ಅನುಪಮಾ ಚಂದ್ರಶೇಖರ್

ಅನುಪಮಾ ಚಂದ್ರಶೇಖರ್ ಅವರು ಚೆನ್ನೈನಲ್ಲಿ ಜನಿಸಿದವರು ಮತ್ತು ಮೂಲತಃ ಭಾರತೀಯ ನಾಟಕಕಾರರಾಗಿದ್ದಾರೆ. ಅವರು ತಮ್ಮ ದಿ ಫಾದರ್ ಅಂಡ್ ದಿ ಅಸ್ಸಾಸಿನ್ ನಾಟಕಕ್ಕೆ ಹೆಸರುವಾಸಿಯಾಗಿದ್ದಾರೆ, ಇದು ಅತ್ಯುತ್ತಮ ನಾಟಕಕ್ಕಾಗಿ ಈವ್ನಿಂಗ್ ಸ್ಟ್ಯಾಂಡರ್ಡ್ ಥಿಯೇಟರ್ ಅವಾರ್ಡ್‌ಗಳಿಗೆ ನಾಮನಿರ್ದೇಶನವನ್ನು ಗಳಿಸಿತು. ಇವರು ಸುಸಾನ್ ಸ್ಮಿತ್ ಬ್ಲ್ಯಾಕ್‌ಬರ್ನ್ ಪ್ರಶಸ್ತಿಯ ಅಂತಿಮ ಪಟ್ಟಿಗೆ ಸೇರ್ಪಡೆ ಆಗಿದ್ದರು. [] []

ವೃತ್ತಿ

ಬದಲಾಯಿಸಿ

ಚಂದ್ರಶೇಖರ್ ಅವರ ನಾಟಕಗಳು ಭಾರತ, ಯುರೋಪ್, ಕೆನಡಾ ಮತ್ತು ಯುಎಸ್‌ನ ಪ್ರಮುಖ ಸ್ಥಳಗಳಲ್ಲಿ ಪ್ರದರ್ಶನಗೊಂಡಿವೆ.[]

ಇಂಧು ರುಬಸಿಂಗಮ್ ನಿರ್ದೇಶಿಸಿದ ಅವರ ನಾಟಕ ಫ್ರೀ ಔಟ್‌ಗೋಯಿಂಗ್ ೨೦೦೭ರಲ್ಲಿ ಲಂಡನ್‌ನ ರಾಯಲ್ ಕೋರ್ಟ್ ಥಿಯೇಟರ್‌ನಲ್ಲಿ ಪ್ರದರ್ಶನಗೊಂಡಿತು. [] ಇದು ೨೦೦೮ ರ ಬೇಸಿಗೆಯಲ್ಲಿ ರಾಯಲ್ ಕೋರ್ಟ್‌ನ ಮುಖ್ಯ ರಂಗಮಂದಿರದಲ್ಲಿ ಪುನರುಜ್ಜೀವನಗೊಂಡಿತು ಮತ್ತು ಅದೇ ವರ್ಷ ಎಡಿನ್‌ಬರ್ಗ್ ಫ್ರಿಂಜ್ ಫೆಸ್ಟಿವಲ್‌ಗಾಗಿ ಟ್ರಾವರ್ಸ್ ಥಿಯೇಟರ್‌‌ನಲ್ಲಿಯೂ ಪ್ರದರ್ಶಿಸಲಾಯಿತು. []

ಚಂದ್ರಶೇಖರ್ ಅವರು ೨೦೦೮ ರಲ್ಲಿ ಅತ್ಯಂತ ಭರವಸೆಯ ನಾಟಕಕಾರರಿಗಾಗಿ ಈವ್ನಿಂಗ್ ಸ್ಟ್ಯಾಂಡರ್ಡ್ ಥಿಯೇಟರ್ ಪ್ರಶಸ್ತಿಯ [] ಚಾರ್ಲ್ಸ್ ವಿಂಟೂರ್ ಪ್ರಶಸ್ತಿಗೆ ದ್ವಿತೀಯ ಸ್ಥಾನಿ ಆಗಿದ್ದರು. ಅವರು ತಮ್ಮ ಫ್ರೀ ಔಟ್‌ಗೋಯಿಂಗ್‌ಗಾಗಿ ಜಾನ್ ವೈಟಿಂಗ್ ಪ್ರಶಸ್ತಿಗೆ [] ಮತ್ತು ಸುಸಾನ್ ಸ್ಮಿತ್ ಬ್ಲ್ಯಾಕ್‌ಬರ್ನ್ ಪ್ರಶಸ್ತಿಗೆ [] ಆಯ್ಕೆಯಾಗಿದರು. ಈ ನಾಟಕವನ್ನು ಟೊರೊಂಟೊದ ನೈಟ್‌ವುಡ್ ಥಿಯೇಟರ್ ಕೂಡ ಪ್ರದರ್ಶಿಸಿದೆ. [] ೨೦೧೫ ರಲ್ಲಿ ಮಹೇಶ್ ದತ್ತಾನಿ ನಿರ್ದೇಶಿಸಿದ ಈ ನಾಟಕವನ್ನು ಭಾರತದಲ್ಲಿ ಕ್ರಿಯ-ಶಕ್ತಿಯಿಂದ ಪ್ರದರ್ಶಿಸಲಾಯಿತು [೧೦] ಮತ್ತು ಅದರ ಅಮೇರಿಕನ್ ರೂಪವನ್ನು ೨೦೧೬ ರಲ್ಲಿ, ಪೋರ್ಟ್ಲ್ಯಾಂಡ್, ಒರೆಗಾನ್‌ನಲ್ಲಿ [೧೧] ಸ್ನೇಹಲ್ ದೇಸಾಯಿ ನಿರ್ದೇಶಿಸಿದರು ಮತ್ತು ಬೂಮ್ ಆರ್ಟ್ಸ್ ನಿರ್ಮಿಸಿದರು.

ಅವರ ಮುಂದಿನ ನಾಟಕ, ಇಂಧು ರುಬಸಿಂಗಮ್ ನಿರ್ದೇಶಿಸಿದ ಡಿಸ್ಕನೆಕ್ಟ್ ಕೂಡ ರಾಯಲ್ ಕೋರ್ಟ್ ಥಿಯೇಟರ್‌ನಲ್ಲಿ ಪ್ರಥಮ ಪ್ರದರ್ಶನಗೊಂಡಿತು. [೧೨] ಡಿಸ್ಕನೆಕ್ಟ್ ಅನ್ನು ಜರ್ಮನ್ ಮತ್ತು ಜೆಕ್ ಭಾಷೆಗಳಲ್ಲಿ ಅನುವಾದಿಸಲಾಗಿದೆ ಮತ್ತು ಪ್ರದರ್ಶಿಸಲಾಗಿದೆ ಮತ್ತು ಅದರ ಅಮೇರಿಕನ್ ಮತ್ತು ವೆಸ್ಟ್ ಕೋಸ್ಟ್ ಪ್ರಥಮ ಪ್ರದರ್ಶನಗಳನ್ನು ೨೦೧೩ ರಲ್ಲಿ ಚಿಕಾಗೋದ ವಿಕ್ಟರಿ ಗಾರ್ಡನ್ಸ್ ಥಿಯೇಟರ್ ಮತ್ತು ಸ್ಯಾನ್ ಜೋಸ್ ರೆಪರ್ಟರಿ ಥಿಯೇಟರ್‌ನಲ್ಲಿ ನಡೆಸಲಾಯಿತು.

ಮಕ್ಕಳಿಗಾಗಿ ಮಾಡಿದ ಅವರ ನಾಟಕ, ದಿ ಸ್ನೋ ಕ್ವೀನ್, ಹ್ಯಾನ್ಸ್ ಕ್ರಿಶ್ಚಿಯನ್ ಆಂಡರ್ಸನ್ ಕಥೆಯ ಭಾರತೀಯ ರೂಪಾಂತರವಾಗಿದೆ. ರೋಸಮುಂದೆ ಹಟ್ಟ್ ನಿರ್ದೇಶಿಸಿದ ಈ ನಾಟಕವು ಗಲ್ಲಾಪೆಟ್ಟಿಗೆಯಲ್ಲಿ ಅದ್ಭುತ ಯಶಸ್ಸನ್ನು ಕಂಡಿತು. [೧೩] ಟ್ರೆಸ್ಟಲ್ ಥಿಯೇಟರ್, ಯೂಕೆ ನಿರ್ಮಿಸಿದ ನಿರ್ಮಾಣದ ಮರುಮೌಲ್ಯವು, ೨೦೧೨ ರಲ್ಲಿ ಚೆನ್ನೈ ಮೆಟ್ರೊಪ್ಲಸ್ ಥಿಯೇಟರ್ ಫೆಸ್ಟಿವಲ್ ಅನ್ನು ತೆರೆಯಿತು ಮತ್ತು ಭಾರತ ಮತ್ತು ಯುಕೆ ಯ ಹಲವಾರು ನಗರಗಳಲ್ಲಿ ಪ್ರದರ್ಶನಗೊಂಡಿದೆ. [೧೪]

ಅವರ ನಂತರದ ನಾಟಕ, ವೆನ್ ದಿ ಕ್ರೌಸ್ ವಿಸಿಟ್ [೧೫] [೧೬] ಇಬ್ಸೆನ್‌ನ ಘೋಸ್ಟ್ಸ್‌ನಿಂದ ಪ್ರೇರಿತವಾಗಿದೆ ಮತ್ತು ಭಾರತದಲ್ಲಿ ಲೈಂಗಿಕ ಹಿಂಸೆ ಮತ್ತು ಪಿತೃಪ್ರಭುತ್ವದ ಸಮಸ್ಯೆಯನ್ನು ಪ್ರತಿಬಿಂಬಿಸುತ್ತದೆ. ಇದು ೨೦೧೯ ರ ಶರತ್ಕಾಲದಲ್ಲಿ ಕಿಲ್ನ್ ಥಿಯೇಟರ್‌ನಲ್ಲಿ ಪ್ರಾರಂಭವಾಯಿತು. ಇಂಧು ರುಬಸಿಂಗಮ್ ನಿರ್ದೇಶಿಸಿದ ಈ ನಾಟಕವು ಭಾರತದ ಭಯಾನಕ ೨೦೧೨ ದೆಹಲಿಯ ಸಾಮೂಹಿಕ ಅತ್ಯಾಚಾರ ಮತ್ತು ಮಹಿಳೆಯರ ವಿರುದ್ಧದ ಇತರ ಅಪರಾಧಗಳಿಗೆ ಪ್ರತಿಕ್ರಿಯೆಯಾಗಿತ್ತು. [೧೭]

ಜೂನ್ ೨೦೨೧ ರಲ್ಲಿ, ನ್ಯಾಷನಲ್ ಥಿಯೇಟರ್ ಚಂದ್ರಶೇಖರ್ ಅವರ ಹೊಸ ಕೃತಿ ದಿ ಫಾದರ್ ಅಂಡ್ ದಿ ಅಸ್ಸಾಸಿನ್ ಅನ್ನು ಮೇ ೨೦೨೨ ರಲ್ಲಿ ತನ್ನ ಒಲಿವಿಯರ್ ಥಿಯೇಟರ್‌ನಲ್ಲಿ ಪ್ರದರ್ಶಿಸುವುದಾಗಿ ಘೋಷಿಸಿತು. ಇದು ಗಾಂಧಿಯ ತೀವ್ರಗಾಮಿ, ನಿಷ್ಠಾವಂತ ಅನುಯಾಯಿಯಾಗಿದ್ದು, ನಂತರ ಅಂತಿಮವಾಗಿ ಕೊಲೆಗಾರನಾದವನ ಕಥೆಯಾಗಿದೆ.

ಅವರ ಇತರ ನಾಟಕಗಳೆಂದರೆ, ಮೂಲತಃ ಮುಂಬೈ‌ನ ಕ್ಯೂಟಿಪಿ‌ಯಿಂದ ನಿರ್ಮಾಣಗೊಂಡು, ನಂತರ ೨೦೦೭ ರಲ್ಲಿ ಮದ್ರಾಸ್ ಪ್ಲೇಯರ್ಸ್ ನಿರ್ಮಿಸಿದ , ಆಸಿಡ್ ಮತ್ತು ಚೆನ್ನೈನ ‌ ಥಿಯೇಟರ್ ನಿಶಾ ನಿರ್ಮಿಸಿದ ಕ್ಲೋಸರ್ ಅಪಾರ್ಟ್.

ಫ್ರೀ ಔಟ್‌ಗೋಯಿಂಗ್‌ನ ಆಕೆಯ ಚಿತ್ರಕಥೆಯ ರೂಪಾಂತರವು ಉತಾಹ್‌ನ ಸನ್‌ಡಾನ್ಸ್ ಇಂಟರ್‌ನ್ಯಾಶನಲ್ ಸ್ಕ್ರೀನ್‌ರೈಟರ್ಸ್ ಲ್ಯಾಬ್‌ಗೆ ಅಂತಿಮವಾಗಿದೆ. ಜೇನ್ ಮೊರಿಯಾರ್ಟಿ ನಿರ್ದೇಶಿಸಿದ ಕಿಚನ್ ಟೇಲ್ಸ್ ಕಿರುಚಿತ್ರಕ್ಕೆ ಅವರು ಚಿತ್ರಕಥೆ ಬರಹಗಾರರಾಗಿದ್ದಾರೆ ಮತ್ತು ೨೦೨೦-೨೧ ರಲ್ಲಿ ಈ ಕೆಲಸವನ್ನು ಪೂರ್ಣಗೊಳಿಸಿದ್ದಾರೆ. ಅವರ ಸಣ್ಣ ಕಥೆ ವಿಂಗ್ಸ್ ಆಫ್ ವೇದಂತಂಗಲ್‌ಗೆ ೨೦೦೬ ರಲ್ಲಿ ಕಾಮನ್‌ವೆಲ್ತ್ ಸಣ್ಣ ಕಥೆ ಪ್ರಶಸ್ತಿಯ [೧೮] ವಿಜೇತರಾಗಿದ್ದರು. ಅವರು ೨೦೦೦ ರಲ್ಲಿ ರಾಯಲ್ ಕೋರ್ಟ್ ಥಿಯೇಟರ್‌ನ ಅಂತರರಾಷ್ಟ್ರೀಯ ನಾಟಕಕಾರರ ಕಾರ್ಯಕ್ರಮಕ್ಕೆ ಚಾರ್ಲ್ಸ್ ವ್ಯಾಲೇಸ್ ಟ್ರಸ್ಟ್ ಆಫ್ ಇಂಡಿಯಾ (ಸಿ‌ಡಬ್ಲೂ‌ಐಟಿ) ಫೆಲೋಶಿಪ್ ಗೆದ್ದರು. ಅವರು ೨೦೧೫ ರಲ್ಲಿ ಚಿಚೆಸ್ಟರ್ ವಿಶ್ವವಿದ್ಯಾಲಯದಲ್ಲಿ ಸಿ‌ಡಬ್ಲೂ‌ಐಟಿ ರೈಟಿಂಗ್ ಫೆಲೋ ಆಗಿದ್ದರು. [೧೯]

ಆಯ್ದ ನಾಟಕಗಳು

ಬದಲಾಯಿಸಿ
  1. ವೆನ್ ದ ಕ್ರೋಸ್ ವಿಸಿಟ್
  2. ದ ಸ್ನೋ ಕ್ವೀನ್
  3. ಡಿಸ್ಕನೆಕ್ಟ್
  4. ಫ್ರೀ ಔಟ್‌ಗೋಯಿಂಗ್
  5. ಆಸಿಡ್

ಉಲ್ಲೇಖಗಳು

ಬದಲಾಯಿಸಿ
  1. "The 66th Evening Standard Theatre Awards shortlist is here - and it's a tribute to London's incredible talent". Evening Standard. 1 November 2022. Retrieved 29 March 2023.
  2. "Finalists announced for the Susan Smith Blackburn Prize". Theatre Weekly. 8 February 2023. Retrieved 29 March 2023.
  3. Snow, Georgia (22 September 2016). "National Theatre appoints Anupama Chandrasekhar as first international writer-in-residence". The Stage. Retrieved 7 April 2023.
  4. "Free Outgoing".
  5. Macmillan, Joyce. It’s Still A Man’s World, Scotsman, 11 August 2008.
  6. Jury, Louise. Donmar Dominates the London Stage at the ES Theatre Awards, Evening Standard, 24 November 2008.
  7. "Nick Hern Books | About Anupama Chandrasekhar".
  8. "Finalists 2009". Archived from the original on 2013-10-29. Retrieved 2013-10-26.
  9. "AN INTERVIEW WITH ANUPAMA CHANDRASEKHAR - Nightwood Theatre". www.nightwoodtheatre.net. Archived from the original on 2014-03-06.
  10. Zachariah, Preeti (26 January 2015). "A peep into your soul". The Hindu.
  11. "Sex, lies and India: Play pits technology against tradition". 25 February 2016.
  12. "Anupama Chandrasekhar's latest play Disconnect receives great reviews in the UK press. | Genesis Foundation". Archived from the original on 2013-10-29. Retrieved 2013-10-26.
  13. Muthalaly, Shonali. 50 Shows and Still Going Strong, The Hindu, 2 August 2012.
  14. "Trestle Theatre. OUR WORK".
  15. "WHEN THE CROWS VISIT | Kiln Theatre".
  16. "When the Crows Visit review: Triumphant and intense". 30 October 2019.
  17. "Sex tapes and acid attacks: Anupama Chandrasekhar, the playwright shocking India | Stage | The Guardian". www.theguardian.com. Archived from the original on 2019-10-28.
  18. "2006 Short Story Competition". 19 October 2011.
  19. http://www.mumbaitheatreguide.com/dramas/interviews/anupama-chandrashekar-interview.asp