ಅನುರಾಧಾ ಟಿ.ಕೆ.

ಭಾರತೀಯ ವಿಜ್ಞಾನಿ

ಅನುರಾಧಾ ಟಿ.ಕೆ. ಒಬ್ಬ ಭಾರತೀಯ ವಿಜ್ಞಾನಿ. ಇವರು ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ (ಇಸ್ರೋ)ದಲ್ಲಿ ಯೋಜನಾ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಜಿಎಸ್ಎಟಿ -೧೨ ಮತ್ತು ಜಿಎಸ್ಎಟಿ -೧೦ ಉಪಗ್ರಹಗಳ ಉಡಾವಣಾ ಕಾರ್ಯದಲ್ಲಿ ಕೆಲಸ ಮಾಡಿದ್ದಾರೆ. []

ಅನುರಾಧಾ ಟಿ.ಕೆ.
ಜನನ೩೦ ಎಪ್ರಿಲ್ ೧೯೬೦
ಬೆಂಗಳೂರು, ಕರ್ನಾಟಕ, ಭಾರತ
ವಾಸಸ್ಥಳಬೆಂಗಳೂರು,ಕರ್ನಾಟಕ, ಭಾರತ
ರಾಷ್ಟ್ರೀಯತೆಭಾರತೀಯ
ಸಂಸ್ಥೆಗಳುಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ (ಇಸ್ರೋ)
ಅಭ್ಯಸಿಸಿದ ವಿದ್ಯಾಪೀಠವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜು

ಆರಂಭಿಕ ಜೀವನ

ಬದಲಾಯಿಸಿ

ಅನುರಾಧಾ ಟಿ.ಕೆ. ರವರು ೩೦ ಎಪ್ರಿಲ್ ೧೯೬೦ರಂದು ಬೆಂಗಳೂರಿನಲ್ಲಿ ಜನಿಸಿದರು. ಅವರು ಬೆಂಗಳೂರಿನ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜಿನಿಂದ ಎಲೆಕ್ಟ್ರಾನಿಕ್ಸ್ ನಲ್ಲಿ ಸ್ನಾತಕೋತರ ಪದವಿಯನ್ನು ಪಡೆದರು.[]

ವೃತ್ತಿಜೀವನ

ಬದಲಾಯಿಸಿ

ಅನುರಾಧಾ ಟಿ.ಕೆ. ರವರು ಇಸ್ರೋ ಉಪಗ್ರಹ ಕೇಂದ್ರದಲ್ಲಿ ಭಾರತೀಯ ಜಿಯೋಸಾಟ್ ಪ‍್ರೋಗ್ರಾಮ್ ನ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜಿಯೋ -ಸಿಂಕ್ರೋನಸ್ ಉಪಗ್ರಹಗಳ ಪ್ರದೇಶಗಳಲ್ಲಿ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಹಲವಾರು ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇಸ್ರೋ ಸಂವಹನ ಉಪಗ್ರಹ ಜಿಎಸ್ಎಟಿ-೧೨ ಅನ್ನು ಅಭಿವೃದ್ದಿ ಪಡಿಸುವ ಮತ್ತು ಪ್ರಾರಂಭಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ೨೦ ಎಂಜಿನಿಯರಿಂಗ್ ಗಳ ತಾಂತ್ರಿಕ ಗುಂಪುಗಳ ಮುಖ್ಯಸ್ಥರಾಗಿದ್ದರು. ಮಹಿಳಾ ಸಂಶೋಧನ ತಂಡದ ಅಂಗವಾಗಿ ಹಾಸನದಲ್ಲಿ ಇಸ್ರೋನ ಮಾಸ್ಟರ್ ಕಂಟ್ರೋಲ್ ಫೆಸಿಲಿಟಿ (ಎಂಸಿಎಫ್)ನಿಂದ ಜಿಎಸ್ಎಟಿ -೧೨ ಅನ್ನು ಅದರ ಅಂತಿಮ ಕಕ್ಷೆಗೆ ತಲುಪಿಸಿದರು. ಜಿಎಸ್ಎಟಿ-೧೨ ನೊಂದಿಗೆ ಕೆಲಸ ಮಾಡಿದ ನಂತರ ಅನುರಾಧಾ ಟಿ.ಕೆ.ರವರು ಸೆಪ್ಟೆಂಬರ್ ೨೦೧೨ರಲ್ಲಿ ಅತಿ ದೊಡ್ಡ ಸಂವಹನ ಉಪಗ್ರಹ ಜಿಎಸ್ಎಟಿ -೧೦ ಉಡಾವಣೆ ಮಾಡಿದರು. ಯೋಜನಾ ನಿರ್ದೇಶಕರಾಗಿ ಅವರು ಜಿಎಸ್ಎಟಿ-೯, ಜಿಎಸ್ಎಟಿ-೧೭ ಮತ್ತು ಜಿಎಸ್ಎಟಿ-೧೮ ಸಂವಹನ ಉಪಗ್ರಹಗಳನ್ನು ಉಡಾವಣೆ ಮಾಡಿದರು. ಅವರು ಭಾರತೀಯ ರಿಮೋಟ್ ಸೆನ್ಸಿಂಗ್ ಮತ್ತು ಭಾರತೀಯ ಪ್ರಾದೇಶಿಕ ನ್ಯಾವಿಗೇಷನ್ ಉಪಗ್ರಹ ವ್ಯವಸ್ಥೆ ಕಾರ್ಯಕ್ರಮಗಳಿಗೆ ಪ್ರಾಜೆಕ್ಟ್ ಮ್ಯಾನೇಜರ್, ಡೆಪ್ಯುಟಿ ಪ್ರಾಜೆಕ್ಟ್ ಡೈರೆಕ್ಟರ್ ಮತ್ತು ಅಸೋಸಿಯೆಟ್ ಪ್ರಾಜೆಕ್ಟ್ ಡೈರೆಕ್ಟರ್ ಆಗಿ ಸೇವೆ ಸಲ್ಲಿಸಿದ್ದಾರೆ.[][][]

ಪ್ರಶಸ್ತಿಗಳು

ಬದಲಾಯಿಸಿ
  • ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿನ ಸೇವೆಗಳಿಗಾಗಿ ಆಸ್ಟ್ರೋನಾಟಿಕಲ್ ಸೊಸೈಟಿ ಆಫ್ ಇಂಡಿಯಾದಿಂದ ೨೦೦೩ರ ಸ್ಪೇಸ್ ಗೋಲ್ಡ್ ಮೆಡಲ್ ಪ್ರಶಸ್ತಿ.
  • ೨೦೧೧ ಐಇಐನ ರಾಷ್ಟ್ರೀಯ ವಿನ್ಯಾಸ ಮತ್ತು ಸಂಶೋಧನಾ ವೇದಿಕೆಯಿಂದ ಸುಮನ್ ಶರ್ಮಾ ಪ್ರಶಸ್ತಿ.
  • ೨೦೧೨ರಲ್ಲಿ ಸಂವಹನ ಬಾಹ್ಯಾಕಾಶನೌಕೆ ಸಾಧನೆಗಾಗಿ ಎಎಸ್ಐ-ಇಸ್ರೋ ಮೆರಿಟ್ ಪ್ರಶಸ್ತಿಗಳು.
  • ೨೦೧೨ರಲ್ಲಿ ಇಸ್ರೋ ಟೀಮ್ ಅವಾರ್ಡ್.[]

ಉಲ್ಲೇಖಗಳು

ಬದಲಾಯಿಸಿ
  1. https://www.deccanherald.com/content/181618/meet-isros-space-girls.html
  2. https://sites.grenadine.co/sites/pmibangalore/en/pmpc-2017/participants/2348
  3. https://www.indiatoday.in/india/south/story/isro-gsat-12-138117-2011-07-23
  4. "ಆರ್ಕೈವ್ ನಕಲು". Archived from the original on 2020-09-28. Retrieved 2019-03-19.
  5. https://www.shethepeople.tv/news/tech-women-meet-anuradha-tk
  6. http://wiesummit.ieeer10.org/smt-t-k-anuradha/