ಅಪ್ಪಾಸಾಹೇಬ ಪಟ್ಟಣಶೆಟ್ಟಿ

ಅಪ್ಪಾಸಾಹೇಬ ಪಟ್ಟಣಶೆಟ್ಟಿಯವರು ರಾಜಕಾರಿಣಿ, ಮಾಜಿ ಶಾಸಕ ಮತ್ತು ಸಚಿವರು.

ಅಪ್ಪಾಸಾಹೇಬ ಪಟ್ಟಣಶೆಟ್ಟಿ
ಜನನಬಳ್ಳೊಳ್ಳಿ, ಇಂಡಿ ತಾಲ್ಲೂಕು, ವಿಜಯಪುರ ಜಿಲ್ಲೆ
ವೃತ್ತಿರಾಜಕೀಯ
ರಾಷ್ಟ್ರೀಯತೆಭಾರತೀಯ

29-07- 1969ರಲ್ಲಿ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಬಳ್ಳೊಳ್ಳಿ ಗ್ರಾಮದಲ್ಲಿ ಜನಿಸಿದ ಅಪ್ಪಾಸಾಹೇಬ ಪಟ್ಟಣಶೆಟ್ಟಿಯವರು ಮೂಲತಃ ಕೃಷಿ ಕುಟುಂಬದ ಹಿನ್ನಲೆಯಿಂದ ಬಂದವರು.

ಶಿಕ್ಷಣ

ಬದಲಾಯಿಸಿ

ಪಟ್ಟಣಶೆಟ್ಟಿಯವರು ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಬಳ್ಳೊಳ್ಳಿ ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ ಪೂರ್ಣ ಗೊಳಿಸಿ ನಂತರ ಫಾರ್ಮಸಿಯಲ್ಲಿ ಡಿಪ್ಲೊಮಾ ಹೊಂದಿದ್ದಾರೆ. ವಿಜಯಪುರ ತಾಲ್ಲೂಕಿನ ಕತ್ನಳ್ಳಿ ಗ್ರಾಮದ ಪರಮ ಪೂಜ್ಯ ಶ್ರೀ ಗುರು ಚಕ್ರವರ್ತಿ ಸದಾಶಿವ ವಿದ್ಯಾವರ್ಧಕ ಸಂಘದ ಅಧ್ಯಕ್ಷರು.

ರಾಜಕೀಯ

ಬದಲಾಯಿಸಿ
  • 1995ರಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಕೆಲಸ ಮಾಡಿದ್ದಾರೆ.
  • 2007ರಲ್ಲಿ ಹೆಚ್.ಡಿ.ಕುಮಾರಸ್ವಾಮಿಯವರ ಬಿಜೆಪಿ-ಜೆಡಿಎಸ್ ಸಮ್ಮಿಸ್ರ ಸಂಪುಟದಲ್ಲಿ ಜವಳಿ ಮಂತ್ರಿಸ್ಥಾನವನ್ನೂ ಅಲಂಕರಿಸಿದ್ದರು.
  • 2004 ಹಾಗೂ 2008ರಲ್ಲಿ ಅಪ್ಪು ಪಟ್ಟಣಶೆಟ್ಟಿ ಸತತ ಎರಡು ಬಾರಿ ಆಯ್ಕೆಯಾದ್ದರು.

ಹೆಚ್ಚು ಮತದ ದಾಖಲೆ

ವಿಜಯಪುರ ಜಿಲ್ಲೆಯ ಚುನಾವಣಾ ಇತಿಹಾಸದಲ್ಲೇ ಅತಿ ಹೆಚ್ಚು ಮತ ಗಳಿಸಿ ಆಯ್ಕೆಯಾದ ಅಭ್ಯರ್ಥಿ ಎಂಬ ಹೆಗ್ಗಳಿಕೆ ಬಿಜೆಪಿಯಿಂದ 2004ರಲ್ಲಿ ವಿಜಯಿಯಾದ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಅವರಿಗೆ ಸಲ್ಲುತ್ತದೆ. ಈ ಚುನಾವಣೆಯಲ್ಲಿ ಅಪ್ಪು 70,001 ಮತ ಗಳಿಸಿದ್ದರು. ನಂತರ ಎಂ.ಬಿ.ಪಾಟೀಲರು 2018ರಲ್ಲಿ ಬಬಲೇಶ್ವರ ವಿಧಾನ ಸಭಾ ಕ್ಷೇತ್ರದಿಂದ ಕಾಂಗ್ರೇಸ್ ಅಭ್ಯರ್ಥಿಯಾಗಿ 98,339 ಮತಗಳನ್ನು ಪಡೆದು ಪಟ್ಟಣಶೆಟ್ಟಿಯವರ ದಾಖಲೆಯನ್ನು ಮುರಿದರು.

  • 2007ರಲ್ಲಿ ಹೆಚ್.ಡಿ.ಕುಮಾರಸ್ವಾಮಿಯವರ ಬಿಜೆಪಿ-ಜೆಡಿಎಸ್ ಸಮ್ಮಿಸ್ರ ಸಂಪುಟದಲ್ಲಿ ಜವಳಿ ಮಂತ್ರಿಸ್ಥಾನವನ್ನೂ ಅಲಂಕರಿಸಿದ್ದರು.[]

ಉಲ್ಲೇಖಗಳು

ಬದಲಾಯಿಸಿ