ಅಮಿತ್ ತಿವಾರಿ (ಏರ್ ಮಾರ್ಷಲ್)
ಏರ್ ಮಾರ್ಷಲ್ ಅಮಿತ್ ತಿವಾರಿ ಅವರು ಭಾರತೀಯ ವಾಯುಪಡೆಯ ನಿವೃತ್ತ ಅಧಿಕಾರಿಯಾಗಿದ್ದಾರೆ. ಅವರು ಏರ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ (ಎಒಸಿ-ಇನ್-ಸಿ) ಸೆಂಟ್ರಲ್ ಏರ್ ಕಮಾಂಡ್ ಆಗಿ ಸೇವೆ ಸಲ್ಲಿಸಿದ್ದರು. ಅವರು ೨೦೨೧ರ ಫೆಬ್ರವರಿ ೧ ರಂದು ಏರ್ ಮಾರ್ಷಲ್ ರಾಜೇಶ್ ಕುಮಾರ್ ಅವರ ನಂತರ ಅಧಿಕಾರ ವಹಿಸಿಕೊಂಡು ೨೦೨೧ರ ಮೇ ೩೧ರವರೆಗೆ ಸೇವೆ ಸಲ್ಲಿಸಿದರು. ಅವರ ನಂತರ ಏರ್ ಮಾರ್ಷಲ್ ರಿಚರ್ಡ್ ಜಾನ್ ಡಕ್ವರ್ತ್ ಅಧಿಕಾರ ವಹಿಸಿಕೊಂಡರು. [೨][೩][೪] ಈ ಹಿಂದೆ, ಅವರು ದಕ್ಷಿಣ ವಾಯು ಕಮಾಂಡ್ ಎಒಸಿ-ಇನ್-ಸಿ ಆಗಿ ಸೇವೆ ಸಲ್ಲಿಸಿದ್ದರು. ಇವರು ಪರಮ ವಿಶಿಷ್ಟ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕ, ವಾಯು ಸೇನಾ ಪದಕ ಪಡೆದಿದ್ದಾರೆ.[೫]
ಏರ್ ಮಾರ್ಷಲ್ ಅಮಿತ್ ತಿವಾರಿ ಪರಮ ವಿಶಿಷ್ಟ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕ, ವಾಯು ಸೇನಾ ಪದಕ | |
---|---|
ಸೇವಾವಧಿ | ಜೂನ್ ೧೯೮೨ - ೩೧ ಮೇ ೨೦೨೧ |
ಶ್ರೇಣಿ(ದರ್ಜೆ) | ವಾಯು ಪಡೆ |
ಸೇವಾ ಸಂಖ್ಯೆ | ೧೬೮೦೬[೧] |
ಅಧೀನ ಕಮಾಂಡ್ | ಸೆಂಟ್ರಲ್ ಏರ್ ಕಮಾಂಡ್ ಸದರನ್ ಏರ್ ಕಮಾಂಡ್ |
ಪ್ರಶಸ್ತಿ(ಗಳು) | ಪರಮ ವಿಶಿಷ್ಟ ಸೇವಾ ಪದಕ ಅತಿ ವಿಶಿಷ್ಟ ಸೇವಾ ಪದಕ ವಾಯು ಸೇನಾ ಪದಕ |
ಆರಂಭಿಕ ಜೀವನ ಮತ್ತು ಶಿಕ್ಷಣ
ಬದಲಾಯಿಸಿಅಮಿತ್ ಅವರು ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ ವಿದ್ಯಾರ್ಥಿ. ಅವರು ರಕ್ಷಣಾ ನಿರ್ವಹಣೆ ಮತ್ತು ಮತ್ತು ರಾಷ್ಟ್ರೀಯ ರಕ್ಷಣಾ ಕಾಲೇಜಾದ, ಡಿಫೆನ್ಸ್ ಸರ್ವಿಸ್ ಸ್ಟಾಫ್ ಕಾಲೇಜ್‌ನಿಂದ ಪದವಿ ಪಡೆದಿದ್ದಾರೆ.[೬]
ವೃತ್ತಿಜೀವನ
ಬದಲಾಯಿಸಿಅಮಿತ್ ಅವರು ಭಾರತೀಯ ವಾಯುಪಡೆಗೆ ಜೂನ್ ೧೯೮೨ ರಲ್ಲಿ ಫೈಟರ್ ಪೈಲಟ್ ಆಗಿ ನಿಯೋಜಿಸಲ್ಪಟ್ಟಿದ್ದರು. ಅವರು ಅರ್ಹ ವಿಮಾನ ತರಬೇತುದಾರರಾಗಿದ್ದು, ವಿವಿಧ ಯುದ್ಧ ವಿಮಾನಗಳಲ್ಲಿ ೩೫೦೦ ಗಂಟೆಗಳಿಗೂ ಹೆಚ್ಚು ಹಾರಾಟದ ಅನುಭವವನ್ನು ಹೊಂದಿದ್ದಾರೆ.[೭]
ತಮ್ಮ ವೃತ್ತಿಜೀವನದಲ್ಲಿ, ಅವರು ಸೂರ್ಯ ಕಿರಣ್ ಏರೋಬ್ಯಾಟಿಕ್ ಸ್ಕ್ವಾಡ್ರನ್ ತಂಡದ ನಾಯಕ, ಫಾರ್ವರ್ಡ್ ಬೇಸ್ ನ ಸ್ಟೇಷನ್ ಕಮಾಂಡರ್, ಅಫ್ಘಾನಿಸ್ತಾನ ಭಾರತೀಯ ರಾಯಭಾರ ಕಚೇರಿಯಲ್ಲಿ ಏರ್ ಅಟ್ಯಾಚೆ, ಜೊತೆಗೆ ವಾಯು ರಕ್ಷಣಾ ಕಮಾಂಡರ್ ಮತ್ತು ಕಾರ್ಯಾಚರಣೆಯ ಕಮಾಂಡ್ನಲ್ಲಿ ಹಿರಿಯ ಅಧಿಕಾರಿ-ಉಸ್ತುವಾರಿ ಸೇರಿದಂತೆ ಹಲವಾರು ಸ್ಥಾನಗಳನ್ನು ಅಲಂಕರಿಸಿದ್ದಾರೆ. ಅವರು ಸಹಾಯಕ ವಾಯು ಸಿಬ್ಬಂದಿ ಮುಖ್ಯಸ್ಥ (ವಾಯು ಕೇಂದ್ರ ಕಛೇರಿಯಲ್ಲಿ ತರಬೇತಿ ಮತ್ತು ಕಮಾಂಡೆಂಟ್ ವಾಯುಪಡೆಯ ಅಕಾಡೆಮಿ) ಹುದ್ದೆಯನ್ನು ಸೇರಿದಂತೆ ಹಲಾವರು ನೇಮಕಾತಿಗಳ ಭಾಗವಾಗಿದ್ದರು.[೮]
ದಕ್ಷಿಣ ವಾಯು ಕಮಾಂಡ್ ನ ಎಒಸಿ-ಇನ್-ಸಿ ದಕ್ಷಿಣ ಏರ್ ಕಮಾಂಡ್ ಆಗಿ ನೇಮಕಗೊಳ್ಳುವ ಮೊದಲು, ಅಮಿತ್ ನವದೆಹಲಿಯ ವಾಯು ಸೇನಾ ಭವನದ ವಾಯು ಪ್ರಧಾನ ಕಚೇರಿಯಲ್ಲಿ ಸಿಬ್ಬಂದಿ ಉಸ್ತುವಾರಿ ವಾಯು ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.[೯]
ಗೌರವಗಳು ಮತ್ತು ಪದಕಗಳು
ಬದಲಾಯಿಸಿಅಮಿತ್ ಅವರ ವೃತ್ತಿಜೀವನದ ಅವಧಿಯಲ್ಲಿ, ಅವರ ಸೇವೆಗಾಗಿ ಅವರಿಗೆ ವಾಯುಸೇನಾ ಪದಕ (ವಿಎಂ) ಮತ್ತು ಅತಿ ವಿಶಿಷ್ಟ ಸೇವಾ ಪದಕ (ಎವಿಎಸ್ಎಂ) ಮತ್ತು ೨೦೨೧ ರಲ್ಲಿ ಪರಮ ವಿಶಿಷ್ಟ ಸೇವಾ ಪದಕವನ್ನು ನೀಡಲಾಯಿತು.[೧][೧೦]
ಪರಮ ವಿಶಿಷ್ಟ ಸೇವಾ ಪದಕ | ಅತಿ ವಿಶಿಷ್ಟ ಸೇವಾ ಪದಕ | ವಾಯು ಸೇನಾ ಪದಕ |
ವೈಯಕ್ತಿಕ ಜೀವನ
ಬದಲಾಯಿಸಿಅಮಿತ್ ಅವರು ಏರ್ ಫೋರ್ಸ್ ವೈವ್ಸ್ ವೆಲ್ಫೇರ್ ಅಸೋಸಿಯೇಷನ್ (ಪ್ರಾದೇಶಿಕ) ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಪೂನಂ ತಿವಾರಿಯವರನ್ನು ವಿವಾಹವಾಗಿದ್ದಾರೆ.[೧೧]
ಉಲ್ಲೇಖಗಳು
ಬದಲಾಯಿಸಿ- ↑ ೧.೦ ೧.೧ "411 Republic Day Gallantry and Other Defence Decorations Announced". Press Information Bureau, Government of India. 25 ಜನವರಿ 2019.
- ↑ "Central Air Command - BRF". Bharat Rakshak. Archived from the original on 11 ಜುಲೈ 2021. Retrieved 30 ಮೇ 2021.
- ↑ "Rapid Turnover in IAF Brass". Bharat Shakti. 29 ಮೇ 2021.
- ↑ "Air Marshal Manavendra Singh Takes Charge As Chief Of Indian Air Force's Southern Command". NDTV. 3 ಫೆಬ್ರವರಿ 2021.
- ↑ "Air Marshal Amit Tiwari takes over as SAC chief". The Hindu. 1 ನವೆಂಬರ್ 2019."Air Marshal Amit Tiwari takes over as SAC chief". The Hindu. 1 November 2019.
- ↑ "Air Marshal Amit Tiwari new SAC Air Officer Commanding-in-Chief". 1 ನವೆಂಬರ್ 2019.
- ↑ "Air Marshal Amit Tiwari new SAC Air Officer Commanding-in-Chief". 1 ನವೆಂಬರ್ 2019."Air Marshal Amit Tiwari new SAC Air Officer Commanding-in-Chief". 1 November 2019.
- ↑ "Air Marshal Amit Tiwari takes over as SAC chief". The Hindu. 1 ನವೆಂಬರ್ 2019.
- ↑ "Air Marshal Amit Tiwari takes over as SAC chief". The Hindu. 1 ನವೆಂಬರ್ 2019."Air Marshal Amit Tiwari takes over as SAC chief". The Hindu. 1 November 2019.
- ↑ "President Shri Ram Nath Kovind approves 455 Gallantry & other defence decorations to Armed Forces personnel on Republic Day". PIB. 25 ಜನವರಿ 2021.
- ↑ "Air Marshal Amit Tiwari new SAC Air Officer Commanding-in-Chief". 1 ನವೆಂಬರ್ 2019."Air Marshal Amit Tiwari new SAC Air Officer Commanding-in-Chief". 1 November 2019.