ಅದಾ ಕೇಂಬ್ರಿಡ್ಜ್
ಬಾಲ್ಯ ಜೀವನ
ಬದಲಾಯಿಸಿಅದಾ ಕೇಂಬ್ರಿಡ್ಜ್‌ರವರು ೧೮೪೪ ರಲ್ಲಿ ನವೆಂಬರ್ ೨೧ ರಂದು ಸೇಂಟ್ ಜರ್ಮನ್ನಿನ ನಾರ್ಪೋರ್ಕ್ ಎಂಬಲ್ಲಿ ಜನಿಸಿದರು. ಹೆನ್ರಿ ಕೇಂಬ್ರಿಡ್ಜ್ ಮತ್ತು ಥಾಮಸಿನ್ ಎಂಬ ಸಂಭಾವಿತ ರೈತರ ಎರಡೆನೆಯ ಮಗಳಾಗಿ ಜನಿಸಿದಳು. ಇವರು ತಮ್ಮ ಶಿಕ್ಷಣವನ್ನು ಮುಗಿಸಿದರು.ಇವರನ್ನು ಎಸಿ ಮತ್ತು ಅದಾ ಕ್ರಾಸ್ ಎಂಬ ಹೆಸರುಗಳಿಂದ ಕರೆಯುತ್ತಿದ್ದರು.
ಜೀವನ
ಬದಲಾಯಿಸಿಅದಾ ಕೇಂಬ್ರಿಡ್ಜ್‌ರವರು ೧೮೭೦, ಏಪ್ರಿಲ್ ೨೫ ರಂದು ರೆವರೆಂಡ್ ಜಾರ್ಜ್ ಪ್ರೆಡರಿಕ್ ಕ್ರಾಸ್ ಎಂಬುವವರನ್ನು ಮದುವೆಯಾದರು.ಇವರು ಮದುವೆಯಾದ ಮೇಲೆ ಇವರ ಸ್ನೇಹಿತರು ಮತ್ತು ಕುಟುಂಬದವರೆಲ್ಲಾ ಇವರನ್ನು ಅದಾ ಕ್ರಾಸ್ ಎಂದು ಕರೆಯುತ್ತಿದ್ದರು. ಕೆಲವು ವಾರಗಳ ನಂತರ ಕೆಲಸಕ್ಕಾಗಿ ಅದಾ ಕೇಂಬ್ರಿಡ್ಜ್ ಮತ್ತು ಪ್ರೆಡರಿಕ್ ಕ್ರಾಸ್ ಇಬ್ಬರೂ ಸೇರಿ ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳೆಸಿದರು. ಇವರು ಆಗಸ್ಟ್ ತಿಂಗಳಲ್ಲಿ ಮೆಲ್ಬರ್ನ್ ಎಂಬ ನಗರವನ್ನು ನೋಡಿ ಸುಸ್ಥಾಪಿತ ನಗರವೆಂದು ಆಶ್ಚರ್ಯಚಕಿತರಾದರು.ಅದಾ ಕೇಂಬ್ರಿಡ್ಜ್‌ರವರು ಮತ್ತು ಅವರ ಪತಿಯಾದ ಪ್ರೆಡರಿಕ್ ಕ್ರಾಸ್‌ರವರು ವಂಗರಟ್ಟ, ಮತ್ತು ಯಕಾಡಂಡಾ(೧೮೭೨), ಬಲ್ಲನ್(೧೮೭೪), ಕೋಲೆರೈನ್( ೧೮೭೭), ಬೆಂಡಿಗೊ (೧೮೮೪), ಮತ್ತು ಬೀಚ್‌ವರ್ತ್ ಎಂಬಲ್ಲಿದ್ದರು. ಇವರು ೧೮೯೩ರವರೆಗೆ ಇಲ್ಲಿ ತಮ್ಮ ದಿನಗಳನ್ನು ಕಳೆದರು. ಇವರ ಈ ೩೦ ವರ್ಷಗಳ ಸಮಯವು ಇವರಿಬ್ಬರ ಪ್ಯಾರಿಷ್‌ನ ಅನುಭವಗಳನ್ನು ತಿಳಿಸುತ್ತವೆ.ಇವರಿಗೆ ಸ್ಟುವರ್ಟ್ ಕ್ರಾಸ್ ಸೇರಿದಂತೆ ಐದು ಜನ ಮಕ್ಕಳಿದ್ದರು.
ವೃತ್ತಿ ಜೀವನ
ಬದಲಾಯಿಸಿಇವರು ಕಾದಂಬರಿಗಾರ್ತಿ, ಕವಯಿತ್ರಿ, ಆತ್ಮಚರಿತ್ರಕಾರ್ತಿ,ಮತ್ತು ಪತ್ರಕರ್ತಿಯಾಗಿಯೂ ಸಹ ಕಾರ್ಯ ನಿರ್ವಹಿಸುತ್ತಿದ್ದರು. ಅದಾ ಕೇಂಬ್ರಿಡ್ಜ್‌ರವರು ಒಟ್ಟಾರೆಯಾಗಿ ಇಪ್ಪತ್ತೈದು ಕೃತಿಗಳನ್ನು, ಮೂರು ಸಂಪುಟಗಳ ಕವನಗಳನ್ನು ಮತ್ತು ಎರಡು ಆತ್ಮ ಚರಿತ್ರೆಗಳನ್ನು ಬರೆದಿದ್ದಾರೆ. ಇವರ ಅನೇಕ ಕಾದಂಬರಿಗಳು ಆಸ್ಟ್ರೇಲಿಯನ್ ಪತ್ರಿಕೆಗಳಲ್ಲಿ ಮತ್ತು ಧಾರವಾಹಿಯ ರೂಪದಲ್ಲಿ ಪ್ರಕಟಣೆಗೊಂಡವು, ಆದರೆ ಪುಸ್ತಕದ ರೂಪದಲ್ಲಿ ಪ್ರಕಟಣೆಯಾಗಲಿಲ್ಲ. ಆಗೆಯೇ ಇಲ್ಲಿ ಇವರ ಮಕ್ಕಳು ಕೆಮ್ಮು ಮತ್ತು ಕಡುಗೆಂಪು ಜ್ವರಕ್ಕೆ ಒಳಗಾಗಿದ್ದರಿಂದ, ಇವರು ತುಂಬಾ ದುಃಖ ಮತ್ತು ದುರಂತದ ಪಾಲನ್ನು ಅನುಭವಿಸಿದರು. ಕೇಂಬ್ರಿಡ್ಜ್ ಅವರು ಕ್ರೈರ್ಜಿಮಾನ್ಸ್ ಹೆಂಡತಿಯಿಂದ ನಿರೀಕ್ಷಿತ ಸಮುದಾಯದ ಕೆಲಸದಲ್ಲಿ ತೊಡಗಿದ್ದಾಗಲೂ ಸಹ ಅವರು ಬರೆಯಲು ಮುಂದುವರೆಸಿದರು.ಮತ್ತು ೧೮೭೨ರಿಂದ ಆಸ್ಟ್ರೇಲಿಯನ್ ಪತ್ರಿಕೆಗಳಿಗೆ ಕವಿತೆಗಳನ್ನು ಮತ್ತು ಕಥೆಗಳನ್ನು ನೀಡುವ ಮೂಲಕ ತನ್ನ ಕುಟುಂಬದ ಹಣಕಾಸುಗಳನ್ನು ಪೂರಕಗೊಳಿಸಲು ಪ್ರಾರಂಭಿಸಿದರು. ಇವರು ಪ್ಯಾರಿಷ್‌ನ ಎಲ್ಲಾ ರೀತಿಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು ಮತ್ತು ತಾನು ಪ್ರಾಸಂಗಿಕವಾಗಿಯೇ ತನ್ನ ಮಕ್ಕಳ ಬಟ್ಟೆಗಳನ್ನು ಸ್ವತಃ ತಯಾರಿಸುತ್ತಿದ್ದರು. ಆದರೆ ಅವಳ ಆರೋಗ್ಯವು ಹಲವಾರು ಕಾರಣಗಳಿಂದ ಮತ್ತು ಗಂಬೀರ ಅಪಘಾತದಿಂದ ಹದಗೆಟ್ಟಿತು. ಇದರಿಂದ ಅವರು ಹೆಚ್ಚಿನ ಚಟುವಟಿಕೆಗಳಲ್ಲಿ ಭಾಗವಹಿಸುವುದು ಕಡಿಮೆಯಾಯಿತು, ಆದರೂ ಸಹ ಇವರು ಬರೆಯುವುದು ನಿಲ್ಲಿಸಲಿಲ್ಲ.ಆಸ್ಟ್ರೇಲಿಯಾದಲ್ಲಿ ಅದಾ ಕೇಂಬ್ರಿಡ್ಜ್‌ರವರು ಆಕೆಯ ಕಾಲದಾದ್ಯಂತ ಸರಣಿಯ ಕಾಲ್ಪನಿಕ ಬರಹಗಾರ್ತಿಯಾಗಿಯೇ ಮುಂದುವರೆದಿದ್ದಾರೆ. ಹಣಕಾಸಿನ ಬಹುಮಾನಕ್ಕಿಂತಲೂ ಹೆಚ್ಚು ಸಾಹಿತ್ಯಿಕ ಸಾಧನೆಯ ಆನಂದಕ್ಕಾಗಿ ಮತ್ತು ನಂತರ ಈ ಮಾಧ್ಯಮದಲ್ಲಿ ಲೇಖಕರು ಪ್ರಾಪಂಚಿಕ ದೃಷ್ಟಿಕೋನವನ್ನು ಬದಲಿಸುತ್ತಿದ್ದಾರೆ ಎಂದು ತಿಳಿದು ಅವರು ಕವಿತೆಗಳನ್ನು ಬರೆಯುತ್ತಲೇ ಇದ್ದರು. ಅದಾ ಕೇಂಬ್ರಿಡ್ಜ್‌ರವರನ್ನು ಮುಂದೆ ಅದಾ ಕ್ರಾಸ್ ಎಂದು ಕರೆಯುತ್ತಾರೆ. ಅದಾ ಕ್ರಾಸ್ ಮತ್ತು ಅವರ ಪತಿ ಪ್ರೆಡರಿಕ್ ಕ್ರಾಸ್‌ರವರು ೧೮೯೩ ರಲ್ಲಿ ತಮ್ಮ ಕೊನೆಯ ಪ್ಯಾರಿಷ್‌ಗೆ ಮೆಲ್ಬರ್ನ್ ಬಳಿಯ ವಿಲಿಯಮ್ ಸ್ಟೌನ್ ಎಂಬಲ್ಲಿಗೆ ಸ್ಥಳಾಂತರಗೊಂಡರು. ೧೯೦೯ ರಲ್ಲಿ ಪ್ರೆಡರಿಕ್ ಕ್ರಾಸ್‌ರವರಿಗೆ ಪಾದ್ರಿಯ ಪಟ್ಟಿಯಿಂದ ನಿವೃತ್ತಿಯಾಯಿತು. ಮತ್ತು ೧೯೧೨ರವರೆಗೆ ಡಯಾಸಿಸ್ ಕಾರ್ಯ ನಿರ್ವಹಿಸಲು ಅನುಮತಿ ತೆಗೆದುಕೊಂಡರು. ನಂತರ ೧೯೧೩ರಲ್ಲಿ ಇವರಿಬ್ಬರು ಇಂಗ್ಲೆಂಡಿಗೆ ಹೋದರು. ಅನೇಕ ಪಾದ್ರಿಗಳ ಪತ್ನಿಯರಂತೆ ಕ್ರಾಸ್‌ರವರೂ ಸಹ ತನ್ನ ಪತಿಗೆ ಬೆಂಬಲವನ್ನು ನೀಡುತ್ತಿದ್ದರು. ಅನಾರೋಗ್ಯಕ್ಕೆ ಮಕ್ಕಳನ್ನು ಕಳೆದುಕೊಳ್ಳುವುದರ ಜೊತೆಗೆ ಧಾರ್ಮಿಕ ಅನುಮಾನ ಮತ್ತು ವೈವಾಹಿಕ ಪ್ರಯೋಗಗಳ ಅನುಭವವನ್ನು ಬರೆಯುವ ಮೂಲಕ ಪತಿಗೆ ಆಘಾತವನ್ನುಂಟು ಮಾಡುತ್ತಾರೆ. ೧೯೧೭, ಪೆಬ್ರವರಿ ೨೧ ರಲ್ಲಿ ಇಂಗ್ಲೆಂಡಿನಲ್ಲಿ ಇವರ ಪತಿಯು ಮರಣವನ್ನು ಹೊಂದಿದರು. ತಮ್ಮ ಪತಿಯ ಮರಣದ ನಂತರ ಅದಾ ಅವರು ಆಸ್ಟ್ರೇಲಿಯಾಗೆ ಮರಳಿದರು.ಮತ್ತು ಆಕೆಯ ಜೀವನವು ಇಲ್ಲಿಯೇ ಉಳಿಯಿತು. ಅಲ್ಲಿ ಅವಳ ಮಗಳು ಮತ್ತು ಮಗ ಡಾ|| ಕೆ ಸ್ಟುವರ್ಟ್ ಕ್ರಾಸ್‌ರವರಿಂದ ಬದುಕುಳಿದಿದ್ದಳು. ನಂತರ ಇವರು ಹೃದಯಾಘಾತದ ಕಾರಣದಿಂದ ೧೯೨೬,ಜುಲೈ ೧೯ರಂದು ಮೆಲ್ಬರ್ನ್ ಅಲ್ಲಿ ಮರಣವನ್ನು ಹೊಂದಿದಳು.
ಸಾಹಿತ್ಯ
ಬದಲಾಯಿಸಿಅದಾ ಕೇಂಬ್ರಿಡ್ಜ್‌ರವರು ೧೮೭೦ರಲ್ಲಿ ತಮ್ಮ ಮಕ್ಕಳಿಗೆ ಹಣದ ಸಹಾಯ ಮಾಡುವುದಕ್ಕೋಸ್ಕರ ಅವರು ಬರೆಯಲಾರಂಬಿಸಿದರು. ನಂತರ, ೧೮೬೫ರಲ್ಲಿ ಅವರು ಬರೆದ ಲಿಟಿನಿಯ ಸ್ತೋತ್ರಗಳು ಮತ್ತು "ದಿ ಟು ಸರ್‌ಪ್ಲೈಸಸ್" ಎಂಬ ಲೇಖನಗಳು ೧೮೬೫ರಲ್ಲಿ ಔಪಚಾರಿಕವಾಗಿ ಪ್ರಕಟಣೆಯಾದವು.ಇವರು ೧೮೭೫ರಲ್ಲಿ "ಅಪ್ ದಿ ಮುರ್ಕಿ" ಎಂಬ ಕಾದಂಬರಿಯನ್ನು ಆಸ್ಟ್ರಲೇಷ್ಯನ್‌ನಲ್ಲಿ ಬರೆದರು. ಇದು ಇವರ ಮೊದಲ ಕಾದಂಬರಿಯಾಗಿದೆ. ಆದರೆ ಇದು ಪ್ರತ್ಯೇಕವಾಗಿ ಪ್ರಕಟಣೆಯಾಗಲಿಲ್ಲ. ೧೮೯೦ರಲ್ಲಿ ಆಕೆಯ ಖ್ಯಾತಿಯ ಮಾಹಿತಿಯು ಪ್ರಕಟಣೆಯಾಯಿತು.ಅವರ ಸಾಹಿತ್ಯವನ್ನು ನೋಡಿ ಕೆಲವರು ಸಾಹಿತ್ಯ ರಚನೆ ಸರಿಯಿಲ್ಲ ಎಂದು ವಿರೋದ ಮಾಡುತ್ತಿದ್ದರು. ಇವರು ಮೆಲ್ಬರ್ನ್‌ನ ಲೈಸಿಯಂ ಕ್ಲಬ್ ಮತ್ತು ಮಹಿಳಾ ಬರಹಗಾರರ ಸಂಘದ ಮೊದಲ ಅಧ್ಯಕ್ಷರಾಗಿದ್ದರು.ಇವರಿಗೆ ಗ್ರೇಸ್ ಜೆನ್ನಿಂಗ್ಸ್, ಕಾರ್ಮೈಕಲ್, ರಾಲ್ಪ್ ಬೋಲ್ಡರ್‌ವುಡ್, ಎಥಲ್ ಟರ್ನರ್, ಮತ್ತು ಜಾರ್ಜ್ ರಾಬರ್ಟ್ಸನ್ ಸೇರಿದಂತೆ ವಿಶ್ವ ಸಾಹಿತ್ಯದಲ್ಲಿ ಇವರಿಗೆ ಹಲವಾರು ಸ್ನೇಹಿತರೂ ಸಹ ಇದ್ದರು.ಕೇಂಬ್ರಿಡ್ಜ್‌ರವರ ಮೊದಲ ಬರಹಗಳು ಧಾರ್ಮಿಕವಾಗಿ ಧಾರ್ಮಿಕವಾಗಿದ್ದವು. ಅವರು ಹೆಚ್ಚು ವಿವಾಧಾತ್ಮಕ ವಿಷಯಗಳನ್ನು ನಿಭಾಯಿಸಲು ತೆರಳಿದರು, ವಿಶೇಷವಾಗಿ ಮಹಿಳೆಯರು ಮತ್ತು ಅವರ ಸಂಬಂದಗಳ ಬಗ್ಗೆ ವಿಷಯಗಳನ್ನು ನಿಭಾಯಿಸುತ್ತಿದ್ದರು.
ಬಹುಮಾನಗಳು ಅಥವಾ ಸಾಧನೆಗಳು
ಬದಲಾಯಿಸಿಅದಾ ಕೇಂಬ್ರಿಡ್ಜ್‌ರವರಿಗೆ ಹಲವಾರು ಬಹುಮಾನಗಳು ಮತ್ತು ಪ್ರಶಸ್ತಿಗಳು ಸಿಕ್ಕಿವೆ. ಇವರಿಗೆ ೨೦೦೫ರಲ್ಲಿ ಮೊದಲೆನೆಯ ಬಹುಮಾನ ದೊರಕಿತು. ಇದುವರೆಗೆ ಕೇಂಬ್ರಿಡ್ಜ್‌ರವರಿಗೆ ನಾಲ್ಕು ಬಹುಮಾನಗಳು ಸಿಕ್ಕಿವೆ,ಅವೆಂದರೆ; ಇವರ ಜೀವನ ಚರಿತ್ರೆಗೆ ಪ್ರೋಸೀ ಪ್ರಶಸ್ತಿ, ಕವನ ಪ್ರಶಸ್ತಿ, ದಿ ಯಂಗ್ ಅದಾಸ್ ಕಿರು ಕಥೆ ಪ್ರಶಸ್ತಿ, ಮತ್ತು ದಿ ಯಂಗ್ ಅದಾಸ್ ಗ್ರಾಪಿಕ್ ಕಿರು ಪ್ರಶಸ್ತಿ, ಈ ಮೇಲಿನ ಎಲ್ಲಾ ಬಹುಮಾನಗಳು ನಗದು ಘಟಕವನ್ನು ಒಳಗೊಂಡಿವೆ, ಮತ್ತು ಪ್ರತಿ ವರ್ಷವು ವಿಲಿಯಂಸ್ಟೌನ್ ಲಿಟರರಿ ಫೆಸ್ಟಿವಲ್‌ನ ಸಾಹಿತ್ಯದಲ್ಲಿ ವಿಜೇತರ ಹೆಸರುಗಳನ್ನು ಘೋಷಿಸಲಾಗುತ್ತದೆ.
ಉಲ್ಲೇಖಗಳು
ಬದಲಾಯಿಸಿ- Ada Cambridge (1844–1926) Archived 2011-05-14 ವೇಬ್ಯಾಕ್ ಮೆಷಿನ್ ನಲ್ಲಿ. Gravesite at Brighton General Cemetery (Vic)
- Barton, Patricia (1988) 'Ada Cambridge: Writing for her Life' in Adelaide, Debra (1988) A Bright and Fiery Troop: Australian Women Writers of the Nineteenth Century, Ringwood, Penguin
- Cato, Nancy (1989) 'Introduction' in Cambridge, Ada (1989) Sisters (Penguin Australian Women's Library)
- Morrison, Elizabeth (1988) 'Editor's introduction' in Cambridge, Ada (1988) A woman's friendship (Colonial Text Series)
- Roe, J.I. (2006) 'Cambridge, Ada (1844–1926)', Australian Dictionary of Biography, Online Edition http://www.adb.online.anu.edu.au/biogs/A030310b.htm
- AustLit author entry.