ಅರಣ್ಯಶಾಸ್ತ್ರ (ಪುಸ್ತಕ)
ಅರಣ್ಯಶಾಸ್ತ್ರ ಅಜ್ಜಂಪುರ ಕೃಷ್ಣಸ್ವಾಮಿಯವರು ಬರೆದ ಪುಸ್ತಕ. ಇದು ಕರ್ನಾಟಕದ ಅರಣ್ಯ ಸಂಪತ್ತಿನ ಬಗೆಗಿನ ಪುಸ್ತಕ. ಭಾರತ ಕೃಷಿಪ್ರಾಧಾನ್ಯವಾದ ದೇಶ. ಕರ್ನಾಟಕದಲ್ಲಿಯೂ ಕೃಷಿಯೇ ಮುಖ್ಯ ಬದುಕು. ಅರಣ್ಯಗಳು ಕೃಷಿಗೆ ತಾಯಿಯಂತೆ ಆಸರೆ ಕೊಟ್ಟು, ಕೃಷಿಯ ಅಭಿವೃದ್ಧಿಗೆ ನೆರವಾಗುತ್ತಿವೆ. ವಿವಿಧ ಭೂಗುಣ ಹವಾಗುಣಗಳಿಗೆ ಒಗ್ಗುವ ಮರಜಾತಿಗಳು, ಸಾಲುಮರಗಳು, ಉದ್ಯಾನವನದ ಮರಗಳು, ಅಂದದ ಹಂದರದ ಸುಂದರ ಪುಷ್ಪಗಳ ಮರಗಳು, ಮೇವಿನ ಹುಲ್ಲುಗಳು, ಔಷಧಿಗೆ ಉಪಯುಕ್ತವಾದ ಅನೇಕ ಅಮೂಲ್ಯ ಮರ, ಗಿಡ, ಮೂಲಿಕೆಗಳು, ವನ್ಯಮೃಗ ಪಕ್ಷಿಗಳು, ಸರ್ಪಗಳು, ಅರಣ್ಯ ಕೀಟಗಳು, ಅರಣ್ಯ ಬುಡಕಟ್ಟಿನವರ ರೀತಿ ನೀತಿಗಳು, ಭೂಸವೆತ - ಅದರ ಕಾರಣ, ಪರಿಣಾಮ, ಪರಿಹಾರಗಳು ಹಾಗೂ ಸಾಮಾಜಿಕ ಅರಣ್ಯಗಳ ನಿರ್ಮಾಣ, ನಿರ್ವಹಣೆ, ನೀತಿ, ಅವುಗಳ ಬಗ್ಗೆ ಜನರ ಹೊಣೆ ಇವುಗಳೆಲ್ಲದರ ವಿಶ್ಲೇಷಣೆಗಳೂ ಇಲ್ಲಿ ಸೇರಿವೆ.
ಲೇಖಕರು | ಅಜ್ಜಂಪುರ ಕೃಷ್ಣಸ್ವಾಮಿ |
---|---|
ದೇಶ | ಭಾರತ |
ಭಾಷೆ | ಕನ್ನಡ |
ವಿಷಯ | ಅರಣ್ಯಶಾಸ್ತ್ರ |
ಪ್ರಕಾರ | ಅರಣ್ಯಸಂಪತ್ತು |
ಪ್ರಕಾಶಕರು | ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್ |
ಪ್ರಕಟವಾದ ದಿನಾಂಕ | ೨೦೧೪, ೭ನೇ ಮುದ್ರಣ |
ಪುಟಗಳು | ೪೧೬ |
ಐಎಸ್‍ಬಿಎನ್ | 978-81-8467-383-8 |