
ಬದಲಾಯಿಸಿ- ↑ "What is rape victim Aruna Shanbaug's real story? life style, South Asia, MAY 19, 2015". Archived from the original on ಏಪ್ರಿಲ್ 8, 2017. Retrieved ಏಪ್ರಿಲ್ 8, 2017.
- ↑ * ಆರುಣಾಳ ಕಥೆ, ವ್ಯಥೆ, 'ಮುಖಾಂತರ', ಪ್ರಿಯತಮ, 'ಕರ್ನಾಟಕ ಮಲ್ಲ ದಿನ ಪತ್ರಿಕೆ', ಮಂಗಳವಾರ,೧೫, ಮಾರ್ಚ್, ೨೦೧೧, ಪುಟ-೪
ಬಾಹ್ಯ ಸಂಪರ್ಕಗಳು
ಬದಲಾಯಿಸಿ- [ಅಪರಿಚಿತ ವಾಸ್ತವ, ಶ್ರೀನಿವಾಸ ಜೋಕಟ್ಟೆ, ಶ್ರೀರಾಮ ಪ್ರಕಾಶನ,ಮಂಡ್ಯ, 'ಅರುಣಾ ಶಾನಭಾಗ್ ನಿಧನದ ನಂತರ, ಪುಟ.೩೦]