ಅಪ್ರಿಕಾಟ್ ಎಣ್ಣೆ
ಅಪ್ರಿಕಾಟ್ ಹಣ್ಣು
Conservation status
Scientific classification
ಸಾಮ್ರಾಜ್ಯ:
Plantae
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಕುಲ:
Subgenus:
Section:
Armeniaca
ಪ್ರಜಾತಿ:
P. armeniaca
Binomial name
ಪ್ರುನಸ್ ಅರ್ಮೆನಿಯಕ
Synonyms

Armeniaca vulgaris Lam.[] Amygdalus armeniaca (L.) Dumort.[]

ಅಪ್ರಿಕಾಟ್ ಮರ(ಟರ್ಕಿ)
ಅಪ್ರಿಕಾಟ್ ಹೂವು(ಬೆನಹಮ್,ಕಾಶ್ಮೀರು)(
ಹಣ್ಣು ಮಧ್ಯಚ್ಛೆದ

ಅಪ್ರಿಕಾಟ್ ಎಣ್ಣೆಯನ್ನು ಅಪ್ರಿಕಾಟ್ ಬೀಜದಿಂದ ತೆಗೆಯಲಾಗುತ್ತದೆ. ಅಪ್ರಿಕಾಟ್ ಮರ ರೋಜೇಸೆಕುಟುಂಬಕ್ಕೆ ಸೇರಿದ ಮರ. (rosaceae). ಇದರ ಜಾತಿ ಮತ್ತು ಉಪಜಾತಿ ಪ್ರುನಸ್ಆಗಿದೆ. ಈ ಮರದ ಸಸ್ಯಶಾಸ್ತ್ರ ಹೆಸರುಪ್ರುನಸ್ ಅರ್ಮೆನಿಯಕ(prunus armeniaca). ಅಪ್ರಿಕಾಟ್ ಜೊತೆ ಅತಿಪುರಾತನ ಕಾಲದಿಂದ(ಸಾವಿರಾರು ವರ್ಷದಿಂದ) ಮನುಜನಿಗೆ ಪರಿಚಯವಿದೆ. ಇದರ ಮೂಲಸ್ಥಾನ ಏಷಿಯಾದಲ್ಲಿರುವ ಅರ್ಮೆನಿಯ(armenia)ಎಂದು ಭಾವಿಸಲಾಗುತ್ತದೆ[]. ಅದರಿಂದನೆ ಇದರ ಸಸ್ಯಶಾಸ್ತ್ರಹೆಸರನ್ನು ಪ್ರುನಸ್ ಅರ್ಮೆನಿಯಕ ಎಂದು ಕರೆಯಲಾಗುತ್ತದೆ. ಕೆಲವರ ಅಭಿಪ್ರಾಯ ಪ್ರಕಾರ ಇದರ ಜನ್ಮಸ್ಥಾನ ರಷ್ಯಾ-ಚೈನಾ ಸರಹದ್ದು ಪ್ರಾಂತ್ಯ, ಅಲ್ಲಿಂದ ಇದುಸಿಲ್ಲ್ಕ್ ರೋಡ್ ದ್ವಾರ ಮಧ್ಯ ತೂರ್ಪು ಯೂರೋಪ್ ದೇಶಗಳಿಗೆ ಕರೆತರಲಾಗಿದೆ. ಕ್ರಿ.ಪೂ ೬೦ ಸಂ. ಪುರಾತನ ಗ್ರೀಸಿನಲ್ಲಿ ಇದರ ಬಗ್ಗೆ ತಿಳಿವಳಿಕೆ ಇದೆ. ಭಾರತ ದೇಶದಲ್ಲಿ ಈ ಮರವನ್ನು ಕ್ರೀ.ಪೂ. ೩೦೦೦ಸಾವಿರ ವರ್ಷಕ್ಕಿಂತ ಮುಂಚಿನಿಂದ ಬೆಳೆಸಲಾಗಿದೆ ಎಂದು ತಿಳಿದು ಬಂದಿದೆ [].

ಅಪ್ರಿಕಾಟ್ ಗಿಡ

ಬದಲಾಯಿಸಿ

ಅಪ್ರಿಕಾಟ್ ಎಂಬುವುದು ಆಂಗ್ಲ ಹೆಸರು. ಭಾರತದಲ್ಲಿ ಈ ಮರವನ್ನು ಹಲವಾರು ಹೆಸರುಗಳಲ್ಲಿ ಕರೆಯಲಾಗುತ್ತದೆ. ಹಿಂದಿ ಭಾಷೆಯಲ್ಲಿ ಛುಲ್ಲು(chullu), ಖುಬಾನಿ(khubani),(ಛೊಲchola)ಎಂದು ಕರೆಯುತ್ತಾರೆ. ತೆಲುಗಿನಲ್ಲಿ ಜಲ್ದರು ಎಂದು ಹೇಳುತ್ತಾರೆ. ಕನ್ನಡದಲ್ಲಿ ಕೆಲವು ಕಡೆ ಛುಲ್ಲು ಎಂದು ಕರೆಯುತ್ತಾರೆ. ಈ ಮರ ಉತ್ತರ ಭಾರತದಲ್ಲಿ ಚೆನ್ನಾಗಿ ಬೆಳೆಯುತ್ತದೆ. ಉತ್ತರದ ಶೀತಲ ಉಷ್ಣ ಪ್ರಾಂತ್ಯಗಳಾದ ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರ ಪ್ರದೇಶಗಳಲ್ಲಿ ಬೆಳೆಯುತ್ತಿವೆ. ಈ ಮರ ಸಮುದ್ರ ಮಟ್ಟದಿಂದ ೧೨೦೦-೨೫೦೦ ಮೀಟರುಗಳ ಎತ್ತರವಾದ ಪ್ರಾಂತ್ಯದಲ್ಲಿಯೂ ಚೆನ್ನಾಗಿ ಬೆಳೆಯುತ್ತದೆ. ಅಪ್ರಿಕಾಟ್ ತೋಟೆಗಳ ಸಾಗುವಳಿ ನೈನಿತಾಲ್, ಅಲ್ಮೊರ, ಫಿಥರ್ ಘರ್ಜಿಲ್ಲೆಗಳಲ್ಲಿ ಹೆಚ್ಚು ವಿಸ್ತೀರ್ಣದಲ್ಲಿದೆ. ಅಪ್ರಿಕಾಟ್ ತೋಟೆಗಳ ಬೆಳವಣಿಗೆ ಹಿಮಾಚಲ್ ಪ್ರದೇಶ ,ಉತ್ತರ ಪ್ರದೇಶ, ಜಮ್ಮು ಮತ್ತು ಕಾಶ್ಮೀರಗಳು ಅನುಕೂಲ ಪ್ರಾಂತ್ಯಗಳು[] . ಮರ ೧೦ ಮೀಟರುಗಳ ಎತ್ತರದವರೆಗೆ ಬೆಳೆಯುತ್ತದೆ. ಕೊಂಬೆಗಳಿರುತ್ತವೆ. ಕಾಂಡದ ಮೇಲೆ ಕೆಂಪು ತೊಗಟೆ ಇರುತ್ತದೆ. ಎಲೆಗಳು ಹಸಿರಾಗಿ ೬ ಸೆಂ.ಮೀ ಉದ್ದ ವಾಗಿರುತ್ತವೆ .ಹೂಗಳುಪಿಂಕು ಬಣ್ಣ ಹೊಂದಿ ಅಂಡಾಕಾರ ರೂಪದಲ್ಲಿ ಇರುತ್ತವೆ. ಏಪ್ರಿಲ್-ಮೇ ತಿಂಗಳಗಳಲ್ಲಿ ಹಣ್ಣಾಗುತ್ತವೆ. ಹಣ್ಣು ಗೋಲಾಕಾರವಾಗಿ ೫ ಸೆಂ.ಮೀ. ಅಡ್ಡಿಳಿತ ಪ್ರಮಾಣದಲ್ಲಿ ಇರುತ್ತದೆ. ಕಾಯಿ/ಹಣ್ಣ ಮೇಲೆ ಬೂದು ತರಹ ಪುಡಿ ಇರುತ್ತದೆ. ಹಣ್ಣು ಹಳದಿ ಇಲ್ಲವೆ ಹಳದಿ, ಕೆಂಪು ವರ್ಣಮಿಶ್ರಣವಾಗಿರುತ್ತದೆ. ರುಚಿ ಹುಳಿ, ಸಿಹಿಗಳ ಸಮ್ಮೇಳನವಾಗಿರುತ್ತದೆ.

ವಿತ್ತನ/ಬೀಜ

ಬದಲಾಯಿಸಿ

ವಿತ್ತನ/ಬೀಜ ಪರಿಮಾಣವು 1.3-2.5 X 0.8-1.2 ಸೆಂ.ಮೀ. ಇದೊಂದು ಗೊರಟೆ(nut), ಹೊರಗೆ ಮೃದುವಾದ ತಿರುಳು ಇರುತ್ತದೆ. ಮರಕ್ಕೆ ೪-೫ ವರ್ಷ ಬಂದಾಗ ಹೂವನ್ನು ಬಿಡುವುದಕ್ಕೆ ಮೊದಲಾಗುತ್ತದೆ. ೩೦ ಸಂವತ್ಸರ ತನಕ ಇಳುವರಿ ಕೊಡುತ್ತದೆ. ಒಂದು ವರ್ಷಕ್ಕೆ ೮೦-೧೨೦ ಕಿಲೋಗಳ ಹಣ್ಣು ಬರುತ್ತದೆ. ವಿತ್ತನವು ಆದರೆ ೨೫ಕಿಲೋ ತನಕ ಬರುತ್ತದೆ. ಸಿಪ್ಪೆ ತೆಗೆದ ವಿತ್ತನ/ಬೀಜ(kernel)ದಲ್ಲಿದ್ದ ಪದಾರ್ಥಗಳು[]

ಪದಾರ್ಥ ಶೇಕಡ
ತೇವ 4.0-5.0
ಎಣ್ಣೆ 52.0%
ಪ್ರೋಟಿನ್ 20.6%
ನಾರು/ಕೆತ್ತ 4.0-5.0
ಸಕ್ಕರೆ 8.10(ನೇರವಾಗಿ)
ಡೆಕ್ಷ್ಟ್ರೊಸ್(dextrose) 11.60(after conversion)

ಎಣ್ಣೆ -ಉತ್ಪಾದನೆ

ಬದಲಾಯಿಸಿ

ಸಿಪ್ಪೆಕೂಡಿದ ವಿತ್ತನ /ಗೊರಟೆಯಲ್ಲಿ ಎಣ್ಣೆ ೧೬-೧೮% ವರೆಗೆ ಇರುತ್ತದೆ. ಗೊರಟೆಯಲ್ಲಿದ್ದ ಸಿಪ್ಪೆಯನ್ನು ತೆಗೆದ ಮೇಲೆ ಬೀಜ ೩೦% ತನಕ ಇರುತ್ತದೆ. ಸಿಪ್ಪೆ ತೆಗೆದ ಬೀಜದಲ್ಲಿ ಎಣ್ಣೆ ಪ್ರತಿಶತ ೫೦-೫೨% ವರೆಗೆ ಇರುತ್ತದೆ. ಸಿಪ್ಪೆ/ಹೊಟ್ಟು ತೆಗೆದ ಬೀಜದಿಂದ ಎಕ್ಸುಪೆಲ್ಲರು ಯಂತ್ರಗಳನ್ನು ಬಳಸಿ ಎಣ್ಣೆಯನ್ನು ತೆಗೆಯುತ್ತಾರೆ. ಹಿಂಡಿಯಲ್ಲಿ ಉಳಿದಿರುವ ಎಣ್ಣೆಯನ್ನು ಸಾಲ್ವೆಂಟ್ ಪ್ಲಾಂಟ್ನಲ್ಲಿ ತೆಗೆಯಲಾಗುತ್ತದೆ. ಕಚ್ಚಾಎಣ್ಣೆ ಮಸುಕಾದ ಅರಿಶಿನ ಬಣ್ಣದಲ್ಲಿ ಇರುತ್ತದೆ. ರಿಫೈಂಡ್ ಮಾಡಿದ ಮೇಲೆ ವರ್ಣರಹಿತವಾಗಿರುತ್ತದೆ. ಕಚ್ಚಾ ಎಣ್ಣೆಯಲ್ಲಿ ಸೈಯನೊ ಜನೆಟಿಕ್ ಗ್ಲುಕೊಸೈಡ್(cyyanogenetic glucoside)ಇರುತ್ತದೆ . ಎಣ್ಣೆಯನ್ನು ರಿರ್ಫೈಂಡ್ ಮಾಡಿದ್ದಾಗ ಇದು ಕಳಚಿ ಹೊಗುತ್ತದೆ. ಎಣ್ಣೆಯಲ್ಲಿ ಒಲಿಕ್ ಕೊಬ್ಬಿನ ಆಮ್ಲ ೫೩. ೦-೭೧.೦% ವರೆಗೆ, ಲಿನೊಲಿಕ್ ಆಮ್ಲ ೨೧.೩-೩೫.೬% ತನಕ ಇರುತ್ತವೆ. ಎಣ್ಣೆಯಲ್ಲಿ ಪರ್ಯಾಪ್ತ ಕೊಬ್ಬಿನ ಆಮ್ಲಗಳು ೧೦% ವರೆಗೆ ಇರುತ್ತವೆ[] ಎಣ್ಣೆಯಲ್ಲಿರುವ ಕೊಬ್ಬಿನ ಆಮ್ಲಗಳ ವಿವರಣ ಪಟ್ಟಿ[][]

ಕೊಬ್ಬಿನ ಆಮ್ಲ ಪರಿವಿಡಿ ಸರಾಸರಿ
ಮಿರಿಸ್ಟಿಕ್ ಆಮ್ಲ(C14:0) 1.1
ಪಾಮಿಟಿಕ್ ಆಮ್ಲ(C16:0) 3.5
ಸ್ಟಿಯರಿಕ್ ಆಮ್ಲ(C18:0) 2.0
ಒಲಿಕ್ ಆಮ್ಲ(C18:1) 53.0-71.0 73.4
ಲಿನೊಲಿಕ್ ಆಮ್ಲ((C18:2) 21.4-35.6 20.0

ಎಣ್ಣೆ ಭೌತಿಕ ಧರ್ಮಗಳು[][]

ಭೌತಿಕ ಗುಣ ಮಿತಿ
ವಕ್ರಿಭವನ ಸೂಚಿಕೆ ೪೦0Cవద్ద 1.4726
ಅಯೋಡಿಮ್ ಮೌಲ್ಯ 100.3
ಸಪೋನಿಫಿಕೆಶನ್ ಸಂಖ್ಯೆ/ಮೌಲ್ಯ 190.6
ಅನ್ ಸಪೋನಿಫಿಯಬುಲ್ ಪದಾರ್ಥ 1.3%
ಆಮ್ಲ ಮೌಲ್ಯ 2-3%
ವಿಶಿಷ್ಟಗುರುತ್ವ 250Cవద్ద 0.914

ಎಣ್ಣೆಯ ಪ್ರಯೋಜನಗಳು[]

ಬದಲಾಯಿಸಿ
  • ಕಾಂತಿವರ್ಧಕ, ಅಂಗರಾಗ, ಸೌಂದರ್ಯವರ್ಧಕ ಲೇಪನ, ದ್ರವ್ಯಪದಾರ್ಥಗಳನು ತಯಾರಿಸುವುದರಲ್ಲಿ ಉಪಯೋಗಿಸುತ್ತಾರೆ.
  • ಸಲಾಡ್ ಆಹಾರ ಪದಾರ್ಥಗಳನ್ನು ತಯಾರು ಮಾಡಲಾಗುತ್ತದೆ.
  • ಆಸ್ಥ್ಮಾ ನಿವಾರಣಕ್ಕೆ ಉಪಯೋಗಿಸುತ್ತಾರೆ.
  • ಸೊರಯಸಿಸ್ ಚಿಕಿತ್ಸೆಯಲ್ಲಿ ಬಳಸುತ್ತಾರೆ.

ಉಲ್ಲೇಖಗಳು

ಬದಲಾಯಿಸಿ
  1. ೧.೦ ೧.೧ John H. Wiersema. "USDA Germplasm Resources Information Network (GRIN)". Ars-grin.gov. Retrieved 2012-06-22.
  2. CultureGrams 2002 – Page 11 by Culture Grams
  3. https: //www. tytyga. com/ History-of-the-Apricot-Tree-a/378.htm
  4. ೪.೦ ೪.೧ ೪.೨ SEA Hand Book.2009. by The Solvent Extractors' Association of India
  5. http://www.tandfonline.com/doi/abs/10.1080/01140671.1990.10428068#.UldjsNJHK-k
  6. ೬.೦ ೬.೧ http: //www. scirp. org/journal/PaperInformation. aspx?PaperID=3032
  7. http://nopr.niscair.res.in/bitstream/123456789/14818/1/IJNPR%203(3)%20366-370.pdf
  8. http://www.essentialoil.in/apricot-oil.html