ಅನ್ವೇಷಣೆ
ಅನ್ವೇಷಣೆಯು ಮಾಹಿತಿ ಅಥವಾ ಸಂಪನ್ಮೂಲಗಳ ಶೋಧನೆಯ ಉದ್ದೇಶಕ್ಕಾಗಿ ಹುಡುಕುವ ಕ್ರಿಯೆ. ಅನ್ವೇಷಣೆಯು ಮಾನವರನ್ನು ಒಳಗೊಂಡಂತೆ, ಎಲ್ಲ ಪ್ರಾಣಿ ಪ್ರಜಾತಿಗಳಲ್ಲಿ ಸಂಭವಿಸುತ್ತದೆ. ಮಾನವ ಇತಿಹಾಸದಲ್ಲಿ, ಅದರ ಅತ್ಯಂತ ನಾಟಕೀಯ ಏರಿಕೆ ಶೋಧನಾ ಯುಗದ ಅವಧಿಯಲ್ಲಿ ಐರೋಪ್ಯ ಅನ್ವೇಷಕರು ವಿವಿಧ ಕಾರಣಗಳಿಗಾಗಿ ಸಮುದ್ರಯಾನ ಮಾಡಿ ಉಳಿದ ಜಗತ್ತಿನ ಬಹುಭಾಗ ನಕ್ಷೆ ತಯಾರಿಸಿದಾಗ ಆಯಿತು. ಆಗಿನಿಂದ, ಬಹುತೇಕವಾಗಿ ಮಾಹಿತಿ ಶೋಧನೆಯ ಗುರಿಹೊಂದಿದ ಶೋಧನಾ ಯುಗದ ನಂತರದ ಪ್ರಮುಖ ಅನ್ವೇಷಣೆಗಳು ಆಗಿವೆ.
ವೈಜ್ಞಾನಿಕ ಸಂಶೋಧನೆಯಲ್ಲಿ, ಪ್ರಾಯೋಗಿಕ ಸಂಶೋಧನೆಯ ಮೂರು ಉದ್ದೇಶಗಳಲ್ಲಿ ಅನ್ವೇಷಣೆಯೂ ಒಂದು (ವಿವರಣೆ ಮತ್ತು ಸ್ಪಷ್ಟೀಕರಣ ಇತರ ಎರಡು ಉದ್ದೇಶಗಳು). ಈ ಪದವನ್ನು ಸಾಮಾನ್ಯವಾಗಿ ಅಲಂಕಾರಿಕವಾಗಿ ಬಳಸಲಾಗುತ್ತದೆ. ಉದಾಹರಣೆಗೆ, ಒಬ್ಬ ವ್ಯಕ್ತಿಯು ಅಂತರಜಾಲ, ಲೈಂಗಿಕತೆ, ಇತ್ಯಾದಿಗಳನ್ನು ಅನ್ವೇಷಿಸುವ ಬಗ್ಗೆ ಮಾತನಾಡಬಹುದು.
ಮಾನವ ಅನ್ವೇಷಣೆಯ ಗಮನಾರ್ಹ ಅವಧಿಗಳು
ಬದಲಾಯಿಸಿಫ಼ೀನೀಷಿಯನ್ನರು (ಕ್ರಿ.ಪೂ. 1550– ಕ್ರಿ.ಪೂ. 300) ಮೆಡಿಟರೇನಿಯನ್ ಸಮುದ್ರ ಮತ್ತು ಏಷ್ಯಾ ಮೈನರ್‍ನಾದ್ಯಂತ ವ್ಯಾಪಾರ ನಡೆಸಿದರು. ಆದರೆ ಅವರ ಅನೇಕ ಮಾರ್ಗಗಳು ಇಂದಿಗೂ ಅಜ್ಞಾತವಾಗಿವೆ. ಕೆಲವು ಫ಼ೀನೀಷಿಯನ್ ಹಸ್ತಕೃತಿಗಳಲ್ಲಿ ತವರದ ಉಪಸ್ಥಿತಿಯು ಅವರು ಬ್ರಿಟನ್‍ಗೆ ಪ್ರಯಾಣಿಸಿರಬಹುದು ಎಂದು ಸೂಚಿಸುತ್ತದೆ.
ಸಹಾರಾ ಮರುಭೂಮಿಯನ್ನು ದಾಟಲು ರೋಮನ್ನರು ಅನ್ವೇಷಣೆಗಳನ್ನು ವ್ಯವಸ್ಥೆಗೊಳಿಸಿದರು. ಈ ಎಲ್ಲ ಅನ್ವೇಷಣೆಗಳನ್ನು ಸೈನ್ಯದಳಗಳು ಬೆಂಬಲಿಸಿದವು ಮತ್ತು ಮುಖ್ಯವಾಗಿ ವಾಣಿಜ್ಯ ಉದ್ದೇಶಗಳನ್ನು ಹೊಂದಿದ್ದವು. ಒಂಟೆಯನ್ನು ಬಳಸಿ ಸಾಗಾಟಕ್ಕಾಗಿ ಚಿನ್ನ ತರುವುದು ಅನ್ವೇಷಣೆಗಳ ಮುಖ್ಯ ಕಾರಣಗಳಲ್ಲಿ ಒಂದಾಗಿತ್ತು.[೧] ಆಫ಼್ರಿಕಾದ ಪಶ್ಚಿಮ ಮತ್ತು ಪೂರ್ವ ತಟಗಳ ಹತ್ತಿರದ ಅನ್ವೇಷಣೆಗಳನ್ನು ರೋಮನ್ ಹಡಗುಗಳು ಬೆಂಬಲಿಸಿದವು ಮತ್ತು ನೌಕಾ ವಾಣಿಜ್ಯಕ್ಕೆ ಆಳವಾಗಿ ಸಂಬಂಧಿಸಿದ್ದವು. ರೋಮನ್ನರು ಉತ್ತರ ಯೂರೋಪ್‍ನಲ್ಲೂ, ಮತ್ತು ಏಷ್ಯಾದ ಚೀನಾದ ವರೆಗೆ, ಹಲವಾರು ಅನ್ವೇಷಣೆಗಳನ್ನು ವ್ಯವಸ್ಥೆಗೊಳಿಸಿದರು.
ಶೋಧನಾ ಯುಗವು (ಅನ್ವೇಷಣಾ ಯುಗವೆಂದೂ ಪರಿಚಿತವಾಗಿದೆ) ಮಾನವ ಇತಿಹಾಸದಲ್ಲಿ ಭೌಗೋಳಿಕ ಅನ್ವೇಷಣೆಯ ಅತ್ಯಂತ ಮುಖ್ಯ ಅವಧಿಗಳಲ್ಲಿ ಒಂದು. ಅದು ೧೫ನೇ ಶತಮಾನದ ಮುಂಚಿನಲ್ಲಿ ಆರಂಭವಾಯಿತು ಮತ್ತು ೧೭ನೇ ಶತಮಾನದವೆರೆಗೆ ಇತ್ತು. ಆ ಅವಧಿಯಲ್ಲಿ, ಐರೋಪ್ಯರು ಅಮೇರಿಕಾ, ಆಫ಼್ರಿಕಾ, ಏಷ್ಯಾ ಮತ್ತು ಓಷ್ಯಾನಿಯಾದ ವಿಶಾಲ ಪ್ರದೇಶಗಳನ್ನು ಶೋಧಿಸಿದರು ಮತ್ತು/ಅಥವಾ ಅನ್ವೇಷಿಸಿದರು.
ಉಲ್ಲೇಖಗಳು
ಬದಲಾಯಿಸಿ- ↑ Roth, Jonathan 2002. The Roman Army in Tripolitana and Gold Trade with Sub-Saharan Africa. APA Annual Convention. New Orleans.