ಅನಂತ್ ಕುಮಾರ್ ಹೆಗಡೆ
ಅನಂತ್ ಕುಮಾರ್ ಹೆಗಡೆಯವರು ಭಾರತೀಯ ರಾಜಕಾರಣಿ ಮತ್ತು ಉತ್ತರ ಕನ್ನಡ ಕ್ಷೇತ್ರದ ಸಂಸತ್ ಸದಸ್ಯರು. ಭಾರತೀಯ ಜನತಾ ಪಾರ್ಟಿಯ ಸದಸ್ಯರು ಮತ್ತು ಮಾಜಿ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆಯ ಸಚಿವರಾಗಿದ್ದರು.
ಆರಂಭಿಕ ಜೀವನ
ಬದಲಾಯಿಸಿಅನಂತ್ ಕುಮಾರ್ ಹೆಗಡೆಯವರು ೧೯೬೮ರ ಮೇ ೨೦ರಂದು ಉತ್ತರ ಕನ್ನಡ ಜಿಲ್ಲೆಯ ಸಿರ್ಸಿ ತಾಲ್ಲೂಕಿನಲ್ಲಿ ಜನಿಸಿದರು. ಇವರ ತಂದೆ ದತ್ತಾತ್ರೇಯ ಹೆಗಡೆ ಮತ್ತು ತಾಯಿ ಲಲಿತಾ.
ವಿದ್ಯಾಭ್ಯಾಸ
ಬದಲಾಯಿಸಿಇವರು ತಮ್ಮ ಪದವಿಯನ್ನು ಶಿರಸಿಯ ಎಂಎಂ ಆರ್ಟ್ಸ್ ಮತ್ತು ಸೈನ್ಸ್ ಪದವಿ ಕಾಲೆಜಿನಲ್ಲಿ ಪಡೆದರು. ಇವರ ಕಾಲೇಜು ದಿನಗಳಲ್ಲಿ, ಇವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರಾಗಿದ್ದರು ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದರು.[೧]
ವಯಕ್ತಿಕ ಜೀವನ
ಬದಲಾಯಿಸಿಅನಂತ್ ಕುಮಾರ್ ಹೆಗಡೆಯವರು ೧೯೯೮ರಲ್ಲಿ ಶ್ರೀರೂಪ ಹೆಗಡೆವರನ್ನು ವಿವಾಹವಾದರು. ಈ ದಂಪತಿಗಳಿಗೆ ಒಬ್ಬಳು ಪುತ್ರಿ ಮತ್ತು ಒಬ್ಬ ಪುತ್ರನಿದ್ದಾನೆ.
ವೃತ್ತಿ
ಬದಲಾಯಿಸಿ೧೯೯೬ರಲ್ಲಿ ನೆಡೆದ ೧೧ನೇ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾದರು. ನಂತರ ಐದು ಬಾರಿ ಉತ್ತರ ಕನ್ನಡ ಕ್ಷೇತ್ರದ ಸಂಸದರಾಗಿ ಚುನಾಯಿತರಾದರು. ೨೦೧೬ರ ಪ್ರಧಾನಿ ನರೇಂದ್ರ ಮೋದಿಯವರ ಕ್ಯಾಬಿನೆಟ್‌ನಲ್ಲಿ ಕೇಂದ್ರ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವರಾಗಿದ್ದರು.[೨]
ಸಾಮಾಜಿಕ ಚಟುವಟಿಕೆಗಳು
ಬದಲಾಯಿಸಿಅನಂತ್ ಕುಮಾರ್ ಹೆಗಡೆಯವರು ಕದಂಬ ಸಂಸ್ಥೆಗಳ ಸಂಘಟನೆಯನ್ನು ಸ್ಥಾಪಿಸಿದರು. ಈ ಸಂಘಟನೆಗಳು ಸಾಮಾಜಿಕ ಆರ್ಥಿಕ ಚಟುವಟಿಕೆಗಳ ಕ್ಷೇತ್ರದ ಕಾರ್ಯದಲ್ಲಿ ಭಾಗಿಯಾಗುತ್ತದೆ. ವಿಶೇಷವಾಗಿ ಗ್ರಾಮೀಣ ಪ್ರದೇಶದ ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸುತ್ತದೆ.
ವಿವಾದಗಳು
ಬದಲಾಯಿಸಿ- ಬಿಜೆಪಿ ಆಡಳಿತಕ್ಕೆ ಬಂದಿರುವುದು ಸಂವಿಧಾನದ ಬದಲಾವಣೆ ಮಾಡಲು ಎನ್ನುವ ಹೇಳಿಕೆ ನೀಡಿದ್ದಾರೆ[೩]
- ಇತಿಹಾಸದ ಪ್ರಕಾರ ಉಪವಾಸಕ್ಕೆ ಬ್ರಿಟಿಷರು ಹೆದರಿ, ಸ್ವಾತಂತ್ರ್ಯ ಕೊಟ್ಟು ಓಡಿ ಹೋದರು. ಇದನ್ನು ಕೇಳಿದರೆ ತಣ್ಣಗಿರುವ ರಕ್ತ ಹೆಪ್ಪುಗಟ್ಟಿ ಹೋಗುತ್ತದೆ. ಸ್ವಾತಂತ್ರ್ಯ ಹೋರಾಟಗಾರರು ಬ್ರಿಟಿಷರ ಬಳಿಯೇ ಹೇಗೆ ಹೋರಾಟ ಮಾಡಬೇಕು ಎಂದು ಕೇಳಿ, ಅವರೊಂದಿಗೆ ಹೊಂದಾಣಿಕೆ ಮಾಡಿಕೊಂಡರು;ಹೋರಾಟ ನಡೆದಿತ್ತು. ಮಹಾತ್ಮ ಗಾಂಧೀಜಿ ನಡೆಸಿದ ಹೋರಾಟ, ಉಪವಾಸ ಸತ್ಯಾಗ್ರಹ ಸಹ ಒಂದು ನಾಟಕ’ ಎಂದು ಹೆಗಡೆ ಇತ್ತೀಚೆಗೆ ಹೇಳಿದ್ದರು;[೪][೫]
ಉಲ್ಲೇಖಗಳು
ಬದಲಾಯಿಸಿ- ↑ https://indianexpress.com/article/who-is/who-is-anant-kumar-hegde-4826135/
- ↑ https://www.ndtv.com/india-news/cabinet-reshuffle-karnataka-lawmaker-and-taekwondo-expert-ananthkumar-hegde-becomes-minister-of-stat-1745491
- ↑ List of BJP leaders who made controversial remarks - Anant Kumar Hegde's controversial comments on secularism | The Economic Times[permanent dead link]
- ↑ ‘ಉಪವಾಸಕ್ಕೆ ಹೆದರಿ ಬ್ರಿಟಿಷರು ಓಡಿಹೋಗಿದ್ದಲ್ಲ: ಸಂಸದ ಅನಂತಕುಮಾರ ಹೆಗಡೆ, ಪ್ರಜಾವಾಣಿ; 01 ಫೆಬ್ರವರಿ 2020
- ↑ https://www.prajavani.net/stories/stateregional/congress-attacks-anant-kumar-hegde-on-independent-movement-statement-702820.html