ಅರವಿಂದ ಬೆಲ್ಲದ (ಜನನ - ೩ ಆಗಸ್ಟ್ ೧೯೬೯) ಒಬ್ಬ ಭಾರತೀಯ ರಾಜಕಾರಣಿ, ಇವರು ಕರ್ನಾಟಕದ ವಿಧಾನಸಭೆಯ ಸದಸ್ಯರಾಗಿದ್ದು, ಮೇ ೨೦೧೩ ರಿಂದ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಬೆಲ್ಲದ ಅವರು ಭಾರತೀಯ ಜನತಾ ಪಕ್ಷದ ಸದಸ್ಯ. [೧]

ಅರವಿಂದ ಬೆಲ್ಲದ
ಅರವಿಂದ ಬೆಲ್ಲದ

ಪ್ರಸಕ್ತ
ಅಧಿಕಾರ ಪ್ರಾರಂಭ 
2013

ಜನನ (1969-08-03) ೩ ಆಗಸ್ಟ್ ೧೯೬೯ (ವಯಸ್ಸು ೫೪)
ಪ್ರತಿನಿಧಿತ ಕ್ಷೇತ್ರ ಹುಬ್ಬಳ್ಳಿ - ಧಾರವಾಡ (ಪಶ್ಚಿಮ)
ರಾಜಕೀಯ ಪಕ್ಷ ಭಾರತೀಯ ಜನತಾ ಪಕ್ಷ
ಜೀವನಸಂಗಾತಿ ಸ್ಮೃತಿ ಬೆಲ್ಲದ

ಜೀವನಚರಿತ್ರೆ ಬದಲಾಯಿಸಿ

ಚಂದ್ರಕಾಂತ ಬೆಲ್ಲದ ಮತ್ತು ಲೀಲಾವತಿ ಸಿ. ಬೆಲ್ಲದ ದಂಪತಿಯ ಐದು ಮಕ್ಕಳಲ್ಲಿ ಕಿರಿಯ ಪುತ್ರರಾಗಿ ಆಗಸ್ಟ್ ೩, ೧೯೬೯ ರಂದು ಅರವಿಂದ ಬೆಲ್ಲದ ಅವರು ಜನಿಸಿದರು. ಕೆಇ ಬೋರ್ಡ್ಸ್ ಪ್ರೌಢ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಧಾರವಾಡದ ಕರ್ನಾಟಕ ವಿಜ್ಞಾನ ಕಾಲೇಜಿನಲ್ಲಿ ಪದವಿ ಮತ್ತು ಧಾರವಾಡದ ಎಸ್‌ಡಿಎಂ ಕಾಲೇಜ್ ಆಫ್ ಎಂಜಿನಿಯರಿಂಗ್‌ನಿಂದ ಎಂಜಿನಿಯರಿಂಗ್ ಡಿಗ್ರಿ ಮಾಡಿದರು. ಅವರು ಫ್ರಾನ್ಸ್‌ನ INSEAD ನಿಂದ ವ್ಯವಹಾರ ನಿರ್ವಹಣೆಯಲ್ಲಿ ಸ್ನಾತಕೋತ್ತರ ಡಿಪ್ಲೊಮ ಪೂರ್ಣಗೊಳಿಸಿದರು. ಅವರ ಕುಟುಂಬವು ಪತ್ನಿ ಸ್ಮೃತಿ ಹಾಗೂ ಇಬ್ಬರು ಮಕ್ಕಳಾದ ಅಗಸ್ತ್ಯ ಮತ್ತು ಪ್ರಾಚ್ಚಿಯವರನ್ನು ಒಳಗೊಂಡಿದೆ. [೨]

ರಾಜಕೀಯ ವೃತ್ತಿ ಬದಲಾಯಿಸಿ

ಅರವಿಂದ ಬೆಲ್ಲದ ಅವರು ೨೦೧೩ ರಲ್ಲಿ ರಾಜಕೀಯ ಪ್ರವೇಶಿಸಿದರು. ಅವರು ಕರ್ನಾಟಕ ರಾಜ್ಯ ವಿಧಾನಸಭೆಯ ಹುಬ್ಬಳ್ಳಿ-ಧಾರವಾಡ (ಪಶ್ಚಿಮ) ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದಿಂದ (ಬಿಜೆಪಿ) ಸ್ಪರ್ಧಿಸಿ ಗೆದ್ದರು. ಅವರು ಧಾರವಾಡ ಜಿಲ್ಲೆಯಿಂದ ನಾಲ್ಕು ಬಾರಿ ರಾಜ್ಯ ವಿಧಾನಸಭೆಯಲ್ಲಿ ಬಿಜೆಪಿಯನ್ನು ಪ್ರತಿನಿಧಿಸಿದ್ದರು.

ಬೆಲ್ಲದ ಅವರ ಕೆಲವು ಪ್ರಮುಖ ಚಟುವಟಿಕೆಗಳು-

  • ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿಯನ್ನು ಪ್ರಾರಂಭಿಸಿದ್ದು.[೩] ಸರ್ಕಾರಿ ಶಾಲೆಗಳಲ್ಲಿ ಹಾಜರಾತಿ ಕಡಿಮೆಯಾಗುವುದನ್ನು ಅವರು ಗಮನಿಸಿದರು. ಮಕ್ಕಳ ಪೋಷಕರೊಂದಿಗೆ ಚರ್ಚಿಸಿದ ನಂತರ ಅವರು ಒಂದು ಶಾಲೆಯಲ್ಲಿ ಪ್ರಿಸ್ಕೂಲ್ ಅನ್ನು ಪ್ರಾಯೋಗಿಕ ಯೋಜನೆಯಾಗಿ ಪ್ರಾರಂಭಿಸಿದರು. ಈ ಪ್ರಯೋಗವು ಯಶಸ್ವಿಯಾಗಿದ್ದು, ಈ ಯೋಜನೆಯನ್ನು ೬೨ ಸರ್ಕಾರಿ ಶಾಲೆಗಳಿಗೆ ವಿಸ್ತರಿಸಲು ಕಾರಣವಾಯಿತು. ಈ ಕಾರಣದಿಂದಾಗಿ ವಿದ್ಯಾರ್ಥಿಗಳ ಸೇರ್ಪಡೆಯ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂತು.[೪]
  • ಧಾರವಾಡದಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಸ್ಥಾಪಿಸಲು ಇನ್ನೂ ಹಲವರೊಂದಿಗೆ ಸೇರಿ ಪ್ರಯತ್ನ ಮಾಡಿದರು. [೫] ಈ ಪ್ರಯತ್ನಗಳಿಂದಾಗಿ ಧಾರವಾಡದಲ್ಲಿ ಐಐಟಿ ಸ್ಥಾಪನೆಯಾಯಿತು.[೬] .
  • ಗ್ರಾಮೀಣ ಪ್ರದೇಶದಲ್ಲಿ ಪ್ರದೂಷಣರಹಿತ ಶಕ್ತಿಯನ್ನು ಅಭಿವೃದ್ಧಿಪಡಿಸಲು ಮತ್ತು ಅನುಷ್ಠಾನಗೊಳಿಸಲು ಕೆಲಸ ಮಾಡಿದರು. ಈ ಬಗ್ಗೆ ಅಧ್ಯಯನವನ್ನು ನಡೆಸಿ, ವರದಿಯನ್ನು ಸಿದ್ಧಪಡಿಸಿದರು ಮತ್ತು ಅದನ್ನು ಕಾರ್ಯಗತಗೊಳಿಸಲು ಪ್ರಾರಂಭಿಸಿದರು.[೭]
  • ಅವರ ಕ್ಷೇತ್ರದ ಜನರ ಕುಂದುಕೊರತೆಗಳನ್ನು ಆಲಿಸಲು ಮೊಬೈಲ್ ಫೋನ್ ಅಪ್ಲಿಕೇಶನ್ ರಚಿಸಿದರು. [೮]

ಉಲ್ಲೇಖಗಳು ಬದಲಾಯಿಸಿ

  1. "Sitting and previous MLAs from Hubli Dharwad West Assembly Constituency". elections.in/. Retrieved 30 May 2016.
  2. "Arvind Bellad: Official website". Archived from the original on 28 ಆಗಸ್ಟ್ 2017. Retrieved 27 August 2017.
  3. "Meet Arvind Bellad, An Engineer Turned Politician". Metrosaga. Metrosaga. Archived from the original on 26 ಜುಲೈ 2021. Retrieved 26 July 2021.
  4. "HDK takes a leaf out of BJP MLA's pre-school concept". Times of India. Times of India. Retrieved 26 July 2021.
  5. "Set up IIT in Dharwad, MLA urges government". The Hindu. The Hindu. Retrieved 26 July 2021.
  6. "https://www.newskarnataka.com/dharwad/karnataka-iit-to-be-set-up-in-dharwad". News Karnataka. News Karnataka. Archived from the original on 26 ಜುಲೈ 2021. Retrieved 26 July 2021. {{cite web}}: External link in |title= (help)
  7. "Talking clean development". Climate Parliament. Climate Parliament. Archived from the original on 26 ಜುಲೈ 2021. Retrieved 26 July 2021.
  8. "ಶಾಸಕರಿಂದ ಮೊಬೈಲ್ ಅಪ್ಲಿಕೇಷನ್ ಬಿಡುಗಡೆ". One India Kannada. One India. Retrieved 26 July 2021.

ಬಾಹ್ಯ ಸಂಪರ್ಕ ಬದಲಾಯಿಸಿ