ಅನಾಥ ಮಗು ತಂದೆತಾಯಿಯರನ್ನು ಕಳೆದುಕೊಂಡಿರುವ ಅಥವಾ ತಂದೆತಾಯಿಯರಿಂದ ಶಾಶ್ವತವಾಗಿ ತ್ಯಜಿಸಲ್ಪಟ್ಟ ಮಗು.[] ಸಾಮಾನ್ಯ ಬಳಕೆಯಲ್ಲಿ, ಸಾವಿನಿಂದ ತಂದೆ ಮತ್ತು ತಾಯಿ ಇಬ್ಬರನ್ನೂ ಕಳೆದುಕೊಡಿರುವ ಮಗುವನ್ನು ಮಾತ್ರ ಅನಾಥವೆಂದು ಕರೆಯಲಾಗುತ್ತದೆ. ಪ್ರಾಣಿಗಳನ್ನು ಸೂಚಿಸುವಾಗ, ಕೇವಲ ತಾಯಿಯ ಪರಿಸ್ಥಿತಿ ಸಾಮಾನ್ಯವಾಗಿ ಪ್ರಸ್ತುತವಾಗಿರುತ್ತದೆ. ಅವಳು ಇಲ್ಲದಿದ್ದರೆ, ಸಂತತಿಯು ಅನಾಥವೆಂದು ಅರ್ಥ, ತಂದೆಯ ಪರಿಸ್ಥಿತಿ ಏನೇ ಇದ್ದರೂ.

ತಂದೆತಾಯಿಯರು ಸಾಯುವ ಮೊದಲು ಪ್ರಾಪ್ತವಯಸ್ಕತೆ ಮುಟ್ಟಿದವರನ್ನು ಸಾಮಾನ್ಯವಾಗಿ ಅನಾಥರೆಂದು ಕರೆಯುವುದಿಲ್ಲ; ಈ ಪದವು ಸಾಮಾನ್ಯವಾಗಿ ತಮ್ಮ ಜವಾಬ್ದಾರಿ ತಾವೇ ಹೊರುವುದಕ್ಕೆ ಬಹಳ ಚಿಕ್ಕವರಿದ್ದಾಗ ತಂದೆತಾಯಿಯರನ್ನು ಕಳೆದುಕೊಂಡ ಮಕ್ಕಳಿಗೆ ಮೀಸಲಾಗಿದೆ.

ನೆಲ್ಸನ್ ಮಂಡೇಲಾ ಮತ್ತು ಆಂಡ್ರ್ಯೂ ಜ್ಯಾಕ್ಸನ್‍ನಂತಹ ವಿಶ್ವ ನಾಯಕರು; ಯಹೂದಿ ಪ್ರವಾದಿ ಮೋಸೆಸ್ ಮತ್ತು ಮುಸ್ಲಿಮ್ ಪ್ರವಾದಿ ಮೊಹಮ್ಮದ್; ಎಡ್ಗರ್ ಆಲನ್ ಪೋ ಮತ್ತು ಲಿಯೊ ಟಾಲ್‍ಸ್ಟಾಯ್‍ನಂತಹ ಬರಹಗಾರರು ಕೆಲವು ಪ್ರಸಿದ್ಧ ಅನಾಥರು. ಅಮೇರಿಕದ ಅನಾಥ ಹೆನ್ರಿ ಡಾರ್ಗರ್ ತನ್ನ ಅನಾಥಾಲಯದ ಭಯಾನಕ ಪರಿಸ್ಥಿತಿಗಳನ್ನು ತನ್ನ ಕಲಾಕೃತಿಯಲ್ಲಿ ಚಿತ್ರಿಸಿದನು. ಲೂಯಿ ಆರ್ಮ್‍ಸ್ಟ್ರಾಂಗ್, ಮ್ಯಾರಲಿನ್ ಮನ್ರೊ, ಬೇಬ್ ರುತ್, ರೇ ಚಾರ್ಲ್ಸ್ ಹಾಗೂ ಫ಼್ರ್ಯಾನ್ಸೆಸ್ ಮೆಕ್‍ಡಾರ್ಮಂಡ್‍ನಂತಹ ಮನೊರಂಜನಾ ಶ್ರೇಷ್ಠರು ಮತ್ತು ಸಾಹಿತ್ಯ ಮತ್ತು ಕಾಮಿಕ್ಸ್‌ನಲ್ಲಿ ಅಸಂಖ್ಯಾತ ಕಾಲ್ಪನಿಕ ಪಾತ್ರಗಳು ಇತರ ಪ್ರಖ್ಯಾತ ಅನಾಥರಲ್ಲಿ ಸೇರಿದ್ದಾರೆ/ಸೇರಿವೆ.

ಯುದ್ಧಗಳು ಮತ್ತು ಏಡ್ಸ್‌ನಂತಹ ಬೃಹತ್ ಸೋಂಕುಜಾಡ್ಯಗಳು ಅನೇಕ ಅನಾಥರನ್ನು ಸೃಷ್ಟಿಸಿವೆ. ಎರಡನೇ ವಿಶ್ವಯುದ್ಧದಿಂದಾದ ಸಾವುಗಳ ಬೃಹತ್ ಸಂಖ್ಯೆ ಮತ್ತು ಜನರ ಸ್ಥಳಾಂತರಗಳು, ಅನೇಕ ದೇಶಗಳಲ್ಲಿ ಭಾರಿ ಪ್ರಮಾಣದ ಅನಾಥರನ್ನು ಸೃಷ್ಟಿಸಿತು—ಯೂರೋಪ್‍ನಲ್ಲಿ ಅಂದಾಜು 1,000,000 ರಿಂದ 13,000,000 ವರೆಗೆ. ಚೆಕೊಸ್ಲೊವಾಕಿಯಾದಲ್ಲಿ ೯,೦೦೦ ಅನಾಥ ಮಕ್ಕಳು, ನೆದರ್‍ಲೆಂಡ್ಸ್‌ನಲ್ಲಿ ೬೦,೦೦೦, ಪೋಲಂಡ್‍ನಲ್ಲಿ ೩೦೦,೦೦೦ ಮತ್ತು ಯುಗೊಸ್ಲಾವಿಯಾದಲ್ಲಿ ೨೦೦,೦೦೦, ಜೊತೆಗೆ ಸೋವಿಯಟ್ ಒಕ್ಕೂಟ, ಜರ್ಮನಿ, ಇಟಲಿ ಮತ್ತು ಇತರೆಡೆಗಳಲ್ಲಿ ಇನ್ನೂ ಹೆಚ್ಚು ಎಂದು ಜುಡ್ಟ್ ಅಂದಾಜಿಸಿದರು.[]

ಉಲ್ಲೇಖಗಳು

ಬದಲಾಯಿಸಿ
  1. Concise Oxford Dictionary, 6th edition "a child bereaved of parents" with bereaved meaning (of death etc) deprived of a relation
  2. For a high estimate see I.C.B. Dear and M.R.D. Foot, eds. The Oxford companion to World War II (1995) p 208; for lower Tony Judt, Postwar: a history of Europe since 1945 (2006) p. 21


"https://kn.wikipedia.org/w/index.php?title=ಅನಾಥ&oldid=1273100" ಇಂದ ಪಡೆಯಲ್ಪಟ್ಟಿದೆ