ಅಪೊಮಾರ್ಫೀನ್
ಅಪೊಮಾರ್ಫೀನ್ ಒಂದು ರಾಸಾಯನಿಕ.
ತಯಾರಿಕೆ
ಬದಲಾಯಿಸಿಗಾಳಿ ಹೋಗದಂತೆ ಮುಚ್ಚಿರುವ ಸೀಸೆಯಲ್ಲಿ ರಾಸಾಯನಿಕ ಮಾರ್ಫೀನೊಂದಿಗೆ ಹೈಡ್ರೊಕ್ಲೋರಿಕಾಮ್ಲವನ್ನು ಸೇರಿಸಿ ಕಾಯಿಸಿದರೆ, ಮಾರ್ಫೀನಿಂದ ನೀರಿನ ಅಣುವೊಂದು ಕಳೆದು ಬರುವ ರಾಸಾಯನಿಕವಿದು.[೧] ಹೀಗಾದುದರಿಂದ ಮಾರ್ಫೀನಿನ ಮಂದಗೊಳಿಸುವ ಗುಣಗಳು ಕಳೆದು, ಚೋದಕ ಗುಣಗಳು ಮಾತ್ರ ಅಪೊಮಾರ್ಫೀನಲ್ಲಿ ಉಳಿಯುತ್ತವೆ.
ಉಪಯೋಗಗಳು
ಬದಲಾಯಿಸಿಮಿದುಳೆಲ್ಲವನ್ನೂ ಇದು ಚೋದಿಸುವುದಾದರೂ ವಾಂತಿಕಾರಕ ಕೇಂದ್ರದ ಮೇಲೆ ಇದರ ಪ್ರಭಾವ ಬಹಳ. ವಿಷವೇರಿದ ರೋಗಿಯ ಹೊಟ್ಟೆ ತೊಳೆಯಲು ರಬ್ಬರ್ ಕೊಳವೆ ತೂರಿಸಲು ಆಗದಾಗ, ಬಲವಾದ ಈ ಮದ್ದನ್ನು ಚುಚ್ಚಿ ವಾಂತಿಕಾರಿಸುವ ರೂಢಿ ಹಿಂದಿತ್ತು. ವಾಂತಿಕಾರಕ ಪ್ರಮಾಣ ಕೂಡ ಮಿದುಳನ್ನು ಕುಂದಿಸುವುದರಿಂದ ಇದರ ಬಳಕೆ ಬಲು ಅಪಾಯಕರ.
ಉಲ್ಲೇಖಗಳು
ಬದಲಾಯಿಸಿ- ↑ Gurusamy N. "Process for making apomorphine and apocodeine".
ಹೊರಗಿನ ಕೊಂಡಿಗಳು
ಬದಲಾಯಿಸಿ- "Apomorphine". Drug Information Portal. U.S. National Library of Medicine.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: