ಅನ್ಯಾಕ್ಸಿಮೆಂಡರ್
ಗಣಿತಜ್ಞ
ಅನ್ಯಾಕ್ಸಿಮೆಂಡರ್ (ಕ್ರಿ.ಪೂ. 611-547) ಗ್ರೀಸ್ ದೇಶದ ತತ್ತ್ವಶಾಸ್ತ್ರಜ್ಞ. ಖಗೋಳವಿಜ್ಞಾನದ ಬಗ್ಗೆ ಹಲವು ವಿಚಿತ್ರ ಭಾವನೆಗಳನ್ನು ಹೊಂದಿದ್ದ. ಭೂಪಟಗಳನ್ನು ಮೊಟ್ಟಮೊದಲು ರಚಿಸಿದ ಖ್ಯಾತಿ ಇವನದು. ಅಯನಸಂಕ್ರಾಂತಿ ಮತ್ತು ವಿಷುವತ್ಸಂಕ್ರಾಂತಿಯನ್ನು ನಿರ್ಧರಿಸಲು ನೆರಳು ಗಡಿಯಾರದ ಸಮತಲ ಕಂಬಿಯನ್ನು ಬಳಸಿದವರಲ್ಲಿ ಈತ ಮೊದಲಿಗ. ಸೂರ್ಯ, ಚಂದ್ರ ಮತ್ತು ಭೂಮಿ-ಇವು ಉರುಳೆಯಂತಿವೆಯೆಂದೂ ಸೂರ್ಯನ ಸುತ್ತಳತೆ ಭೂಮಿಯ 28ರಷ್ಟೂ ಚಂದ್ರನ ಸುತ್ತಳತೆ ಭೂಮಿಯ 19ರಷ್ಟೂ ಇದೆ ಎಂಬುದಾಗಿ ಭಾವಿಸಿದ್ದ. ಅಸೀಮವಾದ ಒಂದು ನಿರ್ಲಿಪ್ತ ವಸ್ತುವಿನಿಂದ ಈ ಎಲ್ಲ ವಿಷಮ ಸೃಷ್ಟಿ ಕಾರ್ಯ ಆಯಿತೆಂದೂ ವಿಷಮ ವಸ್ತುಗಳ ಸಂಘರ್ಷದಿಂದ ವಿವಿಧ ರೂಪಭೇದಗಳು ಹುಟ್ಟಿದುವೆಂದೂ ತಿಳಿಸಿದ. ಜಲಚರಕ್ರಿಯೆಯ, ರೂಪದ ಯಾವುದೇ ಒಂದು ವಿಕಾಸಾತ್ಮಕ ಸರಣಿಯೇ ಮಾನವಜೀವದ ಉಗಮಕ್ಕೆ ಕಾರಣವಾಯಿತು ಎಂಬುದು ಇವನ ಭಾವನೆಯಾಗಿತ್ತು.
ಜನನ | c. 610 BC |
---|---|
ಮರಣ | c. 546 BC |
ಕಾಲಮಾನ | Pre-Socratic philosophy |
ಪ್ರದೇಶ | Western Philosophy |
ಪರಂಪರೆ | Ionian Philosophy, Milesian school, Naturalism |
ಮುಖ್ಯ ಹವ್ಯಾಸಗಳು | Metaphysics, astronomy, geometry, geography |
ಗಮನಾರ್ಹ ಚಿಂತನೆಗಳು | The apeiron is the arche Evolutionary view of living things[೧][೨] Earth floats unsupported Mechanical model of the sky Water of rain from evaporation |
ಪ್ರಭಾವಕ್ಕೋಳಗಾಗು | |
ಪ್ರಭಾವ ಬೀರು
|
ಉಲ್ಲೇಖಗಳು
ಬದಲಾಯಿಸಿ- ↑ DK fragments A 11 and A 30
- ↑ "Anaximander". Encyclopædia Britannica Online.
- ↑ This character is traditionally associated with Boethius, however his face offering similarities with the relief of Anaximander (image in the box above), it could be a representation of the philosopher. See http://www.mlahanas.de/Greeks/SchoolAthens2.htm Archived 2007-02-14 ವೇಬ್ಯಾಕ್ ಮೆಷಿನ್ ನಲ್ಲಿ. for a description of the characters in this painting.
ಬಾಹ್ಯ ಸಂಪರ್ಕಗಳು
ಬದಲಾಯಿಸಿ- Media related to Anaximander at Wikimedia Commons
- Quotations related to ಅನ್ಯಾಕ್ಸಿಮೆಂಡರ್ at Wikiquote
- Works related to Anaximander at Wikisource
- Philoctete – Anaximandre: Fragments ((Grk icon)) (French) (English)
- The Internet Encyclopedia of Philosophy – Anaximander Archived 2009-10-15 ವೇಬ್ಯಾಕ್ ಮೆಷಿನ್ ನಲ್ಲಿ.
- Extensive bibliography by Dirk Couprie
- Anaximander entry by John Burnet contains fragments of Anaximander