ಅಮಟೆಗಿಡ
ಅಮಟೆಗಿಡ | |
---|---|
Fruiting Spondias mombin | |
Scientific classification | |
ಸಾಮ್ರಾಜ್ಯ: | |
(ಶ್ರೇಣಿಯಿಲ್ಲದ್ದು): | |
(ಶ್ರೇಣಿಯಿಲ್ಲದ್ದು): | |
(ಶ್ರೇಣಿಯಿಲ್ಲದ್ದು): | |
ಗಣ: | |
ಕುಟುಂಬ: | |
ಉಪಕುಟುಂಬ: | |
ಪಂಗಡ: | |
ಕುಲ: | Spondias |
Type species | |
Spondias mombin | |
Species | |
17, see text | |
Synonyms | |
Allospondias (Pierre) Stapf |
ಅನಕಾರ್ಡಿಯೇಸೀ ಕುಟುಂಬಕ್ಕೆ ಸೇರಿದ ಫಲವೃಕ್ಷ[೨]. ಸ್ಪಾಂಡಿಯಾಸ್ ಪಿನೇಟ ಇದರ ಸಸ್ಯವೈಜ್ಞನಿಕ ಹೆಸರು. ಕಾಡಮಟೆ, ಅಂಬಟೆ ಇದರ ಕನ್ನಡದ ಇತರ ಹೆಸರುಗಳು. ಅಮಟೆ ಗಿಡ ಮಾವು, ಗೇರು ಮುಂತಾದವುಗಳ ಸಂಬಂಧಿ. ಇದು ಸಾಧಾರಣ ಎತ್ತರದ (8-10 ಮೀ.)ಮ. ಉಷ್ಣವಲಯದ ಕಾಡುಗಳಲ್ಲಿ ಹೆಚ್ಚಾಗಿ ಬೆಳೆಯುತ್ತದೆ. ಭಾರತದಲ್ಲಿ ಕನ್ಯಾಕುಮಾರಿಯಿಂದ ಹಿಮಾಲಯದ ತಪ್ಪಲಿನವರೆಗೂ ಅಲ್ಲಲ್ಲೇ ಬೆಳೆಯುವುದುಂಟು. ಕಾಯಿಗಾಗಿ ಇದನ್ನು ಮನೆಯ ಹಿತ್ತಲಲ್ಲೂ ತೋಟಗಳಲ್ಲೂ ಬೆಳೆಸುವುದುಂಟು[೩].
ಮರ ಅಷ್ಟು ಗಟ್ಟಿಯಲ್ಲ; ಸೌದೆಗೆ ಮಾತ್ರ ಬಳಸಲು ಯೋಗ್ಯ. ಕೊಂಬೆಗಳು ಸುಲಭವಾಗಿ ಮುರಿದು ಹೋಗುತ್ತವೆ. ಚಕ್ಕೆಮಂದ; ಒಳಭಾಗ ಕೆಂಪು. ಎಲೆಗಳು ಚಳಿಗಾಲದಲ್ಲಿ ಬಹು ಬೇಗ ಉದುರಿ ಬಹು ದಿನಗಳವರೆಗೆ ಮರ ಬೆತ್ತಲೆಯಾಗಿರುತ್ತದೆ. ಅನಂತರ ಹೂಗಳು ಕಾಣಿಸಿಕೊಳ್ಳುತ್ತವೆ. ಎಲೆಗಳನ್ನು ಹಿಸುಕಿದರೆ ಟರ್‍ಪೆಂಟೈನ್ ವಾಸನೆ ಬರುತ್ತದೆ. ರಸವನ್ನು ಕಿವಿನೋವಿಗೆ ಉಪಯೋಗಿಸುತ್ತಾರೆ.
ಬಲಿತ ಬೀಜಗಳು ಮೊಳೆತು ಸಸಿಯಾಗುತ್ತವೆ. ಕೊಂಬೆಗಳನ್ನು ನೆಟ್ಟರೂ ಮರವಾಗಿ ಬೆಳೆಯುತ್ತದೆ. ಕಾಯಿ ಗಾತ್ರದಲ್ಲಿ ಅಳಲೆಕಾಯಿಯಷ್ಟಿದ್ದು ಬಣ್ಣದಲ್ಲಿ ಹಸಿರಾಗಿರುತ್ತದೆ. ಹೆಚ್ಚು ತಿಂದರೆ ಅಜೀರ್ಣಕಾರಿಯಾದರೂ ಗಂಟಲು ಮತ್ತು ಕಿವಿನೋವಿಗೆ ಔಷಧಿ. ಆಯುರ್ವೇದದ ಪ್ರಕಾರ ಇದರ ಶಕ್ತಿವರ್ಧಕ ಮತ್ತು ಕಾಮೋತ್ತೇಜಕ, ವಿರೇಚಕ, ಪಿತ್ತಕೆರಳಿಕೆ, ಹುಣ್ಣು, ಕ್ಷಯರೋಗ ಮತ್ತು ರಕ್ತ ದೋಷದಲ್ಲಿ ಉಪಯುಕ್ತ[೪]. ಮುಂಡಾ ಜನಾಂಗದಲ್ಲಿ ತೊಗಟೆಯ ಗಂಧವನ್ನು ಮಾಂಸ ಹಾಗೂ ಕೀಲುನೋವಿಗೆ ಬಳಸುತ್ತಾರೆ. ತೊಗಟೆಯಿಂದ ಅಂಟು ಬರುತ್ತದೆ. ಕಾಯಿಗಳನ್ನು ಪೂರ್ತಿ ಬಲಿಯುವುದಕ್ಕೆ ಮುಂಚೆ ಕಿತ್ತು ಉಪ್ಪಿನಕಾಯಿ ಮಾಡುತ್ತಾರೆ. ದಕ್ಷಿಣ ಭಾರತದಲ್ಲಿ ಇದು ತುಂಬ ಪ್ರಿಯವಾಗಿದೆ. ಹಣ್ಣಿನಲ್ಲಿ ನಾರು ಹೆಚ್ಚು. ಗೊಜ್ಜಿಗೆ ಚೆನ್ನಾಗಿರುತ್ತದೆ.
ಉಪಯೋಗಗಳು
ಬದಲಾಯಿಸಿಅಮಟೆ ಹಣ್ಣಿನ ರಸವನ್ನು ಕಿವಿನೋವಿಗೆ ಹಾಗೂ ಕ್ಷಯರೋಗ ನಿವಾರಣೆಗೆ ಉಪಯೋಗಿಸುತ್ತಾರೆ. ತೊಗಟೆಯನ್ನು ಬಂಧಕದಂತೆ ಭೇದಿಗೆ, ಆಮಶಂಕೆಗೆ, ವಾಂತಿ ತಡೆಯಲು ಹಾಗೂ ಸಂಧುನೋವಿಗೆ ಬಳಸುತ್ತಾರೆ. ತೊಗಟೆಯ ರಸವನ್ನು ಗನೋರಿಯಾ ವಾಸಿಮಾಡಲು ಬಳಸುತ್ತಾರೆ.[೫]
ಉಲ್ಲೇಖನಗಳು
ಬದಲಾಯಿಸಿ- ↑ "Spondias L." Germplasm Resources Information Network. United States Department of Agriculture. 2009-11-23. Retrieved 2010-02-12.
- ↑ "ಆರ್ಕೈವ್ ನಕಲು". Archived from the original on 2016-03-04. Retrieved 2016-10-20.
- ↑ "ಆರ್ಕೈವ್ ನಕಲು". Archived from the original on 2021-01-18. Retrieved 2016-10-20.
- ↑ "ಆರ್ಕೈವ್ ನಕಲು". Archived from the original on 2021-01-18. Retrieved 2016-10-20.
- ↑ Spanish Royal Academy Dictionary