ಅಬಸಿ
ಭಾರತ ದೇಶದ ಗ್ರಾಮಗಳು
ಅಬಸಿ ಸೊರಬ ತಾಲ್ಲೂಕಿನಲ್ಲಿ, ಚಂದ್ರಗುತ್ತಿ ಹೋಬಳಿಯ ಒಂದು ಗ್ರಾಮ. ಇಲ್ಲಿ ರಾಮನು ಬಂದು ಸ್ವಲ್ಪಕಾಲ ನೆಲೆಸಿದ್ದ ಎಂಬ ಪ್ರತೀತಿ ಇದೆ. ಇಲ್ಲಿ ಅತೀ ವಿರಳವಾದ ಅಶೋಕ ವನವಿದೆ. ಒಂದು ಉಪಕಥೆಯಂತೆ ಈ ವನವು ಸೀತೆಯ ಮುಡಿಯಿಂದ ಬಿದ್ದ ಅಶೋಕನ ಹೂವಿನಿಂದ ಬೆಳೆದದ್ದು. ಇಲ್ಲಿ ಪುರಾತನವಾದ ರಾಮೇಶ್ವರ ದೇವಾಲಯವಿದೆ. ಇದನ್ನು ರಾಮನು ಸ್ಥಾಪಿಸಿದ್ದ ಎಂಬ ನಂಬಿಕೆಯಿದೆ. ಇದು ತುಂಬ ವಿರಳವಾಗಿ ಕಂಡು ಬರುವ ದೇವಾಲಯಗಳಲ್ಲಿ ಒಂದು. ಇಲ್ಲಿನ ಮತ್ತೊಂದು ವಿಶೇಷವೆಂದರೆ, ಪುರಾತನವಾದ ಮತ್ತು ವಿಶಾಲವಾದ ಕೆರೆ. ಈಗ ಸರ್ಕಾರದ ನಿರ್ಲಕ್ಷ್ಯದಿಂದ ಅರ್ಧಕ್ಕಿಂತ ಕಡಿಮೆ ಅಸ್ತಿತ್ವದಲ್ಲಿದೆ. [೧]
ಅಬಸಿ, ಕರ್ನಾಟಕ
ಅಬಸಿ | |
---|---|
ಹಳ್ಳಿ | |
ದೇಶ | ಭಾರತ |
ರಾಜ್ಯ | ಕರ್ನಾಟಕ |
ಜಿಲ್ಲೆ | ಶಿವಮೊಗ್ಗ |
Elevation | ೫೮೦ m (೧,೯೦೦ ft) |
Population (2001) | |
• Total | ೧೩೮ |
Languages | |
• Official | ಕನ್ನಡ |
ಸಮಯದ ವಲಯ | |
ಸಮಯ ವಲಯ | ಯುಟಿಸಿ+5:30 (IST) |
PIN | 577434 |
Telephone code | 91 8184 |
ವಾಹನ ನೋಂದಣಿ | KA15 |