ಅಥರ್ವ ಎಂದು ಸಾಮಾನ್ಯವಾಗಿ ಕರೆಯುವ ಅಥರ್ವ ಮುರಳಿ (ಜನನ 7 ಮೇ 1989) ತಮಿಳು ಚಲನಚಿತ್ರದಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ಚಲನಚಿತ್ರ ನಟ. ನಟ ಮುರಳಿ ಅವರ ಮಗ ಅಥರ್ವ ಅವರು ಬಾನಾ ಕಾದಡಿ (2010) ಚಿತ್ರದ ಮೂಲಕ ನಟನಾ ವೃತ್ತಿಯನ್ನು ಪ್ರಾರಂಭಿಸಿದರು.[೧] ನಂತರ ಅವರು ನಿರ್ದೇಶಕರಾದ ಬಾಲ ಅವರ ಐತಿಹಾಸಿಕ ಚಲನಚಿತ್ರ ಪರದೇಶಿ (2013) ನಲ್ಲಿ ಕಾಣಿಸಿಕೊಳ್ಳಲು ಸಹಿ ಮಾಡುವುದಕ್ಕಿಂತ ಮೊದಲು ರೊಮ್ಯಾಂಟಿಕ್ ಥ್ರಿಲ್ಲರ್ ಮುಪ್ಪುಜುಧುಮ್ ಉನ್ ಕರ್ಪಾನೈಗಳ್ (2012) ಚಿತ್ರದಲ್ಲಿ ಭ್ರಮೆಯಿಂದ ಬಳಲುತ್ತಿರುವ ಯುವಕನ ಪಾತ್ರದ ತನ್ನ ಅಭಿನಯಕ್ಕಾಗಿ ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆದರು. ಒಂದು ಚಹಾ ತೋಟದಲ್ಲಿ ಗುಲಾಮನಾದ ಒಬ್ಬ ಗ್ರಾಮೀಣ ಹಳ್ಳಿಯ ಯುವಕನ ಪಾತ್ರವನ್ನು ಅವರು ಅಭಿನಯಿಸಿದರು, ಇದು ಅಥರ್ವ ಅವರಿಗೆ ತಮಿಳಿನಲ್ಲಿ ಅತ್ಯುತ್ತಮ ನಟನಿಗಾಗಿ ಫಿಲ್ಮ್ಫೇರ್ ಪ್ರಶಸ್ತಿಯನ್ನು ಗಳಿಸಿ ಕೊಟ್ಟಿತು.

ಈಟಿ ಚಲನಚಿತ್ರದ ಯಶಸ್ಸಿನ ಗೋಷ್ಠಿಯಲ್ಲಿ ಅಥರ್ವ

ಆರಂಭಿಕ ಜೀವನಸಂಪಾದಿಸಿ

ನಟ ಮುರಳಿ ದಂಪತಿಗೆ ಅಥರ್ವ ಎರಡನೆಯ ಮಗುವಾಗಿ ಜನಿಸಿದರು. ಅವರ ಹಿರಿಯ ಸಹೋದರಿ ಕಾವ್ಯ, ಮತ್ತು ಕಿರಿಯ ಸಹೋದರ ಆಕಾಶ್.[೨] ಅವರ ಅಜ್ಜ ಸಿದ್ದಲಿಂಗಯ್ಯ ಅವರು ಪ್ರಸಿದ್ಧ ಕನ್ನಡ ಚಲನಚಿತ್ರ ನಿರ್ದೇಶಕರಾಗಿದ್ದಾರೆ.

ವೃತ್ತಿಜೀವನಸಂಪಾದಿಸಿ

 
೬೧ನೇ ಫಿಲ್ಮ್ ಫೇರ್ ಪ್ರಶಸ್ತಿ ಸ್ವೀಕಾರ

ಶಾಲಾ ವಿದ್ಯಾಭ್ಯಾಸ ಮುಗಿದ ನಂತರ, ಅಥರ್ವ ಚಲನಚಿತ್ರಗಳಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಆಯ್ಕೆ ಮಾಡಿಕೊಂಡರು. ನಟನಾಗಿ ತನ್ನನ್ನು ದೈಹಿಕವಾಗಿ ಸಿದ್ಧಗೊಳಿಸಲು ಸ್ಟಂಟ್ ನೃತ್ಯ ನಿರ್ದೇಶಕರೊಂದಿಗೆ ಅಭ್ಯಾಸ ಮಾಡಲು ಪ್ರಾರಂಭಿಸಿದರು. 2009 ರಲ್ಲಿ, 'ಸತ್ಯ ಜ್ಯೋತಿ ಫಿಲ್ಮ್ಸ್' ನಿರ್ಮಿಸುವ ಮತ್ತು ಬದ್ರಿ ವೆಂಕಟೇಶ್ ನಿರ್ದೇಶಿಸುವ ಚಲನಚಿತ್ರದಲ್ಲಿ ಪ್ರಮುಖ ಪಾತ್ರವನ್ನು ವಹಿಸುವಂತೆ ಅವರಿಗೆ ಅವರ ತಂದೆ ಆಹ್ವಾನ ನೀಡಿದರು. ಮಾರ್ಚ್ 2009 ರಲ್ಲಿ ಸಹಕಲಾವಿದರಾದ ನಟಿ ಸಮಂತಾ ಜೊತೆಗಿನ ಅಥರ್ವ ಜೋಡಿಯ ನಟನೆಯಿರುವ ಈ ಚಲನಚಿತ್ರ 'ಬಾನ ಕಾದಡಿ' ಎಂಬ ಶೀರ್ಷಿಕೆಯೊಂದಿಗೆ ಬಿಡುಗಡೆಯಾಯಿತು. ಈ ಚಲನಚಿತ್ರದಲ್ಲಿ ರಾಯ್ಪುರಂ ಸ್ಲಮ್ ಪ್ರದೇಶದ ಯುವಕನ ಪಾತ್ರವನ್ನು ಚಿತ್ರಿಸಲೋಸುಗ ಅವರು ಅಲ್ಲಿಯ ಜೀವನಶೈಲಿಯ ಬಗ್ಗೆ ತಿಳಿದುಕೊಳ್ಳಲು ನಲವತ್ತೈದು ದಿನಗಳ ಕಾಲ ಆ ಪ್ರದೇಶದಲ್ಲೇ ಇದ್ದರು. ಚಲನಚಿತ್ರಕ್ಕಾಗಿ ಗಾಳಿಪಟವನ್ನು ಹಾರಿಸಲು ಕಲಿತರು. ಗುಜರಾತ್ ಕೈಟ್ ಉತ್ಸವದಲ್ಲಿ ದೃಶ್ಯಗಳನ್ನು ಸೆರೆಹಿಡಿದರು. [೩] ಅಥರ್ವರ ತಂದೆ ಮುರಳಿಯವರು ಕೂಡ ಅತಿಥಿ ಕಲಾವಿದರಾಗಿ ಕಾಣಿಸಿಕೊಂಡಿರುವ ಈ ಚಲನಚಿತ್ರವು ಆಗಸ್ಟ್ 2010 ರಲ್ಲಿ ಸಕಾರಾತ್ಮಕ ವಿಮರ್ಶೆಗಳಿಗೆ ತೆರೆದುಕೊಂಡಿತು ಮತ್ತು ಅಥರ್ವ ಅವರ ಅಭಿನಯವನ್ನು ಪ್ರಶಂಸಿಸಲಾಯಿತು. ಜೊತೆಗೆ Sify.comನಲ್ಲಿ "ಅವರು ಚೊಚ್ಚಲ ಪ್ರಯತ್ನದಲ್ಲಿಯೇ ಭರವಸೆ ಮೂಡಿಸಿದ ನಟ. ಅವರು ಅದ್ಭುತವಾಗಿ ನೃತ್ಯಗಳನ್ನು ಮಾಡುತ್ತಾರೆ ಮತ್ತು ಉತ್ತಮವಾಗಿ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ" ಎಂದು ಬರೆದಿದ್ದಾರೆ.[೪] ಅದೇ ರೀತಿ ರೆಡಿಫ್.ಕಾಮ್ನ ವಿಮರ್ಶಕ "ನಟನಿಗೆ ರೊಮಾನ್ಸ್ ಒಂದು ಕೇಕ್-ವಾಕ್" ಎಂದು ಸೇರಿಸಿದರು. ಪ್ರಣಯ ಪಾತ್ರಗಳಲ್ಲಿ ಅವರ ತಂದೆಯ ಅಭಿನಯದೊಂದಿಗೆ ಹೋಲಿಸಿದರು. ಇಷ್ಟಲ್ಲದೇ "ಅವರ ಸಂಭಾಷಣೆಯ ರೀತಿ ಸ್ವಲ್ಪ ನಾಟಕೀಯವಾಗಿರುತ್ತದೆ" ಎಂದೂ ಸೇರಿಸಲಾಗಿತ್ತು.[೫] ತರುವಾಯ ಅವರು ಅತ್ಯುತ್ತಮ ಚೊಚ್ಚಲ ನಟನಿಗಾಗಿರುವ ಎಡಿಸನ್ ಪ್ರಶಸ್ತಿಯ ಮನ್ನಣೆ ಪಡೆದರು. ಅದೇ ವರ್ಗದಲ್ಲಿ ವಿಜಯ್ ಪ್ರಶಸ್ತಿಗೆ ನಾಮನಿರ್ದೇಶನವನ್ನು ಪಡೆದರು. ಚಲನಚಿತ್ರದ ಯಶಸ್ಸು ಮುರಳಿಗೆ ಅಥರ್ವನನ್ನು ತೊಡಗಿಸಿದ ತಮಿಳು ಮತ್ತು ಕನ್ನಡ ಭಾಷೆಯ ದ್ವಿಭಾಷಾ ಚಲನಚಿತ್ರದಲ್ಲಿ ಪೂರ್ವ-ನಿರ್ಮಾಣವನ್ನು ಪ್ರಾರಂಭಿಸಲು ಪ್ರೇರೇಪಿಸಿತು. ಆದಾಗ್ಯೂ, ಬಾನ ಕಾದಡಿ ಬಿಡುಗಡೆಯಾದ ಒಂದು ತಿಂಗಳ ನಂತರ, ಅವರ ತಂದೆ ಮುರಳಿ ಹೃದಯ ಸ್ತಂಭನದಿಂದ ಬಳಲುತ್ತಿದ್ದಾಗ ನಿಧನರಾದರು. ಅಥರ್ವ ಪರಿಣಾಮವಾಗಿ ತನ್ನ ಕುಟುಂಬದೊಂದಿಗೆ ಸಮಯವನ್ನು ಕಳೆಯಲು ವಿಭಿನ್ನ ಸಾಹಸೋದ್ಯಮವನ್ನು ಪ್ರಾರಂಭಿಸುವ ಮೊದಲು ವಿರಾಮ ತೆಗೆದುಕೊಂಡರು.[೬]

ಅಥರ್ವರನ್ನು ತೊಡಗಿಸಿದ ಚಲನಚಿತ್ರವನ್ನು ನಿರ್ದೇಶಿಸಲು ಗೌತಮ್ ಮೆನನ್ ಹಿಂದೆ ಆಸಕ್ತಿ ತೋರಿಸಿದ್ದರು.[೭] ಒಂದು ವರ್ಷದ ನಂತರ, ಅವರ ಮುಂದಿನ ಚಲನಚಿತ್ರ ಮುಪ್ಪೊಝುದುಮ್ ಉನ್ ಕಾರ್ಪನೈಗಲ್ ಆಗಿತ್ತು. ಅದರಲ್ಲಿ ಅವರು ಭ್ರಮೆಯ ರೋಗದಿಂದ ಬಳಲುತ್ತಿದ್ದ ಯುವಕನ ಪಾತ್ರವನ್ನು ನಿರ್ವಹಿಸಿದ್ದರು. ಚಿತ್ರವು ಉತ್ತಮವಾಗಿತ್ತು ಮತ್ತು ಅವರ ಅಭಿನಯವು ಉತ್ತಮವಾಗಿ ಸ್ವೀಕರಿಸಲ್ಪಟ್ಟಿತು.[೮] ಬಾಲ ಅವರ ನಿರ್ದೇಶನದಡಿಯಲ್ಲಿ ಪರದೇಶಿ ಅತ್ಯಂತ ದೊಡ್ಡ ಚಲನಚಿತ್ರವಾಗಿದ್ದು, ಅದಕ್ಕಾಗಿ ಅವರು ಫಿಲ್ಮ್ಫೇರ್ ಅತ್ಯುತ್ತಮ ನಟ-(ತಮಿಳು) ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಅವರ ಅತ್ಯಂತ ಇತ್ತೀಚಿನ ಚಿತ್ರ ನಿರ್ದೇಶಕ ಸರ್ಗುನಾಮ್ ಅವರ ಚಂಡಿ ವೀರನ್ ನಟಿ ಆನಂದಿಯ ಜೊತೆಯಾಗಿತ್ತು, ಇದು ಗಲ್ಲಾಪೆಟ್ಟಿಗೆಯ ದೃಷ್ಟಿಯಿಂದ ಚೆನ್ನಾಗಿತ್ತು.

ಅಥರ್ವ ಅವರ ಈಟಿ, ಎಸ್. ಮೈಕೆಲ್ ರಾಯಪ್ಪನ್ ಅವರು ನಿರ್ಮಿಸಿದ ಕ್ರೀಡಾ ನಾಟಕ ಚಿತ್ರ, ಇದರಲ್ಲಿ ಅವರು ಶ್ರೀ ದಿವ್ಯ ಮತ್ತು ಥ್ರಿಲ್ಲರ್ ಕಣಿತ್ತನ್ ಜೋಡಿಯಲ್ಲಿ ಕ್ಯಾಥರೀನ್ ಟ್ರೆಸಾ ಜೊತೆಯಲ್ಲಿ ಕಾಣಿಸಿಕೊಂಡಿದ್ದಾರೆ, ಈ ಚಲನಚಿತ್ರಗಳು ಸಹ ಗಲ್ಲಾಪೆಟ್ಟಿಗೆಯ ದೃಷ್ಟಿಯಿಂದ ಚೆನ್ನಾಗಿದ್ದವು. ಹೊಸ ನಿರ್ಮಾಪಕರಾದ ಕ್ಲೆಮ್ ಎಂಟರ್ಟೈನ್ಮೆಂಟ್ನ ಚೊಚ್ಚಲ ಚಿತ್ರ ರುಕುಮಣಿ ವಂಡಿ ವರುಧು ಎಂಬ ಚಲನಚಿತ್ರದಲ್ಲಿ ಪೂಜಾ ಜಾವೆರಿ ಅವರೊಂದಿಗೆ ನಟಿಸಲು ಒಪ್ಪಿಕೊಂಡಿದ್ದಾರೆ.[೯]

2016 ರ ಜನವರಿಯಲ್ಲಿ, ಅವರು ಕಿಕ್ಯಾಸ್ ಎಂಟರ್ಟೈನ್ಮೆಂಟ್ ಎಂಬ ನಿರ್ಮಾಣ ಸ್ಟುಡಿಯೋವನ್ನು ಸ್ಥಾಪಿಸಿದ್ದಾರೆ ಎಂದು ಘೋಷಿಸಿದರು. ಅವರ ಬ್ಯಾನರ್ನ ಅಡಿಯಲ್ಲಿರುವ ಮೊದಲ ಚಲನಚಿತ್ರವನ್ನು ಅವರನ್ನು ನಟನಾಗಿ ಪರಿಚಯಿಸಿದ ಬದ್ರಿ ವೆಂಕಟೇಶ್ ನಿರ್ದೇಶಿಸಲಿದ್ದಾರೆ.[೧೦]

ಚಲನಚಿತ್ರಗಳ ಪಟ್ಟಿಸಂಪಾದಿಸಿ

Key
  Denotes films that have not yet been released
ವರ್ಷ ಚಲನಚಿತ್ರ ಪಾತ್ರ ಟಿಪ್ಪಣಿ
2010 ಬಾನ ಕಾದಡಿ ರಮೇಶ ಉತ್ತಮ ಚೊಚ್ಚಿಲ ಪುರುಷ ಪಾತ್ರದ ಎಡಿಸನ್ ಪ್ರಶಸ್ತಿ

ನಾಮನಿರ್ದೇಶನ, ಚೊಚ್ಚಿಲ ಚಿತ್ರನಟನಿಗಾಗಿ ವಿಜಯ ಪ್ರಶಸ್ತಿ

2011 ಕೊ (ಚಲನಚಿತ್ರ) ತಾನೇ "ಅಗ ನಾಗ" ಹಾಡಿಗೆ ವಿಶೇಷ ಪ್ರವೇಶ
2012 ಮುಪ್ಪೊಝುಧುಮ್ ಉನ್ ಕರ್ಪನೈಗಳ್ ರಾಮಚಂದ್ರನ್
2013 ಪರದೇಶಿ ರಾಸ ಉತ್ತಮ ನಟನಿಗಾಗಿ ಫಿಲ್ಮ್ ಫೇರ್ ಪ್ರಶಸ್ತಿ - ತಮಿಳ್

ನಾರ್ವೆ ತಮಿಳು ಫಿಲ್ಮ್ ಫೇರ್ ಪ್ರಶಸ್ತಿ
ಅತ್ಯುತ್ತಮ ನಟನೆಗಾಗಿ ಎಡಿಸನ್ ಪ್ರಶಸ್ತಿ (ಭಾರತ)
೧೧ನೇ ಚೆನ್ನೈ ಚಲನಚಿತ್ರೋತ್ಸವ -ನಿರ್ಣಾಯಕರ ವಿಶೇಷ ಪ್ರಶಸ್ತಿ
ನಾಮನಿರ್ದೇಶನ, ಉತ್ತಮ ನಟನಿಗಾಗಿ ವಿಜಯ ಪ್ರಶಸ್ತಿ

2014 ಇರುಂಬು ಕುದಿರೈ ಮೈಖೆಲ್ ಪೃಥ್ವಿರಾಜ್
2015 ಚಾಂಡಿ ರಾವನ್ ಪಾರಿ
ಈಟಿ ಪುಘಾಝೆಂತಿ ಸುಬ್ರಮಣಿಯನ್
2016 ಕಣಿದನ್ ಗೌತಮ್ ರಾಮಲಿಂಗಮ್
2017 ಜೆಮಿನಿ ಗಣೇಶನುಂ ಸುರುಳಿ ರಾಜನುಂ ಜೆಮಿನಿ ಗಣೇಶನ್
2018 ಸೀಮಾ ಬೊದ ಅಗದ   ಚಿತ್ರೀಕರಣ
ರುಕ್ಕುಮಣಿ ವಂಡಿ ವರುದು   ಚಿತ್ರೀಕರಣ
ಇಮೈಕ್ಕಾ ನೋಡಿಗಳ್   ಅರ್ಜುನ್ ಚಿತ್ರೀಕರಣ
ಒದೈಕ್ಕು ಒದೈ   ಚಿತ್ರೀಕರಣ
ಬೂಮರಾಂಗ್   ಚಿತ್ರೀಕರಣ

Referencesಸಂಪಾದಿಸಿ

  1. Posters, Movie (2010-05-04). "Murali's Praises For His Son Adharva | Tamil Movie News". News.moviegalleri.in. Archived from the original on 15 September 2010. Retrieved 2010-09-10. Unknown parameter |deadurl= ignored (help)
  2. "Actor Murali in Coffee with Anu -Part 04/04". YouTube. Retrieved 2010-09-10.
  3. ‘I wanted to become a dhobi’. The New Indian Express. Retrieved on 2015-12-29.
  4. "Movie Review : Baana Kaathadi". Sify.com. Archived from the original on 2013-12-25. Retrieved 2013-10-25.
  5. Tamil's Kites could have been better - Rediff.com Movies. Movies.rediff.com (2010-08-06). Retrieved on 2015-12-29.
  6. "Popular Kannada, Tamil actor Murali dead". Deccanherald.com. 2010-08-31. Archived from the original on 11 September 2010. Retrieved 2010-09-10. Unknown parameter |deadurl= ignored (help)
  7. "Gautham Menon considers Adharva". TamilVix.Com. Archived from the original on 8 August 2010. Retrieved 2010-09-10. Unknown parameter |deadurl= ignored (help)
  8. "Movie Review : Muppozhudhum Un Karpanaigal". Sify.com. Archived from the original on 2013-04-07. Retrieved 2013-10-25.
  9. "Atharvaa's Next : Rukkumani Vandi Varudhu". India Glitz. Retrieved 2015-08-11.
  10. http://www.thehindu.com/features/metroplus/atharvaa-turns-producer/article8054880.ece?secpage=true&secname=entertainment