ಅಮೆರಿಕ ಸಂಯುಕ್ತ ಸಂಸ್ಥಾನದ ವೀಸಾಗಳು
ಅಮೆರಿಕ ಸಂಯುಕ್ತ ಸಂಸ್ಥಾನದ ವೀಸಾಗಳನ್ನು , ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ ಭೇಟಿ ನೀಡಿದ 6.6 ದಶಲಕ್ಷ ವಿದೇಶಿ ಪ್ರಜೆಗಳಿಗೆ ಹಾಗು 470 ಸಾವಿರ ವಲಸಿಗರಿಗೆ 2008ರಲ್ಲಿ ನೀಡಲಾಗಿತ್ತು.[೧] U.S.ಗೆ ಪ್ರವೇಶಿಸಲು ಬಯಸುವ ಒಬ್ಬ ವಿದೇಶಿ ಪ್ರಜೆಯು ಕೆಳಗಿನವುಗಳನ್ನು ಹೊರತುಪಡಿಸಿ ವೀಸಾ ಪಡೆಯುವುದು ಕಡ್ಡಾಯವಾಗಿದೆ.
- ವೀಸಾ ಮನ್ನಾ ಕಾರ್ಯಕ್ರಮವನ್ನು ಹೊಂದಿರುವ ಮೂವತ್ತಾರು ರಾಷ್ಟ್ರಗಳಲ್ಲಿ ಒಂದು ರಾಷ್ಟ್ರದ ಪ್ರಜೆ,
- ಕೆನಡಾ ಅಥವಾ ಬರ್ಮುಡಾ ಪ್ರಜೆ ಅಥವಾ,
- ವೀಸಾ-ಮುಕ್ತ ಪ್ರಯಾಣಕ್ಕೆ ಕಾನೂನುಬದ್ಧವಾಗಿ ಅನರ್ಹತೆ(ಉದಾಹರಣೆಗೆ ಕ್ರಿಮಿನಲ್(ಅಪರಾಧ)ದಾಖಲೆಗಳನ್ನು ಹೊಂದಿರುವುದು).
ಮೆಕ್ಸಿಕನ್ ಪ್ರಜೆಗಳಿಗೆ ವೀಸಾ ಪಡೆಯಲು ಪ್ರತ್ಯೇಕ ಅವಶ್ಯಕತೆಗಳಿರುತ್ತವೆ.[೨] ಸುಮಾರು 185ರಷ್ಟು ವಿವಿಧ ಮಾದರಿಯ ವೀಸಾಗಳಿವೆ,[೩] U.S.ವೀಸಾಗಳಲ್ಲಿ ಎರಡು ಪ್ರಮುಖ ವರ್ಗಗಳಿವೆ:
- ನಾನ್ ಇಮಿಗ್ರಂಟ್ ವೀಸಾ (ವಲಸೆರಹಿತರ ವೀಸಾ) - ಪ್ರವಾಸ, ವ್ಯಾಪಾರ, ಉದ್ಯಮ ಅಥವಾ ವಿದ್ಯಾಭ್ಯಾಸಕ್ಕಾಗಿ ತಾತ್ಕಾಲಿಕ ಪ್ರವಾಸಗಳಿಗೆ ನೀಡುವ ವೀಸಾ.
- ಇಮಿಗ್ರಂಟ್ ವೀಸಾ (ವಲಸಿಗರ ವೀಸಾ) - ಕಾಲಾವಧಿಯ ಯಾವುದೇ ಪರಿಮಿತಿಯಿಲ್ಲದೆ ಅಮೆರಿಕ ಸಂಯುಕ್ತ ಸಂಸ್ಥಾನದ ಕಾಯಂ ನಿವಾಸಿಗಳಾಗಲು ಬಯಸುವವರಿಗೆ ನೀಡಲಾಗುವಂತಹ ವೀಸಾ.
ವಲಸೆ ಹೋಗಲು, ಒಬ್ಬರ ಬಳಿ ವಲಸಿಗರ ವೀಸಾ ಅಥವಾ ಉಭಯ ಉದ್ದೇಶಗಳಿಗಾಗಿ ಬಳಸುವ ವೀಸಾ ಇರಬೇಕು, ಈ ವೀಸಾ ಕಾಯಂ ನಿವಾಸಿ ಸ್ಥಾನಮಾನಕ್ಕೆ(ಗ್ರೀನ್ ಕಾರ್ಡ್) ಏಕಕಾಲದ ಅರ್ಜಿ ಸಲ್ಲಿಸುವುದಕ್ಕೆ ಸಂಗತವಾಗಿರುತ್ತದೆ ಅಥವಾ ಕಾಯಂ ನಿವಾಸಕ್ಕೆ ಅರ್ಜಿ ಸಲ್ಲಿಸುವ ಉದ್ದೇಶ ಹೊಂದಿರುತ್ತದೆ. ಉದ್ಯೋಗ ವೀಸಾದ ಮೂಲಕ U.S.ಗೆ ಭೇಟಿ ನೀಡುವುದನ್ನು ಹಲವು ಸಂದರ್ಭಗಳಲ್ಲಿ ಮೂರು-ಹಂತದ ಪ್ರಕ್ರಿಯೆಯೆಂದು ವಿವರಿಸಬಹುದು.[೩] ಮೊದಲಿಗೆ, ಸಂಸ್ಥೆಯ ಮಾಲೀಕ U.S. ಪೌರತ್ವ ಮತ್ತು ವಲಸೆ ಸೇವೆಗಳಲ್ಲಿ ಅರ್ಜಿಯನ್ನು ಸಲ್ಲಿಸಿ, ನಿರ್ದಿಷ್ಟ ವ್ಯಕ್ತಿಗೆ, ಕ್ಯಾಟೆಗರಿ ವೀಸಾ(ವೀಸಾ ವಿಭಾಗ)ದ ನಿರ್ದಿಷ್ಟ ಮಾದರಿಯನ್ನು ನೀಡಲು ಕೋರಿಕೊಳ್ಳುತ್ತಾರೆ.[೩] ಸಂಸ್ಥೆಯ ಮಾಲೀಕರ ಅರ್ಜಿಯು ಅಂಗೀಕಾರಗೊಂಡಾಗ, ವ್ಯಕ್ತಿಯು ವೀಸಾಗೆ ಅರ್ಜಿ ಸಲ್ಲಿಸಲು ಮಾತ್ರ ಅದು ಅನುಮತಿ ನೀಡುತ್ತದೆ; ಈ ರೀತಿ ಅಂಗೀಕಾರಗೊಂಡ ಅರ್ಜಿಯು ವಾಸ್ತವವಾಗಿ ವೀಸಾ ಆಗಿರುವುದಿಲ್ಲ.[೩] ವ್ಯಕ್ತಿಯು ನಂತರದಲ್ಲಿ ವೀಸಾಗೆ ಅರ್ಜಿ ಸಲ್ಲಿಸುತ್ತಾನೆ ಹಾಗು ಸಾಮಾನ್ಯವಾಗಿ ಸ್ವದೇಶದಲ್ಲಿರುವ U.S.ನ ರಾಯಭಾರ ಕಚೇರಿ ಅಥವಾ ದೂತಾವಾಸದಲ್ಲಿ ಸಂದರ್ಶನವನ್ನು ನಡೆಸಲಾಗುತ್ತದೆ.[೩] ರಾಯಭಾರ ಕಚೇರಿ ಅಥವಾ ದೂತಾವಾಸವು ವೀಸಾ ನೀಡಿದರೆ, ವ್ಯಕ್ತಿಯು U.S.ಗೆ ಪ್ರಯಾಣ ಮಾಡಲು ಅವಕಾಶ ಮಾಡಿಕೊಡಲಾಗುತ್ತದೆ.[೩] ಗಡಿ ದಾಟುವ ಕಡೆಯಲ್ಲಿ, ವಿಮಾನನಿಲ್ದಾಣದಲ್ಲಿ, ಅಥವಾ U.S.ಗೆ ಪ್ರವೇಶಿಸುವ ಇತರ ಯಾವುದೇ ಸ್ಥಳದಿಂದ, ವ್ಯಕ್ತಿಗಳು U.S. ಸುಂಕ ಮತ್ತು ಗಡಿರಕ್ಷಣೆಯ ಪ್ರತಿನಿಧಿ(ಏಜೆಂಟ್) ಯೊಂದಿಗೆ ಮಾತನಾಡಿ U.S.ಗೆ ಪ್ರವೇಶಿಸಲು ಅನುಮತಿಯನ್ನು ಕೋರುತ್ತಾರೆ.[೩] ಅವರಿಂದ ಅನುಮತಿ ದೊರೆತ ನಂತರ, ವ್ಯಕ್ತಿಯು U.S.ನ್ನು ಪ್ರವೇಶಿಸಬಹುದು[೩] ಒಂದು ಜನಪ್ರಿಯ ತಪ್ಪು ಅಭಿಪ್ರಾಯಕ್ಕೆ ವಿರುದ್ಧವಾಗಿ, U.S.ನ ವೀಸಾ ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ ಒಬ್ಬ ವಿದೇಶೀಯನ ಪ್ರವೇಶಕ್ಕೆ ಅಧಿಕಾರವನ್ನು ನೀಡುವುದಿಲ್ಲ, ಅಥವಾ ಯಾವುದೇ ಒಂದು ನಿರ್ದಿಷ್ಟ ಸ್ಥಾನಮಾನದಲ್ಲಿ U.S.ನಲ್ಲಿ ವಿದೇಶೀಯರು ನೆಲೆಸಲೂ ಸಹ ಅಧಿಕಾರ ನೀಡುವುದಿಲ್ಲ. ಒಂದು U.S.ವೀಸಾ, ವಿದೇಶಿ ವ್ಯಕ್ತಿ ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ ಪ್ರಯಾಣಿಸಲು ನೀಡಲಾಗುವ ಕೇವಲ ಒಂದು ಪೂರ್ವಭಾವಿ ಅನುಮತಿಯಾಗಿ ಹಾಗು ಗೊತ್ತುಪಡಿಸಿದ ಕಾನೂನುಬದ್ಧ ಸ್ಥಳದಲ್ಲಿ ಅಮೆರಿಕಕ್ಕೆ ಪ್ರವೇಶ ಕೋರುವುದಕ್ಕೆ ಅವಕಾಶ ನೀಡುತ್ತದೆ.[೪] ಒಂದು ನಿರ್ದಿಷ್ಟ ಸ್ಥಾನಮಾನದೊಂದಿಗೆ ಹಾಗು ಒಂದು ನಿರ್ದಿಷ್ಟ ಅವಧಿವರೆಗೆ ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ ಕಾನೂನುಬದ್ಧವಾಗಿ ತೆರಳುವ ಸ್ಥಳದಲ್ಲಿ ಅಂತಿಮ ಪ್ರವೇಶವನ್ನು U.S. ವಲಸೆ ಅಧಿಕಾರಿ ಕೈಗೊಳ್ಳುತ್ತಾರೆ. ವಲಸಿಗರಿಗಲ್ಲದ ವೀಸಾ ಆಧಾರದ ಮೇಲೆ U.S.ಗೆ ಪ್ರವೇಶ ನೀಡುವ ವಿದೇಶೀಯರ ಬಗ್ಗೆ ವಿವರಣೆಗಳನ್ನು ವಲಸೆ ಅಧಿಕಾರಿಯು ವಿದೇಶೀಯರ ಫಾರ್ಮ್ I-94ನಲ್ಲಿ ದಾಖಲಿಸುತ್ತಾರೆ(ಅಲ್ಪಾವಧಿಗೆ U.S.ಗೆ ಭೇಟಿಗಳನ್ನು ನೀಡುವ ವೀಸಾ ಮನ್ನಾ ಕಾರ್ಯಕ್ರಮವನ್ನು ಪಾಲಿಸುವ ರಾಷ್ಟ್ರಗಳ ಪ್ರಜೆಗಳಿಗೆ ಫಾರ್ಮ್ I-94W), ಇದು ಅಮೆರಿಕನ್ ಸಂಯುಕ್ತ ಸಂಸ್ಥಾನದಲ್ಲಿ ಆ ವಿದೇಶಿ ವ್ಯಕ್ತಿಯು ವಲಸಿಗರಿಗಲ್ಲದ ವೀಸಾ ಸ್ಥಾನಮಾನದೊಂದಿಗೆ ಹಾಗು ನಿರ್ದಿಷ್ಟ ಕಾಲಾವಧಿವರೆಗೆ ಅಮೆರಿಕದಲ್ಲಿ ಉಳಿದುಕೊಳ್ಳಲು ಅಧಿಕಾರ ನೀಡುವ ಅಧಿಕೃತ ದಾಖಲೆಯಾಗಿರುತ್ತದೆ.[೫]
ಅರ್ಹತಾ ಪ್ರಕ್ರಿಯೆ
ಬದಲಾಯಿಸಿಪ್ರವಾಸಿ ವೀಸಾಕ್ಕೆ ಅರ್ಜಿ ಸಲ್ಲಿಸುವವರು, ವಲಸೆ ಮತ್ತು ರಾಷ್ಟ್ರೀಯತೆ ಕಾಯ್ದೆಯ ನಿಯಮಗಳಡಿಯಲ್ಲಿ ಅರ್ಹತೆಯನ್ನು ಹೊಂದಿರುವ ಬಗ್ಗೆ ದಾಖಲೆ ನೀಡಬೇಕು. ಕಾನೂನಿನ ಪೂರ್ವಭಾವನೆಯೆಂದರೆ, ಪ್ರತಿಯೊಬ್ಬ ಪ್ರವಾಸಿ(ಸಂದರ್ಶಕ) ವೀಸಾ ಅರ್ಜಿದಾರ (ಕೆಲವು ಉದ್ಯೋಗ ಸಂಬಂಧಿ ಅರ್ಜಿದಾರರನ್ನು ಹೊರತುಪಡಿಸಿ, ಇವರು ಈ ನಿಯಮಗಳಿಗೆ ಒಳಪಡುವುದಿಲ್ಲ) ವಲಸೆ ಹೋಗುವ ಉದ್ದೇಶವನ್ನು ಹೊಂದಿರುತ್ತಾರೆ ಎನ್ನುವುದಾಗಿದೆ. ಈ ರೀತಿಯಾಗಿ, ಪ್ರವಾಸಿ ವೀಸಾಕ್ಕೆ ಅರ್ಜಿ ಸಲ್ಲಿಸುವವರು ಈ ಪೂರ್ವಭಾವನೆಯನ್ನು ಹೋಗಲಾಡಿಸಿ, ಈ ಕೆಳಕಂಡ ಅಂಶಗಳನ್ನು ನಿರೂಪಿಸಬೇಕು:
- U.S.ಗೆ ಭೇಟಿ ನೀಡುವ ಅವರ ಉದ್ದೇಶವು ವ್ಯಾಪಾರಕ್ಕಾಗಿ, ವಿಹಾರಕ್ಕಾಗಿ, ಅಥವಾ ವೈದ್ಯಕೀಯ ನೆರವಿಗಾಗಿ;
- ನಿರ್ದಿಷ್ಟ, ಸೀಮಿತ ಅವಧಿಗೆ ಉಳಿಯುವ ತಮ್ಮ ಉದ್ದೇಶ; ಹಾಗು
- U.S.ನ ಹೊರಗೂ ತಮಗೊಂದು ನೆಲೆಯಿದೆಯೆಂದು ಜೊತೆಗೆ ಇತರ ಬದ್ಧಪಡಿಸುವ ನಂಟುಗಳು, ಪ್ರವಾಸದ ನಂತರ ಹಿಂದಿರುಗುವ ಬಗ್ಗೆ ಖಾತ್ರಿಪಡಿಸಬೇಕು.
ಪ್ರವಾಸ ಮಾಡಲು ವೀಸಾಕ್ಕೆ ಅರ್ಜಿಯನ್ನು ಸಲ್ಲಿಸುವ ಎಲ್ಲರೂ $140 U.S. ಡಾಲರ್ ಸಂದರ್ಶನ ಶುಲ್ಕವನ್ನು (ಜೂನ್ 4, 2010ಕ್ಕೆ ಮುಂಚೆ ಇದು 131ಡಾಲರ್‌ನಷ್ಟಿತ್ತು) USನ ದೂತಾವಾಸಕ್ಕೆ ದೂತಾವಾಸದ ಅಧಿಕಾರಿಯಿಂದ ಸಂದರ್ಶನ ಪಡೆಯುವುದಕ್ಕಾಗಿ ಪಾವತಿ ಮಾಡಬೇಕು. ದೂತಾವಾಸದ ಅಧಿಕಾರಿ U.Sಗೆ ಪ್ರಯಾಣಿಸಲು ಅಗತ್ಯವಿರುವ ವೀಸಾ ಪಡೆಯಲು ಅರ್ಜಿದಾರನು ಅರ್ಹನೆ ಎಂಬುದನ್ನು ನಿರ್ಧರಿಸುತ್ತಾರೆ(ಹೆಚ್ಚುವರಿಯಾಗಿ ಅಧಿಕಾರಿಯು ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್ಮೆಂಟ್ ಆಫ್ ಸ್ಟೇಟ್(ಅಮೆರಿಕದ ವಿದೇಶಾಂಗ ಇಲಾಖೆ)ಯನ್ನು ಸೆಕ್ಯೂರಿಟಿ ಅಡ್ವೈಸರಿ ಒಪೀನಿಯನ್ (ಭದ್ರತಾ ಅನುಮತಿ) ಕೇಳಬಹುದು, ಇದು ನಿರ್ಧಾರವಾಗಲು ಹಲವಾರು ವಾರಗಳೇ ಹಿಡಿಯಬಹುದು). ಅರ್ಜಿದಾರನು ಅನರ್ಹಗೊಂಡರೆ, 140 ಡಾಲರ್ ಶುಲ್ಕವನ್ನು ಹಿಂದಕ್ಕೆ ನೀಡಲಾಗುವುದಿಲ್ಲ. ಅರ್ಹತೆಯನ್ನು ನಿರ್ಣಯಿಸುವ ಅಂಶಗಳಲ್ಲಿ ಹಣಕಾಸಿನ ಸ್ವಾತಂತ್ರ್ಯ, ಸಮರ್ಪಕವಾದ ಉದ್ಯೋಗ, ಆಸ್ತಿಪಾಸ್ತಿಗಳು ಹಾಗು ಸ್ವದೇಶದಲ್ಲಿ ಕ್ರಿಮಿನಲ್ ದಾಖಲೆ ಇಲ್ಲದಿರುವುದು ಸೇರಿರುತ್ತದೆ. ವಲಸೆಗಾರಿಕೆ ವೀಸಾ ಪ್ರಕ್ರಿಯೆಯು ಇನ್ನೂ ಹೆಚ್ಚು ಕಟ್ಟುನಿಟ್ಟಾಗಿರುವುದರ ಜೊತೆಗೆ ದುಬಾರಿಯಾಗಿರುತ್ತದೆ. ಎಲ್ಲ ಪ್ರಕ್ರಿಯಾ ಶುಲ್ಕಗಳನ್ನು ಭರ್ತಿ ಮಾಡಿದ ನಂತರ, ಬಹುತೇಕ ವಲಸೆ ವೀಸಾ ಅರ್ಜಿದಾರರು, ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಕಾಯಂ ನಿವಾಸಿಯಾಗಲು 1,000ಕ್ಕೂ ಅಧಿಕ ಡಾಲರ್‌ಗಳನ್ನು ಪಾವತಿ ಮಾಡುತ್ತಾರೆ ಹಾಗು U.S.ಗೆ ವಲಸೆಹೋಗುವ ಮೊದಲು ವಾಸ್ತವವಾಗಿ ಇವರುಗಳು ಹಲವಾರು ವರ್ಷಗಳ ಕಾಲ ಕಾಯಬೇಕಾಗುತ್ತದೆ.
ವೀಸಾದ ದರ್ಜೆಗಳು
ಬದಲಾಯಿಸಿA-1, A-2, ಹಾಗು A-3
ಬದಲಾಯಿಸಿA ವೀಸಾಗಳನ್ನು , "ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ ವಿದೇಶಿ ಸರ್ಕಾರದ ಪ್ರತಿನಿಧಿಗಳಾಗಿ ಪ್ರಯಾಣಿಸಿ, ಆ ಸರ್ಕಾರದ ಪರವಾಗಿ ಅಧಿಕೃತ ಚಟುವಟಿಕೆಗಳಲ್ಲಿ ತೊಡಗುವವರಿಗೆ ನೀಡಲಾಗುತ್ತದೆ." A ದರ್ಜೆಯ ವೀಸಾಗಳನ್ನು ವಿದೇಶ ಸರ್ಕಾರದ ರಾಯಭಾರಿಗಳಿಗೆ, ಮಂತ್ರಿಗಳಿಗೆ, ರಾಜತಾಂತ್ರಿಕರಿಗೆ, ಜೊತೆಗೆ ಇತರ ವಿದೇಶಿ ಸರ್ಕಾರಿ ಅಧಿಕಾರಿಗಳು ಅಥವಾ ಅಧಿಕೃತ ಕೆಲಸಕ್ಕಾಗಿ ಪ್ರಯಾಣ ಬೆಳೆಸುವ ಉದ್ಯೋಗಿಗಳಿಗೆ ನೀಡಲಾಗುತ್ತದೆ. A ವೀಸಾಗಳನ್ನು ಇಂತಹ ವಿದೇಶಿ ಸರ್ಕಾರದ ಅಧಿಕಾರಿಗಳ ಅತ್ಯಂತ ನಿಕಟ ಕುಟುಂಬ ಸದಸ್ಯರಿಗೂ ಸಹ ನೀಡಲಾಗುತ್ತದೆ, ಇವರನ್ನು "ಪ್ರಮುಖ ಅರ್ಜಿದಾರರ ಪತಿ ಅಥವಾ ಪತ್ನಿ ಹಾಗು ಯಾವುದೇ ವಯಸ್ಸಿನ ಅವಿವಾಹಿತ ಪುತ್ರರು ಹಾಗು ಪುತ್ರಿಯರು, ಇತರ ಕುಟುಂಬ ವರ್ಗಕ್ಕೆ ಸೇರಿರದೇ, ಪ್ರಮುಖ ವಿದೇಶಿ ಅರ್ಜಿದಾರರ ಮನೆಯಲ್ಲಿ ಕಾಯಂ ವಾಸಿಸುವಂತಿರಬೇಕು" "ಇವರಲ್ಲಿ ಮುಖ್ಯ ವಿದೇಶೀಯನ ಪತಿ/ಪತ್ನಿಯ ಅತ್ಯಂತ ನಿಕಟ ಕುಟುಂಬ ಸದಸ್ಯರು, ರಕ್ತ ಸಂಬಂಧದಿಂದ, ಮದುವೆಯ ಮೂಲಕ, ಅಥವಾ ದತ್ತುಸ್ವೀಕಾರದ ಮೂಲಕ ಸಂಬಂಧವನ್ನು ಹೊಂದಿದ್ದು, ಇತರ ಕುಟುಂಬಕ್ಕೆ ಸೇರದೆ, ಪ್ರಮುಖ ಅರ್ಜಿದಾರರಾದ ವಿದೇಶಿ ಪ್ರಜೆಯೊಂದಿಗೆ ಸದಾಕಾಲ ವಾಸಿಸುವ ಸದಸ್ಯರು ಹಾಗು ಕಳುಹಿಸಿಕೊಡುತ್ತಿರುವ ಸರ್ಕಾರದಿಂದ ಅರ್ಜಿದಾರರ ಅವಲಂಬಿತರೆಂದು ಮಾನ್ಯತೆ ಪಡೆದವರು ಎಂದು ವ್ಯಾಖ್ಯಾನಿಸಲಾಗಿದೆ.[೬]
B-1 ಹಾಗು B-2
ಬದಲಾಯಿಸಿಅತ್ಯಂತ ಸಾಮಾನ್ಯವಾದ ನಾನ್ ಇಮಿಗ್ರಂಟ್(ವಲಸೆ ರಹಿತ) ವೀಸಾ ಎಂದರೆ ವಿವಿಧೋದ್ದೇಶದ B-1/B-2 ವೀಸಾ, ಇದನ್ನು "ವ್ಯಾಪಾರ ಅಥವಾ ವಿಹಾರಾರ್ಥವಾಗಿ ತಾತ್ಕಾಲಿಕವಾಗಿ ಭೇಟಿ ನೀಡುವವರಿಗೆ ನೀಡಲಾಗುವ ವೀಸಾ." ವೀಸಾ ಅರ್ಜಿದಾರರು ಕೆಲವೊಂದು ಬಾರಿ B-1 (ವ್ಯಾಪಾರಾರ್ಥವಾಗಿ ತಾತ್ಕಾಲಿಕ ಭೇಟಿ ನೀಡುವವರು) ಅಥವಾ B-2 (ವಿಹಾರಾರ್ಥವಾಗಿ ತಾತ್ಕಾಲಿಕ ಭೇಟಿ ನೀಡುವವರು) ವೀಸಾಗಳನ್ನು ಪಡೆಯುತ್ತಾರೆ, ಅವರು ಭೇಟಿ ನೀಡುವ ಉದ್ದೇಶವು ನಿರ್ದಿಷ್ಟವಾಗಿದ್ದರೆ, ಅರ್ಜಿದಾರರು ಸಂಯೋಜಿತ B-1/B-2 ವೀಸಾಗೆ ಅರ್ಹರಲ್ಲ ಎಂಬ ಭಾವನೆಯನ್ನು ದೂತಾವಾಸದ ಅಧಿಕಾರಿ ಹೊಂದಿದ್ದರೆ ವೀಸಾ ಅರ್ಜಿದಾರರು B-1ಅಥವಾ B-2 ವೀಸಾ ಪಡೆಯುತ್ತಾರೆ.
J-1
ಬದಲಾಯಿಸಿಪ್ರವಾಸಿ ವಿನಿಮಯ ಕಾರ್ಯಕ್ರಮ ಫುಲ್ ಬ್ರೈಟ್-ಹೇಸ್ ಕಾಯಿದೆ , 1961ರ ನಿಯಮಗಳ ಅನ್ವಯ ನಡೆಸಲಾಗುತ್ತದೆ, ಇದು 1961ರ ಪರಸ್ಪರ ಶಿಕ್ಷಣ ಮತ್ತು ಸಾಂಸ್ಕೃತಿಕ ವಿನಿಮಯ ಕಾಯ್ದೆ ಎಂದು ಅಧಿಕೃತವಾಗಿ ಹೆಸರಾಗಿದೆ.(Pub.L. 87–256, 75 Stat. 527). ಈ ಕಾಯಿದೆಯ ಉದ್ದೇಶವೆಂದರೆ ಅಮೆರಿಕ ಸಂಯುಕ್ತ ಸಂಸ್ಥಾನದ ಜನರು ಹಾಗು ಇತರ ರಾಷ್ಟ್ರದ ಜನರ ನಡುವೆ ಪರಸ್ಪರ ಅರಿವನ್ನು ಶಿಕ್ಷಣ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳ ವಿನಿಮಯದ ಮೂಲಕ ಹೆಚ್ಚಿಸುವುದು. ಎಕ್ಸ್‌ಚೇಂಜ್ ವಿಸಿಟರ್ ಪ್ರೋಗ್ರಾಮ್ (ಪ್ರವಾಸಿ ವಿನಿಮಯ ಕಾರ್ಯಕ್ರಮ)ನ್ನು ಶಿಕ್ಷಣ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಬ್ಯೂರೊ ನ ವಿನಿಮಯ ಸಮನ್ವಯ ಮತ್ತು ನೇಮಕಾತಿ ಕಚೇರಿಯ ಮೇಲ್ವಿಚಾರಣೆಯಲ್ಲಿರುತ್ತದೆ. ಪ್ರವಾಸಿ ವಿನಿಮಯ ಕಾರ್ಯಕ್ರಮದ ಜವಾಬ್ದಾರಿಗಳನ್ನು ನಿರ್ವಹಿಸಲು, ಇಲಾಖೆಯು, ಸರ್ಕಾರಿ ಹಾಗು ಖಾಸಗಿ ಘಟಕಗಳು ವಿನಿಮಯದ ಪ್ರಾಯೋಜಕರಾಗಿ ಕಾರ್ಯನಿರ್ವಹಿಸುವಂತೆ ನಿಯೋಜಿಸುತ್ತದೆ. ಪ್ರಾಯೋಜಿತ ಸಂಸ್ಥೆಗಳು, ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ ವಿನಿಮಯ ಪ್ರವಾಸಿಗಳಾಗಿ ಪ್ರವೇಶಕ್ಕೆ ಅನುಕೂಲ ಮಾಡಿಕೊಟ್ಟು ವಿನಿಮಯ ಪ್ರವಾಸ ಕಾರ್ಯಕ್ರಮ ವರ್ಗಗಳಲ್ಲಿ ಒಂದರ ಉದ್ದೇಶಗಳನ್ನು ಪೂರ್ಣಗೊಳಿಸಲು ಸಹಾಯ ಮಾಡುತ್ತವೆ, ಅವುಗಳೆಂದರೆ:
- ಔ ಪೇರ್ (ಕುಟುಂಬದಲ್ಲಿ ವಾಸಿಸುವುದಕ್ಕೆ ಪ್ರತಿಯಾಗಿ ಮನೆಕೆಲಸದಲ್ಲಿ ನೆರವಾಗುವುದು) ಹಾಗು ಶೈಕ್ಷಣಿಕ ನೆರವು.
- ಕ್ಯಾಂಪ್ ಕೌನ್ಸಿಲರ್(ಶಿಬಿರದ ಉಸ್ತುವಾರಿ)
- ವಿದ್ಯಾರ್ಥಿ, ಕಾಲೇಜು/ವಿಶ್ವವಿದ್ಯಾಲಯ
- ವಿದ್ಯಾರ್ಥಿ, ಸೆಕೆಂಡರಿ ಶಿಕ್ಷಣ
- ಸರ್ಕಾರದ ವತಿಯಿಂದ ಪ್ರವಾಸ
- ಅಂತಾರಾಷ್ಟ್ರೀಯ ಪ್ರವಾಸಿಗ(ವಿದೇಶಾಂಗ ಇಲಾಖೆಯ ಬಳಕೆಗೆ ಮೀಸಲಾಗಿದೆ)
- ವೈದ್ಯ
- ಪ್ರಾಧ್ಯಾಪಕ ಅಥವಾ ಸಂಶೋಧನಾ ವಿದ್ಯಾರ್ಥಿ
- ಅಲ್ಪಾವಧಿಯ ವಿದ್ವಾಂಸ(ಈ ವಿಭಾಗದಿಂದ ಭಾಗವಹಿಸುವವರಿಗೆ ನೀಡಲಾಗುವ ಗರಿಷ್ಠ ಅವಧಿಯೆಂದರೆ ಆರು ತಿಂಗಳು; ಕಾರ್ಯಕ್ರಮದ ವಿಸ್ತರಣೆಗಳಿಗೆ ಅನುಮತಿಯಿಲ್ಲ)
- ವಿಶೇಷಜ್ಞ(ಈ ವಿಭಾಗದಿಂದ ಭಾಗವಹಿಸುವವರಿಗೆ ನೀಡಲಾಗುವ ಗರಿಷ್ಠ ಅವಧಿಯೆಂದರೆ ಒಂದು ವರ್ಷ)
- ಬೇಸಿಗೆಯಲ್ಲಿ ಕೆಲಸ/ಪ್ರಯಾಣ
- ಶಿಕ್ಷಕ
- ಶಿಕ್ಷಣಾರ್ಥಿ(ಈ ವಿಭಾಗದಿಂದ ಭಾಗವಹಿಸುವವರಿಗೆ ಗರಿಷ್ಠ 18 ತಿಂಗಳುಗಳ ಕಾಲಾವಧಿ ನೀಡಲಾಗುತ್ತದೆ, ಕೃಷಿ ಕಾರ್ಯಕ್ರಮಗಳನ್ನು(12 ತಿಂಗಳಿಗೆ ಸೀಮಿತ) ಹಾಗು ಆತಿಥ್ಯ ತರಬೇತಿ ಕಾರ್ಯಕ್ರಮಗಳನ್ನು ಹೊರತುಪಡಿಸಲಾಗಿದೆ.(12 ತಿಂಗಳ ಗರಿಷ್ಠ ಅವಧಿಗೆ ಸೀಮಿತವಾಗಿದೆ, ಆರು ತಿಂಗಳಿಗೂ ಹೆಚ್ಚಿನ ಅವಧಿ ನಡೆಯುವ ಆತಿಥ್ಯ ತರಬೇತಿ ಕಾರ್ಯಕ್ರಮವು ಕಡೆ ಪಕ್ಷ ಮೂರು ಇಲಾಖೆಗಳ ಕ್ರಮಬದ್ಧ ಸರದಿಗಳನ್ನು ಹೊಂದಿರುವ ಅಗತ್ಯವಿದೆ.).
H-1B
ಬದಲಾಯಿಸಿH-1B ವರ್ಗೀಕರಣವು ನಿರ್ದಿಷ್ಟ ಶೈಕ್ಷಣಿಕ ಕ್ಷೇತ್ರದಲ್ಲಿ ಕನಿಷ್ಠ ಪದವಿಯ ಅವಶ್ಯಕತೆಯಿರುವ ವೃತ್ತಿಪರ-ಮಟ್ಟದ ಉದ್ಯೋಗಗಳಿಗೆ ನೀಡಲಾಗುತ್ತದೆ. ಇದರ ಜೊತೆಯಲ್ಲಿ, ಉದ್ಯೋಗಿಗಳು ಪದವಿ ಅಥವಾ ಶಿಕ್ಷಣ ಹಾಗು ಅನುಭವದ ಮೂಲಕ ಪದವಿಗೆ ಸಮಾನವಾದ ಶಿಕ್ಷಣವನ್ನು ಪಡೆದಿರುವ ಅಗತ್ಯವಿರುತ್ತದೆ. USCISಗೆ H-1B ಮನವಿಯನ್ನು ಸಲ್ಲಿಸುವ ಮುಂಚೆ, ಸಂಸ್ಥೆಯ ಮಾಲೀಕರು ಕಾರ್ಮಿಕ ಇಲಾಖೆ ಜತೆಗೆ "ಲೇಬರ್ ಕಂಡೀಷನ್ ಅಪ್ಲಿಕೇಶನ್"(LCA)(ದುಡಿಮೆಯ ಷರತ್ತು ಅರ್ಜಿ) ಭರ್ತಿ ಮಾಡಬೇಕು ಜತೆಗೆ ಸಂಸ್ಥೆಯು ಉದ್ಯೋಗ ಸ್ಥಳದ ಭೌಗೋಳಿಕ ಪ್ರದೇಶದಲ್ಲಿ, ಈ ಸ್ಥಾನಕ್ಕೆ ಅಗತ್ಯವಿರುವಷ್ಟು ಸಂಬಳ ನೀಡಲಾಗುತ್ತಿದೆ ಎಂಬುದನ್ನು ನಿರೂಪಿಸಬೇಕು. ಈ ಸ್ಥಾನಕ್ಕೆ ಅಗತ್ಯವಿರುವ ಸಂಬಳವು, ಇದೇ ಸ್ಥಾನದಲ್ಲಿರುವ ಇತರ ನೌಕರರಿಗೆ ನೀಡಲಾಗುತ್ತಿರುವ "ವಾಸ್ತವ ಸಂಬಳಕ್ಕಿಂತ" ಅಧಿಕವಾಗಿರಬೇಕು ಅಥವಾ ಮಾಲೀಕರ ಸ್ವಂತ ಸಂಬಳ ಸಮೀಕ್ಷೆ ಸೇರಿದಂತೆ ಯಾವುದೇ ಮೂಲವನ್ನು ಬಳಸಿಕೊಂಡು "ಚಾಲ್ತಿಯಲ್ಲಿರುವ ಸಂಬಳ ನಿರ್ಧರಿಸಬೇಕು. ಸಂಸ್ಥೆಯ ಮಾಲೀಕರು LCAಯನ್ನು ಸಲ್ಲಿಸಿದಾಗ, ಕಾನೂನು ನಿರ್ದಿಷ್ಟವಾಗಿ ಅಂಗೀಕಾರ ಪ್ರಕ್ರಿಯೆಯನ್ನು ಸೀಮಿತಗೊಳಿಸುತ್ತದೆ, ಈ ರೀತಿಯಾಗಿ LCAಗಳು ಸಾಮಾನ್ಯವಾಗಿ "ಅಪೂರ್ಣ ಅಥವಾ ಸ್ಪಷ್ಟವಾಗಿಲ್ಲದಿದ್ದರೆ" ಮಾತ್ರ ತಿರಸ್ಕೃತಗೊಳ್ಳುತ್ತವೆ (8 U.S.C. 1182 (n)). ಮಾಲೀಕರು, ಚಾಲ್ತಿಯಲ್ಲಿರುವ ಸಂಬಳವೆಂದು ಯಾವುದನ್ನು ಬೇಕಾದರೂ ಸಮರ್ಥಿಸಿಕೊಳ್ಳಬಹುದು ಹಾಗು ಈ ರೀತಿಯಾದಾಗ LCA ಅಂಗೀಕಾರಗೊಳ್ಳುವುದು ಖಚಿತ. F.Y. 2005ರಲ್ಲಿ <<1%ನಷ್ಟು LCAಗಳು ತಿರಸ್ಕೃತಗೊಂಡಿದ್ದವು. ಚಾಲ್ತಿಯಲ್ಲಿರುವ ಸಂಬಳದ ಬಗ್ಗೆ ಆಧಾರಗಳು ಕ್ರಮಬದ್ಧವಾಗಿಲ್ಲದ ಪ್ರಕರಣಗಳಲ್ಲಿ(ಉದಾಹರಣೆಗೆ ಸ್ಥಳೀಯ ಸಮೀಕ್ಷೆಗಿಂತ ಒಂದು ರಾಷ್ಟ್ರೀಯ ಸಮೀಕ್ಷೆ ಅಥವಾ ನೆಲೆ ಮತ್ತು ಸ್ಥಳಕ್ಕೆ ನೀಡುವ ಸಂಬಳಕ್ಕಿಂತ ಹೆಚ್ಚಾಗಿ ಪ್ರವೇಶ ಹಂತದ ಸಂಬಳ ಸಮೀಕ್ಷೆ) ಅಥವಾ ಚಾಲ್ತಿಯಲ್ಲಿರುವ ಸಂಬಳವನ್ನು ತಪ್ಪಾಗಿ ನಿರೂಪಿಸಿದಾಗ(ಉದಾಹರಣೆಗೆ ತಪ್ಪಾಗಿ ಸೃಷ್ಟಿಸಲಾದಾಗ ಅಥವಾ 25ನೇ ಶೇಖಡಕ ಸಂಬಳವನ್ನು ಬಳಸಿದಾಗ) LCA ನಿಯತಕ್ರಮದಲ್ಲಿ ಅಂಗೀಕಾರಗೊಳ್ಳುತ್ತವೆ. ಜನಪ್ರಿಯ ನಂಬಿಕೆಗೆ ವಿರುದ್ಧವಾಗಿ, ಮಾಲೀಕರು H-1Bನೌಕರರನ್ನು ನೇಮಕ ಮಾಡುವುದಕ್ಕೆ ಮುಂಚಿತವಾಗಿ U.S. ನೌಕರರು ಸಿಗುವುದು ಸಾಧ್ಯವಿಲ್ಲ ಎಂದು ಸಾಬೀತು ಮಾಡುವ ಅಗತ್ಯವು ಯಾವೊಂದು ಸಂದರ್ಭದಲ್ಲೂ ಇರುವುದಿಲ್ಲ. "H-1B-ಅವಲಂಬಿತ ಮಾಲೀಕರ" ಪ್ರಕರಣದಲ್ಲಿ(ಸಾಮಾನ್ಯವಾಗಿ ಶೇಕಡ 15ಕ್ಕೂ ಅಧಿಕ ನೌಕರರು H-1B ವೀಸಾದ ಮೇಲೆ ಅವಲಂಬಿತರಾಗಿರುತ್ತಾರೆ), ಕಾನೂನಿನ ಪ್ರಕಾರ ಇಂತಹ ಮಾಲೀಕರು "ಸದುದ್ದೇಶ"ದಿಂದ U.S.ನೌಕರರನ್ನು ನೇಮಕ ಮಾಡಿಕೊಳ್ಳುವ ಅಗತ್ಯವಿರುತ್ತದೆ 8 U.S.C. 1182(n) (1)(G)). ಆದಾಗ್ಯೂ, ಪರಿಣಾಮಕಾರಿಯಾಗಿ ಜಾರಿಮಾಡುವ ಯಾವುದೇ ಒಂದು ಸರಿಯಾದ ಕಾರ್ಯವಿಧಾನವಿಲ್ಲ. ಸಾಮಾನ್ಯ ನಿಯಮದಂತೆ, ವಲಸಿಗನಲ್ಲದ ಸ್ಥಾನಮಾನದಲ್ಲಿರುವ ಒಬ್ಬ ವ್ಯಕ್ತಿಯು ತನ್ನ ಸ್ಥಾನಮಾನವನ್ನು ಬದಲಿಸಿಕೊಳ್ಳುವಂತಿಲ್ಲ ಅಥವಾ ಅಂತಹ ಸ್ಥಾನಮಾನದಲ್ಲಿರುವ ಮಾಲೀಕರನ್ನು ಬದಲಿಸಿಕೊಳ್ಳುವಂತಿಲ್ಲ, ಇಂತಹ ಬದಲಾವಣೆಯನ್ನು ಕೋರಿ ಆತ ಅಥವಾ ಆಕೆ USCISಗೆ ಅರ್ಜಿ ಸಲ್ಲಿಸಿ,ಅಂತಹ ಬದಲಾವಣೆಗೆ ಅನುಮತಿ ಸಿಕ್ಕುವ ತನಕ ಬದಲಾಯಿಸುವಂತಿಲ್ಲ. ಆದಾಗ್ಯೂ, "H-1B ಪೋರ್ಟಬಿಲಿಟಿ(ಚಲಿಸುವುದು)" ಎಂಬ ನಿಬಂಧನೆಯು, ಈಗಾಗಲೇ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ H-1B ಸ್ಥಾನಮಾನದಲ್ಲಿರುವ ಕೆಲವು ವ್ಯಕ್ತಿಗಳಿಗೆ, ಹೊಸ ಸಂಸ್ಥೆಯ ಮಾಲೀಕರು USCISನೊಂದಿಗೆ H-1B ಅರ್ಜಿ ಸಲ್ಲಿಸಿದಾಗ ಹೊಸ ಮಾಲೀಕರಿಗೆ ತಮ್ಮ ಸೇವೆಯನ್ನು ಆರಂಭಿಸಲು ಅವಕಾಶ ನೀಡುತ್ತದೆ. H-1B ವೀಸಾವನ್ನು ಪಡೆಯಲು, ಸಂಸ್ಥೆಯ ಮಾಲೀಕರು, ಈಗಾಗಲೇ ಚಾಲ್ತಿಯಲ್ಲಿರುವ ಸ್ಥಳೀಯ ಸಂಬಳಕ್ಕಿಂತ ಅಧಿಕ ಸಂಬಳವನ್ನು ಅಥವಾ ಅಷ್ಟೇ ಶಿಕ್ಷಣ ಮತ್ತು ಅನುಭವ ಹೊಂದಿರುವ U.S. ಪ್ರಜೆಗಳಿಗೆ ನೀಡುತ್ತಿರುವ ಸಂಬಳದಷ್ಟೇ ಸಂಬಳವನ್ನು ನೀಡುವುದಾಗಿ ತೋರಿಸಬೇಕು. ಕೆಲಸವನ್ನು ನಿರ್ವಹಿಸಲು ಅಮೆರಿಕದ ನೌಕರರು ದೊರಕುತ್ತಿಲ್ಲವೆಂಬುದನ್ನು ಮಾಲೀಕರು ಸಾಬೀತು ಮಾಡುವ ಅಗತ್ಯವಿರುವುದಿಲ್ಲ. ಆದಾಗ್ಯೂ, ಕೆಲವು ಅರ್ಥಶಾಸ್ತ್ರಜ್ಞರು, H-1Bಯ ವಿಸ್ತರಣೆಯು ಅಮೆರಿಕನ್ ಮಧ್ಯಮವರ್ಗದ ಮೇಲಿನ ಆಕ್ರಮಣ ಹಾಗು ಇದು ಶ್ರೀಮಂತ ವರ್ಗಕ್ಕೆ ಪ್ರಯೋಜನಕಾರಿಯಾಗಿದ್ದು, ಸಾಂಪ್ರದಾಯಿಕ ಅಮೆರಿಕದ ಜೀವನಮಟ್ಟವನ್ನು ನಿರ್ವಹಿಸಲು ಅಥವಾ ಅತ್ಯಂತ ಕಟ್ಟುನಿಟ್ಟಿನ ವಲಸೆಗಾರಿಕೆ ನಿಯಮಗಳೊಂದಿಗಿರುವ ಜಪಾನಿನಂತ ರಾಷ್ಟ್ರಗಳ ರೀತಿಯಲ್ಲಿ ಉತ್ಪಾದಕತೆಯನ್ನು ಸುಧಾರಿಸುವುದಕ್ಕಾಗಿ ಪ್ರೋತ್ಸಾಹಧನವನ್ನು ನೀಡಲು ಅಸಾಧ್ಯವಾಗುತ್ತದೆ ಎಂದು ಭಾವಿಸಿದ್ದಾರೆ. H-1B ವೀಸಾದ ಆಧಾರದ ಮೇಲೆ ನೌಕರರನ್ನು ನೇಮಕ ಮಾಡಿಕೊಂಡ ಸಂಸ್ಥೆಗಳು ಸಾಮಾನ್ಯವಾಗಿ, ತಮ್ಮ ಸಂಸ್ಥೆಗೆ ಅಗತ್ಯವಿರುವ ನಿರ್ದಿಷ್ಟ ಕಾರ್ಯವನ್ನು ನಿರ್ವಹಿಸಲು U.S. ಅತ್ಯಂತ ಕುಶಲಿ ಅಮೆರಿಕದ ನೌಕರರ ಕೊರತೆಯನ್ನು ಹೊಂದಿದೆಯೆಂದು ವಾದಿಸುತ್ತವೆ. ಹಲವು ಅರ್ಥಶಾಸ್ತ್ರಜ್ಞರು, ಇಂತಹ ವಿದೇಶಿ ನೌಕರರನ್ನು ನೇಮಕ ಮಾಡಿಕೊಳ್ಳುವುದರಿಂದ U.S.ಗೆ ಹೆಚ್ಚಿನ ಅನುಕೂಲಗಳಿವೆಯೆಂದು ವಾದಿಸುತ್ತಾರೆ, ಇಲ್ಲದಿದ್ದರೆ ನೇಮಕ ಮಾಡಿಕೊಳ್ಳುವ ಸಂಸ್ಥೆಗಳು ಇಡೀ ನಿರ್ವಹಣೆಯನ್ನು ವಿದೇಶಕ್ಕೆ ವರ್ಗಾಯಿಸುತ್ತವೆಂದು ವಾದಿಸುತ್ತವೆ. ಇದು ಒಟ್ಟಾರೆಯಾಗಿ U.S.ನ ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರಬಹುದೆಂದು ಅಭಿಪ್ರಾಯ ಪಡಲಾಗಿದೆ, ಏಕೆಂದರೆ ಮೊದಲ ಸನ್ನಿವೇಶದಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ವಾಸಿಸುವ ವಿದೇಶಿ ಪ್ರಜೆಗಳು ಕಡೇಪಕ್ಷ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಹಣವನ್ನು ವ್ಯಯಿಸುತ್ತಾರೆ, ಆದರೆ ಬಹುರಾಷ್ಟ್ರೀಯ ಸಂಸ್ಥೆಗಳು, ಉದ್ದೇಶಪೂರ್ವಕವಾಗಿ ವಿದೇಶಗಳಲ್ಲಿರುವ ಸ್ಥಳಗಳಿಗೆ ಉದ್ಯೋಗಗಳನ್ನು ರಫ್ತು ಮಾಡಿದರೆ ಅವರಿಂದ ಖರೀದಿ ಮಾಡುವ U.Sಗ್ರಾಹಕರಿಗೆ ಹೆಚ್ಚು ಉಳಿತಾಯಗಳನ್ನು ಬಹುಶಃ ವರ್ಗಾಯಿಸುವುದಿಲ್ಲ.
L-1 ಅಂತರ್‌ಸಂಸ್ಥೆ ವರ್ಗಾಯಿತ
ಬದಲಾಯಿಸಿL-1 ವರ್ಗೀಕರಣವನ್ನು ವಿದೇಶದಲ್ಲಿರುವ ಸಂಬಂಧಿತ ಸಂಸ್ಥೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಕಡೇಪಕ್ಷ ಒಂದು ವರ್ಷ ಕೆಲಸ ಮಾಡಿದ್ದು, ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಆ ಸಂಸ್ಥೆಯ ಕಚೇರಿ ಅಥವಾ ಅಂಗಸಂಸ್ಥೆಯಲ್ಲಿ ಕಾರ್ಯನಿರ್ವಹಕರಾಗಿ ಅಥವಾ ವ್ಯವಸ್ಥಾಪಕನಾಗಿ (L-1A) ಅಥವಾ ವಿಶೇಷ ಜ್ಞಾನದ ಸಾಮರ್ಥ್ಯದೊಂದಿಗೆ (L-1B) ಬರುವ ಅಂತಾರಾಷ್ಟ್ರೀಯ ವರ್ಗಾಯಿತರಿಗೆ ನೀಡಲಾಗುತ್ತದೆ. ಅಂತಾರಾಷ್ಟ್ರೀಯ ಕಾರ್ಯನಿರ್ವಾಹಕರಾಗಿ ಅರ್ಹತೆಯನ್ನು ಪಡೆಯಲು, ಉದ್ಯೋಗಿಯು ಈ ಕೆಳಕಂಡ ಅಗತ್ಯಗಳನ್ನು ಪೂರೈಸಬೇಕು:
- ಸಂಸ್ಥೆಯ ಆಡಳಿತ ಮಂಡಳಿಗೆ ಅಥವಾ ಪ್ರಮುಖ ಅಂಗ ಅಥವಾ ಕಾರ್ಯನಿರ್ವಹಣೆಗೆ ನಿರ್ದೇಶನ ನೀಡುವುದು,
- ಸಂಸ್ಥೆಯ, ಅಂಗದ, ಅಥವಾ ಕಾರ್ಯನಿರ್ವಹಣೆಯ ಉದ್ದೇಶಗಳು ಹಾಗು ಯೋಜನೆಗಳನ್ನು ರೂಪಿಸುವುದು;
- ವಿವೇಚಿತ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ವ್ಯಾಪಕ ಸ್ವಾತಂತ್ರ್ಯದಿಂದ ವ್ಯವಹರಿಸಬೇಕು; ಹಾಗು
- ಉನ್ನತ ಮಟ್ಟದ ಕಾರ್ಯನಿರ್ವಾಹಕರಿಂದ, ಮಂಡಳಿಯ ನಿರ್ದೇಶಕರುಗಳಿಂದ, ಅಥವಾ ಸಂಸ್ಥೆಯ ಪಾಲುದಾರರಿಂದ ಕೇವಲ ಸಾಮಾನ್ಯ ಮೇಲ್ವಿಚಾರಣೆ ಅಥವಾ ನಿರ್ದೇಶನವನ್ನು ಪಡೆಯಬೇಕು.
ಅಂತಾರಾಷ್ಟ್ರೀಯ ವ್ಯವಸ್ಥಾಪಕರಾಗಿ ಅರ್ಹತೆ ಪಡೆಯಲು, ಉದ್ಯೋಗಿಯು ಈ ಕೆಳಕಂಡ ಅಗತ್ಯಗಳನ್ನು ಹೊಂದಿರಬೇಕು:
- ಸಂಸ್ಥೆಯ ಒಂದು ವಿಭಾಗ, ಉಪವಿಭಾಗ, ಸಂಸ್ಥೆಯ ಕಾರ್ಯನಿರ್ವಹಣೆ ಅಥವಾ ಅಂಗವನ್ನು ನಿರ್ವಹಿಸಬೇಕು.
- ಇತರ ಮೇಲ್ವಿಚಾರಕರು, ವೃತ್ತಿಪರರು ಅಥವಾ ವ್ಯವಸ್ಥಾಪನೆ ಹುದ್ದೆಯಲ್ಲಿರುವ ನೌಕರರ ಕೆಲಸವನ್ನು ಮೇಲ್ವಿಚಾರಣೆ ಮಾಡುವುದರ ಜೊತೆಗೆ ಅದನ್ನು ನಿಯಂತ್ರಿಸಬೇಕು, ಅಥವಾ ಸಂಸ್ಥೆಯೊಳಗೆ, ಅಥವಾ ವಿಭಾಗದೊಳಗೆ ಅಥವಾ ಸಂಸ್ಥೆಯ ಉಪವಿಭಾಗದೊಳಗೆ ಅಗತ್ಯವಿರುವ ಕಾರ್ಯವನ್ನು ನಿರ್ವಹಿಸುವುದು;
- ನೇಮಕ ಮಾಡಿಕೊಳ್ಳುವ ಹಾಗು ಕೆಲಸದಿಂದ ವಜಾಗೊಳಿಸುವ ಅಧಿಕಾರ, ಅಥವಾ ಕೆಲಸಕ್ಕೆ ನೇಮಕ ಮಾಡಿಕೊಳ್ಳಲು ಹಾಗು ವಜಾಗೊಳಿಸುವ ಮತ್ತು ಇತರೆ ವೈಯಕ್ತಿಕ ಕ್ರಮಗಳಿಗೆ ಶಿಫಾರಸು ಮಾಡುವ ಅಧಿಕಾರ(ಉದಾಹರಣೆಗೆ ಬಡ್ತಿ ನೀಡುವುದು ಅಥವಾ ರಜೆಯನ್ನು ನೀಡುವ ಅಧಿಕಾರ), ಅಥವಾ ಯಾವುದೇ ನೌಕರರು ನೇರವಾಗಿ ಮೇಲ್ವಿಚಾರಣೆಗೆ ಒಳಪಡದಿದ್ದಾಗ, ಸಂಸ್ಥೆಯ ಶ್ರೇಣಿ ವ್ಯವಸ್ಥೆಯೊಳಗೆ ಹಿರಿಯ ಮಟ್ಟದಲ್ಲಿ ಅಥವಾ ನಿರ್ವಹಿಸಲಾದ ಕಾರ್ಯಗಳಿಗೆ ಸಂಬಂಧಿಸಿದಂತೆ ಕಾರ್ಯನಿರ್ವಹಣೆಗಳು; ಹಾಗು
- ನೌಕರನು ಅಧಿಕಾರ ಹೊಂದಿರುವ ದಿನನಿತ್ಯದ ಚಟುವಟಿಕೆ ಅಥವಾ ಕೆಲಸದ ಮೇಲೆ ಸ್ವಂತ ವಿವೇಚನೆಯನ್ನು ಚಲಾಯಿಸುವುದು.
ವಿಶೇಷ ಪರಿಣತಿಯುಳ್ಳ ವರ್ಗಾಯಿತನಾಗಿ ಅರ್ಹನಾಗಬೇಕಾದರೆ, ನೌಕರನು ಈ ಕೆಳಕಂಡ ಅಗತ್ಯಗಳನ್ನು ಪೂರೈಸಬೇಕು:
- ಸಂಸ್ಥೆಯ ಉತ್ಪನ್ನ ಹಾಗು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅದರ ಬಳಕೆಯ ಕುರಿತು ಜ್ಞಾನವನ್ನು ಹೊಂದಿರಬೇಕು; ಅಥವಾ
- ಸಂಸ್ಥೆಯ ಪ್ರಕ್ರಿಯೆಗಳು ಹಾಗು ವಿಧಾನಗಳ ಬಗ್ಗೆ ಹೆಚ್ಚಿನ ಮಟ್ಟದ ಜ್ಞಾನವನ್ನು ಹೊಂದಿರಬೇಕು.
ನಿರ್ದಿಷ್ಟ ಸಂಸ್ಥೆಯಲ್ಲಿ ಸಾಮಾನ್ಯವಾಗಿ ಕಂಡುಬರುವ ಜ್ಞಾನಕ್ಕಿಂತ ಭಿನ್ನವಾಗಿದ್ದರೆ ವಿಶೇಷ ಜ್ಞಾನವನ್ನು ನೌಕರನು ಹೊಂದಿರಬೇಕು. ವಿಶೇಷ ಜ್ಞಾನವನ್ನು ಹೊಂದಿರುವ ಒಬ್ಬ ನೌಕರನ ಸಂಭಾವ್ಯ ಲಕ್ಷಣಗಳೆಂದರೆ, ಮಾರುಕಟ್ಟೆಯಲ್ಲಿ ಸಂಸ್ಥೆಯ ಮಾಲೀಕರ ಸ್ಪರ್ಧಾತ್ಮಕತೆಗೆ ಮೌಲ್ಯಯುತವಾದ ಜ್ಞಾನ; ಆ ಕ್ಷೇತ್ರದಲ್ಲಿ ಸಾಮಾನ್ಯವಾಗಿ ಕಂಡುಬರದ ವಿಶೇಷ ಜ್ಞಾನದ ಫಲವಾಗಿ ವಿದೇಶಿ ನಿರ್ವಹಣಾ ಪರಿಸ್ಥಿತಿಗಳ ಬಗ್ಗೆ ಅರಿವು; ಮಾಲೀಕನ ಉತ್ಪಾದಕತೆ, ಸ್ಪರ್ಧಾತ್ಮಕತೆ, ವರ್ಚಸ್ಸು ಅಥವಾ ಹಣಕಾಸಿನ ಸ್ಥಾನಮಾನವನ್ನು ಹೆಚ್ಚಿಸುವಂತೆ ಮಹತ್ವದ ಕಾರ್ಯಭಾರಗಳನ್ನು ವಿದೇಶದಲ್ಲಿ ನಿರ್ವಹಿಸಿರಬೇಕು; ಸಾಧಾರಣವಾಗಿ ಆ ಮಾಲೀಕನೊಂದಿಗೆ ಪೂರ್ವಭಾವಿ ಕೆಲಸ ಮಾಡಿದ ಅನುಭವದಿಂದ ಪಡೆದ ಜ್ಞಾನ; ಅಥವಾ ಇನ್ನೊಬ್ಬ ವ್ಯಕ್ತಿಗೆ ಸುಲಭವಾಗಿ ವರ್ಗಾವಣೆ ಮಾಡಲಾಗದ ಅಥವಾ ಬೋಧಿಸಲಾಗದ ಉತ್ಪನ್ನ ಅಥವಾ ಪ್ರಕ್ರಿಯೆಯ ಜ್ಞಾನವನ್ನು ಹೊಂದಿರಬೇಕು.
ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಕೆಲಸ ಮಾಡಲು ಕೆನೆಡಿಯನ್ನರು/ಮೆಕ್ಸಿಕನ್ನರಿಗೆ ನೀಡಲಾಗುವ TN ವೀಸಾ (TN-1)
ಬದಲಾಯಿಸಿTN ಸ್ಥಾನಮಾನದ ಬಗ್ಗೆ ಸಾಮಾನ್ಯ ಮಾಹಿತಿ
ಬದಲಾಯಿಸಿ1994 ಜನವರಿ 1ರಿಂದ ಜಾರಿಗೆ ಬರುವಂತೆ,(NAFTA), ಕೆಲವು ಕೆನಡ ಹಾಗು ಮೆಕ್ಸಿಕೊದ ಉದ್ಯೋಗಿಗಳಿಗೆ ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ(U.S.) ಪ್ರಯಾಣ ಮಾಡಲು ಹಾಗು ಅಲ್ಲಿ ಉದ್ಯೋಗಕ್ಕೆ ಅವಕಾಶ ಮಾಡಿಕೊಡುತ್ತದೆ. NAFTA, ಅರ್ಹ ಕೆನಡ ಹಾಗು ಮೆಕ್ಸಿಕೊ ವೃತ್ತಿಪರ ಉದ್ಯೋಗಿಗಳಿಗೆ TN ವರ್ಗೀಕರಣವನ್ನು ಸೃಷ್ಟಿಸಿದೆ ಹಾಗು ಇತರೆ ವರ್ಗೀಕರಣಗಳ ಅನ್ವಯ U.S.ಗೆ ಕೆನಡಿಯನ್ನರ ಪ್ರವೇಶಗಳಿಗೆ ಷರತ್ತುಗಳನ್ನು ವಿಧಿಸಿದೆ. ಒಂದು TN ಸ್ಥಾನಕ್ಕೆ ಒಬ್ಬ NAFTA ವೃತ್ತಿಪರನ ಸೇವೆಯ ಅಗತ್ಯವಿರುತ್ತದೆ, ಈತನ ವೃತ್ತಿಯನ್ನು ಅನುಬಂಧ 1603ರಲ್ಲಿ ಸೂಚಿಸಲಾಗಿದೆ.D.1(ಲಗತ್ತಿಸಲಾದ ಅನುಬಂಧ 1603ನ್ನು ನೋಡಿD.1); TN ನೌಕರನು ಅಗತ್ಯವಿರುವ ರುಜುವಾತು ಪತ್ರಗಳ ಜೊತೆಯಲ್ಲಿ ಅರ್ಹತೆ ನಿರ್ಧರಿಸುವ ಪೌರತ್ವದ ಬಗ್ಗೆ ಸಾಕ್ಷ್ಯವನ್ನು ಹೊಂದಿರಬೇಕು. TN ಸ್ಥಾನಮಾನವು U.S.ಮಾಲೀಕನಿಗೆ ಅಗತ್ಯವಿರುವ ಸೇವಾವಧಿಗೆ U.S.ಗೆ ಮಿತಿಯಿಲ್ಲದ ಬಹು ಪ್ರವೇಶಗಳಿಗೆ ಗರಿಷ್ಠ ಮೂರು ವರ್ಷಗಳ ಅವಧಿವರೆಗೆ ಅವಕಾಶ ಮಾಡಿಕೊಡುತ್ತದೆ(ಇದರಲ್ಲಿ ವಿದೇಶಿ ಮಾಲೀಕರು ಸೇರಿದ್ದಾರೆ), ಜೊತೆಗೆ ಉದ್ಯೋಗದ ತಾತ್ಕಾಲಿಕ ಉದ್ದೇಶವು ಮುಂದುವರೆಯುವವರೆಗೂ ಇದನ್ನು ಅನಿರ್ದಿಷ್ಟ ಕಾಲದವರೆಗೂ ವಿಸ್ತರಿಸಿಕೊಳ್ಳಬಹುದು. TN ಕೆಲಸಕ್ಕಾಗಿ ನೀಡುವ ಅನುಮತಿಯ ಮೇಲೆ ಯಾವುದೇ ವಾರ್ಷಿಕ ಗರಿಷ್ಟ ಮಿತಿ ಇರುವುದಿಲ್ಲ (H-1B ವೀಸಾಕ್ಕಿಂತ ಭಿನ್ನವಾಗಿ).
U.S.ನಲ್ಲಿ ಸ್ವಯಂ ಉದ್ಯೋಗಕ್ಕೆ ಅನುಮತಿಯಿಲ್ಲ
ಬದಲಾಯಿಸಿTN: ಅನುಬಂಧ 1603ರ ಸದಸ್ಯರು D.1 ವೃತ್ತಿಪರರು U.S.ನ ಹೊರಗೆ ಸ್ವಯಂ ಉದ್ಯೋಗವನ್ನು ಮಾಡುತ್ತಿದ್ದರೆ ಅಂತಹವರು U.S.ನ ಹೊರಗಿನಿಂದ ತಮ್ಮ ವ್ಯಾಪಾರ ಸಂಬಂಧಗಳನ್ನು U.S. ಮೂಲದ ಸಂಸ್ಥೆಗಳೊಂದಿಗೆ ಮಾಡಬಹುದು(ಉದಾಹರಣೆಗೆ ಸೇವೆಗಳಿಗೆ ಮಾಡಿಕೊಂಡ ಒಪ್ಪಂದಗಳು) ಜೊತೆಗೆ U.S.ನಲ್ಲಿ ಇಂತಹ ಪೂರ್ವಭಾವಿ ವ್ಯವಸ್ಥೆಯ ಚಟುವಟಿಕೆಗಳಲ್ಲಿ ತೊಡಗಲು TN ಸ್ಥಾನಮಾನವನ್ನು ಪಡೆಯಬಹುದು. ಆದಾಗ್ಯೂ, TN ವರ್ಗೀಕರಣದಲ್ಲಿ ಒಬ್ಬ ವಿದೇಶಿ ವ್ಯಕ್ತಿ ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ ಬಂದು ಅಲ್ಲಿ ಸ್ವಯಂ ಉದ್ಯೋಗವನ್ನು ನಡೆಸಲು ಅನುಮತಿ ನೀಡಲಾಗುವುದಿಲ್ಲ, ಅಲ್ಲದೆ ಆತ/ಆಕೆಯ ನಿಯಂತ್ರಣದಲ್ಲಿರುವ ಅಥವಾ ಷೇರುದಾರರಾಗಿರುವ ಒಂದು ಸಂಸ್ಥೆ ಅಥವಾ ಇತರ ಅಸ್ತಿತ್ವಗಳಲ್ಲಿ ತಮ್ಮ ಸೇವೆಗಳನ್ನು ಸಲ್ಲಿಸಲು ಅರ್ಹರಾಗಿರುವುದಿಲ್ಲ. ಇತರ NAFTA ಪ್ರವೇಶಗಳ ವರ್ಗಗಳು ಕೆನಡಾ ಹಾಗು ಮೆಕ್ಸಿಕೋದ ಪ್ರಜೆಗಳು B-1(ವ್ಯಾಪಾರ ಸಂಬಂಧಿ ಭೇಟಿ), E-1(ಕರಾರಿನ ಮೇಲೆ ವ್ಯಾಪಾರ ಮಾಡುವವನು), E-2(ಕರಾರಿನ ಮೇಲೆ ಬಂಡವಾಳ ಹೂಡುವವನು) ಅಥವಾ L-1(ಅಂತರ್‌ಸಂಸ್ಥೆ ವರ್ಗಾಯಿತ) ಎಂಬ ವಲಸೆರಹಿತರೂ NAFTA ಅನ್ವಯ ಸಹ ಪ್ರವೇಶವನ್ನು ಕೋರಬಹುದು. ಈ ಸಂಕ್ಷಿಪ್ತ ವರದಿಯು ಆ ಪರ್ಯಾಯಗಳ ಬಗ್ಗೆ ತಿಳಿಸುವುದಿಲ್ಲ.
TN ಪ್ರಕ್ರಿಯೆ ಹಾಗು ಪ್ರವೇಶಾತಿಗಳ ವಿಧಾನ
ಬದಲಾಯಿಸಿಕೆನಡಿಯನ್ನರು, TN-1 ವರ್ಗೀಕರಣಕ್ಕೆ ನೇರವಾಗಿ U.S. ವರ್ಗ"A" ಕಾನೂನುಬದ್ಧವಾಗಿ ಪ್ರವೇಶಿಸುವ ಸ್ಥಳದಲ್ಲಿ, ಅಂತಾರಾಷ್ಟ್ರೀಯ ಸಂಚಾರವನ್ನು ನಿರ್ವಹಿಸುವ U.S. ವಿಮಾನನಿಲ್ದಾಣದಲ್ಲಿ, ಅಥವಾ ಕೆನಡಾದಲ್ಲಿರುವ U.S. ಪ್ರಿ-ಫ್ಲೈಟ್(ವಿಮಾನ ಏರುವ ಮುಂಚೆ)/ಪ್ರಿ-ಕ್ಲಿಯರೆನ್ಸ್(ಪೂರ್ವಾನುಮತಿ) ನಿಲ್ದಾಣದಲ್ಲಿ ಅರ್ಜಿ ಸಲ್ಲಿಸಬಹುದು. ದಾಖಲಾತಿಗಳಲ್ಲಿ ಈ ಕೆಳಕಂಡವುಗಳು ಸೇರಿರಬೇಕು:
- ಕೆನೆಡಿಯನ್ ಪೌರತ್ವವನ್ನು ಪಡೆದಿರುವುದಕ್ಕೆ ಪುರಾವೆ
- 50 ಡಾಲರ್ ಅರ್ಜಿ ಸಲ್ಲಿಸಲು ಶುಲ್ಕ (ಜೊತೆಗೆ 6 ಡಾಲರ್ I-94 ಕಾರ್ಡ್ ಶುಲ್ಕ, ರಸ್ತೆಯ ಮೂಲಕವಾಗಿ ಸಂಚರಿಸುತ್ತಿದ್ದರೆ),
- ಅಗತ್ಯವಿರುವ ಅನುಬಂಧ 1603ನ ಪುರಾವೆ.D ರುಜುವಾತು ಪತ್ರಗಳು; ಹಾಗು
- U.S.ಮಾಲೀಕನಿಂದ ಪತ್ರ(ಅಥವಾ ಕೆನಡಾದಿಂದ ಕಳುಹಿಸಿಕೊಡುತ್ತಿರುವ ಮಾಲೀಕನಿಂದ ಪತ್ರ), ಇದು U.S.ನಲ್ಲಿ ವೃತ್ತಿಪರ ಉದ್ಯೋಗದ ಸ್ವರೂಪ ಹಾಗು ಅಲ್ಲಿ ತಂಗುವ ಅವಧಿ ಹಾಗು ಸಂಬಳ/ವೇತನದ ಬಗ್ಗೆ ಮಾಹಿತಿಯನ್ನು ಒಳಗೊಂಡಿರಬೇಕು.
ಕೆನಡಿಯನ್ ಪ್ರಜೆಗಳಿಗೆ ವೀಸಾ ವಿನಾಯಿತಿ ಇರುತ್ತದೆ ಹಾಗು ಪ್ರಯಾಣ ಬೆಳೆಸಲು ಅಥವಾ U.S.ಗೆ ಪ್ರವೇಶಿಸಲು ಅನುಮತಿ ಕೋರಿ ಅರ್ಜಿಯನ್ನು ಸಲ್ಲಿಸಲು ದೂತಾವಾಸ ವೀಸಾಗಳ ಅಗತ್ಯವಿರುವುದಿಲ್ಲ. TN-1 ಅರ್ಜಿದಾರರು ತಾವು ಪ್ರವೇಶಿಸಬೇಕಾದ ಕಾನೂನುಬದ್ಧ ಸ್ಥಳಕ್ಕೆ I-94ರಷ್ಟು ಅಲ್ಪ ಶುಲ್ಕವನ್ನೂ ಸಹ ಭರಿಸಬೇಕು. ಮೆಕ್ಸಿಕೋದಿಂದ ಬರುವ TN-2 ವಲಸೆರಹಿತರು, ನಿರೀಕ್ಷಿತ US ಮಾಲೀಕರು ಸಲ್ಲಿಸಿದ I-129 ಅರ್ಜಿಗಳಿಗೆ ಅನುಮೋದಿತ ಫಲಾನುಭವಿಗಳಾಗಿರಬೇಕು ಜೊತೆಗೆ ಡಿಪಾರ್ಟ್ಮೆಂಟ್ ಆಫ್ ಹೋಂಲ್ಯಾಂಡ್ ಸೆಕ್ಯೂರಿಟಿ, U.S. ಪೌರತ್ವ ಮತ್ತು ವಲಸೆ ಸೇವೆಗಳು' ನೆಬ್ರಾಸ್ಕ ಸೇವಾ ಕೇಂದ್ರದಿಂದ ಅನುಮೋದನೆಯನ್ನು ಪಡೆದಿರಬೇಕು. ಇದಕ್ಕೆ ಬೇಕಾಗಿರುವ ದಾಖಲೆಗಳೆಂದರೆ:
- ಮೆಕ್ಸಿಕನ್ ಪೌರತ್ವದ ಬಗ್ಗೆ ಪುರಾವೆ
- U.S.ಕಾರ್ಮಿಕ ಇಲಾಖೆಯಿಂದ ಪ್ರಮಾಣೀಕರಣಗೊಂಡ ETA-90353 ಲೇಬರ್ ಕಂಡೀಶನ್ ಅಟೆಸ್ಟೆಶನ್(ಕಾರ್ಮಿಕ ಷರತ್ತು ದೃಢೀಕರಣ (LCA) ಅರ್ಜಿ.
- 130 ಡಾಲರ್ ಅರ್ಜಿ ಸಲ್ಲಿಸಲು ಶುಲ್ಕ
- ಪ್ರವೇಶ ಪಡೆಯುವ ಉದ್ದೇಶಕ್ಕಾಗಿ ಪುರಾವೆ, ಹಾಗು ಅನುಮತಿ ದೊರೆತ NAFTA ವೃತ್ತಿಪರ ಚಟುವಟಿಕೆಯಲ್ಲಿ ಭಾಗವಹಿಸುವ ಪುರಾವೆ.
TN-2 ವರ್ಗೀಕರಣದ ಅನ್ವಯ USಗೆ ಪ್ರವೇಶ ಕೋರಿ ಅರ್ಜಿ ಸಲ್ಲಿಸುವ ಮೆಕ್ಸಿಕನ್ನರು USನ ದೂತಾವಾಸಗಳಿಂದ ವೀಸಾಗಳನ್ನು ಪಡೆಯಬೇಕು. ಈ ಎಲ್ಲ ಅಗತ್ಯಗಳು ಡಿಸೆಂಬರ್ 31, 2003ರಂದು ಕೊನೆಗೊಂಡಿತೆಂದು ಗಮನಿಸಬೇಕು. 2004ರ ಜನವರಿ 1ರಂದು ಹಾಗು ಅದರ ನಂತರ, ಮೆಕ್ಸಿಕನ್ TNಗಳು, TN ವೀಸಾ ಪಡೆಯಲು ಮೆಕ್ಸಿಕೋನಲ್ಲಿರುವ ಡಿಪಾರ್ಟ್‌ಮೆಂಟ್ ಆಫ್ ಸ್ಟೇಟ್ ಕಾನ್ಸುಲೇಟ್‌ನಲ್ಲಿ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು. TN ವೀಸಾ ಪಡೆಯಲು ಮೆಕ್ಸಿಕನ್ ಪ್ರಜೆಗಳು ಅನುಸರಿಸಬೇಕಾದ ವಿಧಾನಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಡಿಪಾರ್ಟ್ಮೆಂಟ್ ಆಫ್ ಸ್ಟೇಟ್(ವಿದೇಶಾಂಗ ಇಲಾಖೆ)ನ ಜಾಲ ತಾಣವನ್ನು ನೋಡಿ.
ಕುಟುಂಬ ಸದಸ್ಯರು
ಬದಲಾಯಿಸಿಕೆನಡ ಹಾಗು ಮೆಕ್ಸಿಕೊ ವೃತ್ತಿಪರರ ಪತಿ/ಪತ್ನಿ ಹಾಗು 21 ವರ್ಷ ಕೆಳಗಿನ ಅವರ ಅವಿವಾಹಿತ ಮಕ್ಕಳು TD ಸ್ಥಾನಮಾನವನ್ನು ಪಡೆಯುತ್ತಾರೆ. ಪ್ರಮುಖ TN ಅರ್ಜಿಯಲ್ಲಿಯೇ ಇವರ ಹೆಸರನ್ನು ಸೇರ್ಪಡೆ ಮಾಡಬಹುದು(ಪ್ರತ್ಯೇಕ ಅರ್ಜಿ ಶುಲ್ಕದ ಅಗತ್ಯವಿರುವುದಿಲ್ಲ) ಹಾಗು ಇವರೂ ಕೂಡ ತಮ್ಮ ತಂದೆತಾಯಿಯರು ನೆಲೆಸುವಷ್ಟೇ ಕಾಲಾವಧಿಗೆ ಇಲ್ಲಿ ನೆಲೆಸಬಹುದು. TD ನಾನ್ ಇಮಿಗ್ರಂಟ್ಸ್(ವಲಸೆಗಾರರಲ್ಲದವರು) USನಲ್ಲಿ ಈ ವರ್ಗೀಕರಣದ ಅನ್ವಯ ವಿದ್ಯಾಭ್ಯಾಸ ಮಾಡಬಹುದು, ಆದರೆ ಇವರು ಉದ್ಯೋಗವನ್ನು ಗಿಟ್ಟಿಸಿಕೊಳ್ಳಲು ಅರ್ಹರಾಗಿರುವುದಿಲ್ಲ. ಕೆನೆಡಿಯನ್ ಅವಲಂಬಿತರ ಅರ್ಹತೆಯನ್ನು USನಲ್ಲಿ ಅವರು ಪ್ರವೇಶಿಸುವ ಕಾನೂನುಬದ್ಧ ಸ್ಥಳದಲ್ಲಿ ನಿರ್ಣಯಿಸಬಹುದು. ನೆಬ್ರಾಸ್ಕ ಸೇವಾ ಕೇಂದ್ರದಲ್ಲಿ ಸಲ್ಲಿಸಲಾದ TN ಅರ್ಜಿಗಳಲ್ಲಿ ಮೆಕ್ಸಿಕನ್ ಕುಟುಂಬ ಸದಸ್ಯರು ತಾನೇತಾನಾಗಿ ಸೇರ್ಪಡೆಗೊಂಡಿದ್ದರೂ ಸಹ, USನ ದೂತಾವಾಸಗಳಲ್ಲಿ TD ವೀಸಾಗಳನ್ನು ಪಡೆಯಲು ಪ್ರತ್ಯೇಕ ಅರ್ಜಿಯನ್ನು ಸಲ್ಲಿಸಬೇಕು. ಗಮನಿಸಿ: ಅವಲಂಬಿತರು ಕೆನೆಡಿಯನ್ ಅಥವಾ ಮೆಕ್ಸಿಕನ್ ಪ್ರಜೆಗಳಾಗಿರಬೇಕೆಂಬ ಅಗತ್ಯವಿಲ್ಲ.
ನಿಕಟ ಸಂಬಂಧಿಗಳಿಗೆ K ವೀಸಾಗಳು
ಬದಲಾಯಿಸಿಈ ವೀಸಾಗಳನ್ನು ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ ವಲಸೆ ಹೋಗಿ ಅಲ್ಲೇ ಕಾಯಂ ನೆಲೆಸಬೇಕೆಂಬ ಉದ್ದೇಶವನ್ನು ಹೊಂದಿರುವ ಜನರಿಗೆ ನೀಡಲಾಗುತ್ತದಾದರೂ, ಇದನ್ನು ತಾಂತ್ರಿಕವಾಗಿ ನಾನ್ ಇಮಿಗ್ರಂಟ್ಸ್(ವಲಸೆರಹಿತರ) ವೀಸಾಗಳ ಅನ್ವಯ ವಿಂಗಡಿಸಲಾಗಿದೆ(ತಾತ್ಕಾಲಿಕವಾಗಿ). U.S. ಪ್ರಜೆಗಳು, ನಿಶ್ಚಿತ ವರ/ವಧುವಿಗೆ, ಪತಿ/ಪತ್ನಿಯರಿಗೆ ಹಾಗು ನಿಶ್ಚಿತ ವರ/ವಧುಗಳು ಹಾಗು ಪತಿ/ಪತ್ನಿಯರ ಅವಿವಾಹಿತ ಅವಲಂಬಿತ ಮಕ್ಕಳಿಗೆ USCISನಲ್ಲಿ K ತಾತ್ಕಾಲಿಕ ವೀಸಾಗೆ ಅರ್ಜಿ ಸಲ್ಲಿಸಬಹುದು. ನಿಶ್ಚಿತ ವರ/ವಧುಗಳ ಪ್ರಕರಣದಲ್ಲಿ,K-1 ವೀಸಾ ಅರ್ಜಿದಾರನೊಂದಿಗೆ ವಿವಾಹವಾಗುವುದಕ್ಕಾಗಿ U.S.ನಲ್ಲಿ 90 ದಿನಗಳ ಕಾಲ ನೆಲೆಸಲು ಹಾಗು ಕಾನೂನುಸಮ್ಮತ ಕಾಯಂ ನಿವಾಸಿಯಾಗಿ ತನ್ನ ಸ್ಥಾನಮಾನದ ಹೊಂದಾಣಿಕೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸುತ್ತದೆ. ಈ ಅವಧಿಯೊಳಗೆ ವಿವಾಹವು ನಡೆಯದಿದ್ದರೆ, ನಿಶ್ಚಿತ ವರ/ವಧುವಿನ ಹೆಸರನ್ನು ವೀಸಾ ಪಟ್ಟಿಯಿಂದ ತೆಗೆದುಹಾಕುವ ಪ್ರಕ್ರಿಯೆಗಳಿಗೆ ಒಳಪಡುತ್ತಾರೆ. ಅಂತಾರಾಷ್ಟ್ರೀಯ ವಿವಾಹ ದಳ್ಳಾಳಿ ನಿಯಂತ್ರಣ ಕಾಯ್ದೆ(IMBRA)ಗೆ ಅನುವರ್ತನೆಯಾಗಿ, IMBRA ಪ್ರಾಯೋಜಕ ಸಲ್ಲಿಸುವ ನಿಶ್ಚಿತ ವಧುವಿನ K1 ವೀಸಾ ಅರ್ಜಿಗಳ ಸಂಖ್ಯೆಯನ್ನು ಸೀಮಿತಗೊಳಿಸುತ್ತದೆ ಅಥವಾ ಮಿತಿಗಳನ್ನು ಮನ್ನಾ ಮಾಡಲು ಕೋರದೇ ಅರ್ಜಿಗಳು ಅನುಮೋದನೆಯಾಗಬಹುದು. ಇದರ ಜೊತೆಯಲ್ಲಿ, ನಿಶ್ಚಿತ ವಧುವಿನ ಮಗುವು ಆತನ/ಆಕೆಯ ತಾಯಿಯಾದ ನಿಶ್ಚಿತ ವಧುವಿನ ಅರ್ಜಿ ಸಲ್ಲಿಕೆಯಿಂದ ಜನ್ಯವಾದ K-2 ವೀಸಾ ಪಡೆಯಬಹುದು. ಮಗುವು ತನ್ನ ತಾಯಿಯಾದ ನಿಶ್ಚಿತ ವಧುವಿನ ಜೊತೆಯಲ್ಲಿ ಪ್ರಯಾಣಿಸಬಹುದು ಅಥವಾ ಅದರ ತಂದೆತಾಯಿಗೆ K-1 ವೀಸಾ ನೀಡಲಾದ ದಿನಾಂಕದಿಂದ ಒಂದು ವರ್ಷದೊಳಗೆ ಪ್ರಯಾಣಿಸಬಹುದು. K1 ವೀಸಾ ನೀಡಲಾದ ದಿನಾಂಕದಿಂದ ಒಂದು ವರ್ಷಗಳೊಳಗೆ ಮಗುವು ತನ್ನ ತಾಯಿಯಾದ ನಿಶ್ಚಿತ ವಧುವಿನ ಜೊತೆ ಪ್ರಯಾಣ ಮಾಡಿದರೆ ಅಂತಹ ಸಂದರ್ಭದಲ್ಲಿ ಒಂದು ಪ್ರತ್ಯೇಕ ಅರ್ಜಿ ಸಲ್ಲಿಸುವ ಅಗತ್ಯವಿರುವುದಿಲ್ಲ. ವೀಸಾ ನೀಡಲಾದ ದಿನಾಂಕದಿಂದ ಒಂದು ವರ್ಷಕ್ಕೂ ಅಧಿಕ ಅವಧಿಗಾದರೆ, ವೀಸಾಗೆ ಒಂದು ಪ್ರತ್ಯೇಕ ಅರ್ಜಿ ಸಲ್ಲಿಸಬೇಕು. ಪತಿ/ಪತ್ನಿಯರ ವಿಷಯದಲ್ಲಿ, K-3 ವೀಸಾ ಎರಡು ವರ್ಷಗಳಿಗೆ ಮಾನ್ಯತೆ ಹೊಂದಿರುತ್ತದೆ ಹಾಗು ವಿವಾಹದ ಆಧಾರದ ಮೇಲೆ ನಿಂತಿರುವ K-3 ವೀಸಾವನ್ನು ವಿವಾಹವು ವಿಸರ್ಜನೆಯಾಗದಿದ್ದರೆ ಅನಿರ್ದಿಷ್ಟಾವಧಿವರೆಗೆ ವಿಸ್ತರಿಸಬಹುದು. K-3 ಹಾಗು K-4 ಸ್ಥಾನಮಾನದ ವೀಸಾಗಳನ್ನು ಹೊಂದಿರುವವರು ಕೆಲಸ ಮಾಡಲು ಅಧಿಕಾರ ಹೊಂದಿರುತ್ತಾರೆ. ಹಾಗು ಅವರ ವೀಸಾಗಳು ಮಾನ್ಯತೆ ಹೊಂದಿರುವ ತನಕ ಅಮೆರಿಕವನ್ನು ತೊರೆಯಬಹುದು ಅಥವಾ ಮರುಪ್ರವೇಶ ಮಾಡಬಹುದು.
ಸಲಿಂಗ ದಂಪತಿಗಳು
ಬದಲಾಯಿಸಿಅಮೆರಿಕ ಸಂಯುಕ್ತ ಸಂಸ್ಥಾನದ ಪ್ರಜೆಗಳಲ್ಲಿ ವಿದೇಶಿ ಸಲಿಂಗಿ ಸಂಗಾತಿಗಳಿಗೆ USCIS ಮಾನ್ಯತೆ ನೀಡುವುದಿಲ್ಲ ಹಾಗು ಅಂತೆಯೇ ನಿಶ್ಚಿತ ವಧುವಿಗೆ ನೀಡಲಾಗುವ K 1 ವೀಸಾಕ್ಕಾಗಲಿ ಅಥವಾ ಕಾಯಂ ನಿವಾಸಿ ಸ್ಥಾನಮಾನಕ್ಕಾಗಲಿ ಪ್ರಾಯೋಜಕತೆಯನ್ನು ನೀಡಲಾಗುವುದಿಲ್ಲ. ಈ ಪ್ರಕಾರವಾಗಿ ಸಲಿಂಗ ಸಂಬಂಧದ ಆಧಾರವನ್ನು ಹೊಂದಿರುವ ಹಲವು ಕುಟುಂಬಗಳು, ಭಿನ್ನ ವಿಧದ ವೀಸಾ ಪಡೆಯಲಾಗದ ಸಂದರ್ಭದಲ್ಲಿ U.S.ನ ಹೊರಗೆ ನೆಲೆಸಬೇಕಾಗುತ್ತದೆ. ಹಲವು ವಿದೇಶಿ ಸಲಿಂಗಿ ಸಂಗಾತಿಗಳು U.S.ನಲ್ಲಿ ಅಕ್ರಮ ವಿದೇಶೀಯರಾಗಿ ನೆಲೆಸಿರುತ್ತಾರೆ. ದಿ ಯುನೈಟಿಂಗ್ ಅಮೆರಿಕನ್ ಫ್ಯಾಮಿಲೀಸ್ ಕಾಯಿದೆ ಗೆ ಅಂಗೀಕಾರ ದೊರೆತರೆ, ಇದು "ಕಾಯಂ ಸಂಗಾತಿ" ಎಂಬ ಒಂದು ಹೊಸ ಕೌಟುಂಬಿಕ ವರ್ಗವನ್ನು ಸೃಷ್ಟಿಮಾಡಬಹುದು, ಇದು USCIS ವಿದೇಶಿ ಸಂಗಾತಿಗಳಿಗೆ ಮಾನ್ಯತೆ ನೀಡಲು ಅವಕಾಶ ಒದಗಿಸುತ್ತದೆ. "ಕಾಯಂ ಸಂಗಾತಿ" ಎಂಬ ಪದವನ್ನು, ಸಲಿಂಗ ವಿವಾಹ ಹಾಗು ಸಿವಿಲ್ ಯೂನಿಯನ್(ವಿವಾಹದ ರೀತಿ ಪಡೆದ ಕಾನೂನಿನ ಮಾನ್ಯತೆ) ಗಳ ಬಗ್ಗೆ ಸೂಕ್ಷ್ಮತೆಗಳನ್ನು ತಪ್ಪಿಸಲು ಸ್ಥಾಪಿಸಲಾಯಿತು. U.S. ವಿದೇಶಾಂಗ ಇಲಾಖೆ ಪ್ರಕಾರ,ಸಲಿಂಗಿ ಸಂಗಾತಿಗಳಾದ U.S.ಯೇತರ ಪ್ರಜೆಗಳು, ತಮ್ಮ ಸಂಬಂಧದ ಆಧಾರದ ಮೇಲೆ U.S.ಗೆ ಪ್ರವೇಶಿಸಲು ತಾತ್ಕಾಲಿಕ ವೀಸಾಗಳಿಗೆ ಅರ್ಹತೆ ಪಡೆಯಬಹುದು. ಇದರಿಂದ U.S.ನಲ್ಲಿ ತಮ್ಮ ಸಲಿಂಗಿ ಸಂಗಾತಿಗಳೊಂದಿಗೆ ವಾಸಿಸಲು ಕೋರುವ ಪೌರೇತರರಿಗಿಂತ U.S. ಪೌರರಿಗೆ ಕಡಿಮೆ ಹಕ್ಕುಗಳನ್ನು ನೀಡುತ್ತದೆ.[೭]
V ವೀಸಾಗಳು ಹಾಗು ಕಾನೂನುಬದ್ಧ ಕಾಯಂ ನಿವಾಸಿಗಳ ಪತಿ/ಪತ್ನಿಯರಿಗೆ LIFE ಕಾಯಿದೆ (ಗ್ರೀನ್ ಕಾರ್ಡ್ ಧಾರಕರು)
ಬದಲಾಯಿಸಿಗ್ರೀನ್ ಕಾರ್ಡ್ ಅಥವಾ (LPR) ಪ್ರಕ್ರಿಯೆ ಎಂದು ಸಾಮಾನ್ಯವಾಗಿ ಕರೆಯುವ ಅಂತಿಮ ಹಂತವು ಸ್ಥಾನಮಾನದ ಹೊಂದಾಣಿಕೆ ಯಾಗಿದೆ. ಅದೆಂದರೆ ಕಾನೂನುಬದ್ಧ ಕಾಯಂ ನಿವಾಸಿಯಾಗುವುದು(LPR). ಉಲ್ಲೇಖಿಸಲಾದ ವಿದೇಶಿ ಪ್ರಜೆಯು, ಸ್ಥಾನಮಾನದ ಹೊಂದಾಣಿಕೆಗೆ I-485 ಅರ್ಜಿಯನ್ನು ಸಲ್ಲಿಸುವ ಅಗತ್ಯವಿರುತ್ತದೆ. ಇದು ಸಾಮಾನ್ಯವಾಗಿ ವಿದೇಶಿ ಉದ್ಯೋಗಸ್ಥನಿಗೆ ಪೂರ್ವಾಸ್ತಿತ್ವದಲ್ಲಿರುವ ಹಾಗು ಅಂಗೀಕಾರಗೊಂಡ ಅಥವಾ ಅಂಗೀಕಾರಾರ್ಹ I-140 ವಲಸೆಗಾರ ಅರ್ಜಿ ಅಥವಾ ವಿದೇಶಿಯನ ಸಂಬಂಧಿಗೆ I-130 ಅರ್ಜಿ ಸಲ್ಲಿಕೆಯನ್ನು ಆಧರಿಸಿರುತ್ತದೆ. 2002ರಲ್ಲಿ ನಡೆದ ವ್ಯಾಪಕ ವಲಸೆಗಾರಿಕೆ ಸುಧಾರಣೆಯಿಂದಾಗಿ, I-485 ಅರ್ಜಿಗಳು ಹಾಗು I-130 ಅಥವಾ I-140 ಅರ್ಜಿಗಳನ್ನು ವಲಸೆಗಾರಿಕೆ ವೀಸಾ ಸಂಖ್ಯೆಯ ತಕ್ಷಣದ ಲಭ್ಯತೆಗೆ ಅನುಗುಣವಾಗಿ ಒಟ್ಟಿಗೆ ಸಲ್ಲಿಸಬಹುದು. ಅರ್ಜಿಯನ್ನು ಒಬ್ಬರು ಪರವಾನಗಿ ಪಡೆದ ವೈದ್ಯರು ನೀಡಿದ I-693 ವೈದ್ಯಕೀಯ ತಪಾಸಣಾ ವಿವರಗಳು ಹಾಗು G-325A ಜೀವನಚರಿತ್ರೆಯ ಮಾಹಿತಿ ಫಾರ್ಮ್ ನೊಂದಿಗೆ ಸಲ್ಲಿಸಬೇಕು. ಈ ದಾಖಲೆಗಳು ಸಂಪೂರ್ಣ ವೈದ್ಯಕೀಯ ಹಾಗು ಪ್ರತಿರಕ್ಷಾ ಇತಿಹಾಸವನ್ನು ಒದಗಿಸುತ್ತದೆ ಹಾಗು ವಿದೇಶಿ ಪ್ರಜೆಯು ಉದ್ಯೋಗಕ್ಕಾಗಿ ನೆಲೆಸಿರುವ ಸ್ಥಳ ಹಾಗು ಕಳೆದ ಐದು ವರ್ಷಗಳಿಂದ ಆತನ ವಾಸಸ್ಥಾನದ ದಾಖಲೆಯನ್ನು ನೀಡುತ್ತದೆ. USCIS, ವಿದೇಶಿ ಪ್ರಜೆಯು ತಮ್ಮ FBI ಹಿನ್ನೆಲೆ ತಪಾಸಣೆ ಹಾಗು USCIS ದತ್ತಾಂಶಸಂಗ್ರಹಕ್ಕೆ ಪ್ರವೇಶಿಸಲು ದಾಖಲಿಸುವುದಕ್ಕಾಗಿ ಬೆರಳಚ್ಚುಗಳು, ಛಾಯಾಚಿತ್ರ ಹಾಗು ಸಹಿ ಪಡೆಯಲು ದಿನಾಂಕವನ್ನು ನಿಗದಿಪಡಿಸುತ್ತದೆ. ಹೆಚ್ಚಿನ ಪ್ರಕರಣಗಳಲ್ಲಿ ಸಾಮಾನ್ಯವಾಗಿ USCIS ಅಧಿಕಾರಿಯೊಂದಿಗೆ ಯಾಂತ್ರಿಕವಾದ ಸಂದರ್ಶನ ನೀಡುವ ಅಗತ್ಯವಿರುತ್ತದೆ. ಸ್ಥಾನಮಾನದ ಹೊಂದಾಣಿಕೆಯ ಬಗ್ಗೆ ಇತ್ಯರ್ಥವಾಗದ ಅರ್ಜಿಯು, ಅರ್ಜಿದಾರನಿಗೆ ಉದ್ಯೋಗ ಅಧಿಕಾರ ದಾಖಲೆ (EAD) ಕಾರ್ಡ್ ಹಾಗು ಅಡ್ವಾನ್ಸ್ ಪೆರೋಲ್(ಮುಂಚಿತವಾಗಿ ಪೆರೋಲ್ ಪಡೆಯುವುದು) ದಾಖಲೆಗಳ ರೂಪಗಳಲ್ಲಿ ಕೆಲಸ ಮಾಡಲು ಹಾಗು ಪ್ರಯಾಣಿಸಲು ಅರ್ಹತೆ ನೀಡುತ್ತದೆ. ಇವುಗಳನ್ನು ವಾರ್ಷಿಕವಾಗಿ ನವೀಕರಿಸಬೇಕು. ಅರ್ಜಿದಾರನು ಬಯೋಮೆಟ್ರಿಕ್(ಬೆರಳಚ್ಚು ಮತ್ತು ಛಾಯಾಚಿತ್ರ) ಭೇಟಿ ಏರ್ಪಾಡು ಅಥವಾ ಸಂದರ್ಶನಕ್ಕೆ ಉಪಸ್ಥಿತನಾಗದಿದ್ದಲ್ಲಿ ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ. ಅರ್ಜಿಯು ಈ ಕೆಳಕಂಡ ಯಾವುದೇ ಕಾರಣಕ್ಕೂ ಸಹ ತಿರಸ್ಕೃತವಾಗಬಹುದು:
- ಮೂಲ ವಲಸೆಗಾರಿಕೆ ಅರ್ಜಿ ತಿರಸ್ಕೃತಗೊಂಡಾಗ ಅಥವಾ ಹಿಂದಕ್ಕೆ ಪಡೆದಾಗ
- ಅರ್ಜಿದಾರರು ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಅಕ್ರಮವಾಗಿ ಪ್ರವೇಶಿಸಿದ್ದು ಅಥವಾ ನೆಲೆಸಿರುವುದು ಕಂಡುಬಂದಾಗ(ಆದಾಗ್ಯೂ ಮೂಲತಃ ಕ್ರಮಬದ್ಧ ವೀಸಾದೊಂದಿಗೆ ಪ್ರವೇಶಿಸಿದವರಿಗೆ ಹಾಗು US ಪ್ರಜೆ-ಅರ್ಜಿದಾರನಿಗೆ ನಿಕಟ ಸಂಬಂಧಿಯಾಗಿದ್ದಲ್ಲಿ ಇದು ಮನ್ನಾ ಆಗಬಹುದು.)
- ಪೂರ್ವಭಾವಿ ಕ್ರಿಮಿನಲ್ ಅಪರಾಧಗಳು, ಅನುಚಿತವಾದ ರಾಜಕೀಯ ಪಕ್ಷಗಳು ಅಥವಾ ಸಂಸ್ಥೆಗಳೊಂದಿಗೆ ನಿಕಟವಾದ ಸಂಬಂಧ ಹೊಂದಿದ ಆಧಾರದ ಮೇಲೆ ಅಂತಹ ಅರ್ಜಿದಾರನನ್ನು ಅನಪೇಕ್ಷಿತ ಎಂದು ಪರಿಗಣಿಸಲಾಗುತ್ತದೆ(ಉದಾಹರಣೆಗೆ ಕಮ್ಯೂನಿಸ್ಟ್ ಪಕ್ಷದ ಮಾಜಿ ಸದಸ್ಯರು), ಕೆಟ್ಟ ನಡತೆಯುಳ್ಳವರು ಅಥವಾ ಕ್ಷೀಣಿಸುವ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವವರು, ಹಾಗು ಇತರ ಆಧಾರಗಳ ಮೇಲೆ ಅರ್ಜಿಗಳು ತಿರಸ್ಕೃತಗೊಳ್ಳುತ್ತವೆ.
ಸ್ಥಾನಮಾನದ ಹೊಂದಾಣಿಕೆ ಅರ್ಜಿಯು ಅಂಗೀಕಾರಗೊಂಡರೆ, ಹತ್ತು ವರ್ಷಗಳ ಅವಧಿಗೆ ಮಾನ್ಯತೆ ಪಡೆದ ಒಂದು ಕಾಯಂ ನಿವಾಸಿ ಕಾರ್ಡ್(ಗ್ರೀನ್ ಕಾರ್ಡ್)ನ್ನು ಅರ್ಜಿದಾರನಿಗೆ ನೀಡಲಾಗುತ್ತದೆ. ಐದು ವರ್ಷಗಳ ನಂತರ LPRಗಳು ಪೌರತ್ವ ಹಕ್ಕಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ, ಮದುವೆಯ ಮೂಲಕ ಗ್ರೀನ್ ಕಾರ್ಡ್‌ನ್ನು ಪಡೆದ ಒಬ್ಬ LPR, ಮೂರು ವರ್ಷಗಳ ನಂತರ ಪೌರತ್ವ ಹಕ್ಕಿಗೆ ಅರ್ಜಿ ಸಲ್ಲಿಸಬಹುದು. LPRಗೆ ಅರ್ಜಿ ಸಲ್ಲಿಸಿದ ಮೂಲ ವ್ಯಕ್ತಿಯೊಂದಿಗೇ ಆತ ಅಥವಾ ಆಕೆ ಬಾಳ್ವೆ ಮಾಡುತ್ತಿದ್ದರೆ, ಅಂತಹವರು ಪೌರತ್ವ ಹಕ್ಕಿಗೆ ಅರ್ಜಿ ಸಲ್ಲಿಸಬಹುದು. ಕಾನೂನುಸಮ್ಮತ ಕಾಯಂ ನಿವಾಸಿಗಳು (LPR)ಗಳು, ತಮ್ಮ ಹಕ್ಕುಗಳ ಮೇಲೆ ಕೆಲವು ನಿರ್ಬಂಧಗಳನ್ನು ಹೊಂದಿರುತ್ತಾರೆ. ವಿದೇಶದಲ್ಲಿ ಜನಿಸಿದ ಪತಿ/ಪತ್ನಿಯೊಂದಿಗೆ ಅವರು ವಿವಾಹ ಮಾಡಿಕೊಂಡಿದ್ದರೆ, ಗ್ರೀನ್ ಕಾರ್ಡ್ ಧಾರಕರು, ವ್ಯವಸ್ಥೆಯ ಮೂಲಕ ನಡೆಯುವ ವಲಸೆಗಾರಿಕೆ ಪ್ರಮಾಣೀಕರಣದ ಕಾಗದ ಪತ್ರಗಳು ಸಿದ್ಧಗೊಳ್ಳುವವರೆಗೂ ಪತಿ/ಪತ್ನಿ ಅಥವಾ ಕುಟುಂಬದಿಂದ ವರ್ಷಗಟ್ಟಲೆ ಪ್ರತ್ಯೇಕವಾಗಿ ಉಳಿಯಬೇಕಾಗುತ್ತದೆ. ತಮ್ಮ ಪತಿ/ಪತ್ನಿ ಹಾಗು ಕುಟುಂಬದೊಂದಿಗೆ ಪುನರ್ಮಿಲನಕ್ಕೆ ತನ್ನ ಮೂಲ ನಿವಾಸಕ್ಕೆ ಹಿಂದಿರುಗುವ ಆಯ್ಕೆಯು ಸಾಮಾನ್ಯವಾಗಿ ಆಕರ್ಷಕವಾಗಿರುವುದಿಲ್ಲ. INA 245(i)ನ್ನು 1994ರಲ್ಲಿ ಮೊದಲು ಕಾಂಗ್ರೆಸ್ ಕಾಯಿದೆಯಾಗಿಸಿತು, ಇದು ನವೆಂಬರ್ 1997ರಲ್ಲಿ ಅಂತ್ಯ ಕಂಡಿತು. ಉಳಿದಂತೆ ಅನರ್ಹಗೊಂಡಿದ್ದ 'ಸ್ಥಾನಮಾನದ ಹೊಂದಾಣಿಕೆ'ಯ ಅರ್ಜಿದಾರರು, 1,೦೦೦ ಡಾಲರ್ ದಂಡವನ್ನು ತೆರುವ ಮೂಲಕ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಗ್ರೀನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿ ಅದನ್ನು ಪಡೆಯಲು INA 245(i) ಅವಕಾಶ ಮಾಡಿಕೊಟ್ಟಿತು. 1997ರ ಉತ್ತರಾರ್ಧದಲ್ಲಿ, ವಿವಾದಗಳ ನಡುವೆಯೇ, ವಲಸೆಗಾರಿಕೆ ವೀಸಾ ಅರ್ಜಿಗಳು ಅಥವಾ ಜನವರಿ 14, 1998ಕ್ಕೆ ಮುಂಚೆ ಸಲ್ಲಿಸಲಾದ ದುಡಿಮೆ ಪ್ರಮಾಣೀಕರಣಗಳಿಗೆ ವಿನಾಯಿತಿ ನೀಡಲು ಕಾನೂನನ್ನು ವಿಸ್ತರಿಸಲಾಯಿತು, ಇದು ಮುಖ್ಯವಾಗಿ 'ಸ್ಥಾನಮಾನದ ಹೊಂದಾಣಿಕೆಗೆ' ಕಾಲಾವಧಿಯನ್ನು ವಿಸ್ತರಿಸಿತು. ಜನವರಿ 14, 1998ರಲ್ಲಿ INA 245(i) ಕಾಲಾವಧಿಯು ಮುಗಿದ ನಂತರ, ಕುಟುಂಬಗಳನ್ನು ಒಂದುಗೂಡಿಸಲು ಒಂದು ಕಾರ್ಯವಿಧಾನವನ್ನು ಜಾರಿಗೆ ತರಲಾಯಿತು-ಇದರಂತೆ ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ ಪತಿ/ಪತ್ನಿಯರು,ಅವರ ಮಕ್ಕಳ ಪ್ರವೇಶವನ್ನು ಪರಿಣಾಮಕಾರಿಯಾಗಿ ತ್ವರಿತಗತಿಯಲ್ಲಿ ಕೈಗೊಳ್ಳುವುದಕ್ಕಾಗಿ,ಲೀಗಲ್ ಇಮ್ಮಿಗ್ರೇಶನ್ ಫ್ಯಾಮಿಲಿ ಈಕ್ವಿಟಿ ಕಾಯಿದೆ ಆಫ್ 2000ನ (LIFE ಕಾಯಿದೆ) ಮೂಲಕ LPRಕುಟುಂಬಗಳ ವಲಸೆರಹಿತರ ವರ್ಗೀಕರಣವನ್ನು ಸೃಷ್ಟಿಸಲಾಯಿತು. ಇದಕ್ಕೆ ಅಧ್ಯಕ್ಷ ಕ್ಲಿಂಟನ್ ಡಿಸೆಂಬರ್ 21, 2000ದಂದು ಸಾರ್ವಜನಿಕ ಕಾನೂನು 106-553 ಎಂಬ ಕಾನೂನಾಗಿಸಿ ಸಹಿ ಹಾಕಿದರು. LIFE ಕಾಯಿದೆಯನ್ನು ಏಪ್ರಿಲ್ 30, 2001ರವರೆಗೂ, ವಲಸೆ ಮತ್ತು ರಾಷ್ಟ್ರೀಯತೆ ಕಾಯ್ದೆ(INA)ಯ ಖಂಡಕ್ಕೆ ಹಿಂದಿನ ತಿದ್ದುಪಡಿಯಾದ "ವಿನಾಯಿತಿ ಕಾಲಮಿತಿ"ವರೆಗೆ ವಿಸ್ತರಿಸಿತು. ಇದು ಹಿಂದೆ 1997ರಲ್ಲಿ INA ಕಾಲಮಿತಿಯನ್ನು ಪೂರೈಸಲು ವಿಫಲರಾದ ಅರ್ಜಿದಾರರಿಗೆ ಎರಡನೇ ಬಾರಿಗೆ ವಲಸೆ ವೀಸಾ ಅರ್ಜಿ ಅಥವಾ ಲೇಬರ್ ಸರ್ಟಿಫಿಕೇಶನ್(ದುಡಿಮೆ ಪ್ರಮಾಣೀಕರಣ)ಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಯಿತು. ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಖುದ್ದಾಗಿ ಉಪಸ್ಥಿತರಿದ್ದು, ಈ ಹಿಂದೆ ಏಪ್ರಿಲ್ 20, 2001ರಲ್ಲಿ ವಲಸೆಗಾರರ ವೀಸಾ ಅರ್ಜಿಗಳು ಅಥವಾ ಲೇಬರ್ ಸರ್ಟಿಫಿಕೆಷನ್ಸ್‌ಗೆ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ ಈ ವಿಸ್ತರಣೆಯು ಹಿಂದೆ INS 245(i)ರ ಹಿಂದಿನ ವಿಸ್ತರಿತ ಕಾಲಮಿತಿಯಲ್ಲಿ ಅನುಮತಿ ನೀಡಿರುವಂತೆ ವಿನಾಯಿತಿಗೆ ಅವಕಾಶ ಸಿಕ್ಕಿತು ಹಾಗು ತಮ್ಮ ಅರ್ಹತೆಯನ್ನು ನಂತರ ವರ್ಗಾಯಿಸಿಕೊಳ್ಳಲು ಅವಕಾಶ ನೀಡಿತು. ಅಧ್ಯಕ್ಷ ಕ್ಲಿಂಟನ್ ರ 2000ದ LIFE ಕಾಯಿದೆಯ 1102 ಖಂಡವು, ಕಾಯಿದೆ(8 U.S.C. 1101(a) (15))ಯ 101(a)(15) ಖಂಡವನ್ನು ತಿದ್ದುಪಡಿ ಮಾಡಿತು, ಹೊಸದಾಗಿ ವಲಸೇತರ ವರ್ಗೀಕರಣ ವಿಭಾಗ('V' ವೀಸಾ) ಎಂದು ಕಾನೂನುಬದ್ಧ ಕಾಯಂ ನಿವಾಸಿಗಳ(LPRಗಳು)ಕೆಲವು ಪತಿ/ಪತ್ನಿಯರಿಗೆ ಮತ್ತು ಮಕ್ಕಳಿಗೆ ಸೇರಿಸಿತು. ಇವರು ವಿದೇಶಾಂಗ ಇಲಾಖೆಯ ಮಾಸಿಕ ವೀಸಾ ಪ್ರಕಟಣೆಗೆ ಅನುಸಾರವಾಗಿ ಕೌಟುಂಬಿಕ ಆಧಾರದ ಎರಡನೇ(FA2)ಆದ್ಯತೆಯ ವರ್ಗದಲ್ಲಿ ವಲಸೆ ವೀಸಾ ಸಂಖ್ಯೆಯ ಲಭ್ಯತೆಗೆ ಕನಿಷ್ಟ 3 ವರ್ಷಗಳ ಕಾಲ ಕಾದಿದ್ದರು. 1102ನೇ ಖಂಡವು ಕಾಯಿದೆಗೆ (8 U.S.C. 1184(o)), 214(o)ನ್ನೂ ಸಹ ಸೇರ್ಪಡೆ ಮಾಡಿತು, ಇದು V ವಲಸೇತರ ಸ್ಥಾನಮಾನ ಹಾಗು ಉದ್ಯೋಗದ ಪ್ರಮಾಣೀಕರಣಕ್ಕೆ ನಿಯಮಗಳು ಮತ್ತು ಷರತ್ತುಗಳನ್ನು ಒದಗಿಸುತ್ತವೆ, ಹಾಗು ಕಾಯಿದೆಯ(8 U.S.C. 1184 (b) ಹಾಗು 1184 (h)) 214 (b) ಹಾಗು 214 (h) ಖಂಡಗಳಿಗೆ V ವಲಸಿಗರಲ್ಲದ ವರ್ಗಕ್ಕೆ ಉಲ್ಲೇಖವನ್ನು ಸೇರಿಸುವ ಸಲುವಾಗಿ ಅದಕ್ಕೆ ಸರಿಹೊಂದುವ ತಿದ್ದುಪಡಿಗಳನ್ನು ಮಾಡುತ್ತದೆ. 2000ದ LIFE ಕಾಯಿದೆಯ ಅಂಗೀಕಾರಕ್ಕೆ ಮುಂಚೆ, U.S. ಪ್ರಜೆಯನ್ನು ಮದುವೆಯಾಗಿ ಹೊರದೇಶದಲ್ಲಿ ವಾಸಿಸುವ ವಿದೇಶೀಯರು, ಇಲ್ಲಿಗೆ ಪ್ರವೇಶಿಸುವ ಮುಂಚೆ ಅಮೆರಿಕ ಸಂಯುಕ್ತ ಸಂಸ್ಥಾನದ ಹೊರಗೆ ವಲಸೆಗಾರಿಕೆ ವೀಸಾವನ್ನು ಪಡೆದಿರಬೇಕಾಗಿತ್ತು. ಅಧ್ಯಕ್ಷ ಕ್ಲಿಂಟನ್ LIFE ಕಾಯಿದೆ 2000ಕ್ಕೆ ಸಹಿ ಹಾಕಿ ಅದು ಕಾನೂನಾದ ನಂತರ, ಇತ್ಯರ್ಥವಾಗದ ಅಥವಾ ಅಂಗೀಕಾರ ಪಡೆದ ವೀಸಾ ಅರ್ಜಿಗಳ ಫಲಾನುಭವಿಗಳಾದ U.S. ಪ್ರಜೆಗಳ ಪತಿ/ಪತ್ನಿಯರು ಹಾಗು ಅವರ ಮಕ್ಕಳನ್ನು ಆರಂಭದಲ್ಲಿ ವಲಸೆರಹಿತರ ಪಟ್ಟಿಗೆ ಸೇರಿಸಬಹುದಿತ್ತು ಹಾಗು ನಂತರದಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ವಲಸೆಗಾರಿಕೆ ಸ್ಥಾನಮಾನಕ್ಕೆ ಹೊಂದಾಣಿಕೆ ಮಾಡಬಹುದಿತ್ತು. ಈ ಮನ್ನಿಸುವಿಕೆಯು ಅಮೆರಿಕ ಸಂಯುಕ್ತ ಸಂಸ್ಥಾನದಲ್ಲೇ ಉಳಿದುಕೊಂಡು 'V' ನಾನ್ ಇಮಿಗ್ರಂಟ್ಸ್ ಸ್ಥಾನಮಾನವನ್ನು ಪಡೆಯಲು ಈಗಾಗಲೇ U.S.ನಲ್ಲಿ ಉಪಸ್ಥಿತರಿದ್ದ ವಿದೇಶಿಯರಿಗೆ ಅನುಕೂಲವನ್ನು ಉಂಟುಮಾಡಿತು. ಇದರ ಜೊತೆಯಲ್ಲಿ ಪತಿ/ಪತ್ನಿಯರು ಹಾಗು 21 ವರ್ಷ ಕೆಳಗಿನ ಅವರ ಅವಿವಾಹಿತ ಮಕ್ಕಳು ವಿದೇಶದಲ್ಲಿ ವೀಸಾಗೆ ಅರ್ಜಿ ಸಲ್ಲಿಸಬಹುದು ಹಾಗು ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ 'V' ನಾನ್ ಇಮಿಗ್ರಂಟ್ಸ್ ಸ್ಥಾನಮಾನದ ಮೂಲಕ ಪ್ರವೇಶ ಪಡೆಯಬಹುದಿತ್ತು. LIFE ಕಾಯಿದೆ 2000ದ 'K' ನಾನ್ ಇಮಿಗ್ರಂಟ್ಸ್ ವರ್ಗೀಕರಣವು ನಿಶ್ಚಿತ ವಧುವಿಗೆ ಅಥವಾ U.S. ಪ್ರಜೆಯ ನಿಶ್ಚಿತ ವಧುವಿಗೆ U.S.ಗೆ ಪ್ರವೇಶಿಸಿ, ಅಲ್ಲಿಗೆ ಪ್ರವೇಶಿಸಿದ 90 ದಿನಗಳೊಳಗೆ ಮದುವೆಯನ್ನು ಮಾಡಿಕೊಳ್ಳಲು ಕೋರುವವರಿಗೆ ಹಾಗು ನಿಶ್ಚಿತ ವರ/ವಧುವಿನ ಮಗುವಿಗೆ ಇದು ಸೀಮಿತವಾಗಿತ್ತು. ಆದಾಗ್ಯೂ, LIFE ಕಾಯಿದೆ 2000ಕ್ಕೆ ಕೆಲವು ಬದಲಾವಣೆಗಳನ್ನು ತರಲಾಯಿತು ಹಾಗು ಆಗಸ್ಟ್ 14, 2001ರಿಂದ ಉಪಖಂಡ 1103(a)ರಲ್ಲಿ ಜಾರಿಗೆ ಬಂದ ಇದು ಕಾಯಿದೆಯ 101(a)(15)(K) ಖಂಡವನ್ನು ತಿದ್ದುಪಡಿ ಮಾಡಿತು, ಜೊತೆಗೆ ಒಂದು ಹೊಸ "K" ನಾನ್ ಇಮಿಗ್ರಂಟ್ಸ್ ವರ್ಗೀಕರಣವನ್ನು ಜಾರಿಗೆ ತಂದಿತು. ಉಪಖಂಡ 1103(a)"K" ನಾನ್ ಇಮಿಗ್ರಂಟ್ಸ್(ವಲಸೆರಹಿತರ) ವರ್ಗೀಕರಣವನ್ನು ಕಾಯಿದೆಯ 101(a)(15)(K)(i) ಖಂಡವೆಂದು ಮರುರಚನೆ ಮಾಡುತ್ತದೆ, U.S.ಪ್ರಜೆಯ ಪತಿ/ಪತ್ನಿಗಾಗಿ 101(a)(15)(K)(ii) ಖಂಡದಲ್ಲಿ ವರ್ಗೀಕರಣವನ್ನು ಸೇರಿಸುತ್ತದೆ, ಜೊತೆಗೆ ವಿದೇಶದ ಪ್ರಜೆಯ ಮಕ್ಕಳನ್ನು ಕಾಯಿದೆಯ 101(a)(15)(K)(iii) ಖಂಡದಲ್ಲಿ ವಿಂಗಡಣೆ ಮಾಡುತ್ತದೆ. ಕಾಯಿದೆಯ ಹೊಸ ಖಂಡ 101(a)(15)(K)(ii) ಪ್ರಕಾರ ಈ ನಾನ್ ಇಮಿಗ್ರಂಟ್ಸ್ ವರ್ಗೀಕರಣದಲ್ಲಿ ಸೇರಲು ಒಬ್ಬ ವಿದೇಶಿಯನಿಗೆ ಮೂರು ಅವಶ್ಯಕತೆಗಳಿರುತ್ತವೆ.
- ವಲಸಿಗರ ವೀಸಾ ಪಡೆಯುವ ಉದ್ದೇಶದಿಂದ ಆತನ ಅಥವಾ ಆಕೆಯ ಪರವಾಗಿ ಸೇವಾ ಕಚೇರಿಯಲ್ಲಿ ಸಂಬಂಧಿತ ವೀಸಾ ಅರ್ಜಿ ಸಲ್ಲಿಸಿದ U.S.ಪ್ರಜೆಯೊಂದಿಗೆ ವಿದೇಶಿ ವ್ಯಕ್ತಿ ಈಗಾಗಲೇ ವಿವಾಹ ಬಂಧನಕ್ಕೆ ಒಳಗಾಗಿರಬೇಕು.
- ಅದೇ U.S.ಪ್ರಜೆ ಪತಿ/ಪತ್ನಿ ವಲಸೆರಹಿತ ವೀಸಾವನ್ನು ಪಡೆಯಲು ವಿದೇಶಿ ವ್ಯಕ್ತಿಯ ಪರವಾಗಿ ಅರ್ಜಿ ಸಲ್ಲಿಸಬೇಕು.
- ವಲಸೆಗಾರಿಕೆ ವೀಸಾ ಸಿಗುವವರೆಗೆ ಕಾಯುವ ಷರತ್ತಿನೊಂದಿಗೆ ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ ಪ್ರವೇಶಿಸಲು ವಿದೇಶಿ ಪ್ರಜೆ ಕೋರಬಹುದು.
2001 ಆಗಸ್ಟ್ 14ರಲ್ಲಿ ಜಾರಿಗೆ ಬಂದ LIFE ಕಾಯಿದೆ 2000 ಹಾಗು ಇತರ ತಿದ್ದುಪಡಿಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಆನ್ಲೈನ್ ನಲ್ಲಿ U.S.ಸಿಟಿಜನ್ ಶಿಪ್ ಅಂಡ್ ಇಮ್ಮಿಗ್ರೇಶನ್ ಸರ್ವೀಸಸ್(USCIS) ಜಾಲತಾಣದಲ್ಲಿ ಪರಿಶೀಲಿಸಬಹುದು, ಅಥವಾ ಸ್ಥಳೀಯ ಸೇವಾ ಕ್ಷೇತ್ರ ಅಧಿಕಾರಿಯನ್ನು ಸಂಪರ್ಕಿಸಿ ಪಡೆಯಬಹುದು. ಸಾಮಾನ್ಯವಾಗಿ ಗ್ರೀನ್ ಕಾರ್ಡ್ ಪಡೆದವರು ಎಂದು ಹೆಚ್ಚಾಗಿ ಕರೆಯಲ್ಪಡುವ ಕಾನೂನುಬದ್ಧ ಕಾಯಂ ನಿವಾಸಿಗಳು (LPR ಗಳು), ವಿದೇಶಿಯರಾಗಿರುತ್ತಾರೆ ಹಾಗು ಇವರು U.S.ಪೌರತ್ವವನ್ನು ಹೊಂದಿರುವುದಿಲ್ಲ. ಆದರೆ ಅಲ್ಲಿ ನೆಲೆಸಲು ಹಾಗು ಕೆಲಸ ಮಾಡಲು ಅನುಮತಿಯನ್ನು ಪಡೆದಿರುತ್ತಾರೆ. U.S.ಪ್ರಜೆಗಳಲ್ಲದವರನ್ನು ಮದುವೆಯಾಗಲು ಇಚ್ಛಿಸುವವರು, ತಮ್ಮ ಪತಿ/ಪತ್ನಿಯರು ಹಾಗು ಕುಟುಂಬಗಳನ್ನು ನೇರವಾಗಿ U.S.ಗೆ ಕರೆತರಲು ಸಮರ್ಥರಾಗುವುದಿಲ್ಲ. U.S. ಗ್ರೀನ್ ಕಾರ್ಡ್ ಧಾರಕರ ವಿದೇಶಿ ಪತಿ/ಪತ್ನಿಯು, U.S.ಗೆ ಕಾನೂನುಸಮ್ಮತವಾಗಿ ಪ್ರವೇಶಿಸುವ ಮುಂಚೆ ಸ್ಟೇಟ್ ಡಿಪಾರ್ಟ್ಮೆಂಟ್(ವಿದೇಶಾಂಗ ಇಲಾಖೆ)ನಿಂದ 'ವಲಸೆಗಾರಿಕೆ ವೀಸಾ'ದ ಅಂಗೀಕಾರವಾಗುವವರೆಗೂ ಕಾಯಬೇಕಾಗುತ್ತದೆ. ಪ್ರಕ್ರಿಯೆಯು ಹಾಗೆ ಉಳಿಯುವ ಕಾರಣಕ್ಕೆ, ಇಂತಹ ವೀಸಾಗಳು ಅಂಗೀಕಾರಗೊಳ್ಳಲು ಐದು ವರ್ಷಕ್ಕೂ ಮೇಲ್ಪಟ್ಟ ಕಾಲಾವಧಿ ಹಿಡಿಯಬಹುದು. ಏತನ್ಮಧ್ಯೆ, ವಿದೇಶದಲ್ಲಿ ಜನಿಸಿದ ಪತಿ/ಪತ್ನಿ ಹಾಗು ಕುಟುಂಬವು ಇತರ ಯಾವುದೇ ವೀಸಾಗಳು, ಅಥವಾ ಪ್ರವಾಸಿಗಳಾಗಿ U.S.ನ್ನು ಪ್ರವೇಶಿಸಲು ಸಾಧ್ಯವಿಲ್ಲ. LPRಗಳು ತಾವು ಪೌರತ್ವವನ್ನು ಹೊಂದಿರುವ ರಾಷ್ಟ್ರಕ್ಕೆ ಹಿಂದಿರುಗುವ ಆಯ್ಕೆ ಯಾವಾಗಲೂ ಇರುತ್ತದೆ, ಆದರೆ ಅವರು U.S.ನಲ್ಲೆ ನೆಲೆಸಿ "ವಿದೇಶಿ" ಕುಟುಂಬದೊಂದಿಗೆ ವಿವಾಹವಾಗಿ ಉಳಿಯಲು ಬಯಸಿದರೆ ಅವರು ವಿಶಿಷ್ಟ ಪರಿಸ್ಥಿತಿಯಲ್ಲಿ ಇರುತ್ತಾರೆ:
- ಕೆಲಸ, ವ್ಯಾಪಾರ ಅಥವಾ ವಿದ್ಯಾಭ್ಯಾಸಕ್ಕಾಗಿ ತಾತ್ಕಾಲಿಕ ವೀಸಾದ ಆಧಾರದ ಮೇಲೆ U.S.ಗೆ ಬರುವ ತಾತ್ಕಾಲಿಕ ಪ್ರವಾಸಿಗರು ಹಾಗು ನಾನ್ ಇಮಿಗ್ರಂಟ್ಸ್(ಇವರಲ್ಲಿ H1, L1, B, ಹಾಗು F1 ವೀಸಾಗಳನ್ನು ಹೊಂದಿರುವವರು ಸೇರಿದ್ದಾರೆ) ತಮ್ಮನ್ನು ಅವಲಂಬಿಸಿರುವ ಪತಿ/ಪತ್ನಿಯರು ತಮ್ಮೊಂದಿಗೆ ಪ್ರಯಾಣ ಬೆಳೆಸಿ, ಅಲ್ಲಿಂದ ನಿರ್ಗಮಿಸುವಾಗ ಅವರ ಜತೆ ವಾಪಸು ಬರಲು ಜವಾಬ್ದಾರಿ ವಹಿಸಬಹುದು.
- ಅಮೆರಿಕನ್ ಪ್ರಜೆಗಳಿಗೆ ಹೆಚ್ಚಿನ ಆಯ್ಕೆಗಳಿವೆ ಹಾಗು ಇವರು ತಮ್ಮ ಪತಿ/ಪತ್ನಿಯರು U.S.ಗೆ ವಲಸಿಗರಲ್ಲದ ಸ್ಥಾನಮಾನದಲ್ಲಿ ಬಂದು ನಂತರ ಲೀಗಲ್ ಇಮ್ಮಿಗ್ರೇಶನ್ ಅಂಡ್ ಫ್ಯಾಮಿಲಿ ಈಕ್ವಿಟಿ ಕಾಯಿದೆ ("LIFE ಕಾಯಿದೆ") ಅನ್ವಯ ವಲಸೆಗಾರಿಕೆ ಸ್ಥಾನಮಾನವನ್ನು ಬದಲಿಸಿಕೊಳ್ಳಬಹುದು.
LIFE ಕಾಯಿದೆ ಜಾರಿಗೆ ತಂದ V ವೀಸಾದ ಬಗ್ಗೆ ಹೆಚ್ಚಿನ ಮಾಹಿತಿಗಳು V ವೀಸಾ ಪುಟದಲ್ಲಿ ದೊರಕುತ್ತದೆ.
ಪ್ರಯಾಣದ ಪ್ರಮಾಣೀಕರಣಕ್ಕೆ ವಿದ್ಯುನ್ಮಾನ ವ್ಯವಸ್ಥೆ
ಬದಲಾಯಿಸಿಹೊಸದಾಗಿ ಪರಿಚಯಿಸಲಾದ ಪ್ರಯಾಣದ ಪ್ರಮಾಣೀಕರಣಕ್ಕೆ ವಿದ್ಯುನ್ಮಾನ ವ್ಯವಸ್ಥೆಯು ವೀಸಾ ಅಲ್ಲವೆಂದು US ಕಾನೂನು ಅಭಿಪ್ರಾಯ ಪಡುತ್ತದೆ. ಆದರೆ ಇದೊಂದು ವ್ಯವಸ್ಥೆಯಾಗಿದ್ದು, USಗೆ ಭೇಟಿ ನೀಡುವ ಹಲವು ದಿನಗಳ ಮುಂಚೆ ಅಂಗೀಕಾರಗೊಂಡ ಅರ್ಜಿಯ ಅಗತ್ಯವಿರುತ್ತದೆ, ಇದು ವೀಸಾ ಅವಶ್ಯಕತೆಯಷ್ಟೇ ಅಗತ್ಯವಾಗಿರುತ್ತದೆ. ವೀಸಾ ಮನ್ನಾ ಕಾರ್ಯಕ್ರಮವನ್ನು ಹೊಂದಿರುವ ಹಲವು ರಾಷ್ಟ್ರಗಳಲ್ಲಿ ಇದು ಜನವರಿ 2009ರಿಂದ ಕಡ್ಡಾಯವಾಯಿತು. ಈ ನಿಯಮವನ್ನು ಕೆಲವೊಂದು ಬಾರಿ ಎಲೆಕ್ಟ್ರಾನಿಕ್ ವೀಸಾ ಎಂದು ಕರೆಯಲಾಗುತ್ತದೆ ಹಾಗು ಅಂತರಜಾಲದ ಮೂಲಕವಾಗಲಿ ಅಥವಾ ಒಬ್ಬ ಟ್ರ್ಯಾವಲ್ ಏಜೆಂಟ್ ನ ಮೂಲಕವಾಗಲಿ ಇದಕ್ಕೆ ಅರ್ಜಿ ಸಲ್ಲಿಸಬಹುದು.
ವಿವಿಧ ಮಾದರಿಯ ವೀಸಾಗಳ ಆಯ್ದ ಪಟ್ಟಿ
ಬದಲಾಯಿಸಿDV-1 | ವಲಸೆಗಾರ | ಡೈವರ್ಸಿಟಿ ವೀಸಾ: ಲಾಟರಿ ವಿಜೇತ |
DV-2 | ವಲಸೆಗಾರ | ಡೈವರ್ಸಿಟಿ ವೀಸಾ: ಪತಿ/ಪತ್ನಿಯರು ಹಾಗು ಮಕ್ಕಳು |
E-1 | ಕರಾರಿನ ಮೇಲೆ ವ್ಯಾಪಾರಕ್ಕಾಗಿ ಬಂದವರು ಅಥವಾ ಬಂಡವಾಳ ಹೂಡಿಕೆದಾರರು: ಟ್ರೀಟಿ ಟ್ರೇಡರ್ಸ್ | |
E-2 | ಕರಾರಿನ ವ್ಯಾಪಾರಸ್ಥರು ಹಾಗು ಬಂಡವಾಳ ಹೂಡಿಕೆದಾರರು: ಕರಾರಿನ ಮೇಲೆ ಬಂಡವಾಳ ಹೂಡಿಕೆದಾರರು | |
E-3 | ಕರಾರಿನ ವ್ಯಾಪಾರಸ್ಥರು ಹಾಗು ಬಂಡವಾಳ ಹೂಡಿಕೆದಾರರು: ಆಸ್ಟ್ರೇಲಿಯನ್ ಮುಕ್ತ ವ್ಯಾಪಾರ ಒಪ್ಪಂದ | |
EB-5 | ವಲಸಿಗರು | ವಲಸೆಗಾರ ಬಂಡವಾಳ ಹೂಡಿಕೆದಾರರು |
F-1 | ನಾನ್-ಇಮಿಗ್ರಂಟ್(ವಲಸೆರಹಿತರು) | ವಿದ್ಯಾರ್ಥಿಗಳು ಹಾಗು ವಿನಿಮಯ ಪ್ರವಾಸಿಗಳು: ಅಕಾಡೆಮಿಕ್ ವಿದ್ಯಾರ್ಥಿಗಳು |
F-2 | ನಾನ್ -ಇಮಿಗ್ರಂಟ್ | ವಿದ್ಯಾರ್ಥಿಗಳು ಹಾಗು ವಿನಿಮಯ ಪ್ರವಾಸಿಗಳು: ಶಿಕ್ಷಣಾರ್ಥಿಗಳ ಪತಿ/ಪತ್ನಿಯರು ಹಾಗು ಮಕ್ಕಳು |
F-3 | ನಾನ್ ಇಮಿಗ್ರಂಟ್ (ವಲಸೆರಹಿತರು) | ವಿದ್ಯಾರ್ಥಿಗಳು ಹಾಗು ವಿನಿಮಯ ಪ್ರವಾಸಿಗಳು: ಕೆನೆಡಿಯನ್ ಅಥವಾ ಮೆಕ್ಸಿಕನ್ ಪ್ರಜೆಗಳಲ್ಲಿ ಶಿಕ್ಷಣಕ್ಕಾಗಿ ಪ್ರಯಾಣಿಸುವ ವಿದ್ಯಾರ್ಥಿಗಳು |
G-1 | ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ಪ್ರತಿನಿಧಿಗಳು ಹಾಗು ಅವರ ಕುಟುಂಬಗಳು: ಮಾನ್ಯತೆ ಪಡೆದ ವಿದೇಶಿ ಸರ್ಕಾರದ ಮುಖ್ಯಸ್ಥರು | |
G-2 | ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ಪ್ರತಿನಿಧಿಗಳು ಹಾಗು ಅವರ ಕುಟುಂಬಗಳು: ಮಾನ್ಯತೆ ಪಡೆದ ವಿದೇಶಿ ಸರ್ಕಾರದ ಇತರ ಪ್ರತಿನಿಧಿಗಳು | |
G-3 | ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ಪ್ರತಿನಿಧಿಗಳು ಹಾಗು ಅವರ ಕುಟುಂಬಗಳು: ಮಾನ್ಯತೆ ಪಡೆಯದ ಅಥವಾ ಸದಸ್ಯನಲ್ಲದ ವಿದೇಶಿ ಸರಕಾರದ ಪ್ರತಿನಿಧಿಗಳು | |
G-4 | ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ಪ್ರತಿನಿಧಿಗಳು ಹಾಗು ಅವರ ಕುಟುಂಬಗಳು: ಅಂತಾರಾಷ್ಟ್ರೀಯ ಸಂಸ್ಥೆಯ ಅಧಿಕಾರಿಗಳು ಅಥವಾ ಉದ್ಯೋಗಿಗಳು | |
G-5 | ಸಹವರ್ತಿಗಳು, ಸೇವಕರು ಅಥವಾ ಪ್ರತಿನಿಧಿಗಳ ಖಾಸಗಿ ನೌಕರರು | |
GB | ತಾತ್ಕಾಲಿಕ ಪ್ರವಾಸಿಗಳು: ವ್ಯಾಪಾರಕ್ಕಾಗಿ, ವೀಸಾ ಮನ್ನಾ ಕಾರ್ಯಕ್ರಮಕ್ಕೆ, ಗುವಾಂ | |
GT | ತಾತ್ಕಾಲಿಕ ಪ್ರವಾಸಿಗಳು: ವಿಹಾರಕ್ಕಾಗಿ ಬರುವವರು, ವೀಸಾ ಮನ್ನಾ ಕಾರ್ಯಕ್ರಮ ಗುವಾಂ | |
H-1B | ಉಭಯ-ಉದ್ದೇಶ | ತಾತ್ಕಾಲಿಕ ಕೆಲಸಗಾರರು ಹಾಗು ಶಿಕ್ಷಣಾರ್ಥಿಗಳು: ವಿಶೇಷ ತಜ್ಞತೆಯ ಉದ್ಯೋಗಗಳು |
H-1B1 | ಉಭಯ-ಉದ್ದೇಶ | ತಾತ್ಕಾಲಿಕ ಕೆಲಸಗಾರರು ಹಾಗು ಶಿಕ್ಷಣಾರ್ಥಿಗಳು: ಚಿಲಿ ಹಾಗು ಸಿಂಗಾಪುರ ಮುಕ್ತ ವ್ಯಾಪಾರ ಒಪ್ಪಂದ |
H-1C | ಉಭಯ-ಉದ್ದೇಶ | ತಾತ್ಕಾಲಿಕ ನೌಕರರು ಮತ್ತು ಶಿಕ್ಷಣಾರ್ಥಿಗಳು: ಅನನುಕೂಲಕರ ಪ್ರದೇಶಗಳಲ್ಲಿ ನರ್ಸಿಂಗ್ ಪರಿಹಾರ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ನೋಂದಾಯಿತ ದಾದಿಯರು |
H-2A | ತಾತ್ಕಾಲಿಕ ಕೆಲಸಗಾರರು ಹಾಗು ಶಿಕ್ಷಣಾರ್ಥಿಗಳು: ಋತುಆಧಾರಿತ ಕೃಷಿ ಕೆಲಸಗಾರರು | |
H-2B | ತಾತ್ಕಾಲಿಕ ಕೆಲಸಗಾರರು ಹಾಗು ಶಿಕ್ಷಣಾರ್ಥಿಗಳು: ಋತುಆಧಾರಿತ ಕೃಷಿಯೇತರ ಕೆಲಸಗಾರರು | |
H-3 | ತಾತ್ಕಾಲಿಕ ಕೆಲಸಗಾರರು ಹಾಗು ಶಿಕ್ಷಣಾರ್ಥಿಗಳು: ಕೈಗಾರಿಕಾ ಶಿಕ್ಷಣಾರ್ಥಿಗಳು. | |
H-4 | ಉಭಯ-ಉದ್ದೇಶ | ತಾತ್ಕಾಲಿಕ ಕೆಲಸಗಾರರು ಹಾಗು ಶಿಕ್ಷಣಾರ್ಥಿ: H-1, H-2, ಹಾಗು H-3 ಕೆಲಸಗಾರರ ಪತಿ/ಪತ್ನಿಯರು ಹಾಗು ಮಕ್ಕಳು |
I-1 | ವಿದೇಶಿ ಮಾಹಿತಿ ಮಾಧ್ಯಮದ ಪ್ರತಿನಿಧಿಗಳು ಹಾಗು ಅವರ ಕುಟುಂಬಗಳು | |
IR-1 | ವಲಸೆಗಾರರು | U.S. ಪ್ರಜೆಯ ನಿಕಟ ಸಂಬಂಧಿ: U.S. ಪ್ರಜೆಯ ಪತಿ/ಪತ್ನಿ ಅರ್ಜಿ ಸಲ್ಲಿಸುವಾಗ ಮದುವೆಯಾಗಿ ಎರಡು ವರ್ಷಕ್ಕೂ ಕಡಿಮೆ ಅವಧಿಯಾಗಿದ್ದರೆ ಈ ವೀಸಾವನ್ನು CR-1 ಎಂದು ಕರೆಯಲಾಗುತ್ತದೆ(ಕಂಡೀಷನಲ್ ರೆಸಿಡೆಂಟ್(ಷರತ್ತುಗಳಿಗೊಳಪಟ್ಟ ನಿವಾಸಿ)ಗಾಗಿ). ಪ್ರತ್ಯೇಕ ಪ್ರಕ್ರಿಯೆಗಳಲ್ಲಿ ಪ್ರವೇಶವನ್ನು ಪಡೆದ ಎರಡು ವರ್ಷಗಳ ನಂತರ CR-1 ವೀಸಾದ ನಿಯಮಾಧೀನತೆ "ರದ್ದುಗೊಳಿಸಲಾಗುತ್ತದೆ". |
IR-2 | ವಲಸೆಗಾರರು | U.S. ಪ್ರಜೆಯ ನಿಕಟ ಸಂಬಂಧಿ: U.S. ಪ್ರಜೆಯ 21 ವರ್ಷ ಕೆಳಗಿನ ವಯಸ್ಸಿನ ಅವಿವಾಹಿತ ಮಕ್ಕಳು. |
IR-3 | ವಲಸೆಗಾರರು | U.S. ಪ್ರಜೆಯ ನಿಕಟ ಸಂಬಂಧಿ: U.S. ಪ್ರಜೆಗಳು ದತ್ತು ತೆಗೆದುಕೊಂಡಂತಹ ಅನಾಥ ಮಕ್ಕಳು, ಇವರ ದತ್ತುಸ್ವೀಕಾರವನ್ನು U.S.ನ ಹೊರಗೆ ಅಂತಿಮಗೊಳಿಸಲಾಗಿರುವುದು. ಗಮನಿಸಿ: IR-3 ವೀಸಾ ನೀಡಬೇಕಾದರೆ, U.S. ನಿಬಂಧನೆಗಳ ಪ್ರಕಾರ, ದತ್ತು ತೆಗೆದುಕೊಂಡ ಇಬ್ಬರೂ ತಂದೆತಾಯಿಯರು ಹೊರದೇಶದಲ್ಲಿ ದತ್ತು ಸ್ವೀಕಾರದಲ್ಲಿ ಭಾಗವಹಿಸುವುದರ ಜೊತೆಯಲ್ಲಿ ವಾಸ್ತವವಾಗಿ ಅದರ ತಾಯ್ನಾಡಿನಲ್ಲಿ ಮಗುವನ್ನು ಸಂಧಿಸಬೇಕು. ಮಗವನ್ನು ಕರೆತರಲು ಇಬ್ಬರಲ್ಲಿ ಒಬ್ಬ ತಂದೆತಾಯಿ ಮಾತ್ರ ಹೋದರೆ, ಅಂತಹ ಸಂದರ್ಭದಲ್ಲಿ ಇದಕ್ಕೆ ಬದಲಿಯಾಗಿ ಮಗುವಿಗೆ IR-4 ವೀಸಾವನ್ನು ನೀಡಲಾಗುತ್ತದೆ. |
IR-4 | ವಲಸೆಗಾರ | U.S. ಪ್ರಜೆಯ ನಿಕಟ ಸಂಬಂಧಿ: U.S. ಪ್ರಜೆಯು ದತ್ತು ತೆಗೆದುಕೊಂಡಂತಹ ಅನಾಥ ಮಗುವಿನ ದತ್ತುಸ್ವೀಕಾರವನ್ನು ಪ್ರಜೆಯ ತಾಯ್ನಾಡಿನ ಕಾನೂನು ವ್ಯಾಪ್ತಿಯಲ್ಲಿ ಅಂತಿಮಗೊಳಿಸಲಾಗುತ್ತದೆ. |
IR-5 | ವಲಸೆಗಾರ | U.S. ಪ್ರಜೆಯ ನಿಕಟ ಸಂಬಂಧಿ: U.S. ಪ್ರಜೆಯ ತಂದೆತಾಯಿ; ಪ್ರಜೆಯು ಕಡೇಪಕ್ಷ 21 ವರ್ಷ ವಯಸ್ಸಿನವನಾಗಿರಬೇಕು. |
J-1 | ನಾನ್ ಇಮಿಗ್ರಂಟ್ | ವಿದ್ಯಾರ್ಥಿಗಳು ಹಾಗು ವಿನಿಮಯ ಪ್ರವಾಸಿಗಳು(ಪರಸ್ಪರ ವಿಚಾರ ವಿನಿಮಯದಲ್ಲಿ ಭಾಗವಹಿಸುವವರು):ವಿನಿಮಯ ಪ್ರವಾಸಿಗಳು |
J-2 | ನಾನ್ ಇಮಿಗ್ರಂಟ್ | ವಿದ್ಯಾರ್ಥಿಗಳು ಹಾಗು ವಿನಿಮಯ ಪ್ರವಾಸಿಗಳು( ಪರಸ್ಪರ ವಿಚಾರ ವಿನಿಮಯದಲ್ಲಿ ಭಾಗವಹಿಸುವವರು): ವಿನಿಮಯ ಪ್ರವಾಸಿಗಳ ಪತಿ/ಪತ್ನಿಯರು ಹಾಗು ಮಕ್ಕಳು |
K-1 | ಉಭಯ-ಉದ್ದೇಶ | LIFE ಕಾಯಿದೆ: U.S. ಪ್ರಜೆಯ ನಿಶ್ಚಿತ ವರರು (ವಧುಗಳು) |
K-2 | ಉಭಯ-ಉದ್ದೇಶ | LIFE ಕಾಯಿದೆ: U.S. ಪ್ರಜೆಗಳ ನಿಶ್ಚಿತ ವರರು(ವಧುಗಳ) ಮಕ್ಕಳು |
K-3 | ಉಭಯ-ಉದ್ದೇಶ | LIFE ಕಾಯಿದೆ: U.S. ಪ್ರಜೆಗಳ ಪತಿ/ಪತ್ನಿಯರು,ಬಾಕಿವುಳಿದಿರುವ ವೀಸಾ |
K-4 | ಉಭಯ-ಉದ್ದೇಶ | LIFE ಕಾಯಿದೆ: U.S. ಪ್ರಜೆಯ ಮಕ್ಕಳು, ಬಾಕಿವುಳಿದ ವೀಸಾ(ಇತ್ಯರ್ಥದಲ್ಲಿರುವ ವೀಸಾ) |
L-1 | ಉಭಯ-ಉದ್ದೇಶ | ಅಂತರ್‌ಸಂಸ್ಥೆಯ ವರ್ಗಾಯಿತರು: ಮುಖ್ಯಸ್ಥರು |
L-2 | ಉಭಯ-ಉದ್ದೇಶ | ಅಂತರ್‌ಸಂಸ್ಥೆಯ ವರ್ಗಾಯಿತರು: ಅಂತರ್‌ಸಂಸ್ಥೆ ವರ್ಗಾಯಿತರ ಪತಿ/ಪತ್ನಿಯರು ಹಾಗು ಮಕ್ಕಳು |
M-1 | ವಿದ್ಯಾರ್ಥಿಗಳು ಹಾಗು ವಿನಿಮಯ ಪ್ರವಾಸಿಗಳು: ಔದ್ಯೋಗಿಕ ವಿದ್ಯಾರ್ಥಿಗಳು | |
M-2 | ವಿದ್ಯಾರ್ಥಿಗಳು ಹಾಗು ವಿನಿಮಯ ಪ್ರವಾಸಿಗಳು(ಪರಸ್ಪರ ವಿಚಾರ ವಿನಿಮಯದಲ್ಲಿ ಭಾಗವಹಿಸುವವರು): ಔದ್ಯೋಗಿಕ ವಿದ್ಯಾರ್ಥಿಗಳ ಪತಿ/ಪತ್ನಿಯರು ಹಾಗು ಮಕ್ಕಳು | |
N-1ನಿಂದ N-6ವರೆಗೆ | NATO ಅಧಿಕಾರಿಗಳು ಹಾಗು ಅವರ ಕುಟುಂಬಗಳು | |
N-8 ಹಾಗು N-9 | ಕೆಲವು SK-3 ವಿಶೇಷ ವಲಸೆಗಾರರ ನಿಕಟ ಸಂಬಂಧಿಗಳು | |
O-1 | ತಾತ್ಕಾಲಿಕ ಕೆಲಸಗಾರರು ಹಾಗು ಶಿಕ್ಷಣಾರ್ಥಿಗಳು: ವಿಶೇಷ ಸಾಮರ್ಥ್ಯ ಅಥವಾ ಸಾಧನೆ | |
O-2 | ತಾತ್ಕಾಲಿಕ ಕೆಲಸಗಾರರು ಹಾಗು ಶಿಕ್ಷಣಾರ್ಥಿಗಳು: O-1 ಕೆಲಸಗಾರರ ಸಹವರ್ತಿಗಳು ಹಾಗು ಅವರ ಕೆಲಸ ಕಾರ್ಯಗಳಲ್ಲಿ ನೆರವಾಗುವವರು | |
O-3 | ತಾತ್ಕಾಲಿಕ ಕೆಲಸಗಾರರು ಹಾಗು ಶಿಕ್ಷಣಾರ್ಥಿಗಳು: O-1 ಹಾಗು O-2 ಕೆಲಸಗಾರರ ಪತಿ/ಪತ್ನಿಯರು ಹಾಗು ಮಕ್ಕಳು | |
ತಾತ್ಕಾಲಿಕ ಕೆಲಸಗಾರರು ಹಾಗು ಶಿಕ್ಷಣಾರ್ಥಿಗಳು: ಅಂತಾರಾಷ್ಟ್ರೀಯವಾಗಿ ಮಾನ್ಯತೆ ಪಡೆದ ಅಥ್ಲಿಟ್ ಗಳು ಅಥವಾ ಮನೋರಂಜಕರು | ||
ತಾತ್ಕಾಲಿಕ ಕೆಲಸಗಾರರು ಹಾಗು ಶಿಕ್ಷಣಾರ್ಥಿಗಳು: ಪರಸ್ಪರ ವಿಚಾರ ವಿನಿಮಯ ಕಾರ್ಯಕ್ರಮದಲ್ಲಿ ಭಾಗವಹಿಸುವ ಕಲಾವಿದರು ಅಥವಾ ಮನೋರಂಜಕರು | ||
ತಾತ್ಕಾಲಿಕ ಕೆಲಸಗಾರರು ಹಾಗು ಶಿಕ್ಷಣಾರ್ಥಿಗಳು: ವಿಶಿಷ್ಟ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸುವ ಕಲಾವಿದರು ಅಥವಾ ಮನೋರಂಜಕರು | ||
ತಾತ್ಕಾಲಿಕ ಕೆಲಸಗಾರರು ಹಾಗು ಶಿಕ್ಷಣಾರ್ಥಿಗಳು: P-1, P-2, ಹಾಗು P-3 ಕೆಲಸಗಾರರ ಪತಿ/ಪತ್ನಿಯರು ಹಾಗು ಮಕ್ಕಳು | ||
Q-1 | ತಾತ್ಕಾಲಿಕ ಕೆಲಸಗಾರರು ಹಾಗು ಶಿಕ್ಷಣಾರ್ಥಿಗಳು: ಅಂತಾರಾಷ್ಟ್ರೀಯ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಗಳ ಕೆಲಸಗಾರರು | |
R-1 | ತಾತ್ಕಾಲಿಕ ಕೆಲಸಗಾರರು ಹಾಗು ಶಿಕ್ಷಣಾರ್ಥಿಗಳು: ಧಾರ್ಮಿಕ ವೃತ್ತಿಯಲ್ಲಿರುವ ಕೆಲಸಗಾರರು | |
R-2 | ತಾತ್ಕಾಲಿಕ ಕೆಲಸಗಾರರು ಹಾಗು ಶಿಕ್ಷಣಾರ್ಥಿಗಳು: R-1 ಕೆಲಸಗಾರರ ಪತಿ/ಪತ್ನಿಯರು ಹಾಗು ಮಕ್ಕಳು | |
S ವೀಸಾ [ಎರಡು ಮಾದರಿಗಳು: S-5/ S-6] | ಕಾನೂನು ಜಾರಿಗೆ ನೆರವಾಗುವ ಪರದೇಶದವರು | |
ಸ್ಪೆಷಲ್ ಇಮಿಗ್ರಂಟ್ ಜುವೆನೈಲ್ ಸ್ಟೇಟಸ್ (SIJS) | ಜುವೆನೈಲ್(ಬಾಲಾಪರಾಧಿ)ನ್ಯಾಯಾಲಯದ ಅವಲಂಬಿಗಳೆಂದು ಘೋಷಿತರಾಗಿ U.S.ನಲ್ಲಿ ಉಪಸ್ಥಿತರಿರುವ ಹಾಗು ತಮ್ಮ ತಾಯ್ನಾಡಿಗೆ ಹಿಂದಿರುಗಿದರೆ ಮತ್ತೆ ತೊಂದರೆಗೆ ಒಳಪಡಬಹುದಾದ ಅರ್ಹ ಮಕ್ಕಳು. | |
T-1 | ಮಾನವ ಕಳ್ಳಸಾಗಣೆಗೆ ಬಲಿಯಾದವರು | |
T-2 | ಮಾನವ ಕಳ್ಳಸಾಗಣೆಗೆ ಬಲಿಯಾದವರು: ಬಲಿಯಾದವರ ಪತಿ/ಪತ್ನಿಯರು | |
T-3 | ಮಾನವ ಕಳ್ಳಸಾಗಣೆಗೆ ಬಲಿಯಾದವರು: ಬಲಿಯಾದವರ ಮಕ್ಕಳು | |
T-4 | ಮಾನವ ಕಳ್ಳಸಾಗಣೆಗೆ ಬಲಿಯಾದವರು: ಬಲಿಯಾದ ಮಕ್ಕಳ ತಂದೆತಾಯಿಯರು | |
TD | ತಾತ್ಕಾಲಿಕ ಕೆಲಸಗಾರರು ಹಾಗು ಶಿಕ್ಷಣಾರ್ಥಿಗಳು: NAFTA ಕೆಲಸಗಾರರ ಪತಿ/ಪತ್ನಿಯರು ಹಾಗು ಮಕ್ಕಳು | |
TN | ತಾತ್ಕಾಲಿಕ ಕೆಲಸಗಾರರು ಹಾಗು ಶಿಕ್ಷಣಾರ್ಥಿಗಳು: NAFTA ವೃತ್ತಿಪರ ಕೆಲಸಗಾರರು | |
U-1 | ಕ್ರಿಮಿನಲ್ ಚಟುವಟಿಕೆಗಳಾದ ಅತ್ಯಾಚಾರ, ಕೊಲೆ, ನರಹತ್ಯೆ, ಮಕ್ಕಳ ದುರುಪಯೋಗ, ಕೌಟುಂಬಿಕ ಹಿಂಸಾಚಾರ, ಲೈಂಗಿಕ ಆಕ್ರಮಣ ಹಾಗು/ಅಥವಾ ಮಾನವಕಳ್ಳಸಾಗಾಣಿಕೆಗೆ ಬಲಿಯಾದವರು(ಸಂತ್ರಸ್ತರು) | |
U-2 | ಕ್ರಿಮಿನಲ್ ಚಟುವಟಿಕೆಗಳಿಗೆ ಬಲಿಯಾದವರು(ಸಂತ್ರಸ್ತರು): ಬಲಿಯಾದವರ ಪತಿ/ಪತ್ನಿಯರು | |
U-3 | ಕ್ರಿಮಿನಲ್ ಚಟುವಟಿಕೆಗಳಿಗೆ ಬಲಿಯಾದವರು: ಬಲಿಯಾದವರ ಮಕ್ಕಳು | |
U-4 | ಕ್ರಿಮಿನಲ್ ಚಟುವಟಿಕೆಗಳಿಗೆ ಬಲಿಯಾದವರು:ಬಲಿಯಾದವರು ಮಕ್ಕಳಾಗಿದ್ದಲ್ಲಿ ಅವರ ತಂದೆತಾಯಿಯರು | |
LIFE ಕಾಯಿದೆ: ಕಾಯಂ ನಿವಾಸಿಗಳ ಪತಿ/ಪತ್ನಿಯರು, ಬಾಕಿವುಳಿದ ವೀಸಾ | ||
V-2 | LIFE ಕಾಯಿದೆ: ಕಾಯಂ ನಿವಾಸಿಗಳ ಮಕ್ಕಳು, ಬಾಕಿವುಳಿದ ವೀಸಾ | |
V-3 | LIFE ಕಾಯಿದೆ: V-1 ಹಾಗು V-2ಗಳ ಮೇಲೆ ಅವಲಂಬಿತರಾಗಿರುವವರು,ಬಾಕಿವುಳಿದ ವೀಸಾ | |
WB | ತಾತ್ಕಾಲಿಕ ಪ್ರವಾಸಿಗಳು: ವೀಸಾ ಮನ್ನಾ, ವ್ಯಾಪಾರಕ್ಕಾಗಿ | |
WT | ತಾತ್ಕಾಲಿಕ ಪ್ರವಾಸಿಗಳು: ವೀಸಾ ಮನ್ನಾ, ವಿಹಾರಕ್ಕಾಗಿ |
ವೀಸಾ ನಿರಾಕರಣೆ
ಬದಲಾಯಿಸಿವಲಸೆ ಮತ್ತು ರಾಷ್ಟ್ರೀಯತೆ ಕಾಯಿದೆ ನ 212(g)ಖಂಡವು, ವೀಸಾ ಪಡೆಯಲು ಅನರ್ಹರಾದ ಹಲವಾರು ವರ್ಗಗಳ ವಿದೇಶಿಯರುನ್ನು ಪಟ್ಟಿ ಮಾಡಿದೆ. ವೀಸಾದ ನಿರಾಕರಣೆಗೆ ಈ ಕೆಳಕಂಡವುಗಳು ಕಾರಣಗಳು ಆಧಾರವಾಗಬಹುದು, ಆದರೆ ಸೀಮಿತವಾಗುವುದಿಲ್ಲ:
- ಆರೋಗ್ಯದ ಕಾರಣಗಳು
- ಕ್ರಿಮಿನಲ್ ಕಾರಣಗಳು
- ಭದ್ರತಾ ಕಾರಣಗಳು
- ಸಾರ್ವಜನಿಕ ಕರ್ತವ್ಯ(ಕರ್ತವ್ಯ ಎಂದರೆ ಈ ಸಂದರ್ಭದಲ್ಲಿ ಹೊರೆ)
- ಕಾನೂನುಬಾಹಿರವಾಗಿ ಪ್ರವೇಶಿಸಿದವರು ಅಥವಾ ವಲಸೆಗಾರಿಕೆ ನಿಯಮಗಳನ್ನು ಉಲ್ಲಂಘಿಸಿದವರು
- ಅಗತ್ಯ ದಾಖಲೆಗಳನ್ನು ಒದಗಿಸುವಲ್ಲಿ ವಿಫಲರಾದವರು
- ಪೌರತ್ವಕ್ಕೆ ಅನರ್ಹರಾದವರು
- USನಿಂದ ಈ ಹಿಂದೆ ಗಡಿಪಾರಾದವರು
ಇವನ್ನೂ ಗಮನಿಸಿ
ಬದಲಾಯಿಸಿ- ಪ್ರಯಾಣದ ಪ್ರಮಾಣೀಕರಣಕ್ಕೆ ವಿದ್ಯುನ್ಮಾನ ವ್ಯವಸ್ಥೆ
- ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್ಮೆಂಟ್ ಆಫ್ ಹೋಮ್ ಲ್ಯಾಂಡ್ ಸೆಕ್ಯುರಿಟಿ
- ವೀಸಾ ಮನ್ನಾ ಕಾರ್ಯಕ್ರಮ
- ಸೆಕ್ಯೂರಿಟಿ ಅಡ್ವೈಸರಿ ಒಪೀನಿಯನ್(ಭದ್ರತಾ ಸಲಹೆ)
- ಯುರೋಪಿಯನ್ ಒಕ್ಕೂಟದ ವೀಸಾ ಪಟ್ಟಿಗಳು
ಉಲ್ಲೇಖಗಳು
ಬದಲಾಯಿಸಿ- ↑ US ಡಿಪಾರ್ಟ್ಮೆಂಟ್ ಆಫ್ ಸ್ಟೇಟ್ ವೀಸಾ ಸ್ಟಾಟಿಸ್ಟಿಕ್ಸ್
- ↑ "ಗಡಿ ರಾಷ್ಟ್ರಗಳು: ಕೆನಡಾ, ಮೆಕ್ಸಿಕೋ ಹಾಗು ಬರ್ಮುಡಾ". Archived from the original on 2010-12-22. Retrieved 2011-02-09.
- ↑ ೩.೦ ೩.೧ ೩.೨ ೩.೩ ೩.೪ ೩.೫ ೩.೬ ೩.೭ Grossman, Neil; Golden, Howard; Thurnell, Tracy (April 1, 2009). "GRIST InDepth: Hiring noncitizens - an immigration law primer for US employers". Mercer. Archived from the original (pdf) on ಜುಲೈ 14, 2011. Retrieved ಫೆಬ್ರವರಿ 9, 2011.
- ↑ ವಾಟ್ ಈಸ್ ವೀಸಾ? Archived 2009-05-11 ವೇಬ್ಯಾಕ್ ಮೆಷಿನ್ ನಲ್ಲಿ. U.S. ಸ್ಟೇಟ್ ಡಿಪಾರ್ಟ್ಮೆಂಟ್
- ↑ ಆಗಮನ-ನಿರ್ಗಮನದ ದಾಖಲೆಗಳ (I-94 ಫಾರ್ಮ್) ಬಗ್ಗೆ FAQಗಳು & ಕ್ರೂಮೆನ್ ಲ್ಯಾಂಡಿಂಗ್ ಪರ್ಮಿಟ್ (I-95 ಫಾರ್ಮ್). Archived 2010-03-06 ವೇಬ್ಯಾಕ್ ಮೆಷಿನ್ ನಲ್ಲಿ. U.S. ಕಸ್ಟಮ್ಸ್ ಅಂಡ್ ಬಾರ್ಡರ್ ಪ್ರೊಟೆಕ್ಷನ್. ಮೇ 1, 2008ರಲ್ಲಿ ಮರುಸಂಪಾದಿಸಲಾಗಿದೆ.
- ↑ "ಆರ್ಕೈವ್ ನಕಲು". Archived from the original on 2010-05-27. Retrieved 2011-02-09.
- ↑ ಕೊಹ್ಯಾಬಿಟಿಂಗ್ ಪಾರ್ಟ್ನರ್ಸ್
- ↑ "Immigration Classifications and Visa Categories". United States Citizenship and Immigration Services. Archived from the original on ಫೆಬ್ರವರಿ 28, 2008. Retrieved January 28, 2010.
ಬಾಹ್ಯ ಕೊಂಡಿಗಳು
ಬದಲಾಯಿಸಿ- ಅಮೆರಿಕ ಸಂಯುಕ್ತ ಸಂಸ್ಥಾನದ ವೀಸಾಗಳು Archived 2009-07-07 ವೇಬ್ಯಾಕ್ ಮೆಷಿನ್ ನಲ್ಲಿ.
- U.S.ವಲಸೆಗಾರಿಕೆ ಅಂಕಿಅಂಶಗಳು Archived 2011-01-19 ವೇಬ್ಯಾಕ್ ಮೆಷಿನ್ ನಲ್ಲಿ.
- ಅಮೆರಿಕ ಸಂಯುಕ್ತ ಸಂಸ್ಥಾನದ ವೀಸಾ ಪರಸ್ಪರ ಸಂಬದ್ಧತೆ ಹಾಗು ರಾಷ್ಟ್ರದ ದಾಖಲೆ ಅನ್ವೇಷಕ
- US ಪೌರತ್ವ ಹಾಗು ವಲಸೆಗಾರಿಕೆ ಸೇವೆಗಳು Archived 2006-11-02 ವೇಬ್ಯಾಕ್ ಮೆಷಿನ್ ನಲ್ಲಿ.
- ವಲಸೆ ಹೋದವರ ವೀಸಾ ವರ್ಗದ ಚಿಹ್ನೆಗಳು Archived 2016-03-09 ವೇಬ್ಯಾಕ್ ಮೆಷಿನ್ ನಲ್ಲಿ.
- ಚೀನಾ ಫ್ಯಾಮಿಲಿ ವೀಸಾ ಫೋರಮ್ಸ್ - ಚೀನಾ ದೇಶವನ್ನು ಗಮನದಲ್ಲಿಟ್ಟುಕೊಂಡು ವಲಸೆಗಾರಿಕೆ ವೀಸಾಗಳ ಬಗ್ಗೆ ಸಲಹೆ ಹಾಗು ಅನುಭವಗಳನ್ನು ಹಂಚಿಕೊಳ್ಳಲು ರೂಪುಗೊಂಡಿರುವ ಲಾಭಾಪೇಕ್ಷೆಯಿಲ್ಲದ ಒಂದು ವೆಬ್ ವೇದಿಕೆ Archived 2019-07-19 ವೇಬ್ಯಾಕ್ ಮೆಷಿನ್ ನಲ್ಲಿ.
- ವಲಸಿಗರಿಗಲ್ಲದ US ವೀಸಾಕ್ಕೆ DS-160 ಅರ್ಜಿಯನ್ನು ಭರ್ತಿ ಮಾಡಲು ರಷ್ಯಾದ ನೆರವು