ಅಧಿಕಸಂಮರ್ದ
ಅಧಿಕಸಂಮರ್ದ ಇದು ಒಂದು ವಸ್ತು ಇನ್ನೊಂದರೊಡನೆ ಸಂಪರ್ಕದಲ್ಲಿರುವಾಗ ಒಂದರ ಮೇಲೆ ಇನ್ನೊಂದು ವಸ್ತು ಉಂಟುಮಾಡುವ ಬಲದ ಹೆಸರು ಸಂಮರ್ದ (ಪ್ರೆಷರ್). ಒಂದು ಬಿಂದುವಿನ ಸುತ್ತಲೂ ಒಂದು ಚ.ಸೆಂ.ಮೀ. ಅಥವಾ ಒಂದು ಚ.ಅಂ. ವಿಸ್ತೀರ್ಣದ ಮೇಲೆ ಉಂಟಾಗುವ ಬಲ ಆ ಬಿಂದುವಿನಲ್ಲಿನ ಸಂಮರ್ದವನ್ನು ತಿಳಿಸುತ್ತದೆ. ಯಂತ್ರಶಿಲ್ಪಶಾಸ್ತ್ರದ (ಇಂಜಿನಿಯರಿಂಗ್) ವ್ಯಾಸಂಗಗಳಲ್ಲಿ ಸಂಮರ್ದವನ್ನು ಪೌಂಡ್/ಚ.ಅಂ. ಮಾನದಲ್ಲಿಯೂ ಭೌತಶಾಸ್ತ್ರದಲ್ಲಿ ಡೈನ್/ಚ.ಸೆಂ.ಮೀ. ಮಾನದಲ್ಲಿಯೂ ಅಳೆಯುವುದು ವಾಡಿಕೆ.
ಹಿನ್ನೆಲೆ
ಬದಲಾಯಿಸಿಎರಡು ಘನವಸ್ತುಗಳು ಒಂದರಮೇಲೊಂದು ಇರುವಾಗ ಒಂದರ ಭಾರದಿಂದ ಇನ್ನೊಂದರ ಮೇಲೆ ಉಂಟಾಗುವ ಸಂಮರ್ದವನ್ನು ಸುಲಭವಾಗಿ ತಿಳಿಯಬಹುದು. ಒಂದು ದ್ರವದ ಮೇಲೆ ಮತ್ತೊಂದು ದ್ರವ ನಿಂತಿರುವಾಗ ಆಗಲಿ ಅಥವಾ ಒಂದು ಘನ ವಸ್ತುವಿನೊಡನೆ ಒಂದು ದ್ರವವಸ್ತು ಕೂಡಿಕೊಂಡಿರುವಾಗ ಆಗಲಿ, ಅವುಗಳ ನಡುವೆ ಉಂಟಾಗುವ ಸಂಮರ್ದವನ್ನೂ ತಿಳಿಯಬಹುದು. ಆದರೆ ಒಂದು ಅನಿಲದಿಂದ ಉಂಟಾಗುವ ಸಂಮರ್ದವನ್ನು ತಿಳಿಯುವುದು ಸುಲಭವಲ್ಲ. ಅನಿಲ ಬಲು ಸೂಕ್ಷ್ಮವಾದ ಅಣುಗಳಿಂದ ಕೂಡಿದ್ದಾಗಿದೆ. ಈ ಅಣುಗಳು ಗೊತ್ತುಗುರಿಯಿಲ್ಲದೆ ಬೇರೆ ಬೇರೆ ದಿಕ್ಕಿನಲ್ಲಿ ಚಲಿಸುತ್ತವೆ. ಕಣಗಳ ಚಲನೆ ಅನಿಲದ ಉಷ್ಣತೆಯನ್ನು ಅವಲಂಬಿಸಿದೆ. ಅನಿಲದ ಸ್ವರೂಪವನ್ನು ಗಮನಿಸಿದರೆ, ಅನಿಲದಿಂದ ಉಂಟಾಗುವ ಸಂಮರ್ದವನ್ನು ಗ್ರಹಿಸಲು ಸಾಧ್ಯವಾಗುವುದು. ಅನಿಲವನ್ನು ಒಂದು ಪಾತ್ರೆಯಲ್ಲಿ (ಕಂಟೈನರ್) ಇಟ್ಟರೆ, ಅನಿಲದ ಅಣುಗಳು ಪಾತ್ರೆಯ ಆವರಣದ ಗೋಡೆಗಳ ಮೇಲೆ ಸಂತತವಾಗಿ ಡಿಕ್ಕಿ ಹೊಡೆಯುವುದರ ಮೂಲಕ ಗೋಡೆಗಳ ಮೇಲೆ ಬಲವನ್ನು ಬೀರುತ್ತವೆ. ಪಾತ್ರೆಯ ಗೋಡೆಗಳ ಮೇಲೆ ಉಂಟಾಗುವ ಒಟ್ಟು ಬಲವನ್ನು ಆವರಣದ ಗೋಡೆಗಳ ವಿಸ್ತೀರ್ಣದಿಂದ ಭಾಗಿಸಿದರೆ ಅನಿಲದಿಂದ ಏರ್ಪಡುವ ಸಂಮರ್ದ ಗೊತ್ತಾಗುವುದು. ನಮ್ಮ ಸುತ್ತಲೂ ಇರುವ ವಾಯುಮಂಡಲದ ಸಂಮರ್ದ (ಅಟ್ಮಾಸ್ಫಿಯರಿಕ್ ಪ್ರೆಷರ್). ಇದು ಭೂಮಿಯ ಮೇಲೆ ಎಲ್ಲೆಡೆಯಲ್ಲಿಯೂ ಒಂದೇ ಆಗಿರುವುದಿಲ್ಲ. ಸಮುದ್ರಮಟ್ಟದಲ್ಲಿ ಇದರ ಬೆಲೆ ೭೬೦ ಮಿಮೀ ಪಾದರಸ ಅಥವಾ ಚಸೆಂಮೀಗೆ ೧,೦೧೩,೨೪೯ ಡೈನ್‍ಗಳು ವಾಯುಮಂಡಲದ ಸಂಮರ್ದಕ್ಕಿಂತ ಗಮನಾರ್ಹವಾಗಿ ಕಡಿಮೆಯಿರುವ ಸಂಮರ್ದವನ್ನು ಅಲ್ಪಸಂಮರ್ದ (ಲೋ ಪ್ರೆಷರ್) ಎಂದೂ ವಾಯುಮಂಡಲದ ಸಂಮರ್ದಕ್ಕಿಂತ ಗಮನಾರ್ಹವಾಗಿ ಹೆಚ್ಚಾಗಿರುವ ಸಂಮರ್ದವನ್ನು ಅಧಿಕಸಂಮರ್ದ (ಹೈ ಪ್ರೆಷರ್) ಎಂದೂ ಕರೆಯುವುದುಂಟು. ಅಧಿಕ ಸಂಮರ್ದವನ್ನು ಅಳೆಯಲು ವಾಯುಮಂಡಲದ ಸಂಮರ್ದವನ್ನು ಏಕಮಾನವಾಗಿ ಉಪಯೋಗಿಸುತ್ತೇವೆ. ಈ ಮಾನವನ್ನು ವಾಯುಮಾನವೆಂದು (ಅಟ್ಮಾಸ್ಫಿಯರ್) ಕರೆಯಬಹುದು.[೧]
ಗುಣವಿಶೇಷ
ಬದಲಾಯಿಸಿಯಾವುದಾದರೂ ಪರಸ್ಪರ ಸಂಬಂಧವುಳ್ಳ ವಸ್ತುಗಳ ವ್ಯವಸ್ಥೆಯಿಂದ (ಸಿಸ್ಟಮ್) ದೊರೆಯುವ ಶಕ್ತಿ (ಫ್ರೀ ಎನರ್ಜಿ) ಆ ವ್ಯವಸ್ಥೆಯ ರಚನೆ (ಕಾಂಪೊಸಿಷನ್), ಉಷ್ಣತೆ ಮತ್ತು ವ್ಯವಸ್ಥೆಯ ಮೇಲಿರುವ ಸಂಮರ್ದ- ಇವುಗಳನ್ನು ಅವಲಂಬಿಸಿದೆ. ರಚನೆ ಮತ್ತು ಉಷ್ಣತೆಗಳನ್ನು ವ್ಯತ್ಯಾಸಮಾಡಿ ವಸ್ತುಗಳ ವ್ಯವಸ್ಥೆಯ ಗುಣವಿಶೇಷಗಳನ್ನು ಶೋಧಿಸುವ ದಿಸೆಯಲ್ಲಿ ಸಾಕಷ್ಟು ಸಂಶೋಧನೆಗಳು ನಡೆದಿವೆ. ಸಂಮರ್ದದಿಂದ ವಸ್ತುಗಳ ವ್ಯವಸ್ಥೆಯ ಮೇಲೆ ಉಂಟಾಗುವ ಪರಿಣಾಮವನ್ನು ತಿಳಿಯುವ ಪ್ರಯತ್ನ ಅಷ್ಟಾಗಿ ನಡೆದಿಲ್ಲ. ಇದಕ್ಕೆ ಕಾರಣಗಳೂ ಉಂಟು. ಅಧಿಕಸಂಮರ್ದವನ್ನು ಉಂಟುಮಾಡುವುದು ಕಷ್ಟದ ಕೆಲಸ. ಎರಡನೆಯದಾಗಿ ವಸ್ತುಗಳ ತಂಡದ ಮೇಲೆ ಸ್ವಲ್ಪ ವ್ಯತ್ಯಾಸ ಉಂಟುಮಾಡಬೇಕಾದರೂ ಸಂಮರ್ದವನ್ನು ಅತ್ಯಧಿಕವಾಗಿ ವ್ಯತ್ಯಾಸಮಾಡಬೇಕು. ಉದಾಹರಣೆಗೆ, ೧೦೦ ಸೆಂ.ಗ್ರೇ. ತಾಪದ ವ್ಯತ್ಯಾಸದಿಂದ ವಸ್ತುಗಳ ತಂಡದ ಮೇಲೆ ಉಂಟಾಗುವ ಪರಿಣಾಮವನ್ನು ಸಂಮರ್ದದಿಂದಲೇ ಉಂಟುಮಾಡಬೇಕಾದರೆ ಸುಮಾರು ೧೦೦ ವಾಯುಮಾನದಷ್ಟು ಸಂಮರ್ದವನ್ನು ಬದಲಾಯಿಸಬೇಕು. ವಸ್ತುಗಳ ಗುಣಗಳಿಗೂ ಮತ್ತು ಸಂಮರ್ದಕ್ಕೂ ಇರುವ ಸಂಬಂಧವನ್ನು ತಿಳಿಯಲು ಅಧಿಕಸಂಮರ್ದಭೌತಶಾಸ್ತ್ರ ಸಹಕಾರಿಯಾಗಿದೆ.[೨]
ಅಧಿಕಸಂಮರ್ದವನ್ನು ಉಂಟುಮಾಡುವ ವಿಧಾನಗಳು
ಬದಲಾಯಿಸಿಅಧಿಕಸಂಮರ್ದವನ್ನು ಉಂಟುಮಾಡುವ ವಿಧಾನಗಳು ಹಲವಿವೆ. ಉಕ್ಕಿನಿಂದ ಮಾಡಿರುವ ಉರುಳೆಯಂತಿರುವ ಕೋಶಗಳಲ್ಲಿ (ಸಿಲಿಂಡರ್) ವಸ್ತುವನ್ನು ಇಟ್ಟು ಆ ಕೋಶವನ್ನು ಹೊಂದಿಕೊಳ್ಳುವ ಕೊಂತದ ಮೇಲೆ ಭಾರ ಹೇರುವುದರಿಂದ ವಸ್ತುವಿನ ಮೇಲೆ ಅಧಿಕಸಂಮರ್ದ ಉಂಟುಮಾಡಬಹುದು. ಈ ರೀತಿಯಾಗಿ ೧೯೦೦ ರಲ್ಲಿ ಸುಮಾರು ೧೦,೦೦೦ ವಾಯುಮಾನ ಸಂಮರ್ದವನ್ನು ಉಂಟುಮಾಡುವ ವಿಧಾನಗಳು ತಿಳಿದಿದ್ದುವು. ಅನಂತರದಲ್ಲಿ ಸಂಶೋಧನೆ ತೀವ್ರವಾಗಿ ನಡೆದು ೧೯೪೦ ರಲ್ಲಿ ಸುಮಾರು ೨೫,೦೦೦ ವಾಯುಮಾನದಷ್ಟು ಸಂಮರ್ದವನ್ನು ಉಂಟುಮಾಡುವ ಸಾಧನಗಳ ರಚನೆಯಾಯಿತು. ೧೯೬೦ ರ ಹೊತ್ತಿಗೆ ಸುಮಾರು ೧,೦೦,೦೦೦ ವಾಯುಮಾನದಷ್ಟು ಸಂಮರ್ದವನ್ನು ಉಂಟುಮಾಡುವ ಸಾಧನೆಗಳ ರಚನೆಯಾಯಿತು.
ಅಧಿಕಸಂಮರ್ದದಿಂದ ವಸ್ತುಗಳ ಮೇಲೆ ಉಂಟಾಗುವ ಪರಿಣಾಮಗಳನ್ನು ಭೌತಿಕ ಮತ್ತು ರಾಸಾಯನಿಕ ಪರಿಣಾಮಗಳು ಎಂಬ ಎರಡು ವಿಭಾಗಗಳಾಗಿ ವಿಂಗಡಿಸಬಹುದು.
ಭೌತಿಕ ಪರಿಣಾಮಗಳು
ಬದಲಾಯಿಸಿಅಧಿಕಸಂಮರ್ದದಿಂದ ವಸ್ತುವಿನ ಅಣುಗಳ ಮಧ್ಯದ ಅಂತರ ಕಡಿಮೆಯಾಗಿ ವಸ್ತುಗಳ ಗಾತ್ರ ಕುಗ್ಗುವುದು.
ರೂಪ ಬದಲಾವಣೆ
ಬದಲಾಯಿಸಿಅನಿಲರೂಪದಲ್ಲಿರುವ ವಸ್ತು ಸಂಮರ್ದದ ದೆಸೆಯಿಂದ ದ್ರವರೂಪಕ್ಕೆ ಮಾರ್ಪಾಡಾಗಬಹುದು, ದ್ರವರೂಪದಲ್ಲಿರುವ ವಸ್ತು ಅನಂತರ ಘನರೂಪದ ವಸ್ತುವಾಗಬಹುದು ಅಥವಾ ಘನರೂಪದಲ್ಲಿರುವ ವಸ್ತು ತನ್ನ ಪ್ರಾವಸ್ಥೆಯಲ್ಲಿ (ಫೇಸ್ó) ವ್ಯತ್ಯಾಸ ಹೊಂದಬಹುದು. ಸುಮಾರು ೧,೦೦,೦೦೦ ವಾಯುಮಾನಗಳಷ್ಟು ಸಂಮರ್ದ ಉಂಟುಮಾಡಿದಾಗ ಬರೆಯುವ ಸೀಸ (ಗ್ರಾಫೈಟ್) ವಜ್ರವಾಗಿ ಮಾರ್ಪಾಡು ಹೊಂದುವ ವಿಷಯವನ್ನು ಮಾಯ್‍ಸನ್ ಎಂಬ ವಿe್ಞÁನಿ ತೋರಿಸಿದ. ಬ್ರಿಡ್ಜ್‍ಮನ್ ಎಂಬವನು ಮಂಜುಗೆಡ್ಡೆಯ ಬೇರೆ ಬೇರೆ ರೂಪಗಳನ್ನು ಅಧಿಕಸಂಮರ್ದದಿಂದ ತಯಾರಿಸಿದ.
ಸ್ನಿಗ್ಧತೆ
ಬದಲಾಯಿಸಿಸಂಮರ್ದದಿಂದ ವಸ್ತುವಿನ ಅಂದರೆ, ಲೋಹಗಳ ವಿದ್ಯುತ್‍ವಾಹಕತ್ವ ವ್ಯತ್ಯಾಸ ಹೊಂದುತ್ತದೆ. ಸಾಮಾನ್ಯವಾಗಿ ಸಂಮರ್ದ ಹೆಚ್ಚಿದಂತೆ ವಿದ್ಯುತ್‍ವಾಹಕತ್ವ ಹೆಚ್ಚುತ್ತದೆ. ಇದಕ್ಕೆ ವಿರೋಧವಾಗಿ ನಡೆದುಕೊಳ್ಳುವ ಕೆಲವು ಲೋಹಗಳೂ ಉಂಟು.
ಸಂಮರ್ದ ಹೆಚ್ಚಿದಂತೆ ವಸ್ತುಗಳ ಸ್ನಿಗ್ಧತೆ (ವಿಸ್‍ಕೋಸಿಟಿ) ವ್ಯತ್ಯಾಸವಾಗುತ್ತದೆ.
ರಾಸಾಯನಿಕ ಪರಿಣಾಮಗಳು
ಬದಲಾಯಿಸಿಹೇಬರ್ ಎಂಬುವನು ಜಲಜನಕ ಮತ್ತು ಸಾರಜನಕಗಳನ್ನು ಅಧಿಕಸಂಮರ್ದದ ವಿಧಾನದಿಂದ ಸಂಯೋಗಮಾಡಿ ಅಮೋನಿಯವನ್ನು ತಯಾರಿಸಿದ. ಅಮೋನಿಯ ತಯಾರಿಕೆಯಲ್ಲಿ ಅಧಿಕಸಂಮರ್ದದಿಂದ ತಯಾರಾಗುವ ಅಮೋನಿಯದ ಪ್ರಮಾಣ ಹೆಚ್ಚು.
ಜಲಜನಕ ಮತ್ತು ಇಂಗಾಲದ ಮಾನಾಕ್ಸೈಡ್- ಇವುಗಳು ಸುಮಾರು ೨೦೦ ವಾಯುಮಾನ ಸಂಮರ್ದದಲ್ಲಿ ಸಂಯೋಗವಾಗಿ ಮೆಥನಾಲ್ ಉಂಟಾಗುತ್ತದೆ.
ಕ್ಲೋರೋಬೆನ್‍ಜೀóನ್ ಮತ್ತು ಸೋಡಿಯಂ ಹೈಡ್ರಾಕ್ಸೈಡ್- ಇವುಗಳು ಸುಮಾರು ೩೦೦ ವಾಯುಮಾನ ಸಂಮರ್ದದಲ್ಲಿ ಸಂಯೋಗವಾಗಿ ಫಿನಾಲ್ ಉಂಟಾಗುತ್ತದೆ. ಇದೇ ರೀತಿಯಲ್ಲಿ ಪಾಲಿಎಥಿಲೀನ್ ಅನ್ನು ತಯಾರಿಸಬಹುದು.
ಭೂಮಿಯ ಗರ್ಭದ ಒಳಗಡೆ ಹೋದಂತೆಲ್ಲ ಸಂಮರ್ದ ಮತ್ತು ಉಷ್ಣತೆ ಹೆಚ್ಚುತ್ತದೆ. ಭೂಮಿಯ ಒಳಗಡೆ ಸಂಮರ್ದ ಸುಮಾರು ೩ಘಿ೧೦೬ ವಾಯುಮಾನದಷ್ಟು ಇರುತ್ತದೆ. ಸಂಮರ್ದ ಮತ್ತು ಉಷ್ಣತೆಯ ಪರಿಣಾಮದಿಂದ ಆಗುವ ಕೆಲವು ರಾಸಾಯನಿಕಕ್ರಿಯೆಯಿಂದ ಭೂಮಿಯಲ್ಲಿ ಶಿಲೆಗಳು ಅಥವಾ ಬಂಡೆಗಳು ಉಂಟಾಗುತ್ತವೆ. ಭೂಮಿಯ ಒಳಗಡೆ ಇರುವ ಉಷ್ಣತೆ ಮತ್ತು ಸಂಮರ್ದವನ್ನು ಪ್ರಯೋಗಶಾಲೆಯಲ್ಲಿ ಉಂಟುಮಾಡಿ ಭೂಮಿಯಲ್ಲಿರುವ ಶಿಲೆಗಳಿಗೆ ಸಮಾನವಾದ ವಸ್ತುಗಳನ್ನು ತಯಾರಿಸಬಹುದು. ಕೋಸ್ (ಅoes) ಎಂಬ ವಿe್ಞÁನಿ ಈ ರೀತಿಯಲ್ಲಿ ಅನೇಕ ಶಿಲೆಗಳನ್ನು ತಯಾರಿಸಿದ. ಭೂಮಿಯ ಒಳಗಡೆ ಬೇರೆ ಬೇರೆ ಪದರದಲ್ಲಿರುವ ಶಿಲೆಗಳನ್ನು ಪ್ರಯೋಗಶಾಲೆಯಲ್ಲೇ ತಯಾರುಮಾಡುವುದು ಸಾಧ್ಯವಿರುವುದರಿಂದ ಭೂಮಿಯ ಬೇರೆ ಬೇರೆ ಪದರಗಳಲಿರುವ ಉಷ್ಣತೆ ಮತ್ತು ಸಂಮರ್ದವನ್ನು ಅಳೆಯಬಹುದು. ಈ ವ್ಯಾಸಂಗದಿಂದ ಭೂವಿಙ್ಣ್ಹನದ ಬಗ್ಗೆ ಹೆಚ್ಚಿನ ತಿಳಿವಳಿಕೆಗೆ ಅವಕಾಶವುಂಟಾಗಿದೆ.[೩]
ಅಧಿಕಸಂಮರ್ದವನ್ನು ಅಳತೆಮಾಡುವ ವಿಧಾನ
ಬದಲಾಯಿಸಿಸುಮಾರು ೫೦೦ ವಾಯುಮಾನ ಇರುವ ಸಂಮರ್ದವನ್ನು ಅಳೆಯಲು ಸಂಮರ್ದಮಾಪಕವನ್ನು (ಮಾನೋಮೀಟರ್) ಉಪಯೋಗಿಸಬಹುದು. U-ಆಕಾರದ ಗಾಜಿನ ಕೊಳವೆಯಲ್ಲಿ ಪಾದರಸವನ್ನಿಟ್ಟು ಕೊಳವೆಯ ಒಂದು ಕೊನೆಯನ್ನು ಸಂಮರ್ದವಿರುವ ಪಾತ್ರೆಗೆ ಸೇರಿಸಿದಾಗ ಪಾದರಸದ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸವನ್ನು ಅಳೆಯುವುದರಿಂದ ಸಂಮರ್ದವನ್ನು ಕಂಡುಹಿಡಿಯಬಹುದು.[೪]
ಸುಮಾರು ೧,೦೦೦ ವಾಯುಮಾನಕ್ಕೂ ಹೆಚ್ಚಿನ ಸಂಮರ್ದವನ್ನು ಅಳೆಯಬೇಕಾದರೆ ಬೋರ್ಡನ್ ತಯಾರಿಸಿದ ಮಾಪಕವನ್ನು ಉಪಯೋಗಿಸಬೇಕಾಗುವುದು. ಗಾಜಿನಿಂದ ಅಥವಾ ಲೋಹದಿಂದ ಮಾಡಿರುವ ಕೊಳವೆಯನ್ನು ವೃತ್ತಾಕಾರದಲ್ಲಿ ಬಗ್ಗಿಸಿರುತ್ತಾರೆ. ಕೊಳವೆಯ ಒಂದು ಕೊನೆ ಮುಚ್ಚಿರುತ್ತದೆ. ಕೊಳವೆಯನ್ನು ಒಂದು ಕಡೆಯಿಂದ ನೋಡಿದರೆ ಅದರ ತುದಿ ದೀರ್ಘವೃತ್ತದಂತೆ (ಎಲಿಪ್ಸ್) ಕಾಣಿಸುತ್ತದೆ. ಮುಚ್ಚದೆ ಇರುವ ಕೊಳವೆಯ ಮತ್ತೊಂದು ತುದಿಯನ್ನು ಗಾಳಿತುಂಬಿರುವ ಬೆಲೂನೊಂದಕ್ಕೆ ಅಳವಡಿಸಿರುತ್ತಾರೆ. ಬೆಲೂನಿನಲ್ಲಿರುವ ಗಾಳಿ ಕೊಳವೆಯ ಮೂಲಕ ಹರಿದಾಗ ಕೊಳವೆ ತನ್ನ ಗಾತ್ರದಲ್ಲಿ ವಿಕಾಸಹೊಂದಿ ವೃತ್ತಾಕಾರಕ್ಕೆ ತಿರುಗುತ್ತದೆ. ಕೊಳವೆಗೆ ಸೇರಿದಂತೆ ಇರುವ ಒಂದು ಸೂಚಿ (ಪಾಯಿಂಟರ್) ಅಧಿಕಸಂಮರ್ದವನ್ನು ಸೂಚಿಸುತ್ತದೆ. ಈ ಉಪಕರಣದಿಂದ ಸುಮಾರು ೫,೦೦೦ ವಾಯುಮಾನದಷ್ಟು ಸಂಮರ್ದವನ್ನು ಅಳೆಯಲು ಸಾಧ್ಯ.
ಅಧಿಕಸಂಮರ್ದವನ್ನು ವಿವಿಧ ಬಗೆಯ ಉಪಕರಣಗಳ ಸಹಾಯದಿಂದ ಅಳೆಯತ್ತಾರೆ. ಇವುಗಳಲ್ಲಿ ಬೋರ್ಡನ್‍ಟ್ಯೂಬ್ ಎಂಬ ಉಪಕರಣವನ್ನು ಉಪಯೋಗಿಸಿ, ದ್ರವಗಳಿಂದುಂಟಾಗುವ ಸುಮಾರು ೧೦,೦೦೦ ವಾಯುಮಾನ ಸಂಮರ್ದವನ್ನು ಅಳೆಯಬಹುದಾಗಿದೆ. ಇದರಲ್ಲಿನ ನಿಖರತೆ ೦.೨೫. ಅಧಿಕಸಂಮರ್ದವನ್ನು ಅಳೆಯುವ ಮತ್ತೊಂದು ಉಪಕರಣ ಸಂಮರ್ದ ತುಲಾಯಂತ್ರ (ಫ್ರೀ ಪಿಸ್ಟನ್ ಗೇಜ್).[೫] ಇದರಲ್ಲಿನ ಊಧ್ರ್ವ ಮುಖವಾಗಿ ಚಲಿಸುವ ಹಾಗೂ ಗೊತ್ತಾದ ವಿಸ್ತೀರ್ಣವಿರುವ ಒಂದು ಕೊಂತದ ಮೇಲೆ ವರ್ತಿಸುವ ದ್ರವಾನಿಲದ ಸಂಮರ್ದ ಸಾಕಷ್ಟು ನಿಖರತೆಯಿಂದ ಕೂಡಿರುವ ತೂಕದ ಬೊಟ್ಟುಗಳ ತೂಕಕ್ಕೆ ಅನುಗುಣವಾಗಿರುತ್ತದೆ. ಈ ಸಂಮರ್ದ ತುಲಾಯಂತ್ರದಲ್ಲಿ ಎರಡು ವಿಧ: ಒಂದು ಕೊಂತದ (ಸಿಂಗಲ್ ಪಿಸ್ಟನ್) ರೀತಿಯದು, ಇನ್ನೊಂದು ಭೇದದರ್ಶಕ ಕೊಂತ (ಡಿಫರೆನ್ಷಿಯಲ್ ಪಿಸ್ಟನ್) ರೀತಿಯದು. ಈ ಎರಡೂ ಬಗೆಯ ಅಳೆವ ಯಂತ್ರಗಳಲ್ಲಿ ಉಪಯೋಗಿಸುವ ತೂಕದ ಬೊಟ್ಟುಗಳು ಉಂಗುರದಾಕಾರದಲ್ಲಿದ್ದು, ಹೊರೆಯ ಮತ್ತು ಕೊಂತದ ಭಾಗ ಒಂದರೊಡನೊಂದು ತಿರುಗುತ್ತಿರುತ್ತವೆ. ಇದರಿಂದ ಘರ್ಷಣೆ ಕಡಿಮೆಯಾಗುತ್ತದೆ. ಅಧಿಕಸಂಮರ್ದವನ್ನು ಅಳೆಯುವ ಇತರ ಸಾಧನಗಳೆಂದರೆ ನಿಯಂತ್ರಿತ ತೆರಪುಮಾಪನಯಂತ್ರ (ಕಂಟ್ರೋಲ್ಡ್ ಕ್ಲಿಯರೆನ್ಸ್ ಗೇಜ್) ಮತ್ತು ವಿದ್ಯುತ್ ಪ್ರತಿರೋಧ ಸಂಮರ್ದ ಯಂತ್ರ (ಎಲೆಕ್ಟ್ರಿಕಲ್ ರೆಸಿಸ್ಟೆನ್ಸ್ ಪ್ರೆಷರ್ ಗೇಜ್). [೬]ಈ ವಿದ್ಯುತ್ ಪ್ರತಿರೋಧ ಯಂತ್ರದಲ್ಲಿ ೧೫,೦೦೦ ವಾಯುಮಾನ ಬಲದ ಸಂಮರ್ದವನ್ನು ಅಳೆಯಬಹುದು.
ಸಂಮರ್ದವನ್ನು ಅಳೆಯಲು ಕೆಲವು ವೇಳೆ ಕ್ರಷರ್‍ಮಾಪಕ (ಕ್ರಷರ್ ಗೇಜ್) ಉಪಯೋಗಿಸಬಹುದು. ಮಿಶ್ರಲೋಹದಿಂದ ಮಾಡಿರುವ ಒಂದು ದಂಡದ ಮೇಲೆ ಗೊತ್ತಾದ ಸಂಮರ್ದವನ್ನು ಪ್ರಯೋಗಿಸುವುದರಿಂದ ದಂಡದ ಆಕಾರದಲ್ಲಿ ವ್ಯತ್ಯಾಸ ಉಂಟಾಗುವುದು. ಹೀಗೆ ಗೊತ್ತಾದ ಬೇರೆ ಬೇರೆ ಸಂಮರ್ದವನ್ನು ಪ್ರಯೋಗಿಸಿ ಪ್ರತಿಯೊಂದು ಸಂಮರ್ದದಿಂದ ಉಂಟಾಗುವ ಆಕಾರದಲ್ಲಿನ ವ್ಯತ್ಯಾಸವನ್ನು ತಿಳಿದುಕೊಳ್ಳಬಹುದು. ಅನಂತರ ಯಾವುದಾದರೂ ಸಂಮರ್ದವನ್ನು ಲೆಕ್ಕ ಹಾಕಬಹುದು.
ಉಲ್ಲೇಖಗಳು
ಬದಲಾಯಿಸಿ- ↑ https://doi.org/10.1002%2Fanie.200602485
- ↑ http://advances.sciencemag.org/content/2/7/e1600341
- ↑ http://www.pnas.org/content/104/22/9172.full
- ↑ https://www.thoughtco.com/definition-of-manometer-605877
- ↑ https://iopscience.iop.org/article/10.1088/0022-3735/10/5/008
- ↑ https://blog.wika.com/products/pressure-products/functional-principle-resistive-pressure-transmitter/