ಅರುಣನಾರಾಯಣ ಶಾಸ್ತ್ರಿ
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಬಿ ಅರುಣನಾರಾಯಣ ಶಾಸ್ತ್ರಿ (೧೯೪೮ - ಆಗಸ್ಟ್ ೬, ೨೦೧೧) ಹಿರಿಯ ಪತ್ರಕರ್ತರು. ಲೋಕ ಶಿಕ್ಷಣ ಟ್ರಸ್ಟ್ ಸಂಸ್ಥೆಯ ಕನ್ನಡ ಮಾಸಿಕ 'ಕಸ್ತೂರಿ'ಯಲ್ಲಿ ಸುಮಾರು ಹತ್ತು ವರ್ಷಗಳ ಕಾಲ ಸಂಪಾದಕರಾಗಿದ್ದರು.
ವೃತ್ತಿ ಜೀವನ
ಬದಲಾಯಿಸಿಮೂಲತಃ ಕಾಸರಗೋಡಿನ ಬೋನಂತ ಕೋಡಿಯವರು. ಪುತ್ತೂರಿನಲ್ಲಿ ಶಿಕ್ಷಣ ಮುಗಿಸಿ ಉಡುಪಿಯ ಸಂತ ಫಿಲೋಮಿನಾಸ್ ಕಾಲೇಜಿನಲ್ಲಿ ಅಲ್ಪ ಕಾಲ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು. ಚೆನ್ನೈನಿಂದ ಸೋವಿಯತ್ ರಾಯಭಾರಿ ಕಚೇರಿ ಪ್ರಕಟಿಸುತ್ತಿದ್ದ 'ಸೋವಿಯತ್ ಲ್ಯಾಂಡ್' ಪತ್ರಿಕೆಯ ಪ್ರಧಾನ ತರ್ಜುಮೆದಾರರಾಗಿ ಕಾರ್ಯ ನಿರ್ವಹಿಸಿದರು. 'ಪ್ರಜಾಪ್ರಭುತ್ವ', 'ವಿಶಾಲ ಕರ್ನಾಟಕ'ಗಳಲ್ಲಿ ಉಪಸಂಪಾದಕರಾಗಿದ್ದರು. ನಿರಂಜನರ ಸಂಪಾದಕತ್ವದಲ್ಲಿ ಪ್ರಕಟವಾದ ಕಿರಿಯರ ವಿಶ್ವಕೋಶ 'ಜ್ಞಾನ ಗಂಗೋತ್ರಿ'ಯ ಉಪಸಂಪಾದಕರಾಗಿದ್ದರು.
ಲೋಕ ಶಿಕ್ಷಣ ಟ್ರಸ್ಟ್
ಬದಲಾಯಿಸಿಅರುಣನಾರಾಯಣ ಶಾಸ್ತ್ರಿಯವರು ೧೯೯೧ರಲ್ಲಿ ಲೋಕ ಶಿಕ್ಷಣ ಟ್ರಸ್ಟ್ ಸೇರಿದರು. ಸಂಯುಕ್ತ ಕರ್ನಾಟಕದ ಸಾಪ್ತಾಹಿಕ ಸೌರಭದ ಉಪಸಂಪಾದಕರಾಗಿ ಹತ್ತು ವರ್ಷಗಳ ಕಾಲ ಕಾರ್ಯನಿರ್ವಹಿಸಿದರು. ೨೦೦೧ರಲ್ಲಿ ಇವರು ಕಸ್ತೂರಿ ಮಾಸಿಕದ ಸಂಪಾದಕರಾಗಿ ನಿಯುಕ್ತರಾದರು.