ಅನಂತು vs ನುಸ್ರತ್ (ಚಲನಚಿತ್ರ)
ಅನಂತು vs ನುಸ್ರತ್ ೨೦೧೮ರಲ್ಲಿ ಬಿಡುಗೊಂಡ ಕನ್ನಡ ಚಲನಚಿತ್ರ[೧]. ಸುಧೀರ್ ಶಾನುಭೋಗ್ ನಿರ್ದೇಶನದ ಈ ಚಲನಚಿತ್ರ ಮಾಣಿಕ್ಯ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣಗೊಂಡಿತು[೨] .ವಕೀಲ ಮತ್ತು ನ್ಯಾಯಾಧೀಶೆಯ ನಡುವೆ ನಡೆಯುವ ಪ್ರೇಮ ಕತೆ ಈ ಚಿತ್ರದಲ್ಲಿದೆ. ವಿನಯ್ ರಾಜಕುಮಾರ್ ಅವರು ಅನಂತು ಪಾತ್ರದಲ್ಲಿ ಹಾಗೂ ಲತಾ ಹೆಗ್ಡೆ ನುಸ್ರತ್ ಪಾತ್ರದಲ್ಲಿ ನಟಿಸಿದ್ದಾರೆ. ಪಿ.ರವಿಶಂಕರ್, ಬಿ.ಸುರೇಶ, ಸುಚೇಂದ್ರ ಪ್ರಸಾದ್, ಮುಂತಾದವರು ಈ ಚಿತ್ರದ ಕಲಾವಿದರ ಬಳಗದಲ್ಲಿ ಇದ್ದಾರೆ[೩] . ಚಿತ್ರದ ಛಾಯಾಗ್ರಾಹಕರಾಗಿ ಆಭಿಷೇಕ್ ಜಿ ಕಾಸರಗೋಡು ಕಾರ್ಯ ನಿರ್ವಹಿಸಿದ್ದಾರೆ. ಸುನಾದ್ ಗೌತಮ್ ಸಂಗೀತ ಸಂಯೋಜಿಸಿದ್ದಾರೆ.
ಕಥಾ ಸಾರಾಂಶ
ಬದಲಾಯಿಸಿಅನಂತ ಕೃಷ್ಣ ಕ್ರಮಧಾರಿತ್ತಾಯ ಓರ್ವ ಸಂಪ್ರದಾಯಸ್ಥ ಕುಟುಂಬಕ್ಕೆ ಸೇರಿದ ಯುವ ವಕೀಲ. ನುಸ್ರತ್ ಫಾತಿಮಾ ಬೇಗ್ ಇಸ್ಲಾಂ ಧರ್ಮೀಯ ಯುವ ನ್ಯಾಯಾಧೀಶೆ. ಅನಂತು ತಾನು ವಿಧ್ಯಾರ್ಥಿಯಾಗಿರುವಾಗ ನುಸ್ರತ್‍ಳನ್ನು ಪ್ರೀತಿಸ ತೊಡುಗುತ್ತಾನೆ. ಆದರೆ ನುಸ್ರತ್ ಆತನ ಪ್ರೀತಿಯನ್ನು ನಿರಾಕರಿಸುತ್ತಾಳೆ. ಹಲವು ವರ್ಷಗಳ ಬಳಿಕ ನುಸ್ರತ್ ಕೌಟುಂಬಿಕ ನ್ಯಾಯಾಲಯದಲ್ಲಿ ನ್ಯಾಯಾಧೀಶೆಯಾಗಿ ನೇಮಕಗೊಳ್ಳುತ್ತಾಳೆ. ಆಗ ಅನಂತು ನುಸ್ರತ್‍ಳನ್ನು ಒಲೈಸಿಕೊಳ್ಳುವ ಸಲುವಾಗಿ ಆ ಕೌಟುಂಬಿಕ ನ್ಯಾಯಾಲಯದಲ್ಲಿ ವಕೀಲನಾಗಿ ಕಾರ್ಯ ನಿರ್ವಹಿಸಲು ನಿರ್ಧರಿಸುತ್ತಾನೆ.
ವಿಭಿನ್ನ ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಹಿನ್ನಲೆ ಹೊಂದಿರುವ ಅನಂತು, ನುಸ್ರತ್ ಪ್ರೇಮ ಸಫಲವಾಗುವುದೇ ಹಾಗೂ ವಿವಾಹದಲ್ಲಿ ಪರ್ಯಾವಸಾನಗೊಳ್ಳುವುದೇ ಎಂಬ ವಿಷಯವೇ ಈ ಚಿತ್ರದ ಕತೆಯ ಮೂಲ ಹಂದರ.
ತಂತ್ರಜ್ಞರು
ಬದಲಾಯಿಸಿಈ ಚಲನಚಿತ್ರವನ್ನು ಮಾಣಿಕ್ಯ ಪ್ರೊಡಕ್ಷನ್ಸ್ ಲಾಂಛನದಲ್ಲಿ ಬಿ.ಎನ್. ಸತೀಶ್, ಎಚ್.ಎಸ್ ಸುರೇಶ್ ಹಾಗೂ ಬಿ.ಟಿ ಚಂದ್ರಶೇಖರ್ ನಿರ್ಮಿಸಿದ್ದಾರೆ. ಚಿತ್ರದ ಕತೆ,ಚಿತ್ರಕತೆ ಹಾಗೂ ನಿರ್ದೇಶನ ಸುಧೀರ್ ಶಾನುಭೋಗ್ ಅವರದ್ದಾಗಿದೆ. ಸಂಗೀತ ನಿರ್ದೇಶನ ಸುನಾದ್ ಗೌತಮ್, ಛಾಯಾಗ್ರಹಣ ಅಭೀಷೇಕ್ ಜಿ ಕಾಸರಗೋಡು ಹಾಗೂ ಸಂಕಲನವನ್ನು ನಿರಂಜನ ದೇವರಮನೆ ನಿರ್ವಹಿಸಿದ್ದಾರೆ.
ಪಾತ್ರ ವರ್ಗ
ಬದಲಾಯಿಸಿ- ವಿನಯ್ ರಾಜ್‍ಕುಮಾರ್
- ಲತಾ ಹೆಗ್ಡೆ
- ಪಿ.ರವಿಶಂಕರ್
- ಬಿ.ಸುರೇಶ
- ಎಚ್. ಜಿ. ದತ್ತಾತ್ರೇಯ
- ಪ್ರಜ್ವಲ್ ದೇವರಾಜ್
- ನವೀನ್ ಡಿ. ಪಡೀಲ್
- ಸುಚೀಂದ್ರ ಪ್ರಸಾದ
- ನಯನಾ (ಕಾಮಿಡಿ ಖಿಲಾಡಿ)
- ಸಂದೀಪ್
- ಅಶ್ವಿತಿ ಶೆಟ್ಟಿ
- ಹರಿಣಿ ಶ್ರೀಕಾಂತ್
- ಸ್ವಾತಿ ಗುರುದತ್ತ
ಹಾಡುಗಳು
ಬದಲಾಯಿಸಿಅನಂತು vs ನುಸ್ರತ್ ಚಿತ್ರದ ಹಾಡುಗಳಿಗೆ ಸುನಾದ್ ಗೌತಮ್ ಸಂಗೀತ ಸಂಯೋಜಿಸಿದ್ದಾರೆ. ಈ ಚಿತ್ರದ ಹಾಡುಗಳ ಹಕ್ಕನ್ನು ಪುನೀತ್ ರಾಜ್‍ಕುಮಾರ್ ಅವರ ಮಾಲಿಕತ್ವದ ಪಿ.ಆರ್.ಕೆ ಆಡಿಯೋ ಸಂಸ್ಥೆ ಪಡೆದುಕೊಂಡಿದೆ. ಈ ಹಾಡುಗಳನ್ನು ನವೆಂಬರ್ ೧, ೨೦೧೮ರಂದು ಬಿಡುಗಡೆಗೊಳಿಸಲಾಯಿತು[೪]. ಈ ಚಿತ್ರ ಒಟ್ಟು ಆರು ಹಾಡುಗಳನ್ನು ಹೊಂದಿದೆ[೫].
ಕ್ರ.ಸಂ. | ಹಾಡು | ಗಾಯಕರು | ಸಾಹಿತ್ಯ | ಅವಧಿ |
---|---|---|---|---|
೧. | ಈಗ ತಾನೆ ಜಾರಿಯಾಗಿದೆ | ವಿಜಯ್ ಪ್ರಕಾಶ್ | ಸಿದ್ದು ಕೋಡಿಪುರ | 0೪.೧೮ |
೨. | ಝಿಹಾಲ್ - ಎ- ಮಿಸ್ಕಿನ್ | ನಿನಾದ ಯು ನಾಯಕ್ | ಅಮೀರ್ ಖುಸ್ರೋ | ೦೪.೨೭ |
೩. | ಪ್ಯಾರ್ ಮೌಲಾ | ಕೈಲಾಶ್ ಖೇರ್, ರಜತ್ ಹೆಗ್ಡೆ | ಅರಸು ಅಂತಾರೆ | ೦೪.೩೨ |
೪. | ಯಾವ ಕಾಲದ ಶಾಸ್ತ್ರವೇನು | ನಿತಿನ್ ಆಚಾರ್ಯ | ಕುವೆಂಪು | ೦೩.೫೯ |
೫. | ಒಮ್ಮೆಯೂ ತಿರುಗಿ | ನಿನಾದ ಯು ನಾಯಕ್ | ಪರಮ್ ಭಾರಧ್ವಜ್ | ೦೪.೨೫ |
೬. | ಈಗ ತಾನೆ ಜಾರಿಯಾಗಿದೆ (ಪುನರಾವೃತ್ತಿ) | ವಿಜಯ್ ಪ್ರಕಾಶ್ | ಸಿದ್ದು ಕೋಡಿಪುರ | ೦೩.೫೭ |