ಅನಾಕ್ರಿಯಾನ್
ಅನಾಕ್ರಿಯಾನ್ (ಕ್ರಿ.ಪೂ ೫೮೨-ಕ್ರಿ.ಪೂ.೪೮೫) [೧] ಕ್ರಿ.ಪೂ. ಆರನೆಯ ಶತಮಾನದಲ್ಲೆ ಉತ್ಕೃಷ್ಟ ಗೀತೆಗಳನ್ನು ಬರೆದ ಗ್ರೀಕ್ ಕವಿ.
ಹಿರಿಮೆ
ಬದಲಾಯಿಸಿಅನಾಕ್ರಿಯಾನ್ಟಿಕ್ಸ್ ಎಂಬ ಹೊಸ ಛಂದಸ್ಸು ಮತ್ತು ಹೊಸ ಭಾವಕಲ್ಪನೆಯ ಮೂಲಪುರುಷ. ನಿರಂಕುಶ ಪ್ರಭುಗಳೇ ಹೆಚ್ಚಾಗಿದ್ದ ಆ ಕಾಲದಲ್ಲಿ ಒಂದು ಕಡೆ ನೆಲೆಯಾಗಿ ನಿಲ್ಲಲು ಅವನಿಗೆ ಸಾಧ್ಯವಾಗಲಿಲ್ಲ. ಸೇಮಾಸ್ ರಾಜ್ಯದ ಪಾಲಿಕ್ರಟೀಸ್‍ನ ಆಶ್ರಯದಲ್ಲಿ ಕೆಲಕಾಲ ಇದ್ದು, ಆ ದೊರೆಯ ಕೊಲೆಯಾದ ಮೇಲೆ ಅಥೆನ್ಸ್ ನಗರಕ್ಕೆ ಬಂದು ನೆಲೆಸಿದ. 85ನೆಯ ವಯಸ್ಸಿನಲ್ಲಿ ತೀರಿಕೊಂಡ. ಪಾಸೇನಿಯಸ್ ಎಂಬ ಪ್ರಸಿದ್ಧ ದಳಪತಿ ಇವನ ವಿಗ್ರಹವನ್ನು ಅಥೆನ್ಸಿನ ಅಕ್ರೋಪೋಲಿಸ್‍ನಲ್ಲಿ ನಿಲ್ಲಿಸಿದ್ದನೆಂದು ಹೇಳಿರುವುದರಿಂದಲೂ.[೨] ಐದು ಮತ್ತು ನಾಲ್ಕನೆಯ ಶತಮಾನದ ಕವಿಗಳು ಇವನ ಕೃತಿಗಳಿಂದ ಉದ್ಧರಿಸಿರುವುದರಿಂದಲೂ ಇವನು ಅಥೆನ್ಸಿನಲ್ಲಿ ತುಂಬ ಮಾನ್ಯತೆ ಪಡೆದಿದ್ದನೆಂದು ಹೇಳಬಹುದು. ಇವನು ರಚಿಸಿದ ಯಾವ ಕಾವ್ಯವೂ ಸಂಪೂರ್ಣವಾಗಿ ಉಳಿದಿಲ್ಲ; ದೊರೆತಿರುವುದೆಲ್ಲ ತುಂಡುಗಳು ಮಾತ್ರ. ಆದರೂ ಅವುಗಳಲ್ಲಿ, ಅವನು ಆರಿಸಿರುವ ಛಂದಸ್ಸಿನ ಔಚಿತ್ಯ, ಶೈಲಿಯ ಸರಳತೆ, ಲಾಲಿತ್ಯ ಎದ್ದು ಕಾಣುತ್ತವೆ. ದೊರೆತಿರುವ ಕವಿತೆಗಳಲ್ಲಿ ಕಾಣುವ ವಿಷಯ ಮದ್ಯ, ಮಾನಿನಿಯನ್ನು ಕುರಿತವು; ಗಂಭೀರ ವಿಷಯಗಳನ್ನುಳ್ಳವು ಇಲ್ಲವೇ ಇಲ್ಲ. ಅನಾಕ್ರಿಯಾನ್‍ಟಿಕ ಎಂಬ ಹೆಸರಿನಿಂದ ಲಭ್ಯವಾಗಿರುವ ಕವನಗಳನ್ನು ಅವನ ಕಾಲದ ಐದಾರು ಶತಮಾನಗಳ ನಂತರ ಅವನನ್ನು ಅನುಕರಿಸಿದವರು ರಚಿಸಿದರು.
ಉಲ್ಲೇಖಗಳು
ಬದಲಾಯಿಸಿ- ↑ "Anacreon". Encyclopædia Britannica Online.
- ↑ Pausanias, Attica xxv.1
ಬಾಹ್ಯ ಸಂಪರ್ಕಗಳು
ಬದಲಾಯಿಸಿ- Works by Anacreon at Project Gutenberg
- Poems by Anacreon English translations
- Lyrics and brief history of Anacreon in Heaven
- A brief history of the American National Anthem
- A collection of early translations of Anacreon into English( Archived 2009-10-22 ವೇಬ್ಯಾಕ್ ಮೆಷಿನ್ ನಲ್ಲಿ. 2009-10-25)
- Full length sculpture of Anacreon (in Danish) Archived 2007-10-09 ವೇಬ್ಯಾಕ್ ಮೆಷಿನ್ ನಲ್ಲಿ.